ಕಾಡುಗೋಡಿ ಗ್ರಾಮದಲ್ಲಿರುವ ಸಂತೆ ಜಾಗವನ್ನು ಕೆಲವರು ವ್ಯಕ್ತಿಗಳು ದಾಖಲೆಗಳನ್ನು ತಿದ್ದಿ ಕೆಲವರು ಬಿಲ್ಲರ್‌ಗಳಿಗೆ ಮಾರಾಟ ಮಾಡಿರುತ್ತಾರೆ , ಇದರ ಬಗ್ಗೆ ತನಿಖೆ ಮಾಡಿ

ಅಂಬೇಡ್ಕರ್ ನಗರ

ಬೆಂಗಳೂರು ಪೂರ್ವ ತಾಲ್ಲೂಕು ವಾರ್ಡ್ ನಂ . 83ಕ್ಕೆ ಸೇರಿರುವ ಅಂಬೇಡ್ಕರ್ ಕಾಲೋನಿಗೆ 35 ವರ್ಷಗಳ ಹಿಂದೆ ಸರ್ಕಾರದ ಗೋಮಾಳದ ಜಮೀನಿನಲ್ಲಿ ವಸತಿಹೀನ ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುತ್ತಾರೆ , ಸರ್ವೆ ನಂಬರುಗಳು 38 , 39 , 41 , 42 , 43 , 44 , 45 ಇವುಗಳಲ್ಲಿ 42 ಸರ್ವೆ ನಂಬರ್‌ನಲ್ಲಿ 2 ಎಕರೆ ಜಮೀನನ್ನು ಬಡವರಿಗೆ ಹಂಚಲು ಮೀಸಲಾಗಿ ಇಟ್ಟಿದ್ದರು , ಇದರಲ್ಲಿ 2019 ರಲ್ಲಿ ಸರ್ವೆ ನಂಬರನ್ನು ಬದಲಾಯಿಸಿ ಲಕ್ಷ್ಮಿನಾರಾಯಣ್ ಮತ್ತು ಅವರ ಕಡೆಯ ಕೆಲವು ವ್ಯಕ್ತಿಗಳು ಪರೆಬಾರಿ ಮಾಡಿರುತ್ತಾರೆ ಅವರ ಅತ್ತೆಯವರ ಹೆಸರಿಗೆ ಪಹಣಿ ಮಾಡಿರುತ್ತಾರೆ . ಇದರಲ್ಲಿ ಕೆಲವರು ಸರ್ಕಾರಿ ಅಧಿಕಾರಿಗಳು ಕೆಲವರು ಸ್ಥಳೀಯ ರಾಜಕೀಯ ಮುಖಂಡರು ಶಾಮೀಲಾಗಿದ್ದಾರೆ . ಇವರುಗಳ ವಿರುದ್ದ ಸ್ಥಳೀಯ ಸಂಘಟನೆಯ ಸಂಸ್ಥೆಯವರು , ಸಾರ್ವಜನಿಕರು ಇವರುಗಳ ವಿರುದ್ಧ ಕ್ರಮ ತೆಗೆದುಕೊಂಡು ಬಡವರಿಗೆ ಸಹಾಯ ಮಾಡಬೇಕೆಂದು ದೂರು ಸಲ್ಲಿಸಿರುತ್ತಾರೆ .

ಕಾಡುಗೋಡಿ ಗ್ರಾಮ

ಕಾಡುಗೋಡಿ ಗ್ರಾಮದಲ್ಲಿರುವ ರುದ್ರ ಭೂಮಿಯಲ್ಲಿ ತ್ಯಾಜ್ಯವನ್ನು ಹಾಕಿದ್ದಾರೆ , ಸತ್ತವರ ಅಂತ್ಯಕ್ರಿಯ ಮಾಡಲು ಬಹಳ ತೊಂದರೆ ಆಗುತ್ತಿದೆ . ಕಾಡುಗೋಡಿ ಗ್ರಾಮದಲ್ಲಿರುವ ಸಂತೆ ಜಾಗವನ್ನು ಕೆಲವರು ವ್ಯಕ್ತಿಗಳು ದಾಖಲೆಗಳನ್ನು ತಿದ್ದಿ ಕೆಲವರು ಬಿಲ್ಲರ್‌ಗಳಿಗೆ ಮಾರಾಟ ಮಾಡಿರುತ್ತಾರೆ , ಇದರ ಬಗ್ಗೆ ತನಿಖೆ ಮಾಡಿ ತೆರವುಗೊಳಿಸಿ ಈ ಜಾಗವನ್ನು ಸಂಪೂರ್ಣವಾಗಿ ಸಂತೆಗೆ ಅವಕಾಶ ಮಾಡಿಕೊಡಬೇಕಾಗಿ ತಮ್ಮಲ್ಲಿ ಪ್ರಾರ್ಥನೆ , ಸಂತೆ ಜಾಗವನ್ನು 1962 ರಲ್ಲಿ ಮುನೇಗೌಡರು ಸುಮಾರು 2 ( ಎರಡು ) ಎಕರೆ ಜಮೀನನ್ನು ಸಂಬಂಧಪಟ್ಟ ಜಮೀನು ಮಾಲೀಕರಿಂದ ಕ್ರಯಕ್ಕೆ ತೆಗೆದುಕೊಂಡು ಸಂತೆಗೆ ಸರ್ಕಾರಕ್ಕೆ ಬಿಟ್ಟಿರುತ್ತಾರೆ . ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿ . ಕೆಲವರು ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುವ ವ್ಯಕ್ತಿಗಳು ತ್ಯಾಜ್ಯವನ್ನು ತಂದು ರಸ್ತೆಯಲ್ಲಿ ಸುರಿಯುತ್ತಿದ್ದಾರೆ . ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಕೊಟ್ಟರು ಪ್ರಯೋಜನವಾಗಲಿಲ್ಲ . ಸರ್ವೆ ನಂಬರ್ 42 ರಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ 1976ರ ಹಿಂದೆ ಕೊಟ್ಟಿರುವಂತಹ ಕೆಲವು ದಾಖಳೆಗಳನ್ನು ಈ ಅರ್ಜಿಯಲ್ಲಿ ಲಗತ್ತಿಸಿರುತ್ತೇನೆ . 1 ) ಪಹಣಿ , 2 ) ಹಕ್ಕುಪತ್ರ 3 ) ರಶೀದಿ , 4 ) ಪೊಲೀಸ್‌ಗೆ ಕಂಪ್ಲೇಂಟ್ ಕೊಟ್ಟಿರುವ ಪ್ರತಿ , 5 ) ಸ್ಕೆಚ್ ಪ್ರತಿ . ಸದರಿ ನಿವೇಶನಗಳನ್ನು ಅಕ್ರಮವಾಗಿ ಸರ್ವೆ ನಂಬರನ್ನು ಬದಲಾಯಿಸಿ ಒತ್ತುವರಿ ಮಾಡಿರುತ್ತಾರೆ . ಈ ನಿವೇಶನಗಳನ್ನು ಪ್ರವೇಶ ಮಾಡಿರುವವರನ್ನು ತೆರವುಗೊಳಿಸಿ ನಮಗೆ ನ್ಯಾಯ ಕೊಡಿಸಿಕೊಡಬೇಕಾಗಿ ತಮ್ಮಲ್ಲಿ ವಿನಂತಿ . ಒಂದು ವೇಳೆ ನಮಗೆ ನ್ಯಾಯ ದೊರಕದೆ ಇದ್ದರೆ ಇದರ ಬಗ್ಗೆ ಉಘ್ರ ಹೋರಾಟ ಮಾಡುತ್ತೇವೆಂದು ತಮ್ಮಲ್ಲಿ ಮನವರಿಕೆ ಮಾಡುತ್ತೇವೆ . 3 ) . 14 ) . ಇದೇ ರೀತಿ ಹಲವಾರು ಸ್ಥಳಗಳಲ್ಲಿಯೂ ಸಹ ಸಂಬಂಧಪಟ್ಟ ತಹಸೀಲ್ದಾರ್‌ , ಪಿ . ಡಿ . ಓ , ಆರ್ . ಐ . ಇನ್ನು ಇತರೆ ಅಧಿಕಾರಿಗಳು ಅಕ್ರಮವಾಗಿ ಬಿಲ್ಡರ್‌ಗಳ ಜೊತೆ ಶಾಮೀಲಾಗಿ ಗೋಮಾಳ ಆಶ್ರಯ ಯೋಜನೆಗೆ ಸೇರಿರುವಂತಹ ಜಮೀನುಗಳನ್ನು ವಶಪಡಿಸಿಕೊಂಡು , ಬಿಲ್ಡರ್‌ಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರುಗಳ ಜೊತೆ ಶಾಮೀಲಾಗಿರುತ್ತಾರೆ .

ಕೆ . ವೆಂಕಟೇಶ್

ರಾಜ್ಯಾಧ್ಯಕ್ಷರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.