“ ಪೊರಕೆ ” ಕವನ ಸಂಕಲನ ಲೋಕಾರ್ಪಣೆ

ನನ್ನ ನಾಲ್ಕನೇಯ ಕೃತಿ “ ಪೊರಕೆ ” ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸುತ್ತಿದ್ದು , ತಾವುಗಳು ಆಗಮಿಸಿ ಕಾರ್ಯಕ್ರಮದ ಬಗ್ಗೆ ಪ್ರಚಾರಪಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡುವ ಬಗ್ಗೆ .

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ , ನಾನು ಚಾಮರಾಜನಗರ ಜಿಲ್ಲೆ ಮತ್ತು ತಾಲ್ಲೂಕಿನ ಅಂಕನಶೆಟ್ಟಿಪುರ ಎಂಬ ಗ್ರಾಮದಲ್ಲಿ ಜನಿಸಿ , ತುಂಬಾ ಕಡುಬಡತನದಲ್ಲಿ ಬೆಳೆದು , ಚಾಮರಾಜನಗರ ಪಟ್ಟಣದಲ್ಲಿ ಜಾಬ್ ಟೈಪಿಂಗ್ ವೃತ್ತಿ ಪ್ರಾರಂಭಿಸಿ ಬದುಕು ಸಾಗಿಸುತ್ತಿದ್ದು ಕಳೆದ 10 ವರ್ಷಗಳಿಂದ ಜನಪರ ರೇಷೆನಾಡು ದಿನಪತ್ರಿಕೆಯಲ್ಲಿ ವರದಿಗಾರನಾಗಿ “ ಹಳ್ಳಿಹಕ್ಕಿ ಹಾಡು ” ಎಂಬ ಮಾನವೀಯ ಅಂಕಣದ ” ಅಂಕಣಕಾರನಾಗಿ ತೆರೆಮರೆಯಲ್ಲಿರುವ ಪ್ರತಿಭೆಗಳನ್ನು ಸಾಧಕರನ್ನು ನೊಂದವರ ಧ್ವನಿಯಾಗಿ ಪತ್ರಿಕಾ ಸೇವೆಯಲ್ಲಿ ಕಾರ್ಯನಿರತನಾಗಿರುತ್ತೇನೆ .

ಅಲ್ಲದೆ ನನ್ನ ಬತ್ತಳಿಕೆಯಿಂದ ಭಾವನೆಗಳು , ಹೃದಯ , ಕಿಚ್ಚು ಎಂಬ ಮೂರು ಕವನ ಸಂಕಲನಗಳನ್ನು ಚಾಮರಾಜನಗರದಲ್ಲಿ ಹೊರತಂದಿರುತ್ತೇನೆ . ಮೈಸೂರು ದಸರಾ ಯುವ ಕವಿಗೋಷ್ಠಿಯಲ್ಲಿ ಎರಡು ಬಾರಿ ಆಯ್ಕೆಯಾಗಿ ಕಾವ್ಯವಾಚನವನ್ನು ಮಾಡಿರುವುದರ ಜೊತೆಗೆ ರಾಜ್ಯ ಮತ್ತು ಜಿಲ್ಲಾ ಕವಿಗೋಷ್ಠಿಗಳಲ್ಲಿ ಆಯ್ಕೆಯಾಗಿ ಕವಿತೆ ವಾಚನ ಮಾಡಿರುತ್ತೇನೆ . ನನ್ನ ನಾಲ್ಕನೇ ಕೃತಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲದಿಂದ ಮತ್ತು ಈ ಸಂಕಲನದಲ್ಲಿ ಅತೀ ಹೆಚ್ಚು ಪೌರಕಾರ್ಮಿಕರ ಬದುಕು ಬವಣೆಗಳ ಬಗ್ಗೆ ಬೆಳಕು ಚೆಲ್ಲುವಂತ ಕವಿತೆಗಳು ಒಡಮೂಡಿವೆ . ಈ ಕೃತಿಯನ್ನು ರಾಜ್ಯದ ರಾಜಧಾನಿಯಲ್ಲಿ ಲೋಕಾರ್ಪಣೆಗೊಳಿಸಲು ಉದ್ದೇಶಿಸಿರುತ್ತೇನೆ .

ದಿನಾಂಕ : 28 – 07 – 2019 ರಂದು ಸಂಜೆ 4 : 00 ಗಂಟೆಗೆ ಚಿತ್ರಕಲಾ ಪರಿಷತ್‌ನಲ್ಲಿ ನಡೆಯುವ ಕಾರ್ಯಕ್ರಮ

– ಸಿ . ಶಂಕರ ಅಂಕನಶೆಟ್ಟಿಪುರ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.