ಹಾವೇರಿ ಶಾಸಕರಾದ ಶ್ರೀ ನೆಹರು ಚ ಓಲೇಕಾರ ಅವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಮನವಿ

ಹಾವೇರಿ ಜಿಲ್ಲಾ ಛಲವಾದಿ ಮಹಾಸಭಾ ( ರಿ ) ಹಾವೇರಿ ವತಿಯಿಂದ ಪತ್ರಿಕಾ ಗೋಷ್ಥಿ

ಮಾನ್ಯ ಹಾವೇರಿ ಶಾಸಕರಾದ ಶ್ರೀ ನೆಹರು ಚ ಓಲೇಕಾರ ಅವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಮನವಿ . ಹಾವೇರಿ ಜಿಲ್ಲಾ ಛಲವಾದಿ ಮಹಾಸಭಾ ( ರಿ ) ಹಾವೇರಿ ವತಿಯಿಂದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ ಬಿ . ಎಸ್ . ಯಡಿಯೂರಪ್ಪನವರಿಗೆ ಅಭಿಮಾನದ ಅಭಿನಂದನೆಗಳು , ಮಾನರೇ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಶುಭ ಕೋರಿಕೆ , ಮಾನ್ಯ ಮುಖ್ಯಮಂತ್ರಿಗಳಾಗಿರುವ ತಾವು ಎಲ್ಲ ಸಮುದಾಯಗಳ ಅಭಿವೃದ್ದಿಗೆ ನಿರಂತರ ಶ್ರಮವಹಿಸಿ , ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದು , ರಾಜ್ಯದ ಛಲವಾದಿ ಸಮುದಾಯವು ತಮಗೆ ಕೃತಜ್ಞತೆ ಸಲ್ಲಿಸುತ್ತದೆ .

ಸಮ – ಬಾಳು ಸಮ – ಪಾಲು ಎಂಬ ತತ್ವದಡಿ ಕಾರ್ಯಕೈಗೊಳ್ಳುತ್ತಿರುವ ಬಿಜೆಪಿ ಸರ್ಕಾರ ಈ ಭಾರಿ ಛಲವಾಧಿ ಸಮುದಾಯದ ಅಭಿವೃದಿಗೆ ಹೆಚ್ಚಿನ ಕಾಳಜಿ ವಹಿಸಬೇಕು , ರಾಜ್ಯದಲ್ಲಿ ವ್ಯಾಪಕವಾಗಿ 55ಲಕ್ಷ ಜನರನ್ನು ಹೊಂದಿರುವ ಛಲವಾದಿ ಸಮುದಾಯವು , ಸಾಮಾಜಿಕ , ಶೈಕ್ಷಣಿಕ , ಔದ್ಯೋಗಿಕ , ಆಡಳಿತಾತ್ಮಕವಲ್ಲದೆ ರಾಜಕೀಯವಾಗಿಯೂ ಬಹಳ ನರಳುತ್ತಿದೆ . ಈ ಸಮುದಾಯವನ್ನು ಸಂಘಟಿಸಿ ಒಂದೇ ವೇದಿಕೆಯಲ್ಲಿ ಎಲ್ಲ ಸಮುದಾಯವು ಕೂಡುವಂತೆ ಮಾಡಿದ್ದಾರೆ , ಶಿವಮೊಗ್ಗದಲ್ಲಿ ಸಂಘಟಿಸಿದ ಸಮಾವೇಶವೆ ಅವರ ಸಂಘಟನಾ ಚಾತುರತೆಗೆ ಹಿಡಿದ ಕೈಗನ್ನಡಿ , ಸಮುದಾಯಕ್ಕೆ ಕೀರ್ತಿ ಕಳಶದಂತೆ ಕಾರ್ಯ ನಿರ್ವಹಿಸುತ್ತಿರುವ ಹಾವೇರಿ ಶಾಸಕರಾದ ಮಾನ್ಯ ಶ್ರೀ ನೆಹರು ಚ ಓಲೇಕಾರ ಅವರು ಮೂರು ಭಾರಿ ಜಯಗಳಿಸಿ , ಉತ್ತಮ ಆಡಳಿತದ ಮೂಲಕ ಹೆಸರು ಮಾಡಿದ್ದಾರೆ , ಸಚಿವ ಸ್ಥಾನ ನಿರ್ವಹಿಸುವ ಚಾಕಚಕ್ಯತೆ , ವಿದ್ಯಾರ್ಹತೆ , ಉತ್ತಮ ವ್ಯಕ್ತಿತ್ವದ ಹೊಂದಿದ್ದಾರೆ , ಯಾವುದೇ ಭ್ರಷ್ಟಾಚಾರದಲ್ಲಿ ಸಿಲುಕಿಕೊಳ್ಳದೆ ಉತ್ತಮ ಆಡಳಿತ ನೀಡಿದ್ದಾರೆ , ಜನಸಾಮಾನ್ಯರ ನಾಯಕರಾಗಿದ್ದಾರೆ ಆದ್ದರಿಂದ ರಾಜ್ಯ ಛಲವಾದಿ ಸಮುದಾಯದ ಪ್ರಮುಖ ನಾಯಕರಾಗಿರುವ ನೆಹರು ಓಲೇಕಾರವರಿಗೆ ಈ ಭಾರಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಹಾವೇರಿ ಜಿಲ್ಲಾ ಛಲವಾದಿ ಸಮಾಜ ಈ ಮೂಲಕ ವತ್ತಾಯಿಸುತ್ತದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.