ಸಿಸಿಬಿ ಕಾರ್ಯಾಚರಣೆ ಮಾದಕ ವಸ್ತು MDMA & COCAINE ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಓರ್ವನ ಬಂಧನ , 2 ಲಕ್ಷ ಮೌಲ್ಯದ 30 ಗ್ರಾಂ MDMA 05 ಗಂCOCAINE ಗಳ ವಶ

ದಿನಾಂಕ 30 – 07 – 2019 ರಂದು ಬೆಳಿಗ್ಗೆ 9 – 30 ಗಂಟೆಗೆ ಬೆಂಗಳೂರು ನಗರದ ಬಾಗಲೂರು ಪೊಲೀಸ್ ಠಾಣಾ ಸರಹದ್ದಿನ ಬಾಗಲೂರು ಮುಖ್ಯರಸ್ತೆ , ಬೃಂದಾವನ ನಗರ 2ನೇ ಕ್ರಾಸ್‌ನಲ್ಲಿರುವ ಮನೆ ನಂ . 4 ರ ನೆಲಮಹಡಿ ಮನೆಯಲ್ಲಿ ನೈಜೀರಿಯಾ ದೇಶದ ವ್ಯಕ್ತಿಯೋರ್ವ ಎಂ . ಡಿ . ಎಂ . ಎ ಮತ್ತು ಕೋಕೇನ್ ಎಂಬ ಮಾದಕ ವಸ್ತುಗಳನ್ನು ತನ್ನ ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾನೆಂಬ ಬಗ್ಗೆ ಮಾಹಿತಿ ಸಿಸಿಬಿ ಘಟಕದ ಅಧಿಕಾರಿಗಳಿಗೆ ಬಂದಿರುತ್ತದೆ . ಈ ಮಾಹಿತಿಯಾಧಾರದ ಮೇಲೆ ಕಾರ್ಯಪ್ರವೃತ್ತರಾದ ಸಿಸಿಬಿ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಮೇಲ್ಕಂಡ ಸ್ಥಳದ ಮೇಲೆ ದಾಳಿ ನಡೆಸಿ ,

– TONY LUCKY S / o Umeh , 35 yrs , R / o Emene , Enugu States , Nigeria . Present Address : No . 4 , 2nd Cross , Brundavana Nagara , Bagaluru Main Raod , Bengaluru – 560097 and Kalaga , Navi Mumbai , ಎಂಬಾತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ . ವಶಕ್ಕೆ ಪಡೆದ ಆಸಾಮಿಯಿಂದ 30 ಗ್ರಾಂ ತೂಕದ MDMA 05 ಗ್ರಾಂ ತೂಕದ COCAINE , ಒಂದು ಮೊಬೈಲ್ ಅನ್ನು ಅಮಾನತ್ತು ಪಡಿಸಿಕೊಂಡಿರುವ ಈ ಎಲ್ಲಾ ವಸ್ತುಗಳ ಮೌಲ್ಯ ಸುಮಾರು ರೂ . 2 , 00 , 000 / – ಗಳೆಂದು ಅಂದಾಜಿಸಲಾಗಿದೆ . ನೈಜೀರಿಯ ಮೂಲ ಈ ವ್ಯಕ್ತಿಯು ಪಾಸ್‌ಪೋರ್ಟ್ ಮತ್ತು ವೀಸಾ ನಿಯಮಗಳನ್ನು ಉಲ್ಲಂಘಿಸಿ ಮುಂಬಯಿ ನಗರದಲ್ಲಿ ನೆಲೆಸಿ , ಮಾದಕ ವಸ್ತುಗಳಾದ MDMA ಮತ್ತು COCAINE ಗಳನ್ನು ತನ್ನ ವಶದಲ್ಲಿಟ್ಟುಕೊಂಡು ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡಿ , ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಾ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವುದು ತಿಳಿದು ಬಂದಿರುತ್ತದೆ . ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು , ತನಿಖೆ ಮುಂದುವರೆದಿದೆ . ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಡಾ . ಬಿ . ಆರ್ . ರವಿಕಾಂತೇಗೌಡ , ಐ . ಪಿ . ಎಸ್ , ಮತ್ತು ಉಪ ಪೊಲೀಸ್ ಆಯುಕ್ತರಾದ ಶ್ರೀ . ಗಿರೀಶ್ . ಎಸ್ , ಐ . ಪಿ . ಎಸ್ , ರವರ ಮಾರ್ಗದರ್ಶನದಲ್ಲಿ ಸಿಸಿಬಿಯ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ . ಬಿ . ಎಸ್ . ಮೋಹನ್ ಕುಮಾರ್ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಕೆ . ನಾರಾಯಣಗೌಡ ಮತ್ತು ಸಿಬ್ಬಂದಿಗಳಾದ ಶ್ರೀ . ವಿನಯ್ , ಶ್ರೀ . ಪ್ರಕಾಶ್ , ಶ್ರೀ . ಶಶಿಧರ್ , ಶ್ರೀ . ನಂದೀಶ್ ಮತ್ತು ಶ್ರೀ . ನಿಲೇಶ್ ರವರುಗಳ ತಂಡ ಕೈಗೊಂಡಿರುತ್ತದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.