ಹೊಸ ತಜ್ಞರಾದ “ಕುಟುಂಬ ವೈದ್ಯ” ರಿಗೆ ಸ್ವಾಗತ

ಹಿಂದಿನ ದಿನಗಳಲ್ಲಿ , ಮನೆಯ ಬಳಿ ಇರುವ ಒಬ್ಬ ಸಾಮಾನ್ಯ ವೈದ್ಯರೇ ಕುಟುಂಬ ವೈದ್ಯರಾಗುವುದಲ್ಲದೆ , ಒಂದು ಮನೆಗೆ ಸ್ನೇಹಿತ , ಹಿತಚಿಂತಕ್ಕ ಹಾಗೂ ಮಾರ್ಗದರ್ಶಕನಾಗಿರುತ್ತಿದ್ದರು . ಕಳೆದ ಕೆಲವು ದಶಕಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಆಗುವಂತಹಬದಲಾವಣೆಗಳಿಂದ , ಈ ಸಾಮಾನ್ಯ ವೈದ್ಯ ಅಥವಾ General Practitioner , ಎಂಬುವವರು ಕಡಿಮೆಯಾಗಿದ್ದಾರೆ . ವೈದ್ಯವಿಜ್ಞಾನದಲ್ಲಿ ಆಗಿರುವಂತಹ ಕ್ರಾಂತಿಕಾರಿ ಬೆಳವಣಿಗೆಗಳಿಂದ , ಅತ್ಯಾಧುನಿಕ ಆಸ್ಪತ್ರೆಗಳು , ಅಂಗಗಳು ಅಥವಾ ರೋಗಲಕ್ಷಣಗಳಿಗೆ ತಜ್ಞವೈದ್ಯರು , ಶಸ್ತ್ರಚಿಕಿತ್ಸೆಯಲ್ಲಿ ಮತ್ತು ಪರೀಕ್ಷಾವಿಧಾನಗಳಲ್ಲಿ ಬಳಸುವಂತಹ ತಂತ್ರಜ್ಞಾನ , ಇವೆಲ್ಲದರಿಂದ , ‘ ಎಲ್ಲೋ ಒಂದು ಕಡೆ , ಕುಟುಂಬ ವೈದ್ಯ ಮಾಯವಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು . ಈ ತರಹದ ಆಧುನಿಕ ಆಸ್ಪತ್ರೆಗಳು ಹಾಗೂ ವಿಶೇಷಜ್ಞರಿಂದಾಗಿಯೇ , ಇಂದಿನ ಸಮಾಜದಲ್ಲಿ ಒಬ್ಬ ಕಾಳಜಿ ಇರುವ , ಸುಲಭವಾಗಿ ಸಿಗುವಂತಹ , ಹಳೆಯ ಕಾಲದ ಸಾಮಾನ್ಯ ವೈದ್ಯರಿಗಿಂತ ತಜ್ಞರಾಗಿರುವ ಒಬ್ಬ ನುರಿತ ವೈದ್ಯನ ಕೊರತೆ ಎದ್ದು ಕಾಣುತ್ತಿದೆ . ಇದೇ ಸಂದರ್ಭದಲ್ಲಿ ಕಳೆದ ದಶಕದಲ್ಲಿ ಮುಂಚೂಣಿಗೆ ಬರುತ್ತಿರುವಂತಹ ಒಂದು ವಿಶೇಷತೆ “ Family Medicine ” , ಅಥವಾ ಕುಟುಂಬ ವೈದ್ಯಕೀಯ ಪದ್ಧತಿ . ಈ ಕುಟುಂಬ ವೈದ್ಯಕೀಯ ಪದ್ಧತಿಯು , ಒಬ್ಬ ವ್ಯಕ್ತಿ ಕೇಂದ್ರಿತವಾಗಿದ್ದು , ನಿರಂತರ , ಸಮಗ್ರ , ಚಿಕಿತ್ಸೆ ಹಾಗೂ ಸಲಹೆಗಳಿಂದಾಗಿ , ಕುಟುಂಬಕ್ಕೂ , ಅದರ ಮೂಲಕ ಆ ಕುಟುಂಬ ಭಾಗವಾಗಿರುವ ಸಮಾಜಕ್ಕೂ ಉಪಯುಕ್ತವಾಗಿದೆ . ಖಾಯಿಲೆಯ ಸಮಗ್ರ ಚಿತ್ರಣ ಮತ್ತು ವ್ಯಕ್ತಿಯ ಸ್ವಾಸ್ಟವೇ ಈ ಕುಟುಂಬ ವೈದ್ಯಕೀಯ ಪದ್ಧತಿಯ ಆಧಾರ ಸ್ತಂಭ ಅಥವಾ ಸೋತವಾಗಿದೆ ಎಂದರೆ ತಪ್ಪಾಗಲಾರದು . ಪ್ರಾಥಮಿಕ ಆರೋಗ್ಯ ಸೇವೆಯೇ ವೈದ್ಯಕೀಯ ಕ್ಷೇತ್ರದ ಆಧಾರಸ್ತಂಭವೆನ್ನುವುದು ಎಲ್ಲರಿಗೂ ತಿಳಿದಿರುವಂತಹ ವಿಷಯ . ಒಬ್ಬ ಕುಟುಂಬ ವೈದ್ಯನು ಈ ಪ್ರಾಥಮಿಕ ಆರೋಗ್ಯ ಸೇವೆಯ ಕೇಂದ್ರಬಿಂದು . ವಿಶೇಷ ತರಬೇತಿ ಪಡೆತಿರತಕ್ಕಂತಹ ಕುಟುಂಬ ವೈದ್ಯರು ಎಲ್ಲಿ ತಮ್ಮ ತಿಳುವಳಿಕೆಯ ಮೂಲಕ ಕಾರ್ಯನಿರತರಾಗಿರುತ್ತಾರೋ , ಅಂತಹ ಸಮಾಜದ ಸರ್ವಾಂಗೀಣ ಸ್ವಾಸ್ಥ್ಯವು ಉತ್ತಮವಾಗಿರುತ್ತದೆ , ಹಾಗೂ ಹಣಕಾಸಿನ ದೃಷ್ಟಿಯಿಂದಲೂ , ಆರೋಗ್ಯದ ದೃಷ್ಟಿಯಿಂದಲೂ , ಪ್ರಸಕ್ತ ಹಾಗೂ ಉಪಯುಕ್ತವಾಗಿರುತ್ತದೆ . ವರ್ಷಕ್ಕೆ 50 ಸಾವಿರದಂತೆ ತೇರ್ಗಡೆಯಾಗಿ ಬರುತ್ತಿರುವ ನವವೈದ್ಯರ ಸಂಖ್ಯೆ 2030ರ ಹೊತ್ತಿಗೆ 10 ಕೋಟಿ ಮೀರುತ್ತದೆ . ಈ ಸದವಕಾಶವನ್ನು ಬಳಸಿಕೊಂಡು , ಹೆಚ್ಚಿನ ನವ ವೈದ್ಯರನ್ನು , ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ತರಬೇತುಗೊಳಿಸಿದರೆ ಸೂಕ್ತವಾಗಿರುತ್ತದೆ . ಈ ನಿಟ್ಟಿನಲ್ಲಿ , AFPI ಸಂಸ್ಥೆಯು ಸಮಾಜಮುಖಿಯಾದ ಉತ್ಕೃಷ್ಟವಾದ ಆರೋಗ್ಯ ಸೇವೆಯನ್ನು ಎಲ್ಲರಿಗೂ ತಲುಪಿಸಲು ಒಂದು ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ . ಪ್ರಾಥಮಿಕ ಆರೋಗ್ಯ ಚಿಕಿತ್ಸಕರಿಗೆ ಹೆಚ್ಚಿನ ಮಟ್ಟದಲ್ಲಿ ಅವರ ಸಾಮರ್ಥ್ಯ , ಪರಿಣಿತಿ ಉತ್ತಮಗೊಳಿಸಿ , ಅವರನ್ನು ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಮಿಳಿತಗೊಳಿಸಿ , ನಮ್ಮ ದೇಶದ ಆರೋಗ್ಯಸೇವೆಗೆ ಕಾಯಕಲ್ಪವೊದಗಿಸಲು ಕಂಕಣಬದ್ಧವಾಗಿದೆ . ಕರ್ನಾಟಕ ವಿಭಾಗದ AFPI ಸಂಸ್ಥೆಯು ಕರ್ನಲ್ ಡಾ | | ಮೋಹನ್ ಕುಬೆಂದ್ರ ಅವರ ನೇತೃತ್ವದಲ್ಲಿ , ಕುಟುಂಬ ವೈದ್ಯಕೀಯ ಮತ್ತು ಪ್ರಾಥಮಿಕ ಆರೋಗ್ಯ ಸೇವೆಯ 4ನೇ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಬೆಂಗಳೂರಿನ IISCಯ ಜೆ ಎನ್ ಟಾಟಾ ಸಭಾಂಗಣದಲ್ಲಿ ಆಯೋಜಿಸಿದೆ . ಈ ವಿಚಾರ ಸಂಕಿರಣದಲ್ಲಿ , ಚಿಕಿತ್ಸಾ ಪದ್ಧತಿಗಳ ಮತ್ತು ಪರಿಣಿತಿಗಳಲ್ಲಿ ನಡೆಯುತ್ತಿರುವ ನವನವೀನ ಪ್ರಯತ್ನಗಳ ಬಗ್ಗೆ ಕಲಿಯುವುದರೊಂದಿಗೆ , ಪ್ರಾಥಮಿಕ ಆರೋಗ್ಯ ಸೇವೆಯ ಸದ್ಬಳಕೆ , ಗುಣಮಟ್ಟ ವರ್ಧನೆ , ಪರಿಣಾಮಗಳ ವಿಶ್ಲೇಷಣೆ , ಹೀಗೆ ಹಲವಾರು ಕಠಿಣ ಮತ್ತು ಜ್ವಲಂತ ಸಮಸ್ಯೆಗಳ ಬಗ್ಗೆ ಸಂವಾದಕ್ಕೆ ಒಂದು ವೇದಿಕೆಯನ್ನು ಕೊಟ್ಟಿದೆ . ಕುಟುಂಬ ವೈದ್ಯಕೀಯ ಪದ್ಧತಿಯ ವಿಶೇಷತೆಯೆಂದರೆ , ಇಲ್ಲಿ ಭಾಗಿಯಾಗಿರುವ ವೈದ್ಯ ಹಾಗೂ ರೋಗಿ , ಈರ್ವರಲ್ಲಿಯೂ ಸಮಗ್ರ ಬದಲಾವಣೆಯನ್ನು ತರುತ್ತದೆ . ಹಾಗಾಗಿ , ಕುಟುಂಬ ವೈದ್ಯಕೀಯ ಪದ್ಧತಿಯು ನಮ್ಮ ಆರೋಗ್ಯ ಸೇವೆಯ ಹೃದಯವೆಂದರೆ ಅತಿಶಯೋಕ್ತಿಯಾಗಲಾರದು . ಈ ನಮ್ಮ ವಿಚಾರ ಸಂಕಿರಣ FMPC•19 , ಆರೋಗ್ಯ ಸೇವೆಯ ಎಲ್ಲಾ ವಾಲುಗಾರರನ್ನು ವೇದಿಕೆ ಒದಗಿಸಿ ಸಮಾಜಕ್ಕೆ ಒಳಿತುಂಟು ಮಾಡಲು ಪಣತೊಟ್ಟಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.