ಅ . 20 ಕ್ಕೆ ಆಕಾಶ್ ನ್ಯಾಷನಲ್ ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆ

• ವೈದ್ಯರಾಗಬೇಕೆಂದು ಬಯಸಿರುವ ನೂರಾರು ವಿದ್ಯಾರ್ಥಿಗಳಿಗೆ ಶೇ . 100 ರಷ್ಟು ವಿದ್ಯಾರ್ಥಿ ವೇತನ

• ದೇಶದ ಅತಿದೊಡ್ಡ ಖಾಸಗಿ ಪ್ರವೇಶ ಪರೀಕ್ಷೆ ಇದು

• 2018 ರಲ್ಲಿ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

• 2010 ರಲ್ಲಿ ಆರಂಭವಾದ ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಪರೀಕ್ಷೆಯಲ್ಲಿ ಇದುವರೆಗೆ 15 . 61 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ

• 8 , 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನದಿಂದ ಅನುಕೂಲ

• ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 15 , 2019 ಕಡೆಯ ದಿನ

• ಹೆಚ್ಚಿನ ಮಾಹಿತಿಗಾಗಿ www . aakash . ac . in / antheಲಾಗ್ ಆನ್ ಮಾಡಿ

ಬೆಂಗಳೂರು , ಆಗಸ್ಟ್ 02 , 2019 : ದೇಶಾದ್ಯಂತ 186 ಕೇಂದ್ರಗಳಲ್ಲಿ ವೈದ್ಯರಾಗಬೇಕೆಂಬ ಮತ್ತು ಐಐಟಿಯನ್‌ಗಳಿಗೆ ಪೂರ್ವಸಿದ್ಧತಾ ಸೇವೆಗಳನ್ನು ಒದಗಿಸುತ್ತಿರುವ ರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿರುವ ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ , ತನ್ನ ವಾರ್ಷಿಕ ಸ್ಕಾಲರ್‌ಶಿಪ್ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದೆ . ಅದರಂತೆ ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಮ್ ( ಎಎನ್‌ಟಿಎಚ್ಇ ) 2019 ರ ಅಕ್ಟೋಬರ್ 20 ರಂದು ದೇಶದ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ . ರಾಷ್ಟ್ರೀಯ ಮಟ್ಟದ ದೇಶದ ಬಹುದೊಡ್ಡ ಖಾಸಗಿ ಕ್ಷೇತ್ರದ ಪರೀಕ್ಷೆಗಳಲ್ಲಿ ಒಂದಾಗಿರುವ ಎಎನ್‌ಟಿಎಚ್‌ಇ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೇ . 100 ರಷ್ಟು ವಿದ್ಯಾರ್ಥಿ ವೇತನವನ್ನು ಪಡೆಯಲು ನೆರವಾಗುತ್ತದೆ ಮತ್ತು ವೈದ್ಯರಾಗಬೇಕೆಂಬ ಅಥವಾ ಐಐಟಿಗಳಾಗಬೇಕೆಂಬ ಆಸೆ ಹೊಂದಿರುವ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಮೊದಲ ಮೆಟ್ಟಿಲಾಗಲಿದೆ . 8 ರಿಂದ 10 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಬಹುದಾಗಿದೆ . ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರತಿಕ್ರಿಯೆ ಮತ್ತು ಬೇಡಿಕೆಗಳನ್ನು ಗಮನಿಸಿ ಈ ವರ್ಷದಿಂದ ಎಎನ್‌ಟಿಎಚ್ಇ ಗೆ 11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೂ ಹಾಜರಾಗಲು ಅನುವು ಮಾಡಿಕೊಡಲಾಗುತ್ತಿದೆ .

2010 ರಲ್ಲಿ ಆರಂಭವಾದ ಈ ಎಎನ್‌ಟಿಎಚ್‌ಇಗೆ ಇದುವರೆಗೆ 15 . 61 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ . 2018 ರಲ್ಲಿ ಒಂದರಲ್ಲೇ ಅತಿ ಹೆಚ್ಚಿನ ಅಂದರೆ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು . ಈ ಎಎನ್‌ಟಿಎಚ್ಇ ಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು 2019 ರ ಅಕ್ಟೋಬರ್ 15 ರೊಳಗೆ ನೋಂದಣಿ ಮಾಡಿಕೊಳ್ಳಬೇಕು . ಇದಕ್ಕೆ 500 ರೂಪಾಯಿ ಶುಲ್ಕವಿರಲಿದ್ದು , ನೆಟ್‌ಬ್ಯಾಂಕಿಂಗ್ , ಡೆಬಿಟ್ ಕಾರ್ಡ್ , ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದಾಗಿದೆ . ಅಥವಾ ಆಕಾಶ ಸಂಸ್ಥೆಯ ಶಾಖೆಗಳು / ಕೇಂದ್ರಗಳಲ್ಲಿಯೂ ನೇರವಾಗಿ ಪಾವತಿ ಮಾಡಲು ಅವಕಾಶವಿರುತ್ತದೆ . ಎಎನ್‌ಟಿಎಚ್ಇಯಲ್ಲಿ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು ಪ್ರತಿದಿನದ ಆಧಾರದಲ್ಲಿ ಆಕಾಶ್ ಐಟ್ಯೂಟರ್ ಕಾರ್ಯಕ್ರಮದ ಮೂಲಕ ಅಭ್ಯಾಸ ಪಠ್ಯಗಳನ್ನು ಪಡೆಯಬಹುದಾಗಿದೆ . ಎಎನ್‌ಟಿಎಚ್ಇ ನಲ್ಲಿ ತೇರ್ಗಡೆ ಹೊಂದಿದ 8 ರಿಂದ 12 ನೇ ತರಗತಿಯ ಟಾಪ್ 2000 ವಿದ್ಯಾರ್ಥಿಗಳು ಬೋಧನಾ ಶುಲ್ಕದಲ್ಲಿ ಶೇ . 100 ರಷ್ಟು ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ ಮತ್ತು 600 ವಿದ್ಯಾರ್ಥಿಗಳಿಗೆ ನಗದು ಬಹುಮಾನವೂ ಇರಲಿದೆ . ಎಎನ್‌ಟಿಎಚ್ಇನಲ್ಲಿ ಟಾಪ್ ಸ್ಕೋರ್ ಮಾಡಿದ ವಿದ್ಯಾರ್ಥಿಗಳಿಗೆ ಆಕರ್ಷಕವಾದ ವಿದ್ಯಾರ್ಥಿ ವೇತನ ಸಿಗಲಿದೆ . ಈ ಪ್ರತಿಭಾನ್ವೇಷಣೆ ಪ್ರವೇಶ ಪರೀಕ್ಷೆ ಅಸ್ಸಾಂ , ಆಂಧ್ರ ಪ್ರದೇಶ , ಬಿಹಾರ , ಚಂಡೀಘಡ , ಚತ್ತೀಸ್‌ಘಡ , ದೆಹಲಿ , ಗೋವಾ , ಗುಜರಾತ್ , ಹರ್ಯಾಣ , ಹಿಮಾಚಲ ಪ್ರದೇಶ , ಜಮ್ಮು ಮತ್ತು ಕಾಶ್ಮೀರ , ಜಾರ್ಖಂಡ್ , ಕರ್ನಾಟಕ , ಕೇರಳ , ಮಧ್ಯಪ್ರದೇಶ , ಮಹಾರಾಷ್ಟ್ರ , ಒಡಿಶಾ , ಪಂಜಾಬ್ , ರಾಜಸ್ಥಾನ , ತಮಿಳುನಾಡು , ತೆಲಂಗಾಣ , ಉತ್ತರಪ್ರದೇಶ , ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ . ವಿದ್ಯಾರ್ಥಿಗಳು ಮತ್ತು ಪೋಷಕರ ಮನವಿಯನ್ನು ಪರಿಗಣಿಸಿ ಪರೀಕ್ಷಾ ಕೇಂದ್ರಗಳನ್ನು ಇನ್ನೂ ಹಲವು ನಗರಗಳಲ್ಲಿ ಆರಂಭಿಸಲಾಗುತ್ತದೆ . ಎಎನ್‌ಟಿಎಚ್ ಇ ವೇಳಾಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ ( ಎಇಎಸ್ ಎಲ್ ) ನ ಕೋ – ಪ್ರಮೋಟರ್ & ಸಿಇಒ ಮತ್ತು ಪ್ಲಾಕ್ಷಾ ಯೂನಿವರ್ಸಿಟಿಯ ಸಂಸ್ಥಾಪಕ & ಟ್ರಸ್ಟಿ ಆಕಾಶ್ ಚೌಧರಿ ಅವರು , ‘ ‘ ಕಳೆದ ಒಂದು ದಶಕದಿಂದ ಎಎನ್‌ಟಿಎಚ್‌ಇಗೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಗೆ ಅತ್ಯಂತ ಸಂತಸವೆನಿಸುತ್ತಿದೆ . ಈ ಮೂಲಕ ಈ ಪರೀಕ್ಷೆಯು ದೇಶದ ಅತಿದೊಡ್ಡ ಪರೀಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ . ಕಳೆದ ವರ್ಷ ಈ ಪರೀಕ್ಷೆಗೆ 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದು ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ . ಹಿಂದಿನ ವರ್ಷಗಳಂತೆಯೇ ಈ ವರ್ಷವೂ ಲಕ್ಷಾಂತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯುತ್ತಾರೆ ಎಂಬ ವಿಶ್ವಾಸ ನಮಗಿದೆ . ಈ ಮೂಲಕ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ಸದುಪಯೋಗ ಮಾಡಿಕೊಳ್ಳುತ್ತಾರೆ ನಂಬಿಕೆ ನಮ್ಮದಾಗಿದೆ ” ಎಂದು ತಿಳಿಸಿದರು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.