“ಸಂಪೂರ್ಣ ಆಯೋಜಿಸುತ್ತಿದೆ 12ನೇ ಆವೃತ್ತಿಯ ವಸ್ತಭೂಷಣ”

ಆಗಸ್ಟ್ 2ರಿಂದ 6ರವರೆಗೆ ನಡೆಯಲಿರುವ ಪ್ರದರ್ಶನ , ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿರುವ ಮೇಳವಾಗಿದ್ದು ದೇಶಾದ್ಯಂತ ಇರುವ ಕರಕುಶಲಕರ್ಮಿಗಳು , ನೇಯ್ಕೆದಾರರು ತಯಾರಿಸಿರುವ ವಸ್ತಗಳು ಲಭ್ಯ .

ಬೆಂಗಳೂರು ಆಗಸ್ಟ್ 2 , 2019 : ಕರಕುಶಲ ವಸ್ತುಗಳು ಹಾಗೂ ಕುಶಲಕರ್ಮಿಗಳಿಗಾಗಿಯೇ ರಚಿತವಾಗಿರುವ ಸಂಘ ‘ ಸಂಪೂರ್ಣ ಬೆಂಗಳೂರಿನ ಕಂಟೋನ್ಸೆಂಟ್ ರೈಲು ನಿಲ್ದಾಣದ ಸಮೀಪವಿರುವ ಮಿಲ್ಲರ್ಸ್ ರಸ್ತೆಯ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ` ವಸ್ತಭೂಷಣ ‘ ಎನ್ನುವ ಪ್ರದರ್ಶನ ಏರ್ಪಡಿಸಿದೆ .ಆಗಸ್ಟ್ 2ರಿಂದ ಆರಂಭವಾಗಿ 6ನೇ ತಾರೀಕಿನವರೆಗೆ ಒಟ್ಟು ಐದು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಕರಕುಶಲ ಸೀರೆಗಳು ಹಾಗೂ ವಸ್ತಗಳು ಪ್ರದರ್ಶನಗೊಳ್ಳಲಿವೆ .ಪ್ರತಿ ದಿನ ಬೆಳಗ್ಗೆ 11 ಗಂಟೆಯಿಂದ ಆರಂಭಗೊಂಡು ರಾತ್ರಿ 7 .30ರವರೆಗೆ ಪ್ರದರ್ಶನ ನಡೆಯಲಿದ್ದು , ನೇಯ್ದೆದಾರರು ಹಾಗೂ ವಿನ್ಯಾಸಗಾರರನ್ನು ಒಂದೇ ಸೂರಿನಡಿಗೆ ತರುವ ವ್ಯವಸ್ಥೆ ಮಾಡಲಾಗಿದೆ .

ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿರುವ ವಸ್ತ್ರ ವಿನ್ಯಾಸಗಾರರು ರಚಿಸಿರುವ ಸಾಂಪ್ರದಾಯಿಕ , ಸಮಕಾಲೀನ , ಕೈಮಗ್ಗದ ಹಾಗೂ ಕರಕುಶಲ ವಸ್ತುಗಳು ಮೇಳದಲ್ಲಿ ದೊರೆಯಲಿವೆ .

ಆಗಸ್ಟ್ 2ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಕನ್ನಡದ ಕಿರುತೆರೆ ನಟಿಯರು ಪಾಲ್ಗೊಂಡು ಪ್ರದರ್ಶನ ಉದ್ಘಾಟಿಸಲಿದ್ದಾರೆ .ಮೇಳದ ಅಂಗವಾಗಿ ನಟಿಯರಾದ ಹಿತಾ ಚಂದ್ರಶೇಖರ್ , ಅನುಪಮಾ ಗೌಡ , ಕಾವ್ಯಾ ಶಾಸ್ತ್ರಿ , ಆಶೀತಾ ಚಂದ್ರಪ್ಪ , ಮಾನಸಿ ಜೋಶಿ ಮತ್ತಿತರರಿಂದ ಕ್ಯಾಂಪ್ ವಾಕ್ ನಡೆಯಲಿದೆ .ಇವರೆಲ್ಲರೂ ವಸ್ತಭೂಷಣದಲ್ಲಿ ಪ್ರದರ್ಶನಗೊಳ್ಳಲಿರುವ ಕರಕುಶಲ ಹಾಗೂ ಕೈಮಗ್ಗದ ವಸ್ತ್ರಗಳೊಂದಿಗೆ ಕ್ಯಾಂಪ್‌ನಲ್ಲಿ ಮಿಂಚಲಿದ್ದಾರೆ .ಮಧ್ಯಾಹ್ನ 2 .30ಕ್ಕೆ ಆರಂಭಗೊಳ್ಳಲಿರುವ ಈ ಫ್ಯಾಶನ್ ಶೋ ಸಂಜೆ 4 .45ರವರೆಗೆ ನಡೆಯಲಿದೆ .

ಕರಕುಶಲ ಹಾಗೂ ಕೈಮಗ್ಗದ ವಸ್ತುಗಳ ಬಳಕೆಗೆ ಹೆಚ್ಚು ಉತ್ತೇಜನ ನೀಡುವ ಉದ್ದೇಶದಿಂದ ಐದು ದಿನಗಳ ವಸಭೂಷಣ ಮೇಳವನ್ನು ಸಂಪೂರ್ಣ ಆಯೋಜಿಸಿದ್ದು , ನೇಯ್ಕೆದಾರರಿಗೆ , ಕರಕುಶಲಕರ್ಮಿಗಳಿಗೆ ಹಾಗೂ ವಿನ್ಯಾಸಗಾರರಿಗೆ ತಾವು ತಯಾರಿಸಿರುವ ನಗರದ ಗ್ರಾಹಕರಿಗೆ ನೇರವಾಗಿ ಮಾರಲು ಈ ಮೇಳವು ಅವಕಾಶ ಒದಗಿಸಲಿದೆ .

ವಿಭಿನ್ನವಾಗಿರುವ ಒಡಿಶಾದ ಕೋಟಾಡ್ ನೇಯ್ಕೆಯಿಂದ ಹಿಡಿದು ವಾರಾಣಸಿಯ ಅಪರೂಪದ ನೇಯ್ದೆಯ ಬಟ್ಟೆಗಳು ಸೇರಿದಂತೆ ದೇಶಾದ್ಯಂತ ಇರುವ ಕರಕುಶಲಕರ್ಮಿಗಳು ತಯಾರಿಸಿರುವ ಅಪರೂಪದ ಹಾಗೂ ನಾಜೂಕು ಹಾಗೂ ಅತ್ಯಂತ ಸೂಕ್ಷ್ಮವಾಗಿ ನೇಯ್ದಿರುವ ವಸ್ತಗಳು ವಸ್ತಭೂಷಣದಲ್ಲಿ ಪ್ರದರ್ಶನಗೊಳ್ಳಲಿವೆ . ರಾಜಸ್ಥಾನದ ಅಜರಾಕ್ , ಪಟೋಲಾ ಹಾಗೂ ಅಕೋಲ ಮತ್ತು ಚೆಟ್ಟಿನಾಡ್ ಕಾಟನ್‌ಗಳು , ಕಾಂಜೀವರಂ ಹಾಗೂ ಬ್ಲಾಕ್ ಪ್ರಿಂಟ್ ಸೀರೆಗಳು ಮೇಳದಲ್ಲಿ ಇರಲಿವೆ . ವಾರಣಸಿಯ ವೀವ್ ಸ್ಟುಡಿಯೋ . ಅಹಮದಾಬಾದ್‌ನ ಒಖಾಯಿ ಹಾಗೂ ರಾಜಸ್ಥಾನದ ಉರ್ಮುಲ್ ಮತ್ತಿತರರ ಅಪರೂಪದ ನೇಯ್ದೆಗಳು ವಸ್ತಭೂಷಣದಲ್ಲಿ ಪ್ರದರ್ಶನಗೊಳ್ಳಲಿವೆ .

ಒಡಿಶಾದ ಕೊಟ್ಟಾಡ್ ಜಿಲ್ಲೆಯ ಪದ್ಮಶ್ರೀ ಪ್ರಶಸ್ತಿ ವಿಜೇತ ಗೋವರ್ಧನ್ ರ್ಪಣಿಕಾ ಅವರು ವಿನ್ಯಾಸಗೊಳಿಸಿರುವ ಅಪರೂಪದ ಕೊಟ್ಟಾಡ್ ನೇಯ್ಕೆಯ ಬಟ್ಟೆಗಳು ಮೇಳದಲ್ಲಿ ಪ್ರದರ್ಶನವಾಗಲಿದೆ . ಸಾಂಪ್ರದಾಯಿಕ ಬುಡಕಟ್ಟು ವಿನ್ಯಾಸವನ್ನು ಹೊಂದಿರುವ ಗೋವರ್ಧನ್ ಪಣಿಕಾ ಅವರ ಉತ್ಪನ್ನಗಳನ್ನು ಶೇ . 100ರಷ್ಟು ಹತ್ತಿ ಹಾಗೂ ನೈಸರ್ಗಿಕ ನೂಲುಗಳಿಂದ ತಯಾರಿಸಲಾಗುತ್ತದೆ . ಅದೇ ರೀತಿ ವಸ್ತ್ರ ಪುನರುಜೀವಕರಾಗಿರುವ ಪಶ್ಚಿಮ ಬಂಗಾಳದ ಶ್ರೀ ಅನೂಪ್ ರಕ್ಷಿತ್ ಅವರ ಅತಿ ಸೂಕ್ಷ್ಮ ಹತ್ತಿ ಬಟ್ಟೆ ( ಮನ್ ) ಹಾಗೂ ಖಾದಿಯೂ ಪ್ರದರ್ಶನಗೊಳ್ಳಲಿವೆ . ಇದರ ಜತೆಗೆ ಅರ್ಥ್ ಫೌಂಡೇಷನ್ ನೈಸರ್ಗಿಕ ಬಣ್ಣಗಳನ್ನು ಬಳಸಿಕೊಂಡು ತಯಾರಿಸಿರುವ ಆಕ್ಸಸರಿಗಳು ಹಾಗೂ ವಸ್ತುಗಳು ದೊರೆಯಲಿವೆ .

ಕೊಟ್ಟಾಡ್ ಕೈಮಗ್ಗದ ವಸ್ತ್ರಗಳ ತಯಾರಿಯ ಮೂಲಕ ಸಾಧನೆ ಮಾಡಿರುವ ಪದ್ಮಶ್ರೀ ಪ್ರಶಸ್ತಿ ವಿಜೇತ ಗೋವರ್ಧನ್ ಪಣಿಕಾ ಅವರಿಗೆ ಸಂಪೂರ್ಣ ಸನ್ಮಾನಿಸಿ ಗೌರವ ಸಲ್ಲಿಸಲಿದೆ .

ನೇಯ್ಕೆಯ ಬಟ್ಟೆಯಲ್ಲದೇ , ಸ್ಥಳೀಯವಾಗಿರುವ ಪಾಟರ್ ಪಾಪ್ ಅಪ್ ಹಾಗೂ ಸ್ಟುಡಿಯೊ ಡಿಸೈನರ್ ಪಾಟರ್‌ಗಳು ಮೇಳದಲ್ಲಿ ದೊರೆಯಲಿವೆ . ಪಿಂಗಾಣಿ ಬಟ್ಟಲುಗಳು , ಅಲಂಕಾರಿಕ ಪಾತ್ರೆಗಳು ಹಾಗೂ ಸ್ಥಳೀಯವಾಗಿ ದೊರೆಯುವ ಪಾಟರ್ ಪಾಪ್ ಅಪ್‌ಗಳು ಮೇಳದಲ್ಲಿರುತ್ತವೆ .

ವಸ್ತಭೂಷಣಕ್ಕೆ ಭೇಟಿ ನೀಡಲು ಸಮಯ ಕಾಯ್ದಿರಿಸಿ ನಿಮ್ಮ ಮನೆಯ ವಾರ್ಡ್‌ರೋಬ್‌ಗಳನ್ನು ಇನ್ನಷ್ಟು ಅಂದಗಾಣಿಸಿ ,

ಏನು ? : ವಸಭೂಷಣ ಯಾವಾಗ ? :

ಆಗಸ್ಟ್ 28ಂದ 6ರವರೆಗೆ .

ಸಮಯ : ಮಧ್ಯಾಹ್ನ 11 ಗಂಟೆಯಿಂದ ರಾತ್ರಿ 7 . 30ರವರೆಗೆ

ಎಲ್ಲಿ : 63 , ಯುನೈಟೆಡ್ ಥಿಯಾಲಾಜಿಕಲ್ ಕಾಲೇಜು , ಮಿಲ್ಲರ್ಸ್ ರಸ್ತೆ , ಕಂಟೋನ್ಸೆಂಟ್ ರೈಲು ನಿಲ್ದಾಣದ ಬಳಿ , ಬೆಂಗಳೂರು , ಕರ್ನಾಟಕ , 560046

ಪ್ರವೇಶ : ಉಚಿತ

ಸಂಪರ್ಕ : + 91 9742204002 | + 91 94803 37734

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.