ಸಚಯವರುಗಳಾದ ಶ್ರೀಮತಿ ಉಮಾಶ್ರೀ ಹಾಗೂ ಶ್ರೀಮತಿ ಜಯಮಾಲರವರು ಹೇಗಾದರೂ ಮಾಡಿ ಕಮಿಷನ್ ಪಡೆಯಬೇಕೆಂಬ ಅವಿರತ ಪ್ರಯತ್ನ ಮಾಡಿದ್ದಾರೆ

ಕರ್ನಾಟಕದ ಸಮಗ್ರ ಬಾಲ ವಿಕಾಸ ಯೋಜನೆ 1970ರಲ್ಲಿ ಪ್ರಾರಂಭವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 65 , 000 ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ದಿನ 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಪೂರಕ ಪೌಷ್ಠಿಕ ಆಹಾರ ಪಡೆಯುತ್ತಿದ್ದಾರೆ . ದೇಶದ ಸರ್ವೋಚ್ಛ ನ್ಯಾಯಾಲಯ ಸಮಗ್ರ ಬಾಲ ವಿಕಾಸ ಯೋಜನೆಯಡಿಯಲ್ಲಿ ಯಾವುದೇ ಕಾರಣಕ್ಕೂ ಖಾಸಗೀ ಗುತ್ತಿಗೆದಾರರನ್ನ ಬಳಸಬಾರದೆಂದು ಹಾಗೂ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ವಿಕೇಂದ್ರಿಕರಣದ ಮೂಲಕ ಮಹಿಳಾ ಸಂಘಟನೆಗಳಿಂದ ಪಡೆಯಲು ಸ್ಪಷ್ಟವಾಗಿ ನೇಕ ಐತಿಹಾಸಿಕ ತೀರ್ಪುಗಳಲ್ಲಿ ತಿಳಿಸಿದೆ . ಆದರೆ ಕರ್ನಾಟಕ ರಾಜ್ಯದಲ್ಲಿ ವಾರ್ಷಿಕ 1000 ( ಸಾವಿರ ) ಕೋಟಿ ಅನುದಾನವುಳ್ಳ ಈ ಪೂರಕ ಪೌಷ್ಠಿಕ ಆಹಾರ ಕಾರ್ಯದ ಅಡಿಯಲ್ಲಿ ಹೇಗಾದರೂ ಮಾಡಿ ಕಮಿಷನ್ ಪಡೆಯಬೇಕೆಂಬ ಆಸೆಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಇದೇ ಇಲಾಖೆಯ ಮಾಜಿ ಸಚಯವರುಗಳಾದ ಶ್ರೀಮತಿ ಉಮಾಶ್ರೀ ಹಾಗೂ ಶ್ರೀಮತಿ ಜಯಮಾಲರವರು ಅವಿರತ ಪ್ರಯತ್ನ ಮಾಡಿದ್ದಾರೆ . ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಸಹ ಐಸಿಡಿಎಸ್ ಯೋಜನೆಯಡಿಯಲ್ಲಿ ಪೂರಕ ಪೌಷ್ಠಿಕ ಆಹಾರ ಯೋಜನೆಯನ್ನು ವಿಕೇಂದ್ರೀಕರಣಗೊಳಿಸಿ ಸ್ಥಳೀಯ ಮಹಿಳಾ ಸಂಘಟನೆಗಳಿಗೆ ಗುತ್ತಿಗೆ ನೀಡಿದ್ದಾರೆ . ಆದರೆ ಕರ್ನಾಟಕ ರಾಜ್ಯ ಮಾತ್ರ ಇದಕ್ಕೆ ಸಂಪೂರ್ಣ ಭಿನ್ನವಾಗಿ ಸದರಿ ಯೋಜನೆಯನ್ನು ಕೇಂದ್ರೀಕೃತಗೊಳಿಸಿ ಜನತಾ ಬಜಾರ್‌ಗೆ ಹಸ್ತಾಂತರ ಮಾಡಿ ಶೇ . 10ರಷ್ಟು ಕಮಿಷನ್ ಪಡೆಯುವ ದುರುದ್ದೇಶವಾಗಿದೆ . ಕಳೆದ ಹಲವಾರು ದಿನಗಳಿಂದ ಕೆಲವು ಪ್ರಮುಖ ಚಾನಲ್‌ಗಳಲ್ಲಿ ಗುತ್ತಿಗೆದಾರನೊಬ್ಬ ಮೇಲೆ ತಿಳಿಸಿದಂತೆ ಜನತಾ ಬಜಾರ್‌ಗೆ ಹಸ್ತಾಂತರಗೊಳಿಸಲು ಪ್ರಯತ್ನಿಸಿ ಕೋಟ್ಯಾಂತರ ರೂಪಾಯಿಗಳ ಲಂಚವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಿಗೆ ಇದೇ ಇಲಾಖೆಯ ಹಿಂದಿನ ಮಹಿಳಾ ಸಚಿವರುಗಳಾದ ಶ್ರೀಮತಿ ಉಮಾಶ್ರೀ ಹಾಗೂ ಡಾ . ಜಯಮಾಲರವರಿಗೆ ಹಣ ನೀಡಿರುವ ಬಗ್ಗೆ ಹಾಗೂ ಕೆಲಸವಾಗದ ಕಾರಣ ಆತ್ಮಹತ್ಯೆ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದ್ದಾರೆ . ಇದಲ್ಲದೇ ಪೌಷ್ಠಿಕ ಆಹಾರದ ಗುಣಮಟ್ಟದ ಬಗ್ಗೆ ಹಾಗೂ ಕಳಪೆ ಪಟ್ಟದ ಪೌಷ್ಟಿಕ ಆಹಾರ ನೀಡುತ್ತಿರುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಸಾರವಾಗುತ್ತಿದೆ . ಸರ್ಕಾರದ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಿಸುವ ಬದಲಿಗೆ ಸದರಿ ಯೋಜನೆಗಳಲ್ಲಿ ಹೇಗೆ ಕಮಿಷನ್ ಹೊಡೆಯಬೇಕು ಎಂಬುದನ್ನ ಲೆಕ್ಕಾಚಾರ ಮಾಡಿ ದೇಶದ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಐಸಿಡಿಎಸ್ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರದ ಸರಬರಾಜು ಯೋಜನೆಯನ್ನು ಕೇಂದ್ರೀಕೃತಗೊಳಿಸಿ ಯಾವುದೇ ರೀತಿ ಶಕ್ತಿವಲ್ಲದಂತ ಜನತಾ ಬಜಾರ್‌ಗೆ ನೀಡಲು ಕೆಲವು ಪಟ್ಟಭದ್ರಾ ಹಿತಾಸಕ್ತಿವುಳ್ಳವರು ಪ್ರಯತ್ನಿಸುತ್ತಿರುವುದು ತೀರ ಶೋಚನೀಯ ಹಾಗೂ ಖಂಡನೀಯವಾದ ವಿಚಾರ . ಈಗಾಗಲೇ ರಾಜ್ಯದಲ್ಲಿ ಸದರಿ ಯೋಜನೆಯ ಅಡಿಯಲ್ಲಿ ಕೋಟಿಗಟ್ಟಲೆ ಹಣ ಲೂಟಿಯಾಗಿ 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಪೂರಕ ಪೌಷ್ಠಿಕ ಆಹಾರ ಸಮರ್ಪವಾಗಿ ಸಿಗದಿರುವುದಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಸಚಿವರ ಬಗ್ಗೆ ಕರ್ನಾಟಕ ಸರ್ಕಾರ ಕೂಡಲೇ ಸೂಕ್ತಕ್ರಮವಹಿಸಿ ಸಮಗ್ರ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಗಳಾದ ಶ್ರೀ ಬಿ . ಎಸ್ . ಯಡಿಯೂರಪ್ಪನವರಲ್ಲಿ ವಿನಂತಿಸಲಾಗಿದೆ . ಸದರಿ ಯೋಜನೆಯಲ್ಲಿ ಶ್ರೀ ಶಿವಕುಮಾರ್ ಖಾಸಗೀ ಗುತ್ತಿಗೆದಾರರು ಸರ್ಕಾರದ ಒಂದು ಯೋಜನೆಯ ಅನುಷ್ಠಾನಕ್ಕಾಗಿ ಕೋಟ್ಯಾಂತರ ರೂಪಾಯಿಗಳ ಲಂಚವನ್ನು ಏಕೆ ನೀಡಿದ್ದಾರೆ ಎಂಬುದರ ಬಗ್ಗೆ ಸರ್ಕಾರ ಕೂಡಲೇ ಎಫ್ . ಐ . ಆರ್ . ದಾಖಲಿಸಿ ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತಕ್ರಮವಹಿಸಲು ಈ ಮೂಲಕ ನಮ್ಮ ಮಹಾಮಂಡಳಿ ವಿನಂತಿಸುತ್ತದೆ . ಅಲ್ಲದೇ ಕರ್ನಾಟಕ ಸರ್ಕಾರ ಫಲಾನುಭವಿಗಳ ಹಿತದೃಷ್ಟಿಯಿಂದ ಕೂಡಲೇ ಕ್ರಮವಹಿಸಬೇಕೆಂದು ಈ ಮೂಲಕ ನಮ್ಮ ಸಂಘ ಒತ್ತಾಯಿಸುತ್ತದೆ .

— ಜಿ . ಆರ್ . ಶಿವಶಂಕರ್

ಅಧ್ಯಕ್ಷರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.