ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ಕರ್ನಾಟಕ ವತಿಯಿಂದ ಮಾನವೀಯ ಸೇವಾಕಾರ್ಯಗಳು

2004ರಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ಪ್ರೇರಣೆಯಿಂದ ಆರಂಭಗೊಂಡ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ಕರ್ನಾಟಕ ಪ್ರಕೃತಿ ವಿಕೋಪ ಮತ್ತು ಕೋಮು ಗಲಭೆಗಳಂತಹಾ ತುರ್ತುಪರಿಸ್ಥಿತಿಗಳಲ್ಲಿ ರಕ್ಷಣೆ , ಪರಿಹಾರ ಮತ್ತು ಪುನರ್ವಸತಿ ಹಾಗೂ ಇತರೆ ಮಾನವೀಯ ಸೇವಾಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ . ರಾಜ್ಯಾದ್ಯಂತ ಇದು ಸುಮಾರು 400 ಸ್ವಯಂಸೇವಕರನ್ನು ಹೊಂದಿದೆ . ರಕ್ಷಣೆಯ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಪಡೆದು ಇತರರಿಗೆ ತರಬೇತಿ ನೀಡಬಲ್ಲ ಸುಮಾರು 50 ಮಂದಿ ತರಬೇತುದಾರರು ಇದ್ದಾರೆ . ಜಿಲ್ಲಾ ಮಟ್ಟದ ಅಗ್ನಿಶಾಮಕ ದಳ , ಹೋಮ್ ಗಾರ್ಡ್ಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ( NDRF ) ನಂತಹಾ ಸಂಸ್ಥೆಗಳೊಂದಿಗೆ ನಮ್ಮ ಸಂಸ್ಥೆ ಸಹಕರಿಸುತ್ತಿದೆ .

ಕೈಗೊಂಡ ಪ್ರಮುಖ ಸೇವಾ ಕಾರ್ಯಗಳು :

1 , 2006ರಲ್ಲಿ ಮಂಗಳೂರಿನ ಕೋಮುಗಲಭೆ ಸಂದರ್ಭದಲ್ಲಿ ಸುಮಾರು 25 ಲಕ್ಷ ರೂಪಾಯಿಗಳ ಪರಿಹಾರ ಕಾರ್ಯ

2 , 2009ರಲ್ಲಿ ಉತ್ತರ ಕರ್ನಾಟಕದ 12 ನೆರೆ ಪೀಡಿತ ಜಿಲ್ಲೆಗಳಲ್ಲಿ ಒಟ್ಟು ರೂ 3 ಕೋಟಿ ವ್ಯಯಿಸಿ 200 ಮನೆಗಳ ನಿರ್ಮಾಣ ಮತ್ತು 200 ಮನೆಗಳ ದುರಸ್ತಿ ಕಾರ್ಯ .

3 , 2016 ರಿಂದ 2018ರವರೆಗೆ ಉತ್ತರ ಕರ್ನಾಟಕದ ಬರ ಪೀಡಿರ 13 ಜಿಲ್ಲೆಗಳಲ್ಲಿ ಸುಮಾರು 30 ಬೋರ್‌ವೆಲ್ , ಸುಮಾರು 2500 ಟ್ಯಾಂಕರ್ ನೀರಿನ ವಿತರಣೆ ,

4 , 2018ರಲ್ಲಿ ಕೇರಳದ ನೆರೆ ಪೀಡಿತ ಪ್ರದೇಶಗಳಲ್ಲಿ ನಮ್ಮ 50 ಸ್ವಯಂಸೇವಕರಿಂದ 10 ದಿನಗಳ ಕಾಲ ಮನೆ , ಶಾಲೆ , ಮಂದಿರ , ಚರ್ಚ್ ಮಸೀದಿಗಳ ಸ್ವಚ್ಛತಾ ಕಾರ್ಯ .

5 , 2018ರಲ್ಲಿ ಕೊಡಗು ಭೂಕುಸಿತ ಪೀಡಿತರಲ್ಲಿ ಸುಮಾರು 30 ಲಕ್ಷ ರೂಪಾಯಿಗಳ ವಿವಿಧ ಪರಿಹಾರ ಕಾರ್ಯ , 8 ಮನೆಗಳ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿದೆ .

6 , 2018ರಲ್ಲಿ ಒರಿಸ್ತಾ ಚಂಡಮಾರುತ ಸಂಧರ್ಭದಲ್ಲಿ 10 ಮಂದಿಯ ತಂಡದಿಂದ 10 ದಿನಗಳ ಪರಿಹಾರ ಕಾರ್ಯ .

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಅಗ್ನಿ ಅನಾಹುತಕ್ಕೀಡಾದ ಮನೆಯಿಂದ ನಮ್ಮ ಸ್ವಯಂಸೇವಕರೋರ್ವರು 3 ಮಂದಿಯ ಜೀವ ಉಳಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ . ಇದೇ ರೀತಿ ವಿವಿಧ ಅಪಘಾತ ಪೀಡಿತರಿಗೆ ದಿನನಿತ್ಯ ನಮ್ಮ ಸ್ವಯಂಸೇವಕರು ಅಗತ್ಯ ಸಹಾಯ ನೀಡುತ್ತಿದ್ದಾರೆ .

ಇದೀಗ ಆಸ್ಸಾಮಿನ ನೆರೆ ಪೀಡಿತ ಪ್ರದೇಶಗಳಿಗೆ ಜುಲೈ 23ರಿಂದ ಆಗಸ್ಟ್‌ 1ರ ತನಕ ದುಬಿ ಜಿಲ್ಲೆಯ ಹವಾರ್ ಪಾರ್ಕ್‌ನಲ್ಲಿ ಸುಮಾರು 150 ಅಡಿ ಉದ್ದದ ಒಂದು ಕಾಲು ಸೇತುವೆ , 2 ವೈದ್ಯಕೀಯ ಶಿಬಿರ ಮತ್ತಿತರ ತುರ್ತು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು . ಈ ಪ್ರಯುಕ್ತ ಇಂದಿನ ಪತ್ರಿಕಾ ಗೋಷ್ಠಿಯನ್ನು ಆಯೋಜಿಸಲಾಗಿದೆ . ಈಗಾಗಲೆ ಸುಮಾರು 2ಲಕ್ಷಕ್ಕೂ ಮೀರಿ ಖರ್ಚು ತಗಲಿದೆ .

ಪತ್ರಿಕಾ ಗೋಷ್ಠಿಯ ಉಪಸ್ಥಿತರು :

1 . ಅಕ್ಟರ್‌ ಅಲಿ , ಕಾರ್ಯದರ್ಶಿ , ಜಮಾಅತೆ ಇಸ್ಲಾಮಿ ಹಿಂದ್ , ಕರ್ನಾಟಕ .

2 . ಕೆ . ಎಮ್ ಅಶ್ರಫ್ , ನಿರ್ದೇಶಕರು , HRS

3 . ಮುಹಮ್ಮದ್ ಮರಕಡ , ಪ್ರಧಾನ ಕಾರ್ಯದರ್ಶಿ , IIRS

4 , ಎಜಾಝ್ ಅಹ್ಮದ್ , ತಂಡ ನಾಯಕ , ಅಸ್ಸಾಮ್ ಪ್ರವಾಹ ಪುನರ್ವಸತಿ ತಂಡ , HRS

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.