ಆಟೋಚಾಲಕರಾದ ಶ್ರೀ ಗಂಗಾಧರ್ ರವರ ಪ್ರಮಾಣಿಕತೆಯನ್ನು ಶ್ಲಾಘಿಸಿ , ಮಾನ್ಯ ಪೊಲೀಸ್ ಆಯುಕ್ತರು , ಬೆಂಗಳೂರು ನಗರ ರವರು ಪ್ರಶಂಸನಾ ಪತ್ರವನ್ನು ನೀಡಿರುತ್ತಾರೆ

ಶ್ರೀ ಗಂಗಾಧರ್‌ ಆಟೋಚಾಲಕರು ಆಟೋ ರಿಕ್ಷಾ ನಂ . KA – 02 – AF – 7930 ರಲ್ಲಿ ದಿನಾಂಕ : 03 / 08 / 2019 ರಂದು ಸಂಜೆ 07 – 00 ಗಂಟೆಯ ಸಮಯದಲ್ಲಿ ಪ್ರಯಾಣಿಕರೊಬ್ಬರು – ಕೋರಮಂಗಲದಿಂದ ಗಾಂಧಿನಗರಕ್ಕೆ ಪ್ರಯಾಣಿಸಿ , ಇಳಿದು ಹೋಗುವ ಸಮಯದಲ್ಲಿ ತಮ್ಮ ಬ್ಯಾಗನ್ನು ಆಟೋ ರಿಕ್ಷಾದಲ್ಲಿ ಮರೆತು ಬಿಟ್ಟು ಹೋಗಿದ್ದು , ನಂತರ ಆಟೋಚಾಲಕರು ಕೆಲಸಮುಗಿಸಿ , ಮನೆಗೆ ಹೋಗಿದ್ದು , ಬೆಳಿಗ್ಗೆ ಎದ್ದು , ಆಟೋದ ಹಿಂಬದಿ ಸೀಟಿನ ಹಿಂದೆ ಬ್ಯಾಗ್‌ಗಳನ್ನು ಇಡುವ ಜಾಗದಲ್ಲಿ ನೋಡಲಾಗಿ ಒಂದು ಕಪ್ಪುಬ್ಯಾಗ್ ಇರುವುದು ಕಂಡುಬಂದಿರುತ್ತದೆ ,

ಸದರಿ ಬ್ಯಾಗ್‌ನ್ನು ಆಟೋಚಾಲಕರು ದಿನಾಂಕ : 04 – 08 – 2019 ರಂದು ಬೆಳಿಗ್ಗೆ 11 – 00 ಗಂಟೆಯ ಸಮಯದಲ್ಲಿ ಪೊಲೀಸ್ ಆಯುಕ್ತರ ಕಛೇರಿಯ ಉಪ ಪೊಲೀಸ್ ಆಯುಕ್ತರು ( ಪ್ರಭಾರ ) ಪೊಲೀಸ್ ನಿಯಂತ್ರಣ ಕೋಣೆ , ಬೆಂಗಳೂರುನಗರ ಇಲ್ಲಿಗೆ ತಂದು ಒಪ್ಪಿಸಿರುತ್ತಾರೆ , ನಂತರ ಪೊಲೀಸ್ ನಿಯಂತ್ರಣ ಕೋಣೆಯಿಂದ ಬ್ಯಾಗ್‌ನ ವಾರಸುದಾರರ ಪತ್ತೆಗಾಗಿ ಎಲ್ಲಾ ಠಾಣೆಗಳಿಗೂ ವೈರ್‌ಲೆಸ್ ಮೆಸೇಜ್ ನೀಡಿರುತ್ತಾರೆ . ಬ್ಯಾಗ್‌ನ ವಾರಸುದಾರದ ಶ್ರೀ ಪಟೇಲ್ ಪಂಕಜ್‌ಬಾಯ್ ಜೀವನ್‌ಬಾಯ್‌ರವರು ಬ್ಯಾಗ್‌ನ್ನು ಕಳೆದುಕೊಂಡ ವಿಚಾರವಾಗಿ ದಿನಾಂಕ : 04 / 08 / 2019 ರಂದು ಬೆಳಿಗ್ಗೆ 08 – 45ರಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಇ – ಲಾಸ್‌ನ ಮೂಲಕ ದೂರನ್ನು ದಾಖಲಿಸಿದ್ದು , ಸದರಿ ವಾರಸುದಾರರಿಗೆ ಠಾಣೆಯಿಂದ ಕರೆಮಾಡಿ ತಮ್ಮ ಬ್ಯಾಗ್ ಸಿಕ್ಕಿರುವುದಾಗಿ ಹಾಗೂ ಸದರಿ ಬ್ಯಾಗ್‌ನ್ನು ಪೊಲೀಸ್ ನಿಯಂತ್ರಣ ಕೋಣೆಯಲ್ಲಿ ಪಡೆದುಕೊಂಡು ದೂರನ್ನು ಹಿಂಪಡೆಯಲು ತಿಳಿಸಿ ಕಳುಹಿಸಿಕೊಟ್ಟಿರುತ್ತಾರೆ .

ವಾರಸುದಾರರು ಪೊಲೀಸ್ ನಿಯಂತ್ರಣ ಕೋಣೆಗೆ ಬಂದ ನಂತರ ಆಟೋಚಾಲಕರ ಸಮ್ಮುಖದಲ್ಲಿಯೇ ಬ್ಯಾಗ್‌ನಲ್ಲಿದ್ದ ಪಾನ್ ಕಾರ್ಡ್ , ಪಾಸ್‌ಪೋರ್ಟ್ , ಆಧಾರ್‌ ಕಾರ್ಡ್ , ಮ್ಯಾರೇಜ್ ಸರ್ಟಿಫಿಕೇಟ್ , ವಿದ್ಯಾಭ್ಯಾಸದ ಪ್ರಮಾಣಪತ್ರ , ಓಟರ್ ಕಾರ್ಡ್ ಹಾಗೂ ಇತರೆ ದಾಖಲಾತಿಗಳನ್ನು ಒಳಗೊಂಡ ಕಪ್ಪು ಬಣ್ಣದ ಬ್ಯಾಗ್‌ನ್ನು ಮಾನ್ಯ ಪೊಲೀಸ್ ಆಯುಕ್ತರು ವಾರಸುದಾರಿಗೆ ಒಪ್ಪಿಸಿರುತ್ತಾರೆ , ಆಟೋಚಾಲಕರಾದ ಶ್ರೀ ಗಂಗಾಧರ್ ರವರ ಪ್ರಮಾಣಿಕತೆಯನ್ನು ಶ್ಲಾಘಿಸಿ , ಮಾನ್ಯ ಪೊಲೀಸ್ ಆಯುಕ್ತರು , ಬೆಂಗಳೂರು ನಗರ ರವರು ಪ್ರಶಂಸನಾ ಪತ್ರವನ್ನು ನೀಡಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.