ಆಗಸ್ಟ್ 14 – 15ರ ಇಡೀ ರಾತ್ರಿ ಭೂಮಿ ಮತ್ತು ವಸತಿಯ ಹಕ್ಕನ್ನು ಪ್ರತಿಪಾದಿಸುತ್ತಾ ಬಡವರ “ ನಡುರಾತ್ರಿ ಸ್ವಾತಂತ್ರೋತ್ಸವ ” ವಿಭಿನ್ನ ರೀತಿಯಲ್ಲಿ ಜರುಗಲಿದೆ

ಆಗಸ್ಟ್ 14 – 15ರ ಇಡೀ ರಾತ್ರಿ ಭೂಮಿ ಮತ್ತು ವಸತಿಯ ಹಕ್ಕನ್ನು ಪ್ರತಿಪಾದಿಸುತ್ತಾ ಬಡವರ “ ನಡುರಾತ್ರಿ ಸ್ವಾತಂತ್ರೋತ್ಸವ ” ವಿಭಿನ್ನ ರೀತಿಯಲ್ಲಿ ಜರುಗಲಿದೆ . ಇದರ ವಿವರಗಳನ್ನು ತಮ್ಮೊಡನೆ ಹಂಚಿಕೊಳ್ಳುತ್ತಿದ್ದೇವೆ . ಇದನ್ನು ಪರಿಣಾಮಕಾರಿ ರೀತಿಯಲ್ಲಿ ಸಾರ್ವಜನಿಕರಿಗೆ ತಲುಪಿಸಬೇಕೆಂದು ಕೋರುತ್ತಿದ್ದೇವೆ . . . ಭಾರತವು ಸ್ವಾತಂತ್ರ್ಯದ 72 ವರ್ಷಗಳನ್ನು ಪೂರೈಸಿ 73ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ . ಆದರೆ ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ಯ ? ” ಎಂಬ ಪ್ರಶ್ನೆ , “ ಬಡವರ ಮನೆಗೆ ಬರಲಿಲ್ಲ . ಬೆಳಕಿನ ಕಿರಣ ತರಲಿಲ್ಲ ” ಎಂಬ ಪ್ರತಿಕ್ರಿಯೆ ಇಂದಿಗೂ ಪ್ರಸ್ತುತವಾಗಿ ಉಳಿದಿರುವುದು ಕಟು ವಾಸ್ತವ . ಇಷ್ಟೊಂದು ಸಕಲ ಸಂಪತ್ಸಮೃದ್ದವಾದ ಈ ವಿಶಾಲ ಪ್ರಾಚೀನ ದೇಶಕ್ಕೆ ಇದು ಗೌರವದ ವಿಚಾರವೇನಲ್ಲ . , ಆಳುವವರು ಹಾಗೂ ಆಸ್ತಿವಂತರಿಗೆ ಸರ್ವತಂತ್ರ ಸ್ವಾತಂತ್ರ್ಯ : ದುಡಿಯುವ ಜನರ ಬದುಕಿಗೆ ನಿತ್ಯ ಅತಂತ್ರ ಪರತಂತ್ರ ಎಂಬ ಸ್ಥಿತಿಗೆ ದೇಶ ತಲುಪಿದೆ . ಬೆಳೆಗೆ ತಕ್ಕ ‘ ‘ ಬೆಲೆಗಾಗಿ , ಓದಿಗೆ ತಕ್ಕ ಉದ್ಯೋಗಕ್ಕಾಗಿ , ದುಡಿಮೆಗೆ ಕನಿಷ್ಠ ವೇತನಕ್ಕಾಗಿ , ಆರೋಗ್ಯದ ಸೌಕರ್ಯಕ್ಕಾಗಿ , ಶಿಕ್ಷಣದ ಶುಲ್ನಕ್ಕಾಗಿ , ತಲೆಯ ಮೇಲೊಂದು ಸೂರಿನ ಹಕ್ಕಿಗಾಗಿ , ಉಳುವ ಬೀಳು – ಬಂಜರು ಭೂಮಿಯ ಪಟ್ಟಾಕ್ಕಾಗಿ , ಮಹಿಳೆಯರ – ದುರ್ಬಲರ ಮಾನ – ಪ್ರಾಣಥ , ಸುರಕ್ಷತೆಗಾಗಿ , ಕೊನೆಗೆ ಸತ್ತ ಮೇಲಿನ ಸಮಾಧಿಯ ಜಾಗಕ್ಕಾಗಿ ಕೂಡ – ಕಣ್ಣೀರಿಡುವ , ಸರ್ಕಾರಗಳ ಮುಂದೆ ಗೋಗರೆಯುವ ದೈನೇಸಿ ಸ್ಥಿತಿಗೆ ಜನರನ್ನು ತಂದು ನಿಲ್ಲಿಸಲಾಗಿದೆ . ಇದನ್ನೇ ಸ್ವಾತಂತ್ರ್ಯವನ್ನಲಾಗುತ್ತಿದೆ , ಸ್ವಾತಂತ್ರ್ಯ ಎಂಬುದಕ್ಕೆ ಅರ್ಥವೇ ಇಲ್ಲವಾಗಿದೆ . ಈ ದೇಶದಲ್ಲಿ ಬಡಜನತೆಗಿನ್ನೂ ಸ್ವಾತಂತ್ರ್ಯ ದಕ್ಕಿಲ್ಲ ಎಂಬುದಕ್ಕೆ ನಮ್ಮ ಸಣ್ಣ ರೈತರ , ಬಗರ್‌ಹುಕುಂ ಸಾಗುವಳಿದಾಗ ಭೂಗತ ಕಹಿ ಕೂಲಿಗಳ ಬದುಕೊಂದು ಜೀವನ ಸಾಕ್ಷಿ.

ಕಾರ್ಯಕ್ರಮದ ಸ್ವರೂಪ ಈ ರೀತಿ ಇರಲಿದೆ :

• 14ರ ಸೂರ್ಯಾಸ್ತದೊಂದಿಗೆ ಹಂಡೆಯ ಮೆರವಣಿಗೆ – ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಬನಪ್ಪ ಪಾರ್ಕಿಗೆ ,

* 14 – 15ರ ಇಡೀ ರಾತ್ರಿ ಪ್ರತಿರೋಧ ಕಾರ್ಯಕ್ರಮಗಳು – ಭಾಷಣಗಳು , ಹೋರಾಟದ ಹಾಡುಗಳು , ರೂಪಕಗಳು ಇತ್ಯಾದಿ .

*ಮಧ್ಯರಾತ್ರಿ 11 . 30ರಿಂದ 12 : ಮುಖ್ಯ ಅತಿಥಿ ಚಂದ್ರಶೇಖರ ಆಜಾದ್ ‘ ರಾವಣ ‘ ರಿಂದ ಸಂಘರ್ಷದ ಸಂದೇಶ .

* ನಡುರಾತ್ರಿ 12 . 05ಕ್ಕೆ ಸ್ವಾತಂತ್ರ್ಯ ಸೇನಾನಿ ಎಚ್ . ಎಸ್ . ದೊರೆಸ್ವಾಮಿಯವರಿಂದ ಧ್ವಜಾರೋಹಣ ಹಾಗೂ ನಿಜ ಸ್ವಾತಂತ್ರ್ಯದ ಕರೆ

* 15ರ ಮುಂಚಾನೆ 9 ಗಂಟೆಗೆ ಹಕ್ಕಿಗಾಗಿ ನಮ್ಮ ಹೆಜ್ಜೆ – ಭನಪ್ಪ ಪಾರ್ಕಿನಿಂದ ಫೆರೇಡ್ ಗೌಂಡ್ ಕಡೆಗೆ ,

ನೊಂದುಬೆಂದು ಧಣಿದರೂ ಅನ್ಯಾಯಕ್ಕೆ ಮಣಿಯದ ಈ ದೇಶದ ಹಕ್ಕುದಾರ ಬಡಜನರು , ಇಡೀ ರಾತ್ರಿ ನಡೆಯುವ ವಿವಿಧ ಪ್ರತಿರೋಧ ಕಾರ್ಯಕ್ರಮಗಳ ಮೂಲಕ ಒಕ್ಕೊರಲಿನಿಂದ ಕೂಗಿ ಕೇಳಲಿದ್ದಾರೆ –

• “ ಆಳುವವರೇ ಹೇಳಿ – ಬಡವರಿಗೆಂದು ಸ್ವಾತಂತ್ಯ ? ”

• “ ಭೂಮಿ , ವಸತಿ ನಮ್ಮ ಹಕ್ಕು – ಸರ್ಕಾರದ ಭಿಕ್ಷೆಯಲ್ಲ ! ”

ಈ ವಿಶಿಷ್ಟ ಸ್ವಾತಂತ್ರ್ಯೋತ್ಸವದ ಭಾಗವಾಗಲು ಬಯಸುವ ಎಲ್ಲಾ ಸಂಘಟನೆಗಳಿಗೂ ಸ್ವಾಗತ , ಈ ನ್ಯಾಯಸಮ್ಮತ ಹೋರಾಟದಲ್ಲಿ ಈ ಹಿಂದಿನಂತೆಯೇ ಎಲ್ಲಾ ಪ್ರಜ್ಞಾವಂತ ಸಹೃದಯರೂ ಪಾಲ್ಗೊಂಡು ಶಕ್ತಿ ತುಂಬಬೇಕೆಂದು ಮನವಿ ಮಾಡುತ್ತೇವೆ .

– ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪರವಾಗಿ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.