ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರಚನೆಯಾದಾಗಿನಿಂದಲೂ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ – ಜನಕ್ರಾಂತಿ ವೇದಿಕೆ

12 – 08 – 2019

ನಮ್ಮ ದೇಶದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತಿರುವ ಹಿಂಸೆ , ಅಸಹಿಷ್ಣುತೆಯ ಬೆಳವಣಿಗೆಗಳು ನಮಗೆ ತುಂಬಾ ನೋವನ್ನು ಉಂಟು ಮಾಡಿದೆ . ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರಚನೆಯಾದಾಗಿನಿಂದಲೂ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ .

ಶಿಕ್ಷಣ ಕ್ಷೇತ್ರದಲ್ಲಿ ಕೇಸರೀಕರಣ ಮಾಡಲು ಹೊರಟು ಶೈಕ್ಷಣಿಕ ಸ್ವಾತಂತ್ರವನ್ನು ಮೊಟಕುಗೊಳಿಸುತ್ತಿರುವುದು , ಸೈದ್ಧಾಂತಿಕ ಸ್ವಾತಂತ್ರ್ಯವನ್ನು ಹನನ ಮಾಡುತ್ತಿರುವುದು , ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವುದು . . . . . . . ಹೀಗೆ ಬಿ . ಜಿ . ಪಿ , ಪ್ರೇರಿತ ಪ್ರಜಾಪ್ರಭುತ್ವ ವಿರೋಧಿ ಮನಸ್ಸುಗಳು ತಮ್ಮ ವಿಕೃತ ಕೃತ್ಯಗಳಿಂದ ಮೆರೆಯುತ್ತಿರುವುದು ತೀರಾ ಕಳವಳಕಾರಿ ಸಂಗತಿಯಾಗಿದೆ .

ನಮ್ಮ ಸಂವಿಧಾನದ ಆಶಯದಂತೆ ರಾಜ್ಯಾಂಗವು ಧರ್ಮ ನಿರಪೇಕ್ಷಿತವಾಗಿ ಕಾರ್ಯ ನಿರ್ವಹಿಸಬೇಕು . ಆದರೆ , ಇಂದು ಆಗುತ್ತಿರುವುದಾದರೂ ಏನು ? ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ರಾಕ್ಷಸೀ ಮನೋಭಾವಗಳು ದಾಬೋಲ್ಕರ್ , ಗೋವಿಂದ ಪಾರೆ , ಪ್ರೊ . ಎಂ . ಎಂ . ಕಲ್ಬುರ್ಗಿ , ಗೌರಿ ಲಂಕೇಶ್ ಅಂತಹವರನ್ನು ಹತ್ಯೆಗೈದಿವೆ ಎಂದರೆ ಅಸಹಿಷ್ಣುತೆಯ ಪರಾಕಾಷ್ಟೆ . ಯಾವ ಮಟ್ಟಕ್ಕೆ ತಲುಪಿದೆ ಎಂಬ ಅಂದಾಜು ನಮಗೆ ಸಿಗುತ್ತದೆ . ಸರ್ಕಾರದ ನಿಲುವು ಪ್ರಶ್ನಿಸಿದವರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ . ಧರ್ಮದ ಹೆಸರಿನಲ್ಲಿ ಹಿಂಸೆ ನಡೆಸುತ್ತಿರುವವರ ( Mob Lynching ) ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸುವುದನ್ನು ಬಿಟ್ಟು ಅವರಿಗೆ ಸರ್ಕಾರದ ಪ್ರತಿನಿಧಿಗಳ ಸಮ್ಮುಖದಲ್ಲೇ ಸನ್ಮಾನ , ಅಭಿನಂದನೆ ಸಲ್ಲಿಸಲಾಗುತ್ತಿದೆ .

ಇದರೊಂದಿಗೆ ಸಿ . ಬಿ . ಐ , ಆರ್ . ಬಿ . ಐ . ನಂತಹ ಕೇಂದ್ರ ಸರ್ಕಾರ ಸ್ವಾಮ್ಯದ ಸ್ವಾಯತ್ತತಾ ಶಂಸೆ ಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಹುನ್ನಾರ ನಡೆಸುತ್ತಿರುವ ಸರ್ಕಾರ , ತನ್ನ ಮಾತು ಕೇಳದಿದ್ದರೆ , ಅಂತಹ ಸಂಸ್ಥೆಗಳನ್ನು ನಾಶ ಮಾಡಲು ಹೊರಟಿದೆ .

ಮಹಾತ ಗಾಂಧಿಗಿಂತ ಸರದಾರ್ ವಲ್ಲಭಭಾಯಿ ಪಟೇಲ್ ದೊಡ್ಡ ವ್ಯಕ್ತಿ ಎಂದು , ಗಾಂಧಿ ಹತ್ಯೆಗೈದ ನಾಥೂರಾಂ ಗೋಡ್ಸೆ ಮಹಾನ್ ದೇಶಭಕ್ತನೆಂದು , ಗಾಂಧೀಜಿ ದೇಶದ್ರೋಹಿ ಎಂದು ಯುವಜನತೆಗೆ ನಂಬಿಸಲು ಹೊರಟಿರುವ ಬಿ . ಜೆ . ಪಿ . ನಾಯಕರು ಮುಂದಿನ ಚುಣಾವಣೆಯಲ್ಲಿ ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ ಎನ್ನುತ್ತಿದ್ದಾರೆ . ಬಿ . ಜೆ . ಪಿ ಗೆ ಈ ದೇಶದ ಸಂವಿಧಾನ , ಪ್ರಜಾಪ್ರಭುತ್ವ ವಿರೋಧ ಪಕ್ಷಗಳ ಬಗ್ಗೆ ಯಾವುದೇ ಗೌರವ ಇಲ್ಲ ಎಂಬುದನ್ನು ಸಾಬೀತುಪಡಿಸಲು ಇದೊಂದೇ ಉದಾಹರಣೆ ಸಾಕು .

-ಜಿ . ಕೆ . ಸಿ . ರೆಡ್ಡಿ

ಸಂಚಾಲಕರು

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.