ಮೊಟ್ಟ ಮೊದಲ ಬಾರಿಗೆ ಯಶಸ್ವೀ ಎಬಿಒ ಹೊಂದಿಕೆಯಾಗದ ಮೂತ್ರಪಿಂಡ ಕಸಿಗೆ ಒಳಗಾದ ನಗರದ ವೈದ್ಯ- ಡಾಕ್ಟರ್ ಪತಿಗೆ ಮೂತ್ರಪಿಂಡ ದಾನಮಾಡಿದ ವಿಭಿನ್ನ ರಕ್ತದ ಗುಂಪಿನ ಪತ್ನಿ

ಬೆಂಗಳೂರು , 12ನೇ ಆಗಸ್ಟ್ 2019 : ಯಶವಂತಪುರದ ಕೊಲಂಬಿಯಾ ಏಷಿಯಾ ರೆಫರಲ್ ಅಸ್ಪತ್ರೆಯು ಅಪರೂಪ ಪ್ರಕರಣವಾದ ಎಬಿಒಐ ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ನಡೆಸಿತು . 48 ವರ್ಷದ ಹೆಂಡತಿ , ವೃತ್ತಿಯಲ್ಲಿ ಅರಿವಳಿಕೆ ತಜ್ಞರಾಗಿರುವ 55 ವರ್ಷದ ಗಂಡನಿಗೆ ಮೂತ್ರಪಿಂಡ ದಾನ ಮಾಡಿದರು . ಬೆಂಗಳೂರಿನ ಡಾ ಸುಮತಿ ಕುಮಾರ್ ಅವರು 2018ರಲ್ಲಿ ದೀರ್ಘಕಾಲದ ಮೂತ್ರಪಿಂಡದ ವೈಫಲ್ಯದಿಂದ ಬಳಲುತ್ತಿರುವುದು ತಿಳಿದುಬಂತು ಮತ್ತು ಕಳೆದ ಒಂದು ವರ್ಷದಿಂದ ಔಷಧಿಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು . ಆಟದ ಮೈದೊಳಗೆ , ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು . ಈ ವರ್ಷದ ಮಾರ್ಚ್‌ನಲ್ಲಿ ಅವರ ಮೂತ್ರಪಿಂಡದ ಕಾಯಿಲೆ ಉಲ್ಬಣಗೊಂಡಿತು ಮತ್ತು ಮುಂದಿನ ಕೆಲವು ತಿಂಗಳುಗಳಲ್ಲಿ ಡಯಾಲಿಸಿಸ್‌ ಅಥವಾ ಮೂತ್ರಪಿಂಡದ ಕಸಿ ಮಾಡಿಸಿಕೊಳ್ಳುವಂತೆ ಅವರಿಗೆ ಸಲಹೆ ನೀಡಲಾಗಿತ್ತು . ಸ್ವತಃ ವೈದ್ಯರಾಗಿದ್ದ ಅವರು ದೀರ್ಘಕಾಲದವರೆಗೆ ಡಯಾಲಿಸಿಸ್‌ಗೆ ಒಳಗಾಗುವ ತೊಂದರೆಗಳನ್ನು ಕಂಡಿದ್ದರು ಮತ್ತು ಇದು ಅವರ ವೃತ್ತಿಗೆ ಅಡ್ಡಿಯಾಗಬಹುದೆಂದು ಆತಂಕಗೊಂಡಿದ್ದರು , ಹಾಗಾಗಿ ಅವರು ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು ನಿರ್ಧರಿಸಿದರು . ಅವರು ಮೂತ್ರಪಿಂಡ ಕಸಿಯ ಬಗ್ಗೆ ವಿಚಾರಿಸಲು ಪ್ರಾರಂಭಿಸಿದರು . ಅವರ ಯಾವುದೇ ಸಂಬಂಧಿಕರು ಮೂತ್ರಪಿಂಡವನ್ನು ದಾನ ಮಾಡಲು ಮುಂದೆ ಬರಲಿಲ್ಲ ಮತ್ತು ಅವರ ಪತ್ನಿ ಮಾತ್ರ ದಾನ ಮಾಡಲು ಸಿದ್ದರಿದ್ದರು . ಆದರೆ ಅವರ ರಕ್ತದ ಗುಂಪು ಎ ನೆಗೆಟಿವ್‌ ಆಗಿದ್ದು , ಅದು ಬಿ ಪಾಸಿಟಿವ್ ರಕ್ತದ ಗುಂಪನ್ನು ಹೊಂದಿರುವ ಅವರ ಪತಿಗೆ ಹೊಂದಿಕೆಯಾಗುತ್ತಿರಲಿಲ್ಲ . ದಕ್ಷಿಣ ಭಾರತದ ಹೆಚ್ಚಿನ ಆಸ್ಪತ್ರೆಗಳು ಎಬಿಒಐ ಮೂತ್ರಪಿಂಡ ಕಸಿಯನ್ನು ಮಾಡಲು ನಿರಾಕರಿಸಿದ್ದರಿಂದ ಇದು ಅವರನ್ನು ತುಂಬಾ ನಿರಾಶೆಗೀಡುಮಾಡಿತು . ಇದರ ಕಾರ್ಯವಿಧಾನಗಳು ಸಂಕೀರ್ಣ ಮತ್ತು ಅಪಾಯಕಾರಿ , ಸಂಬಂಧಿತ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರುವುದು ಹಾಗೂ ಸ್ವತಃ ವೈದ್ಯರಾಗಿರುವ ಕಾರಣಗಳಿಂದ ಅವರಿಗೆ ಎಬಿಒಐ ಕಸಿ ಮಾಡಲು ನಿರಾಕರಿಸಲಾಗಿತ್ತು . ಯಶವಂತಪುರದ ಕೊಲಂಬಿಯಾ ಏಷಿಯಾ ರೆಫರಲ್ ಆಸ್ಪತ್ರೆಯಲ್ಲಿ ಅವರನ್ನು ನೆಫ್ರಾಲಜಿಸ್ಟ್ ಮತ್ತು ಕಸಿ ವೈದ್ಯ ಮುಖ್ಯ ಸಲಹೆಗಾರ ಡಾ ದೀಪಕ್ ಕುಮಾರ್ ಸಿ ಪರೀಕ್ಷಿಸಿದರು ಮತ್ತು ಪ್ರಾಥಮಿಕ ಪರೀಕ್ಷೆಗಳಿಗೆ ಒಳಗಾಗುವಂತೆ ಅವರಿಗೆ ಸೂಚಿಸಿದರು ಮತ್ತು ನಂತರ ಅವರ ಪತ್ನಿಯ ರಕ್ತದ ಗುಂಪಿನ ವಿರುದ್ದ ಪ್ರತಿಕಾಯ ಮಟ್ಟ ಅಂದಾಜು 1 . 64 , ಇದು ಸಾಮಾನ್ಯ ಎಣಿಕೆಯಾಗಿದೆ . ಪ್ರತಿಕಾಯಗಳ ಈ ಹಂತಗಳನ್ನು ನೋಡಿದಾಗ , ಅವರಿಗೆ ಸಲಹೆ ನೀಡಲಾಯಿತು ಮತ್ತು ಸವಿಸ್ತಾರವಾಗಿ ಪರೀಕ್ಷಿಸಲಾಯಿತು ಮತ್ತು ನಂತರ ಕಸಿ ಮಾಡಲು ನಿರ್ಧರಿಸಲಾಯಿತು . ಆರಂಭದಲ್ಲಿ , ಸ್ವತ : ಅರಿವಳಿಕೆ ತಜ್ಞರಾಗಿರುವ ಡಾ ಸುಮತಿ , ಅದರ ಕಾರ್ಯವಿಧಾನದ ಸಂಕೀರ್ಣತೆ ಮತ್ತು ಸ್ವರೂಪವನ್ನು ಪರಿಗಣಿಸಿ ಎಬಿಒಐ ಕಸಿಯ ಬಗ್ಗೆ ಆತಂಕಗೊಂಡಿದ್ದರು . ಅಲ್ಲದೆ ಕಳೆದ 5 ವರ್ಷಗಳಿಂದ ಭಾರತದಲ್ಲಿ ಕೆಲವೇ ಕೆಲವು ಕೇಂದ್ರಗಳಲ್ಲಿ ಇದನ್ನು ನಡೆಸಲಾಗುತ್ತಿದೆ . ಆದರೆ ಕಾಲಕ್ರಮೇಣಾ ಕೌನ್ಸಲಿಂಗ್ ನಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುವ ವಿಶ್ವಾಸವನ್ನು ಬೆಳೆಸಿಕೊಂಡರು .

ಮುಂದಿನ ಒಂದು ತಿಂಗಳಲ್ಲಿ ಅವರು ವೈದ್ಯಕೀಯವಾಗಿ ಕಸಿಗೆ ಸಿದ್ದರಾಗಿದ್ದರು ಮತ್ತು ಈ ಸಮಯದಲ್ಲಿ ಅವರ ಮೂತ್ರಪಿಂಡದ ಕಾರ್ಯಗಳು ಮತ್ತಷ್ಟು ಹದಗೆಟ್ಟವು ಮತ್ತು ಕಸಿ ಮಾಡುವ ಮೊದಲು ಅವರ ಆರೋಗ್ಯ ಸ್ಥಿತಿಯನ್ನು ಸುಧಾರಿಸಲು ಡಯಾಲಿಸಿಸ್‌ಅನ್ನು ಪ್ರಾರಂಭಿಸಲಾಯಿತು . ಎಬಿಒಐ ಕಸಿ ಮಾಡುವಿಕೆಯ ಮೂಲ ತತ್ವವೆಂದರೆ ರಕ್ತದ ಗುಂಪಿನ ವಿರುದ್ದ ಪ್ರತಿಕಾಯಗಳನ್ನು ತೆಗೆಯುವುದು ಮತ್ತು ಪ್ರತಿಕಾಯಗಳನ್ನು ತೆಗೆಯುವ ಈ ವಿಧಾನವನ್ನು ಕಸಿ ಶಸ್ತ್ರಚಿಕಿತ್ಸೆಯ 3 ದಿನಗಳ ಮೊದಲು ಪ್ರಾರಂಭಿಸಲಾಯಿತು . ಮತ್ತು ಪ್ರತಿಕಾಯಗಳ ಮಟ್ಟವನ್ನು ಸ್ವೀಕಾರಾರ್ಹ ಶ್ರೇಣಿಗೆ ಇಳಿಸಿದಾಗ , ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು . ಕಸಿ ಮಾಡಿದ ನಂತರ ಪ್ರತಿಕಾಯಗಳ ಮಟ್ಟವು ಮರುಕಳಿಸದಂತೆ ನಿಯಂತ್ರಿಸಲು ಮತ್ತು ತಡೆಯಲು ಅವರಿಗೆ ಔಷಧಿಗಳನ್ನು ನೀಡಲಾಯಿತು . “ ಅವರ ಪತ್ನಿಗೆ ಬಲ ಮೂತ್ರಪಿಂಡದಲ್ಲಿ 2 ಅಪಧಮನಿಗಳು ಮತ್ತು ಎಡ ಮೂತ್ರಪಿಂಡದಲ್ಲಿ 3 ಅಪಧಮನಿಗಳು ಇದ್ದುದರಿಂದ ಶಸ್ತ್ರಚಿಕಿತ್ಸೆಯೂ ಸಹ ಸವಾಲಿನದ್ದಾಗಿತ್ತು , ಅದು ಬಹಳ ಅಪರೂಪ ಮತ್ತು ಅಸಾಮಾನ್ಯವಾಗಿತ್ತು . ಕಸಿ ಮಾಡುವಿಕೆಗಾಗಿ 2 ಅಪಧಮನಿಗಳಿದ್ದ ಬಲ ಮೂತ್ರಪಿಂಡವನ್ನು ತೆಗೆಯಲು ನಿರ್ಧರಿಸಿದೆವು . ಕಸಿ ಮಾಡಿದ ನಂತರ ರೋಗಿಯ ಮೂತ್ರಪಿಂಡದ ಕಾರ್ಯ ಸಾಮಾನ್ಯವಾಗಿತ್ತು ಮತ್ತು ಕಸಿ ಮಾಡಿದ 3 ದಿನಗಳಲ್ಲಿ ರೋಗಿಗೆ ನಡೆಯಲು ಸಾಧ್ಯವಾಯಿತು , ” ಎಂದು ಯಶವಂತಪುರದ ಕೊಲಂಬಿಯಾ ಏಷಿಯಾ ರೆಫರಲ್ ಆಸ್ಪತ್ರೆಯ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ ಅಜಿತ್ ಕೆ ಹುಲಿಗೋಲ್ ಹೇಳಿದರು . ಒಂದೇ ರಕ್ತದ ಗುಂಪನ್ನು ಹೊಂದಿರುವ ಅಂಗದಾನಿಗಳ ಕೊರತೆ ಮತ್ತು ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆಯ ಘಟನೆಯ ಹೆಚ್ಚಳದಿಂದಾಗಿ ಎಬಿಒಐ ಕಸಿ ಮಾಡುವಿಕೆಯು ಆದ್ಯತೆಯ ಆಯ್ಕೆಯಾಗಿದೆ . ದಾನಿಗಳು ಮತ್ತು ಸ್ವೀಕರಿಸುವವರು ಎರಡು ವಿಭಿನ್ನ ರಕ್ತದ ಗುಂಪುಗಳನ್ನು ಹೊಂದಿರುವುದರಿಂದ ಪ್ರಕ್ರಿಯೆಯು ನಿರ್ಣಾಯಕವಾಗಿದೆ . ಮತ್ತು ಈ ಪ್ರಕ್ರಿಯೆಯನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ , ಎಂದು ಕಳೆದ 1 ವರ್ಷದಲ್ಲಿ ಉತ್ತಮ ಯಶಸ್ಸಿನೊಂದಿಗೆ 7 ಎಬಿಒಐ ಕಸಿ ಮಾಡುವಿಕೆಯ ಪ್ರಕರಣವನ್ನು ನಡೆಸಿದ ಯಶವಂತಪುರದ ಕೊಲಂಬಿಯಾ ಏಷಿಯಾ ರೆಫರಲ್ ಆಸ್ಪತ್ರೆಯ ನೆಫ್ರಾಲಜಿಸ್ಟ್ ಮತ್ತು ಕಸಿ ತಜ್ಞ – ಮುಖ್ಯ ಸಲಹೆಗಾರ ಡಾ ದೀಪಕ್ ಕುಮಾರ್ ಸಿ ಹೇಳಿದರು , “ ನಾನು ಅನುಭವಿಸುತ್ತಿದ್ದ ಎಲ್ಲಾ ನೋವುಗಳಿಂದ ನನ್ನನ್ನು ರಕ್ಷಿಸಲು ನನ್ನ ಹೆಂಡತಿ ಮುಂದೆ ಬಂದಿದ್ದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ , ನಾನು ಎಬಿಒಐ ಕಸಿ ಮಾಡಬೇಕೇ ಎಂದು ಗೊಂದಲಕ್ಕೆ ಒಳಗಾಗಿದ್ದೆ , ಆದರೆ ಯಶವಂತಪುರದ ಕೊಲಂಬಿಯಾ ಏಷಿಯಾ ರೆಫರಲ್ ಆಸ್ಪತ್ರೆಯ ವೈದ್ಯರು ಕೌನೆ . ಲಿಂಗ್ ಮಾಡಿ ನನಗೆ ಆತ್ಮವಿಶ್ವಾಸ ತುಂಬಿದರು , ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೀಡಿ , ನನಗೆ ಹೊಸ ಜೀವನವನ್ನು ನೀಡಿದ ವೈದ್ಯರಿಗೆ ನನ್ನ ಹತ್ತೂರ್ವಕ ಧನ್ಯವಾದಗಳು , ” ಎಂದರು ಡಾ ಸುಮತಿ ಕುಮಾರ್

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.