ಬೆಂಗಳೂರು , ಆಗಸ್ಟ್ 17 / 18 , 2019 : ಬ್ಯಾಂಕ್ ಆಫ್ ಬರೋಡವು ಸಾರ್ವಜನಿಕ ವಲಯದಲ್ಲಿ ಭಾರತದ 2ನೇ ಅತಿ ದೊಡ್ಡ ಸಾಲದಾತನಾಗಿದ್ದು , ಬೆಂಗಳೂರು ವಲಯದ ( ಉತ್ತರ ಪ್ರಾದೇಶಿಕ ಕಛೇರಿ , ದಕ್ಷಿಣ ಪ್ರಾದೇಶಿಕ ಕಛೇರಿ , ಗ್ರಾಮಾಂತರ ಪ್ರಾದೇಶಿಕ ಕಛೇರಿ ಮತ್ತು ಮೈಸೂರು ಪ್ರಾದೇಶಿಕ ಕಛೇರಿಯ ) ಎಲ್ಲಾ ಶಾಖೆಗಳನ್ನು ಒಳಗೊಂಡು ತಮ್ಮ ಅನನ್ಯ ಕಾರ್ಯಕ್ಷಮತೆಯ ಅವಲೋಕನವನ್ನು ಸಮಲೋಚಿಸಿ , ಬ್ಯಾಂಕಿಂಗ್ ಕ್ಷೇತ್ರದ ಉದ್ದೇಶಪೂರ್ವಕ ಸಮಸ್ಯೆಯೆಗಳ ಬಗ್ಗೆ ಮತ್ತು ಭವಿಷ್ಯದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಯಿತು .
ಈ ಸಮಲೋಚನೆಯು ಆಗಸ್ಟ್ 17 – 18ರಂದು 2ದಿನದ ಅವಧಿಯವರೆಗೆ ಬೆಂಗಳೂರು ವಲಯದ ಎಲ್ಲಾ ಶಾಖೆಗಳನ್ನು ಒಳಗೊಂಡು ನಡೆಸಲಾಯಿತ್ತು . ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿ ಸಾಲವನ್ನು ಹೆಚ್ಚಿಸಲು , ಹೊಸತನವನ್ನು ತರಲು , ತಂತ್ರಜ್ಞಾನದ ಬಳಕೆ ಹೆಚ್ಚಿಸಲು ಮತ್ತು ದೊಡ್ಡ ದತ್ತಾಂತ ವಿಶ್ಲೇಷಣೆಯನ್ನು ಶಕ್ತಗೊಳಿಸಲು ಮತ್ತು ಬ್ಯಾಂಕಿಂಗ್ನ್ನು ನಾಗರಿಕರು , ರೈತರು , ಸಣ್ಣ ಕೈಗಾರಿಕೆಗಳು , ಉದ್ಯಮಿಗಳು . ಯುವಕರು , ವಿದ್ಯಾರ್ಥಿಗಳು ಮತ್ತು ಮಹಿಳೆಯರನ್ನು ಕೇಂದ್ರಿಕೃತಗೊಳಿಸಿ ಮತ್ತು ಇದರ ಅಗತ್ಯಗಳನ್ನು ಪೂರೈಸಲು ಲಭ್ಯವಿರುವ ಮಾರ್ಗಗಳು ಮತ್ತು ಹೊಸ ಮಾರ್ಗಗಳನ್ನು ಹುಡುಕಲು ಉಪಕ್ರಮಗಳನ್ನು ನಡೆಸಲಾಯಿತು . ಸಾರ್ವಜನಿಕ ವಲಯದ ಬ್ಯಾಂಕುಗಳು ( ಒಎಸ್ಬಿ ) ಸುಧಾರಣೆಗಳನ್ನು ಸೂಚಿಸುವ ಉದ್ದೇಶದಿಂದ ಬ್ಯಾಂಕಿಂಗ್ ವಲಯವು ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಡೊಮೇನ್ ತಜ್ಞರ ಮೂಲಕ ವಿಷಯಾಧರಿತ ಪತ್ರಿಕೆಗಳು ಸಭೆಯಲ್ಲಿ ಚರ್ಚಿಸಲ್ಪಟ್ಟವು . ಆರ್ಥಿಕ ಬೆಳವಣಿಗೆಗೆ ಪೂರಕವಾದ ಮೂಲಸೌಕರ್ಯ , ಕೈಗಾರಿಕೆ , ಕೃಷಿಕ್ಷೇತ್ರ ಮತ್ತು ನೀಲಿ ಆರ್ಥಿಕತೆ , ಜಲಶಕ್ತಿ , ಎಂಎಸ್ ಎಂ ವಲಯ ಮತ್ತು ಮುದ್ರಾ ಸಾಲ , ಶಿಕ್ಷಣ ಸಾಲ , ರಫ್ತು ಸಾಲ , ಹಸಿರು ಆರ್ಥಿಕತೆ ಮುಂತಾದ ಕ್ಷೇತ್ರಗಳಲ್ಲಿ ಬ್ಯಾಂಕಿನ ಕಾರ್ಯಕ್ಷಮತೆ ಮತ್ತು ಅದರ ರಾಷ್ಟ್ರೀಯ ಹೊಂದಾಣಿಕೆಯನ್ನು ಸಭೆಯಲ್ಲಿ ಪರೀಶಿಲಿಸಲ್ಪಟ್ಟಿತ್ತು ಮತ್ತು ಸ್ವಚ ಭಾರತ್ , ಆರ್ಥಿಕ ಸೇರ್ಪಡೆ ಮತ್ತು ಮಹಿಳಾ ಸಬಲೀಕರಣ , ನೇರ ಲಾಭ ವರ್ಗಾವಣೆ , ಕಡಿಮೆ ನಗದು | ಡಿಜಿಟಲ್ ಆರ್ಥಿಕತೆ , ಜೀವನದ ಸುಲಭತೆ , ಸ್ಥಳೀಯ ಆದ್ಯತೆಗಳೊಂದಿಗೆ ಹೊಂದಾಣಿಕೆ ಮತ್ತು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು . ಉಪಕ್ರಮದಲ್ಲಿ ಪಿಎಸ್ಬಿಗಳು ಮತ್ತು ನಮ್ಮ ಬ್ಯಾಂಕ್ ಹೇಗೆ ಮುಂದಿನ ದಿನಗಳಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸುವುದರ ಬಗ್ಗೆ ಹಾಗೂ ಕಾರ್ಯಗತಗೊಳಿಸುವುದರ ಬಗ್ಗೆ ನವೀನ ಸಲಹೆಗಳು ಸೃಷ್ಟಿಸಲ್ಪಟ್ಟವು ಹಾಗೂ ಆಲೋಚನೆ ಮತ್ತು ಸಮಲೋಚನೆಗಳನ್ನು ತಳಮಟ್ಟ ( ಬಾಟಮ್ – ಆಪ್ ) ದಲ್ಲಿ ಚರ್ಚಿಸಲಾಯಿತು ಹಾಗೂ ಮುಂಬರುವ ದಿನಗಳಲ್ಲಿ ಇದು ಎಸ್ಎಲ್ಬಿಸಿ / ರಾಜ್ಯಮಟ್ಟದಲ್ಲಿ ಹೆಚ್ಚು ಚರ್ಚಿಸಲ್ಪಡಲಾಗುವುದು
ಮತ್ತು ಅದನ್ನು ಅಂತಿಮವಾಗಿ ರಾಷ್ಟ್ರಮಟ್ಟದಲ್ಲಿ ಬ್ಯಾಂಕಿನೊಳಗೆ ಹಾಗೂ ಅಂತರ್ ಬ್ಯಾಂಕ್ ಮಟ್ಟದಲ್ಲಿ ಪ್ರದರ್ಶಿಸಿ ಮುಂದೆ ಪಿಎಸ್ಬಿಯೊಳಗೆ ಅನುಷ್ಠಾನ ಗೊಳಿಸಲಾಗುವುದು ಸಮಲೋಚನ ಸಭೆಯಲ್ಲಿ ಶಾಲೆಯ ಮಟ್ಟದಲ್ಲಿ ಉದ್ದೇಶ ಮತ್ತು ಹೊಸತನವನ್ನು ಮತ್ತು ಭವಿಷ್ಯದಲ್ಲಿ ಮಾರ್ಗಸೂಚಿಯನ್ನು ಕಾರ್ಯಗತಗೊಳಿಸಿ ಮತ್ತು ಅದರ ಕಾರ್ಯಕ್ಷಮತೆಯನ್ನು ಸುಧಾರಿಸಿ ರಾಷ್ಟ್ರೀಯ ಆದ್ಯತೆಗಳಿಗೆ ಹೊಂದಿಕೊಳ್ಳಲು ಬ್ಯಾಂಕ್ ಸಜ್ಜಾಗಿದೆ . ಇದರಿಂದ ಭಾರತೀಯ ಬೆಳವಣಿಗೆಯ ಕಥೆಯಲ್ಲಿ ಪಾಲುದಾರಿಕೆಯ ಆದೇಶವನ್ನು ಬ್ಯಾಂಕುಗಳು ಪೂರೈಸುತ್ತವೆ .
City Today News
(citytoday.media)
9341997936