ಸೆ . 27 , 28 ಕ್ಕೆ ಅಂತಾರಾಷ್ಟ್ರೀಯ ಆರೋಗ್ಯ ರಕ್ಷಣೆ ತಂತ್ರಜ್ಞಾನ ಸಮ್ಮೇಳನ

– ಚೆನ್ನೈನ ಐಐಟಿಯಲ್ಲಿ ನಡೆಯಲಿರುವ ಈ ಸಮ್ಮೇಳನ

– ಕೆಹೋಟೆಕ್ 2019 ರಲ್ಲಿ ದೇಶ ವಿದೇಶಗಳ 1000 ಕ್ಕೂ ಅಧಿಕ ಗಣ್ಯರು ಭಾಗಿ

ಬೆಂಗಳೂರು , 20 ಆಗಸ್ಟ್ 2019 : ಇಂದು ನಮ್ಮ ಜೀವನದಲ್ಲಿ ಮತ್ತು ಆರೋಗ್ಯ ರಕ್ಷಣೆಯಲ್ಲಿ ತಂತ್ರಜ್ಞಾನ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ . ಈ ತಂತ್ರಜ್ಞಾನವು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ವೇಗದಲ್ಲಿ ಸೇವೆಗಳನ್ನು ನೀಡುತ್ತಿದೆ ಮತ್ತು ಇತ್ತೀಚಿನ ಅತ್ಯಾಧುನಿಕತೆಗಳ ಬಗ್ಗೆ ತಿಳಿದುಕೊಳ್ಳಲು ಆರೋಗ್ಯ ರಕ್ಷಣೆ ಸೇವಾದಾರರಿಗೆ ಕೆಹೋಟೆಕ್ ( Consortium of Accredited Healthcare Organisations – TECH ) ಒಂದು ಸೂಕ್ತ ವೇದಿಕೆಯಾಗಿದೆ . ಇದಲ್ಲದೇ , ಐಟಿ , ವೈದ್ಯಕೀಯ ಉಪಕರಣಗಳು , ಯಂತ್ರಗಳು , ಪ್ರಕ್ರಿಯೆಯಂತಹ ಹಲವಾರು ಭವಿಷ್ಯದ ಟೆಂಡ್‌ಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನೆರವಾಗುವ ವೇದಿಕೆಯಾಗಿದೆ . ಈ ಕೆಹೋಟೆಕ್ ತಂತ್ರಜ್ಞಾನ ಅಭಿವೃದ್ಧಿಪಡಿಸುವವರು , ನಾವೀನ್ಯಕಾರರು ಮತ್ತು ಪಾಲುದಾರರ ಮಧ್ಯೆ ಆರೋಗ್ಯಕಾರಿ ಮತ್ತು ಸಕಾರಾತ್ಮಕ ಸಂಬಂಧ ವೃದ್ಧಿಗೆ ನೆರವಾಗುವ ಉದ್ದೇಶವನ್ನು ಹೊಂದಿದೆ . ಭಾರತದಲ್ಲಿ ವೈದ್ಯಕೀಯ ತಂತ್ರಜ್ಞಾನ ಮಾಡುಕಟ್ಟೆ ಸಣ್ಣದಾಗಿದೆ . ಆದರೆ , ಕ್ಷಿಪ್ರಗತಿಯಲ್ಲಿ ವಿಸ್ತರಣೆಯಾಗುತ್ತಿದೆ . ಸೀಮಿತ ಪ್ರಮಾಣದ ದೇಸೀಯ ಉತ್ಪಾದಕರನ್ನು ಹೊಂದಿದ್ದು , ಶೇ . 75 ರಷ್ಟು ಭಾಗದ ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ . ಇದರ ಮಾರುಕಟ್ಟೆ ಪ್ರಮಾಣ 2 . 75 ಬಿಲಿಯನ್ ಯುಎಸ್ ಡಾಲರ್ ಆಗಿದೆ . ಈ ವೈದ್ಯಕೀಯ ತಂತ್ರಜ್ಞಾನ ಲ್ಯಾಂಡ್‌ಸ್ಕೇಪ್ ರೂಪಾಂತರವು ಆರೋಗ್ಯ ರಕ್ಷಣೆ ಸೇವೆಗಳ ವಿತರಣೆ ಮತ್ತು ಯಂತ್ರೋಪಕರಣ ಮೇಲಿನ ಬಂಡವಾಳ ಮತ್ತು ರೋಗಿಗಳ ಆರೋಗ್ಯ ಸುಧಾರಣೆ ಮಟ್ಟವನ್ನು ಹೆಚ್ಚಿಸಲು ಪೂರಕವಾಗಿದ್ದು , ಇಲ್ಲಿನ ವೈದ್ಯಕೀಯ ತಂತ್ರಜ್ಞಾನ ಉದ್ಯಮದಲ್ಲಿ ಆಮೂಲಾಗ್ರ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ . ಈ ಹಿನ್ನೆಲೆಯಲ್ಲಿ ಆಯೋಜಿಸುತ್ತಿರುವ ಕಹೋಟೆಕ್ ಕಾರ್ಯಕ್ರಮವು ಆಧುನಿಕ ಆರೋಗ್ಯ ರಕ್ಷಣೆ ಲಭ್ಯತೆ ಮತ್ತು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಇರುವ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಗಮನಹರಿಸಲಿದೆ .

ಕೆಹೋ ರೋಗಿಗಳ ಸುರಕ್ಷತೆ ಮತ್ತು ತರಬೇತಿ ಹಾಗೂ ಸಂಪನ್ಮೂಲಗಳ ಸೃಷ್ಟಿ ಮಾಡುವ ಮೂಲಕ ಗುಣಮಟ್ಟದ ಚಿಕಿತ್ಸೆಗಳನ್ನು ಒದಗಿಸುವುದನ್ನು ಉತ್ತೇಜಿಸುವ ಉದ್ದೇಶ ಇಟ್ಟುಕೊಂಡಿದೆ . ಸೂಕ್ತ ಮತ್ತು ಕಡಿಮೆ ವೆಚ್ಚದ ಉತ್ತಮ ತಂತ್ರಜ್ಞಾನವು ಆಸ್ಪತ್ರೆಗಳು ಸುರಕ್ಷಿತ ಮತ್ತು ಉನ್ನತ ಗುಣಮಟ್ಟದ ಆರೋಗ್ಯ ರಕ್ಷಣೆ ಸೇವೆಯನ್ನು ನೀಡಲು ಸಾಧ್ಯ ಎಂಬುದರಲ್ಲಿ ನಂಬಿಕೆ ಇಟ್ಟಿದೆ . ಈ ಎಲ್ಲಾ ಅಂಶಗಳ ಬಗ್ಗೆ ಚರ್ಚೆ ನಡೆಸಲು ಮತ್ತು ಹಲವಾರು ಸವಾಲುಗಳನ್ನು ಎದುರಿಸುವ ಪರಿಹಾರಗಳನ್ನು ಕಂಡುಕೊಳ್ಳಲೆಂದೇ ಕೆಹೋಟೆಕ್ 2019 ಅನ್ನು ಆಯೋಜಿಸಲಾಗುತ್ತಿದೆ . ಇದು ನಾಲ್ಕನೇ ಅಂತಾರಾಷ್ಟ್ರೀಯ ಸಮ್ಮೇಳನವಾಗಿದ್ದು , ಚೆನ್ನೈನ ಐಐಟಿ ಮದ್ರಾಸ್ ರೀಸರ್ಚ್ ಪಾರ್ಕ್‌ನಲ್ಲಿ 2019 ರ ಸೆಪ್ಟಂಬರ್ 27 – 28 ರಂದು ನಡೆಯಲಿದೆ . ಇದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಆರೋಗ್ಯ ಮತ್ತು ಆರೋಗ್ಯ ತಂತ್ರಜ್ಞಾನ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ . ದೇಶದ ವಿವಿಧ ಮೂಲೆಗ : 1000 ಕ್ಕೂ ಅಧಿಕ ಆರೋಗ್ಯ ರಕ್ಷಣೆ ವೃತ್ತಿಪರರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು , ಇತ್ತೀಚಿನ ತಂತ್ರಜ್ಞಾನ ಮತ್ತು ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ . ಈ ಬಾರಿಯ ಪ್ರಮುಖ ಅಂಶವೆಂದರೆ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಆರೋಗ್ಯ ತಂತ್ರಜ್ಞಾನ ಕ್ಷೇತ್ರದಲ್ಲಿನ ಸ್ಟಾರ್ಟ್ ಅಪ್‌ಗಳಿಗೆ ಬಂಡವಾಳ ಹೂಡಿಕೆ ಮಾಡುವ ಸಂಬಂಧ ಹೂಡಿಕೆದಾರರ ಅವಲೋಕನ ನಡೆಸಲಿದ್ದಾರೆ . ಇದೇ ವೇಳೆ ಸ್ಟಾರ್ಟ್ ಅಪ್‌ಗಳೂ ಸಹ ಹೂಡಿಕೆ ಆಕರ್ಷಣೆಯ ಪ್ರಯೋಜನವನ್ನು ಪಡೆಯಬಹುದಾಗಿದೆ . ಕೆಹೋದ ಅಧ್ಯಕ್ಷ ಡಾ . ವಿಜಯ್ ಅಗರ್‌ವಾಲ್ ಅವರು ಮಾತನಾಡಿ , “ ಅಂತಾರಾಷ್ಟ್ರೀಯ ಆರೋಗ್ಯ ರಕ್ಷಣೆ ತಂತ್ರಜ್ಞಾನ ಸಮ್ಮೇಳನವನ್ನು ಕೆಹೋಟೆಕ್ ಆಯೋಜನೆ ಮಾಡುತ್ತಿದ್ದು , ಇಲ್ಲಿ ಅತ್ಯುತ್ತಮ ಎನಿಸುವ ಆರೋಗ್ಯ ಮತ್ತು ತಂತ್ರಜ್ಞಾನ ನಾವೀನ್ಯತೆಗಳು , ಹೂಡಿಕೆ ಮತ್ತು ಪದ್ಧತಿಗಳ ಅನಾವರಣವಾಗುವುದು ಸ್ಪಷ್ಟ . ಆಸ್ಪತ್ರೆಗಳಲ್ಲಿ ಗರಿಷ್ಠ ಮಟ್ಟದ ಕಾರ್ಯಕ್ಷಮತೆಯನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಪರಿಹಾರ ಆಧಾರಿತ ಇತ್ತೀಚಿನ ತಂತ್ರಜ್ಞಾನಗಳು ಇಲ್ಲಿ ಅನಾವರಣಗೊಳ್ಳಲಿದ್ದು , ಆಸ್ಪತ್ರೆಗಳು ಈ ಪರಿಹಾರಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಕೆಹೋ ಆರೋಗ್ಯ ರಕ್ಷಣೆ ಸಂಸ್ಥೆಗಳು ಮತ್ತು ತಂತ್ರಜ್ಞಾನ ಕಂಪನಿಗಳನ್ನು ಒಂದೇ ಸೂರಿನಡಿ ಸೇರಿಸುವ ದೇಶದ ಏಕೈಕ ಸಂಸ್ಥೆಯಾಗಿದೆ . ಇಲ್ಲಿ ಕಂಪನಿಗಳು ತಮ್ಮ ಉತ್ಪನ್ನಗಳು ಮತ್ತು ಪರಿಣತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು ಮತ್ತು ವ್ಯಾಪಾರ ವೃದ್ಧಿಗೆ ಪೂರಕವಾದ ಮಾತುಕತೆಗಳನ್ನೂ ನಡೆಸಬಹುದಾಗಿದೆ ” ಎಂದು ತಿಳಿಸಿದರು . ಕೆಹೋಟೆಕ್ 2019 ರ ಸಂಘಟನಾ ಕಾರ್ಯದರ್ಶಿ ಜೆ . ಅಡೆಲ್ ಅವರು ಮಾತನಾಡಿ , “ ಇಂದಿನ ದಿನಗಳಲ್ಲಿ ತಂತ್ರಜ್ಞಾನವು ಆರೋಗ್ಯ ರಕ್ಷಣೆ ನೀಡುವವರಿಗೆ ಅಂದರೆ ಚಿಕಿತ್ಸಾ ಸೇವೆ ನೀಡುವವರಿಗೆ ಕಾರ್ಯಾಚರಣೆ ಮತ್ತು ಲಾಭದಾಯಕತೆ ಕಾರ್ಯದಕ್ಷತೆಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ . ಗುಣಮಟ್ಟದ ಆರೋಗ್ಯ ರಕ್ಷಣೆ , ಪೂರೈಕೆದಾರರ ಸಾಮರ್ಥ್ಯ ಹೆಚ್ಚಳದಲ್ಲಿ ನೆರವಾಗುತ್ತಿದೆ ಹಾಗೂ ಈ ಮೂಲಕ ರೋಗಿಗಳಿಗೆ ಅತ್ಯುತ್ತಮವಾದ ಸೇವೆಯನ್ನು ನೀಡಲು ನೆರವಾಗುತ್ತಿದೆ . ಇದೇ ಉದ್ದೇಶವನ್ನಿಟ್ಟುಕೊಂಡು ಕೆಹೋಟೆಕ್ 2019 ಅನ್ನು ಆಯೋಜಿಸಲಾಗುತ್ತಿದೆ ” ಎಂದು ಹೇಳಿದರು .

Registration for the event can be done online at http : / / cahotech . com

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.