ಬಂಟರ ಸಂಘ ಬೆಂಗಳೂರು BUNTS ‘ SANGHA BANGALORE A Charitable Institution

ದಿನಾಂಕ : 22 . 08 . 2019 ಪತ್ರಿಕಾ ಪ್ರಕಟಣೆ

ಕರ್ನಾಟಕ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳದ ಕಾಸರಗೋಡು ತಾಲೂಕಿನಲ್ಲಿ ಪ್ರಾಬಲ್ಯವುಳ್ಳ ಸಮುದಾಯ ಬಂಟರದ್ದು . ಬಂಟರು ಮೂಲತಃ ಕೃಷಿಯನ್ನು ಅವಲಂಬಿತವಾಗಿದ್ದರೂ , ನಂತರದ ದಿನಗಳಲ್ಲಿ ಶೈಕ್ಷಣಿಕ , ಔದ್ಯೋಗಿಕ , ಸಾಮಾಜಿಕ , ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾರೆ . ಅದೇ ರೀತಿ ರಾಜಕೀಯ ರಂಗದಲ್ಲೂ ಬಂಟ ಸಮುದಾಯದ ಪ್ರತಿನಿಧಿಗಳು ತನ್ನದೇ ಆದ ರೀತಿಯಲ್ಲಿ ಛಾಪು ಕೂಡ ಮೂಡಿಸಿದ್ದಾರೆ . ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಬಿ . ಎಸ್ . ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ . ಹಾಗೇ ಬಿಜೆಪಿ ಶಾಸಕಾಂಗ ಪಕ್ಷದಲ್ಲಿ ಬಂಟ ಸಮುದಾಯದ ಐವರು ಜನಪ್ರಿಯ ಶಾಸಕರಿದ್ದಾರೆ . ಆದ್ರೆ ಬಿಎಸ್‌ವೈ ಸಚಿವ ಸಂಪುಟದಲ್ಲಿ ಬಂಟ ಸಮುದಾಯಕ್ಕೆ ಆದ್ಯತೆಯನ್ನು ನೀಡದೇ ಅನ್ಯಾಯ ಮಾಡಲಾಗಿದೆ . ಅದ್ರಲ್ಲೂ ಐದನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಹಿರಿತನಕ್ಕೂ ಬೆಲೆ ನೀಡಿಲ್ಲ .

ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ಆಗಸ್ಟ್ 23ರಂದು ಬೆಳಗ್ಗೆ 9 . 30ರಿಂದ 10 ಗಂಟೆ ತನಕ ಬೆಂಗಳೂರು ಬಂಟರ ಸಂಘದ ವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ( ಫ್ರೀಡಂ ಪಾರ್ಕ್ ) ಮೌನ ಪ್ರತಿಭಟನೆಯನ್ನು ನಡೆಸಲಾಗುವುದು . ಈ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಕರಾವಳಿ ಸಂಘಟನೆಗಳ ಸದಸ್ಯರು ಸಹಕಾರ , ನೀಡಬೇಕಾಗಿ ಸಂಘದ ಅಧ್ಯಕ್ಷರಾದ ಶ್ರೀ ಆರ್ . ಉಪೇಂದ್ರ ಶೆಟ್ಟಿ , ಗೌರವ ಕಾರ್ಯದರ್ಶಿ ಶ್ರೀ ಮಧುಕರ ಎಂ . ಶೆಟ್ಟಿ , ಪದಾಧಿಕಾರಿಗಳು ಮಾಧ್ಯಮದ ಮೂಲಕ ವಿನಂತಿಸಿರುತ್ತಾರೆ .

ದಿನಾಂಕ – 23 – 08 – 2019 ಸ್ಥಳ – ಫ್ರೀಡಂ ಪಾರ್ಕ್

ಸಮಯ – ಬೆಳಗ್ಗೆ 9 . 30ರಿಂದ 10 ಗಂಟೆ ತನಕ

-ಆರ್. ಉಪೇಂದ್ರ ಶೆಟ್ಟಿ

ಅಧ್ಯಕ್ಷರು ಬೆಂಗಳೂರು ಬಂಟರ ಸಂಘ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.