ಸಾಮಾಜಿಕ ನವೀನತಾ ಕಾರ್ಯಕ್ರಮಗಳನ್ನು ಬಲಗೊಳಿಸುವ ಮತ್ತು ಅದರ ಪರಿಣಾಮವನ್ನು ಹೆಚ್ಚಿಸುವುದಕ್ಕೆ ದೀರ್ಘಕಾಲೀನ ಬೆಂಬಲ ಕುರಿತು ಒತ್ತಿಹೇಳಲಿರುವ ಸಾರ್ವಜನಿಕ ಖಾಸಗಿ ಮತ್ತು ಅಭಿವೃದ್ಧಿ ಕ್ಷೇತ್ರದ ಬದಲಾವಣೆಯ ಹರಿಕಾರರು

ಬೆಂಗಳೂರು , ಆಗಸ್ಟ್ , 2019 : ಸರ್ಕಾರ , ಉದ್ಯಮಗಳು , ನಾಗರಿಕ ಸಮಾಜ ಮತ್ತು ಚಿಂತನಾಶೀಲ ಕ್ಷೇತ್ರದ 350ಕ್ಕೂ ಹೆಚ್ಚಿನ ಜನರು ನಗರದಲ್ಲಿ ಅನನ್ಯವಾದ ವೇದಿಕೆಯಾದ ಕ್ಯಾಟಲೈಸಿಂಗ್ ಸೋಷಿಯಲ್ ಇಂಪ್ಯಾಕ್ಟ್ 2019ರ ಸಮ್ಮೇಳನದಲ್ಲಿ ಭಾಗವಹಿಸಲು ಒಂದೆಡೆ ಸೇರಲಿದ್ದಾರೆ . ಸಮಾಜದ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಸಾಮಾಜಿಕ ಬದಲಾವಣೆಯ ಮತ್ತು ದುರ್ಬಲ ಸಮುದಾಯಗಳಿಗಾಗಿ ಫಲಿತಾಂಶಗಳ ಸಾಧನೆಯ ವೇಗವನ್ನು ಹೆಚ್ಚಿಸಲು ಇದು ಅನನ್ಯವಾದ ವೇದಿಕೆಯಾಗಿದೆ .

ಇದು ಕ್ಯಾಟಲಿಸ್ಟ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ( ಸಿಎಂಎಸ್ ) ನ ಚಿಂತನೆಯ ಕೂಸಾಗಿದ್ದು , ಪ್ರಸ್ತಿ ಮತ್ತು ಆಶ್ರಯ ಹಸ್ತ ಟ್ರಸ್ಟ್‌ಗಳ ಬೆಂಬಲ ಹೊಂದಿದೆ . ಸಾಂಘಿಕ ಕಲಿಕೆ , ಸಹಭಾಗಿತ್ವ ಮತ್ತು ಜ್ಞಾನ ವಿನಿಮಯಕ್ಕೆ ಇದು ವೇದಿಕೆಯಾಗಿದ್ದು , ನಾಲ್ಕು ಮಾರ್ಗ ಅಥವ ಪರಿಹಾರ ವೃತ್ತಗಳನ್ನು ಹೊಂದಿದೆ : ಬ್ಯಾನ್ಸ್ಫಾರ್ಮ್ 4 ಸ್ಕೇಲ್ ( ಪ್ರಮಾಣಕ್ಕೆ ತಕ್ಕ ಪರಿವರ್ತನೆ ) , ಇನ್ನೋವೇಟಿವ್ ಫೈನಾನ್ಸಿಂಗ್ ( ನವೀನ ಹಣಕಾಸು ನೆರವು ) , # ಟೆಕ್ ಟಾನಿಕ್ ಮತ್ತು ಸೋಷಿಯಲ್ ಬಿಹೇವಿಯರ್ ಚೇಂಜ್ ( ಸಾಮಾಜಿಕ ನಡವಳಿಕೆ ಬದಲಾವಣೆ )

ಆಗಸ್ಟ್ 29 ಮತ್ತು 30ರಂದು ಬಹು ವಿಭಾಗೀಯ ನಾಯಕರ ತಂಡ ಇದರಲ್ಲಿ ಭಾಗವಹಿಸಲಿದ್ದಾರೆ .

ಅಮುಲ್ ಪಾಟ್ರಿಕ್ ಟೆ , ಮೆಕ್ ಗೌರ್ನ್ ಫೌಂಡೇಷನ್ , ವಿಶ್ವ ಬ್ಯಾಂಕ್ , ಅಜೀಮ್ ಪ್ರೇಮ್ಜಿ ಫಿಲಾಂಛೋಪಿಕ್ ಇನಿಷಿಯೇಟಿವ್ ಗೋದ್ರೇಜ್ , ಫೋರ್ಡ್ ಫೌಂಡೇಷನ್ , ಶೆಲ್ ಫೌಂಡೇಷನ್ , ಲೆವೀಸ್ , ಮಾರ್ಕ್ಸ್ ಅಂಡ್ ಸೈನ್ಸರ್ , ನೋಕಿಯಾ ಸೀಮನ್ಸ್‌ಗಳ ಪ್ರಮುಖರು ಬೆಂಗಳೂರಿನಲ್ಲಿ ಒಂದೆಡೆ ಸೇರಲಿದ್ದು , ಶೆಮ್ಮ ಸಂಬಂಧಿತ ಪರಿಹಾರ ವೃಶ್ಯಗಳಲ್ಲಿ ಸಕ್ರಿಯ ಚರ್ಚೆಗಳನ್ನು ನಡೆಸಲಿದ್ದಾರೆ . ಪರಿಹಾರ ವೃಶ್ಯಗಳ ಭಾಗವಹಿಸುವ ವ್ಯಕ್ತಿಗಳು ವರ್ಚುವಲ್ ರೀತಿಯಲ್ಲಿ 9 ತಿಂಗಳಿಗೂ ಹೆಚ್ಚಿನ ಕಾಲ ಸಭೆ ನಡೆಸುತ್ತಿದ್ದರೂ , ಮುಖತಃ ವೇದಿಕೆಯಲ್ಲಿ ಭೇಟಿಯಾಗುವ ಅವಕಾಶವನ್ನು ಆಗಸ್ಟ್‌ನಲ್ಲಿ ನಡೆಯಲಿರುವ ಫೇಸ್ ಟು ಫೇಸ್ ಘೋರಿ ನೀಡುತ್ತಿದೆ . ಈ ಸಂದರ್ಭದಲ್ಲಿ ಭಾಗವಹಿಸುವವರು ಆಯ್ದ ತಿರುಳಿನ ಮಾರ್ಗಗಳಲ್ಲಿ ಸಂಪರ್ಕ ಮತ್ತು ಫಲಿತಾಂಶಗಳ ಸುಧಾರಣೆಗೆ ದೀರ್ಘಕಾಲೀನ ಬೆಂಬಲವನ್ನು ದೃಢೀಕರಿಸಲಿದ್ದಾರೆ . ಅನೇಕ ಸಾಮಾಜಿಕ ತೊಂದರೆಗಳು ಸಂಕೀರ್ಣವಾಗಿರುವುದರಿಂದ ಅವುಗಳ ಬದಲಾವಣೆ ನಿಧಾನವಾಗುತ್ತದೆ ಅಥವ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾದ ಪರಿಹಾರಗಳು ಇದಕ್ಕೆ ಕಾರಣವಿರಬಹುದು . ಜ್ಞಾನ ವಿನಿಮಯ ಮತ್ತು ಸತತವಾಗಿ ನವೀನತೆಯೊಂದಿಗೆ ತೊಡಗಿಸಿಕೊಳ್ಳುವುದು ನೂತನ ಅವಕಾಶಗಳನ್ನು ನೀಡುತ್ತದೆ . ಇದು ಸಮಾಜದ ಬದಲಾವಣೆ ತರುವ ಸಾಮರ್ಥ್ಯ ಹೊಂದಿರುತ್ತದೆ . ನಾಲ್ಕು ಪರಿಹಾರ ವೃತ್ತಗಳಲ್ಲಿ ಪ್ರತಿಯೊಂದು 2 – 3 ಎಳೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದು , ಇವುಗಳಲ್ಲಿ ಪ್ರತಿಯೊಂದು ಎಳೆ ನೈಜ ಜೀವನದ ಬಳಕೆಯ ಪ್ರಕರಣಗಳ ಜೊತೆಗೆ ಶ್ರಮಿಸುತ್ತದೆ . ಭಾರತ ಮತ್ತು ಅದರ ಸಾಮಾಜಿಕ – ಆರ್ಥಿಕ ಸಮಸ್ಯೆಗಳ ಕಡೆಗೆ ವೇದಿಕೆ ಮುಖ್ಯವಾಗಿ ಗಮನ ಕೇಂದ್ರೀಕರಿಸಲಿದೆ . ಭಾಗವಹಿಸುವವರು ಮತ್ತು ನಿರೀಕ್ಷಿತ ಫಲಿತಾಂಶಗಳ ಲಾಭ ಮಾತ್ರ ಕೇವಲ ಭಾರತಕ್ಕೆ ಸೀಮಿತವಾಗಿರುವುದಿಲ್ಲ . ಏಕೆಂದರೆ ಜಗತ್ತಿನ ಎಲ್ಲೆಡೆಯ ಸಾಮಾಜಿಕ ಅಭಿವೃದ್ಧಿ ಸಮಸ್ಯೆಗಳ ಹಿನ್ನೆಲೆಯನ್ನು ಈ ಪರಿಹಾರಗಳು ಹೊಂದಿರುತ್ತವೆ , ಕ್ಯಾಟಲಿಸ್ಟ್ ಮ್ಯಾನೇಜ್ ಮೆಂಟ್ ಸರ್ವೀಸಸ್ ( ಸಿಎಂಎಸ್ ) ಈ ವೇದಿಕೆಯ ಚಿಂತನೆಯನ್ನು ಸಾದರಪಡಿಸಿದ್ದು , ಸುಸ್ಥಿರ ಮತ್ತು ಸುಲಭ ವೆಚ್ಚದಲ್ಲಿ ಬೃಹತ್ ಪ್ರಮಾಣದ ಸಾಮಾಜಿಕ ಪರಿಣಾಮವನ್ನು ಕಾಣಲಿಚ್ಚಿಸುವ ಜನರೊಂದಿಗೆ ಪಾಲುದಾರಿಕೆ ಹೊಂದಿದೆ .

ಈ ವೇದಿಕೆಯ ಫಲಿತಾಂಶಗಳು ಪ್ರಾಕ್ಟಿಸ್ ಪೈಲಟ್ಸ್ , ಪ್ರೇಮ್‌ವರ್ಕ್ಸ್ , ವೈಟ್‌ಪೇಪರ್ ಉತ್ಪನ್ನ , ಉಪಕರಣಗಳು ಮತ್ತು ಇತರೆ ನೈಜ ಬದುಕಿನ ಸಮಸ್ಯೆಗಳ ವಾಸ್ತವ ಪರಿಹಾರಗಳನ್ನು ಒಳಗೊಂಡಿದ್ದು , ಇದನ್ನು ಪುಹಾರ ವೃತ್ತಗಳಲ್ಲಿ ಭಾಗವಹಿಸುವವರು ನಿರ್ಧರಿಸಿರುತ್ತಾರೆ . ಎಲ್ಲಾ ಫಲಿತಾಂಶಗಳು ವಿಸ್ತಾರವಾಗಿ ಆನ್‌ಲೈನ್‌ನಲ್ಲಿ ಸಾರ್ವಜನಿಕರ ಒಳಿತಿಗಾಗಿ ಬೌದ್ಧಿಕ ಆಸ್ತಿಗೆ ಮುಕ್ತ ಮೂಲವಾಗಿರುವ ಕ್ರಿಯೇಟಿವ್ ಕಾಮನ್ಸ್ ಮೂಲಕ ಲಭ್ಯವಾಗಲಿದೆ . ಈ ವೇದಿಕೆ ಮೂಲಕ ಅವರ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಬಡೆ ಮತ್ತು ಮೂಲೆಗುಂಪಾದ ಸಮುದಾಯಗಳ ಜೀವನವನ್ನು ಸುಧಾರಿಸುವ ಭರವಸೆಯನ್ನು ಸಿಎಂಎಸ್ ಹೊಂದಿದೆ . ಬದ್ಧತೆಯ ಪಾಲುದಾರರ ಮೂಲಕ ಕನಿಷ್ಟ 10 ಬೇರೆ ಬೇರೆ ತೊಂದರೆಗಳನ್ನು ಪರಿಹರಿಸಲು ಪ್ರತಿ ವರ್ಷ ಸಿಎಂಎಸ್ ಚಿಂತಕರು , ಹೂಡಿಕೆದಾರರು , ಕಾರನಿರ್ವಹಿಸುವವರಲ್ಲಿ ಅತ್ಯುತ್ತಮವಾದವರನ್ನು ಒಂದುಗೂಡಿಸುತ್ತದೆ .

ಕ್ಯಾಟಲಿಸ್ಟ್ ಮ್ಯಾನೇಜ್ಮೆಂಟ್ ಸರ್ವೀಸ್ ( ಪಿಎಂಎಸ್ ) ಕುರಿತು :

ಸಾಮಾಜಿಕ ಪರಿಣಾಮವನ್ನು ಸೃಷ್ಟಿಸುವ ಪಾಲುದಾರೆ ಸಿಎಂಎಸ್ ಆಗಿದ್ದು , ಹೊಡಿಕೆಗಳು ಮತ್ತು ಅಭಿವೃದ್ಧಿ ಪರಿಹಾರಗಳ ಮೂಲಕ ಫಲಿತಾಂಶಗಳ ಖಾತ್ರಿ ನೀಡುತ್ತದೆ . ಸುಸ್ಥಿರ ಅಭಿವೃದ್ಧಿಗೆ ಅವರ ಬದ್ಧತೆಯು ಚಿಂತನೆಗಳು , ವ್ಯಕ್ತಿಗಳು ಮತ್ತು ಸಂಸ್ಥೆಗಳಲ್ಲಿ ಹೂಡಿಕೆ ನಡೆಸಲು ಅವರಿಗೆ ದಾರಿ ಮಾಡಿಕೊಡುತ್ತದೆ . ಇದರೊಂದಿಗೆ ಹಂಚಿಕೆಯ ಮೌಲ್ಯ ಸೃಷ್ಟಿ ಮತ್ತು ಸಾಮಾಜಿಕ ಪ್ರತಿಫಲಗಳನ್ನು ಗರಿಷ್ಟವಾಗಿಸುವತ್ತ ಸಂಸ್ಥೆ ಶ್ರಮಿಸುತ್ತಿದೆ . ಸಿಎಂಎಸ್‌ನ ಪರಿಹಾಲೆಗಳಲ್ಲಿ ವಿನ್ಯಾಸ ( ವ್ಯೂಹ ರಚನೆ ಮತ್ತು ಯೋಜನೆ ) ಸಾಕ್ಷಿ ( ಸಂಶೋಧನೆ , ಮೌಲ್ಯಕರಣ ಮತ್ತು ಒಳನೋಟಗಳು ) , ನಿರೀಕ್ಷಣೆ ( ವ್ಯವಸ್ಥೆಗಳು , ಉತ್ತರದಾಯಿತ್ವ ಮತ್ತು ಪ್ರದರ್ಶನ ಮತ್ತು ಕಲಿಕಾ ವ್ಯವಸ್ಥೆಗಳು ( ಸಂಚಯ ಮತ್ತು ಅನ್ವಯ ) ಸೇರಿವೆ . ಅಭಿವೃದ್ಧಿ ಕ್ಷೇತ್ರದ ವ್ಯಕ್ತಿಗಳು ಮತ್ತು ಸಮುದಾಯಗಳು ಹಾಗೂ ಅವರ ಸಂಸ್ಥೆಗಳು , ಕಾಠ್ಯಕ್ರಮ ಅನುಷ್ಠಾನಗೊಳಿಸುವವರು , ಹಣಕಾಸು ನೆರವು ನೀಡುವವರು , ನೀತಿಗಳ ಮೇಲೆ ಪ್ರಭಾವ ಬೀರುವವರು , ಸಂಶೋಧಕರು , ಜಾಲಗಳು , ವೇದಿಕೆಗಳು ಮತ್ತು ಒಕ್ಕೂಟಗಳ ನಡುವೆ ಪಾಲುದಾರಿಕೆಯನ್ನು ಸೃಷ್ಟಿಸಿ ಜಗತ್ತಿನಲ್ಲಿ ಸಂಪರ್ಕ ಸೇತುವನ್ನು ಅವರು ನಿರ್ಮಿಸುತ್ತಾರೆ . 1994ರಿಂದ ಸಿಎಂಎಸ್ 30ಕ್ಕೂ ಹೆಚ್ಚಿನ ದೇಶಗಳಲ್ಲಿ ಕೆಲಸ ಮಾಡಿದ್ದು , ಭಾರಶದಲ್ಲಿ ಕೇಂದ್ರ ಕಚೇರಿ ಹೊಂದಿದೆ .

ಸ್ವಸ್ತಿ ಕುರಿತು

ದುರ್ಬಲ ಸಮುದಾಯಗಳಿಗಾಗಿ ನೂರು ದಶಲಕ್ಷ ಸೌಖ್ಯತೆಯ ದಿನಗಳಷ್ಟು ಶ್ರಮಿಸುತ್ತಿರುವ ಆರೋಗ್ಯ ವಿಶ್ಲೇಷಣಾ ಸಂಸ್ಥೆ ಸ್ವಸ್ತಿ ಆಗಿದೆ , ಸ್ವಸ್ತಿಯನ್ನು 2004ರಲ್ಲಿ ನವೀನ ಪರಿಹಾರಗಳನ್ನು ಸೃಷ್ಟಿಸುವ , ಅಳವಡಿಸುವ ಅಥವ ಆತ್ಯಂತ ಬಡ ಸಮುದಾಯಗಳ ಜೀವನದಲ್ಲಿ ಪರಿವರ್ತನಾತ್ಮಕ ಬದಲಾವಣೆಗಳನ್ನು ಸೃಷ್ಟಿಸುವ ಚಿಮ್ಮು ಹಲಗೆಯಾಗಿ ಸ್ಥಾಪಿಸಲಾಗಿತ್ತು . ಬಡ ಜನರಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಆರೋಗ್ಯ ವ್ಯವಸ್ಥೆಗಳ ಕೇಂದ್ರದಲ್ಲಿ ಜನರು ಇರಬೇಕು ಎಂದು ಸ್ವಸ್ತಿ ನಂಬಿದೆ . 2030ರ ಹೊತ್ತಿಗೆ ಜಗತ್ತಿನ ಬಡವರ ಜೀವನಗಳಿಗೆ ಸೌಖ್ಯತೆಯ ದಿನಗಳನ್ನು ಸೇರಿಸಲು ಜಾಗತಿಕ ಬಹುವಿಭಾಗೀಯ ಶಂಡ ಸಮುದಾಯಗಳ ಜೊತೆಗೆ ಪಾಲುದಾರಿಕೆಯಲ್ಲಿ ಸಾಧಿಸಬಹುದಾದ ಪರಿಹಾರಗಳ ಮಾದರಿಗಳ ಸಹವಿನ್ಯಾಸ ಕೈಗೊಳ್ಳುತ್ತದೆ . ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯವಾಗಿ ನೀತಿಗಳ ಮೇಲೆ ಪ್ರಭಾವ ಬೀರುತ್ತದೆ . ಸ್ವಸ್ತಿ ವೈವಿಧ್ಯಪೂರ್ಣ ಪರಿಣತಿ ಹೊಂದಿದ್ದು , ಇದರಲ್ಲಿ ಸಾರ್ವಜನಿಕ ಆರೋಗ್ಯದಿಂದ ಹಣಕಾಸು ಮತ್ತು ವಿನ್ಯಾಸದ ನಿರ್ವಹಣೆ ಸೇರಿದ್ದು ಇದನ್ನು ಆರೋಗ್ಯ , ಕೆಲಸಗಾರರ ಸೌಖ್ಯತೆ , ವಾಷೆ , ಸಾಮಾಜಿಕ ಸಂರಕ್ಷಣೆ ಮತ್ತು ಸಮುದಾಯ ಆರೋಗ್ಯ ಹಾಗೂ ಸೌಖ್ಯತೆ ಸಾಧಿಸಲು ಸಮಗ್ರ ಮತ್ತು ಸಂಪೂರ್ಣ ಪರಿಹಾರಗಳನ್ನು ಪೂರೈಸುತ್ತಿದೆ .

ಆಶ್ರಯ ಹಸ್ತ ಟ್ರಸ್ಟ್ ಕುರಿತು :

ಆಶ್ರಯ ಹಸ್ತ ಟ್ರಸ್ಟ್ 2009 ಜೂನ್‌ನಲ್ಲಿ ಸ್ಥಾಪಿತವಾದ ಲಾಭರಹಿತ ಟ್ರಸ್ಟ್ ಆಗಿದೆ . ಬೆಂಗಳೂರಿನಲ್ಲಿ ನಿವೃತ್ತ ಮೇಜರ್ ಎಸ್ . ನಂಜುಂಡಯ್ಯ ಆವರು , ದಿನೇಶ್ ಕೆ . ಮತ್ತು ಶ್ರೀಮತಿ ಆಶಾ ದಿನೇಶ್ ಹಾಗೂ ಶ್ರೀಮತಿ ಸುಧಾ ಗೋಪಾಲಕೃಷ್ಣನ್ ಸ್ಟಾಪಕ ಸದಸ್ಯರಾಗಿ ಈ ಸಂಸ್ಥೆಯನ್ನು ಆರಂಭಿಸಿದ್ದರು . ಬಡವರು ಮತ್ತು ಅಗತ್ಯ ಇದ್ದವರಿಗೆ ಪ್ರಾಥಮಿಕವಾಗಿ ಶೈಕ್ಷಣಿಕ ಮತ್ತು ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ನೆರವಾಗುವುದು ಇದರ ಉದ್ದೇಶವಾಗಿದೆ , ಜೋಡಿಯ ಬಡಕುಟುಂಬದ ಹಿನ್ನೆಲೆಯು ಈ ಟ್ರಸ್ಟ್ ಇತರೆ ಮಾನವತಾ ಉದ್ದೇಶಗಳಿಗೆ ನೆರವು ವಿಸ್ತರಿಸಲು ಸ್ಫೂರ್ತಿ ನೀಡಿತ್ತು . ಅರ್ಹ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು , ವಿಶೇಷ ವಿಕಲಾಂಗ . ವಿದ್ಯಾರ್ಥಿಗಳ ಶಿಕ್ಷಣ ಮೂಲ ಸೌಕರ್ಯ ಇತ್ಯಾದಿಗಳು ಈ ಉದ್ದೇಶಗಳಲ್ಲಿ ಸೇರಿದ್ದೆವು . ಕಾಲ ಕಳೆದಂತೆ ಶ್ರೀಮತಿ ಮತ್ತು ಶ್ರೀ ದಿನೇಶ್ ಆವರು , ಹೆಣ್ಣುಮಕ್ಕಳಾದ ಶ್ರೀಮತಿ ದಿವ್ಯಾ ಮತ್ತು ಮಿಸ್ ದೀಕ್ಷಾ ಕೊಡ ಟ್ರಸ್ಟಿಗಳಾಗಿ ಜನರನ್ನು ಸಬಲೀಕರಿಸುವ ಕಾರ್ಯಕ್ಕೆ ಇನ್ನೂ ಹೆಚ್ಚಿನ ಚಾಲನೆ ನೀಡಿದರು .

ಅವರ ತವರು ರಾಜ್ಯವಾದ ಕರ್ನಟಕದಲ್ಲಿ ಆರಂಭಿಸಲಾದ ಸೌಹರ್ದತೆ ಈಗ ದೇಶದ ಎಲ್ಲೆಡೆ ಹರಡಿದೆ . ಎನ್‌ಜಿಒಗಳು ಮತ್ತು ಹಲವು ಸಮುದಾಯಗಳ ಸಹಯೋಗದಲ್ಲಿ ಅನೇಕ ಜೀವನಗಳೂ / ಫಲಾನುಭವಿಗಳನ್ನು ಸ್ಪರ್ಷಿಸಿದೆ . ಈ ಟ್ರಸ್ಟ್ ಎನ್‌ಜಿಒಗಳು ಮತ್ತು ಸಮುದಾಯಗಳಿಗೆ ದೇಶದ ಎಲ್ಲೆಡೆ , ಎಲ್ಲರಿಗು ಸೌಖ್ಯತೆ ಛಾವಣಿಯಡಿ ಭಾರತದ ಎಲ್ಲ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಹು ಆಯಾಮದ ಬೆಂಬಲವನ್ನು ಪೂರೈಸುತ್ತಿದೆ . ಟ್ರಸ್ಟ್‌ನ ಜವಾಬ್ದಾರಿ ಹಂಚಿಕೊಳ್ಳಲು ಮುಂದಾದ ಹೆಣ್ಣುಮಕ್ಕಳ ಸೇರ್ಪಡೆಯೊಂದಿಗೆ ಟ್ರಸ್ಟ್‌ನ ದೃಷ್ಟಿಕೋನ ವಿಸ್ತರಿಸಿದೆ . ಪ್ರಾಣಿಗಳ ಕಲ್ಯಾಣ ಮತ್ತು ವ್ಯಕ್ತಿಗಳ ಸಂಪೂರ್ಣ ಸೌಖ್ಯತೆಯನ್ನು ಈಗೆ ಸೇರಿಸಲಾಗಿದ್ದು , ಮಾನಸಿಕ ಸೌಖ್ಯತೆಯೆಡೆಗೆ ಪ್ರಮುಖ ಗಮನ ನೀಡಲಾಗಿದೆ . ನವೀನ ಮತ್ತು ಎಲ್ಲರನ್ನು ಒಳಗೊಂಡಂತೆ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರ ಪರಿಣತಿಯಿಂದಾಗಿ ಕುಟುಂಬ ಟ್ರಸ್ಟ್‌ನೊಂದಿಗೆ ಸಾಮಜಿಕ ಶೋಷಣೆಯನ್ನು ಸೇರಿಸಿಕೊಳ್ಳುವಂತಾಗಿದೆ . ಕಳೆದ ದಶಕದಲ್ಲಿ ಎನ್‌ಜಿಒಗಳೊಂದಿಗೆ ಟ್ರಸ್ಟ್‌ನ ಅರ್ಥಪೂರ್ಣ ಸಹಯೋಗ ಫಲಾನುಭವಿಗಳ ಜೀವನಗಳಲ್ಲಿ ಗಮನಾರ್ಹ ಸಾಮಾಜಿಕ ಪರಿಣಾಮ ಉಂಟು ಮಾಡಿದೆ . ಈ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳ ಕಾಲ ಕಾರ್ಯ ನಿರ್ವಹಿಸಿ ಗಳಿಸಿದ ಅನುಭವದಿಂದ ಸಮುದಾಯದ ಅಗತ್ಯಗಳಿಗೆ ತಕ್ಕಂತೆ ಕೆಲಸ ಮಾಡಲು ಹೊಂದಿಕೊಳ್ಳುವಂತೆ ಮಾಡಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.