ಕೋರ್ಟ್ ಆದೇಶ ಪಾಲಿಸದ ಸೇಂಟ್ ಜಾನ್ ಆರೋಗ್ಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ಸುಮಾರು 7000 ಸಿಬ್ಬಂದಿಗೆ 1985ರಿಂದ ನ್ಯಾಯಯುತ ಸಂಬಳ ನೀಡದೆ ವಂಚನೆ ಹೈಕೋರ್ಟ್ ಆದೇಶದಂತೆ ಬಾಕಿ ಸೇರಿ ಪೂರ್ಣ ” ವೇತನ ಬಿಡುಗಡೆಗೆ ಆಗ್ರಹ

ಬೆಂಗಳೂರು , 30 : ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಸೇಂಟ್ ಜಾನ್ಸ್ ಆರೋಗ್ಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ತನ್ನ ಸುಮಾರು 7000 ಸಿಬಂದಿಗೆ ಹೈಕೋರ್ಟ್ ಹಾಗೂ ಕೈಗಾರಿಕಾ ನ್ಯಾಯಮಂಡಳಿ ಆದೇಶದಂತೆ ನ್ಯಾಯಯುತ ವೇತನ ನೀಡದ ವಂಚನೆ ಎಸಗುತ್ತಿದೆ . ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸೇಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ಸ್ ಆಲ್ ಎಂಪ್ಲಾಯಿಸ್ ಸ್ಟಾಫ್ ಅಸೋಸಿಯೇಷನ್ ಅಧ್ಯಕ್ಷ ಸಾಷಿಯೋ ಸೆರಾ , ಸಂಸ್ಥೆ 1985ರಿಂದಲೂ ನ್ಯಾಯಾಲಯದ ಆದೇಶದಂತೆ ಕನಿಷ್ಠ ವೇತನಕ್ಕೂ ಕಡಿಮೆ ಸಂಬಳವನ್ನು ನೀಡುವ ಮೂಲಕ ಸಿಬ್ಬಂದಿಗೆ ನ್ಯಾಯಯುತವಾಗಿ ಸಲ್ಲಬೇಕಾಗಿರುವ ವೇತನವನ್ನು ನೀಡದೆ ಆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು . 1974 ರಿಂದ 1984ರ ವರೆಗೆ ಸಂಸ್ಥೆಯ ಸಿಬ್ಬಂದಿಗೆ ಸರ್ಕಾರ ನಿಗದಿಪಡಿಸಿದ್ದ ವೇತನಗಳನ್ನು ನೀಡಲಾಗುತ್ತಿತ್ತು . 1985ರಲ್ಲಿ ಅದನ್ನು ಸ್ಥಗಿತಗೊಳಿಸಿ ಕನಿಷ್ಠ ವೇತನಕ್ಕಿಂತಲೂ ಕಡಿಮೆ ವೇತನವನ್ನು ನೀಡಲಾರಂಭಿಸಿತು . ಇದರಿಂದಾಗಿ ಕೈಗಾರಿಕಾ ವ್ಯಾಜ್ಯ ಏರ್ಪಟ್ಟು , ಧರಣಿ ಮುಷ್ಕರಗಳು ನಡೆದಿದ್ದವು . ಆಗ ವ್ಯಾಜ್ಯ ಕೈಗಾರಿಕಾ ನ್ಯಾಯಮಂಡಳಿ ಮೆಟ್ಟಿಲೇರಿತ್ತು ಎಂದರು . 2003ರ ಡಿಸೆಂಬರ್ 6ರಂದು ಕೈಗಾರಿಕಾ ನ್ಯಾಯಮಂಡಳಿ 1985ರ ಜನವರಿ 1 ರಿಂದ ಅನ್ವಯವಾಗುವಂತೆ ಸರ್ಕಾರ ನಿಗದಿಪಡಿಸಿದ್ದ ವೇತನವನ್ನು ಎಲ್ಲ ಸಿಬ್ಬಂದಿಗೂ ನೀಡಬೇಕೆಂದು ಆದೇಶಿಸಿತ್ತು . ಈ ಆದೇಶವನ್ನು ಹೈಕೋರ್ಟ್ ಕೂಡ 2012ರ ಮಾರ್ಚ್ 12ರಂದು ಎತ್ತಿಹಿಡಿದು , ಅರ್ಜಿದಾರರಿಗೆ , ಆಸ್ಪತ್ರೆ ಮತ್ತು ಕಾಲೇಜಿನ ಸಿಬ್ಬಂದಿಗೆ 1985ರಿಂದ ಪೂರ್ವಾನ್ವಯವಾಗುವಂತೆ ಎಲ್ಲ ವೇತನ ಭತ್ಯೆಗಳನ್ನು ನೀಡಬೇಕು ಎಂದು ಆದೇಶಿಸಿತ್ತು . ಆ ಆದೇಶವನ್ನು ಸಂಸ್ಥೆ ಪಾಲನೆ ಮಾಡದೆ ಸತಾಯಿಸುತ್ತಿದೆ ಎಂದು ಹೇಳಿದರು . ಆದರೂ ಸಹ ಸಂಸ್ಥೆಯ ಆಡಳಿತ ಮಂಡಳಿ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ 2012ರಲ್ಲಿ ಮೇಲ್ಮನವಿ ಸಲ್ಲಿಸಿದ್ದು , ಅದು ಊರ್ಜಿತವಾಗುವುದಿಲ್ಲ , ಮೂಲತಃ ಅದು ತಿರಸ್ಕೃತಗೊಳ್ಳಬೇಕು . ಅದರ ವಿರುದ್ಧ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು . ಆದರೂ ಸಹ ಸಂಸ್ಥೆ ಆ ಮೇಲ್ಪನವಿ ಮುಂದಿಟ್ಟುಕೊಂಡು ಈವರೆಗೂ ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಕನಿಷ್ಟಕ್ಕಿಂತ ಕಡಿಮೆ ವೇತನವನ್ನು ನೀಡುತ್ತಿದೆ . ಇಡೀ ಹೈಕೋರ್ಟ್ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿದಾರರು ಮನವಿ ಸಲ್ಲಿಸಬೇಕು , ಅದನ್ನು ಆಲಿಸಿ ಸಕ್ಷಮ ಪ್ರಾಧಿಕಾರ ಸೂಕ್ತ ಆದೇಶವನ್ನು ಮಾಡಬೇಕು ಎಂದು ಆದೇಶಿಸಿದೆ ಎಂದು ಹೇಳಿದರು . ಸಕಮ ಪ್ರಾಧಿಕಾರ ಈಗಾಗಲೇ ಕಳೆದ ಜುಲೈ 30ರಂದು ಸಂಸ್ಥೆಗೆ ದಿಢೀರ್ ಭೇಟಿ ನೀಡಿ , ಲೆಕ್ಕಪತ್ರ ಹಾಗೂ ದಾಖಲೆಗಳ ತಪಾಸಣೆ ನಡೆಸಿದೆ . ಅದು ಸದ್ಯದಲ್ಲೇ ಸಂಸ್ಥೆಯ ಸಿಬ್ಬಂದಿಗೆ ನ್ಯಾಯಯುತವಾಗಿ ಸಲ್ಲಬೇಕಾಗಿರುವ ವೇತನವನ್ನು ಆದೇಶವನ್ನು ಪ್ರಕಟಿಸಲಿದೆ . ಆದ್ದರಿಂದ ಸಂಸ್ಥೆ 1985ರಿಂದ ಇಲ್ಲಿಯವರೆಗೆ ಸಿಬ್ಬಂದಿಗೆ ನ್ಯಾಯಯುತವಾಗಿ ಸಲ್ಲಬೇಕಾಗಿರುವ ವೇತನ ಶ್ರೇಣಿ ಬಗ್ಗೆ ಮತ್ತೆ ಅದೇಶವನ್ನು ನೀಡಲಿದೆ . ಅದಕ್ಕೂ ಮುನ್ನ ಸಂಸ್ಥೆ , ಕೈಗಾರಿಕಾ ನ್ಯಾಯಮಂಡಳಿ ಹಾಗೂ ಹೈಕೋರ್ಟ್ ಆದೇಶಗಳನ್ನು ಧಿಕ್ಕರಿಸಿ , ಸಿಬ್ಬಂದಿ ನೌಕರರಿಗೆ ನೀಡಬೇಕಾದ ವೇತನವನ್ನು ನೀಡದೆ , ಕೋಟ್ಯಾಂತರ ರೂಪಾಯಿ ಬಾಕಿ ಉಳಿಸಿಕೊಂಡಿದೆ . ಆ ಮೂಲಕ ಸಿಬ್ಬಂದಿಗೆ ಮಚನೆ ಎಸಗಿದೆ . ಹಾಗಾಗಿ ಕೋರ್ಟ್ ಆದೇಶದಂತೆ ಕೂಡಲೇ ಸಂಸ್ಥೆ ಬಾಕಿ ವೇತನವನ್ನು ಬಿಡುಗಡೆ ಮಾಡಬೇಕೆಂದು ಈ ಮೂಲಕ ಆಗ್ರಹಿಸಲಾಗುತ್ತಿದೆ ಎಂದು ಸಾವಿಯೋ ಪೆರೈರಾ ಹೇಳಿದರು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.