ಟೈಮ್ಸ್ ನೆಟ್‌ವರ್ಕ್ ಇಂಡಿಯಾ ಆರ್ಥಿಕ ಸಮಾವೇಶ 2019 – ಸೌತ್ ಚಾಪ್ಟರ್ , ಭಾರತದ ದಕ್ಷಿಣಾತ್ಯ ಬೆಳವಣಿಗೆ ತಂತ್ರಾಂಶಗಳನ್ನು ಮುಕ್ತಗೊಳಿಸಲು ಕಾರ್ಯಸೂಚಿ ಸಿದ್ಧತೆ

ರೈಲ್ವೆ ಮತ್ತು ವಾಣಿಜ್ಯ ಮಂತ್ರಿ ಪಿಯುಷ್ ಗೋಯಲ್ , “ ಭಾರತಕ್ಕೆ ದಕ್ಷಿನ ಭಾರತ ಬಹಳ ಮುಖ್ಯವಾದ ಪ್ರದೇಶ . ಭಾರತದ ಒಟ್ಟಾರೆ ಜಿಡಿಪಿ ಗೆ ಈ ಪ್ರದೇಶ , 30 % ಕೊಡುಗೆಯೊಂದಿಗೆ ಭಾರಿ ಪ್ರಮಾಣದ ಕೊಡುಗೆ ನೀಡಿದೆ . ಕರ್ನಾಟಕ , ತಮಿಳುನಾಡು , ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯಗಳು ತಂತ್ರಜ್ಞಾನ , ಆಟೋಮೊಬೈಲ್ , ಔಷಧಿ ತಯಾರಿಕೆಯಂಥ ಪ್ರಮುಖ ಕೈಗಾರಿಕಾ ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿವೆ . ” ಎಂದರು .

ಕರ್ನಾಟಕದ ಮುಖ್ಯ ಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ “ ಇಂಡಿಯಾ ಆರ್ಥಿಕ ಸಮಾವೇಶ 2019 ದಕ್ಷಿಣ ಚಾಪ್ಟರ್‌ನ ಭಾಗವಾಗಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ . ಭಾರತವನ್ನು ಜಾಗತಿಕ ಶಕ್ತಿಕೇಂದ್ರವನ್ನಾಗಿಸುವ ತ್ವರಿತ ಪರಿವರ್ತನೆಯನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸುತ್ತಿರುವ ಟೈಮ್ಸ್‌ ನೆಟ್‌ವರ್ಕ್‌ನ ಈ ಉಪಕ್ರಮದ ಬಗ್ಗೆ ನನಗೆ ಸಂತಸವಾಗಿದೆ . ಕರ್ನಾಟಕ ಭಾರತದ 4ನೇ ಅತಿದೊಡ್ಡ ದೇಶವಾಗಿದ್ದು ಬಹಳ ವೇಗವಾಗಿ ಬೆಳೆಯುತ್ತಿರುವ ರಾಜ್ಯವೂ ಆಗಿ , 9 . 6 % ವೇಗದಲ್ಲಿ ಬೆಳೆಯುತ್ತಿದೆ . ಈ ಬೆಳವಣಿಗೆಯನ್ನು ತೀವ್ರಗೊಳಿಸಲು , ಕರ್ನಾಟಕವನ್ನು ಜಗಾತಿಕ ತಯಾರಿಕಾ ಕೇಂದ್ರವಾಗಿ ಹಾಗೂ ತಂತ್ರಜ್ಞಾನ ಮುಂದಾಳಾಗಿ ರೂಪಿಸಲು , ಸಮತುಲಿತ ಹಾಗೂ ಎಲ್ಲರನ್ನೂ ಒಳಗೊಂಡ ಊರ್ಜಿತ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ನೀತಿಗಳನ್ನು , ಯೋಜನೆಗಳನ್ನು ರೂಪಿಸಲು ನಾವು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ ‘ ಎಂದರು .

ಪ್ರಧಾನಮಂತ್ರಿಗಳಿಗೆ ಆರ್ಥಿಕ ಸಲಹಾ ಸಮಿತಿಯ ಚೇರ್ಮನ್ ಬಿಬೇಕ್ ದೇಬ್ರಾಯ , “ 5 ಟ್ರಿಲಿಯನ್ ಡಾಲರುಗಳ ಮಹಾತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಬಹುದಾದರೂ , ವಿನಿಮಯ ದರಗಳ ನಿರೀಕ್ಷೆಗಳನ್ನು ಅವಲಂಬಿಸಿ 8 % ಅಥವಾ ಅದಕ್ಕಿಂತ ಹೆಚ್ಚಿನ ನಿಜವಾದ ಬೆಳವಣಿಗೆಯ ಅಗತ್ಯವೇರ್ಪಡುತ್ತದೆ . ಅಖಿಲ ಭಾರತ ಬೆಳವಣಿಗೆ ಪ್ರಮಾಣವನ್ನು ರಾಜ್ಯಗಳ ಮಟ್ಟದಿಂದ ಕ್ರೋಢೀಕರಿಸಲಾಗುತ್ತದೆ . ಹೀಗಾಗಿ , ದಕ್ಷಿಣ ಭಾರತವು ಅಂಶ ಪ್ರವೇಶವನ್ನು ಇನ್ನೂ ಹೆಚ್ಚು ಸಮರ್ಥವಾಗಿ ಬಳಸಿ ಉತ್ಪಾದಕತೆಯನ್ನು ವರ್ಧಿಸುವ ವಿಷಯದಲ್ಲಿ ಪ್ರಧಾನ ಪಾತ್ರ ವಹಿಸುವ ಅಗತ್ಯವಿದೆ . ”

ಬೆಂಗಳೂರು , ಆಗಸ್ಟ್ 30 , 2019 : ಭಾರತದ ಪ್ರತಿಷ್ಠಿತ ಪ್ರಸರಣ ಕಾರ್ಯಜಾಲ ಸಂಸ್ಥೆಯಾದ ಟೈಮ್ ನೆಟ್‌ವರ್ಕ್ , ತನ್ನ ಸಿಗೋಚರ್ ಕಾರ್ಯಕ್ರಮ ಇಂಡಿಯಾ ಆರ್ಥಿಕ ಸಮಾವೇಶ 2019 – ಸೌತ್ ಚಾಪ್ಟರ್‌ನ ಪ್ರಪ್ರಥಮ ಪ್ರಾದೇಶಿಕ ಚಾಪ್ಟರ್‌ ಅನ್ನು ಬೆಂಗಳೂರಿನಲ್ಲಿ ಇಂದು ಆಯೋಜಿಸಿತ್ತು . ಪ್ರಮುಖ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಸಲುವಾಗಿ ಕೇಂದ್ರೀಯವಾದ , ಶಕ್ತಿಶಾಲಿ ವೇದಿಕೆಯೊಂದಿಗೆ ಭಾರತದ ದಕ್ಷಿಣಾತ್ಯ ಬೆಳವಣಿಗೆ ತಂತ್ರಾಂಶಗಳ ಪ್ರವೇಶಕ್ಕಾಗಿ “ ಭಾರತದ ಬೆಳವಣಿಗೆ ತಂತ್ರಾಂಶ ” ಎಂಬ ಥೀಮ್ ಇದ್ದ ಇಂಡಿಯಾ ಆರ್ಥಿಕ ಸಮಾವೇಶ ಸೌತ್ ಚಾಪ್ಟರ್‌ ಅನ್ನು ಅನಾವರಣಗೊಳಿಸಿತು .

ಇಂಡಿಯಾ ಆರ್ಥಿಕ ಸಮಾವೇಶ 2018 , ಶಕ್ತಿಶಾಲಿಯಾದ 5 ಟ್ರಿಲಿಯನ್ ಆರ್ಥಿಕತೆಯೆಡೆಗೆ ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ಭಾರತ ( * India fast – tracking to $ 5 trillion economy ) ” ಎಂಬ ಕಾರ್ಯಕ್ರಮವನ್ನು ಮಂಡಿಸಿತ್ತು . ಈ ವರ್ಷದ ಕಾರ್ಯಕ್ರಮವು ಈ ಮಹಾತ್ವಾಕಾಂಕ್ಷೆಯ ಕಾರ್ಯಾಚರಣೆಯನ್ನು ಕೈಗೊಳ್ಳುವುದಕ್ಕಾಗಿ ಭಾರತದ ಬೆಳವಣಿಗೆ ಮತ್ತು ಸಮೃದ್ಧತೆಗೆ ನೆರವಾಗುವ ಸಲುವಾಗಿ ದಕ್ಷಿಣಾತ್ಯ ಪ್ರದೇಶದ ಸಂಪೂರ್ಣ ಸಾಮರ್ಥ್ಯವನ್ನು ನಿರ್ದೇಶಿಸುವುದರ ಮೇಲೆ ಗಮನ ಕೇಂದ್ರೀಕರಿಸಿತ್ತು . ವಿಶ್ವವೇದಿಕೆಯ ಮೇಲೆ ಭಾರತದ ಆರ್ಥಿಕತೆಯ ನಾಯಕತ್ವವನ್ನು ಆಚರಿಸುವ ತನ್ನ ಪರಂಪರೆಯನ್ನು ಮುಂದುವರಿಸುತ್ತಾ ಇಂಡಿಯಾ ಆರ್ಥಿಕ ಸಮಾವೇಶ – ದಕ್ಷಿಣ ಚಾಪ್ಟರ್‌ , ಅತ್ಯಂತ ಚಿಂತನಶೀಲ ಅಧಿವೇಶನಗಳನ್ನು ಸೃಷ್ಟಿಸಿ , ಪ್ರಾದೇಶಿಕ ಸಾಮರ್ಥ್ಯಗಳು , ಅಧಿಕಪ್ರಭಾವದ ಕ್ಷೇತ್ರಗಳು ಮತ್ತು ತತ್ಸಂಬಂಧಿತ ಸವಾಲುಗಳ ಮೇಲೆ ಸ್ಪಷ್ಟವಾದ ಗಮನಕೇಂದ್ರೀಕರಣದೊಂದಿಗೆ ಭವಿಷ್ಯತ್ತಿನೆಡೆಗೆ ಅಂತದೃಷ್ಟಿ ಮತ್ತು ಪ್ರೋತ್ಸಾಹದಾಯಕ ದರ್ಶನಗಳನ್ನು ನೀಡುವ ಮೂಲಕ ಸ್ಥಳೀಯ ಉದ್ಯಮಗಳು , ವ್ಯಾಪಾರಗಳು , ನೀತರಚನಕಾರರು ಮತ್ತು ಪ್ರಭಾವಿವ್ಯಕ್ತಿಗಳನ್ನು ಒಂದೇ ಸೂರಿನಡಿ ಕಲೆಸಿತ್ತು .

ಟೈಮ್ಸ್ ನೆಟ್‌ವರ್ಕ್‌ನ ಸಿಇಒ ಎಮ್ . ಕೆ . ಆನಂದ , ಸ್ವಾಗತ ಭಾಷಣವನ್ನು ಮಾಡಿದರು ಮತ್ತು ರೈಲ್ವೆ ಮತ್ತು ವಾಣಿಜ್ಯದ ಸಚಿವರಾದ ಪಿಯೂಶ್ ಗೋಯಲ್ ಉದ್ಘಾಟನಾ ಭಾಷಣ ಮಾಡಿದರು . ಕರ್ನಾಟಕ ಮುಖ್ಯಮಂತ್ರಿ ಶ್ರೀ ಬಿ . ಎಸ್ . ಯಡಿಯೂರಪ್ಪ ಅವರು ಸಮಾವೇಶದಲ್ಲಿ ತಮ್ಮ ಪ್ರಮುಖ ಭಾಷಣದೊಂದಿಗೆ ಕೆಲವು ಸಂಗತಿಗಳನ್ನು ಎತ್ತಿಹಿಡಿದರು . ಪ್ರಧಾನಮಂತ್ರಿಗಳಿಗೆ ಆರ್ಥಿಕ ಸಲಹಾ ಸಮಿತಿಯ ಚೇರ್ಮನ್ ಬಿಬೇಕ್ ದೇಬ್ರಾಯ್ , ಆರ್ಥಿಕತೆಯನ್ನು ವರ್ಧಿಸುವಲ್ಲಿ ದಕ್ಷಿಣ ಭಾರತದ ಪಾತ್ರದ ಮೇಲೆ ತಮ್ಮ ಆಲೋಚನೆಗಳನ್ನು ತಿಳಿಸಿದರು . ಪ್ಯಾನೆಲ್ ಚರ್ಚೆಗಳ ಸಮಯದಲ್ಲಿ ಆಂಧ್ರಪ್ರದೇಶದ ಹಣಕಾಸು ಸಚಿವರಾದ ಬುಗ್ಗನ್ನ ರಾಜೇಂದ್ರನಾಥ್ , ತೆಲಂಗಾಣ ರಾಷ್ಟ್ರ ಸಮಿತಿಯ ಕಾರ್ಯಾಧ್ಯಕ್ಷ ಕೆ . ಟಿ . ರಾಮರಾವ್ ಮತ್ತು ಕರ್ನಾಟಕ ಉಪಮುಖ್ಯಮಂತ್ರಿ ಡಾ . ಸಿ . ಎನ್ . ಅಶ್ವತ್ಥನಾರಾಯಣ್ , ಕೇರಳದ ಹಣಕಾಸು ಸಚಿವ ಟಿ ಎಮ್ ಥಾಮಸ್ ಇಸಾಕ್ , 1 ಟ್ರಿಲಿಯನ್ ಡಾಲರ್‌ನಿಂದ 2 ಟ್ರಿಲಿಯನ್ ಡಾಲರ್‌ವರೆಗಿನ ಮಾರ್ಗಪಥದ ನಕ್ಷೆಯ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು . ಫೈರ್‌ ಸೈಡ್ ಚರ್ಚೆಯ ಸಂದರ್ಭದಲ್ಲಿ ಬಯೋಕಾನ್ ನ ಸಿಎಮ್‌ಡಿ ಕಿರಣ್ ಮಜುಂದಾರ್ ಶಾ 1 ಟ್ರಿಲಿಯನ್ ಡಾಲರ್ ಮತ್ತು ಇನ್ನೂ ಬೆಳೆಯುತ್ತಿದೆ . ಅದು ಯಾವ ರೀತಿ ಭಾರತದ ಬೆಳವಣಿಗೆಯನ್ನು ಪರಿವರ್ತಿಸಬಲ್ಲದು ಎಂಬ ಬಗ್ಗೆ ಚರ್ಚಿಸಿದರು .

ಟೈಮ್ ನೆಟ್‌ವರ್ಕ್‌ನ ಎಮ್ . ಡಿ ಹಗಲೂ ಸಿಇಓ ಎಮ್ ಕೆ ಆನಂದ್ , “ ಇಂಡಿಯಾ ಆರ್ಥಿಕ ಸಮಾವೇಶ 2019 ದಕ್ಷಿಣ ಚಾಪ್ಟರ್‌ , ಭಾರತದ ಪ್ರಮುಖ ಪ್ರದೇಶದ ಮೇಲೆ ಬೆಳಕು ಚೆಲ್ಲುವ ಮೂಲಕ ಭಾರತದ ಅಭಿವೃದ್ಧಿ ಕಾರ್ಯಸೂಚಿಯನ್ನು ಬಲಪಡಿಸುತ್ತಿದೆ . ಭೌಗೋಳಿಕವಾಗಿ ದಕ್ಷಿಣ ಭಾರತಕ್ಕಿರುವ ಅನುಕೂಲ ಮತ್ತು ಪ್ರಾಶಸ್ತ್ರಗಳ ಹಿನ್ನೆಲೆಯಲ್ಲಿ ಜಿಡಿಪಿ ಗೆ ಸಂಬಂಧಿಸಿದಂತೆ ಅದು ಇಂಡೋನೇಷಿಯಾಗೂ ಪ್ರತಿಸ್ಪರ್ಧಿ ಎನ್ನುವುದು ಎಲ್ಲರಿಗೂ ತಿಳಿದಿದೆ . ನಮ್ಮ ಐಟಿ ಹಾಗೂ ಆಟೋಮೋಟಿವ್ ಉದ್ದಿಮೆಗಳಿಗೆ ದಕ್ಷಿಣ ಭಾರತ ತವರೂರಾಗಿದ್ದು , ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ . ಈ ಪ್ರದೇಶವನ್ನು ಇನ್ನಷ್ಟು ಬೆಳೆಸಲು ಹೊಸಬರನ್ನು ನಾವು ಶೋಧಿಸುವುದರ ಜೊತೆಗೆ , ಇತರ ಪ್ರದೇಶಗಳಿಂದ ಕಲಿತ ಪಾಠಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ . ಭಾರತೀಯ ಆರ್ಥಿಕತೆಯು ಮಂದಗತಿಯಲ್ಲಿ ಸಾಗುತ್ತಿರುವ ಸಮಯದಲ್ಲಿ , ಈ ಸಮಾವೇಶ ಗಮನ ಸೆಳೆಯುತ್ತದೆ . ಹಾಗಾಗಿ , ಆರ್ಥಿಕ ಬೆಳವಣಿಗೆಯನ್ನು ಪುನಃ ಮುನ್ನಡೆಸಲು ವ್ಯಾಪಾರ ಹಾಗೂ ರಾಜಕೀಯ ಕ್ಷೇತ್ರದವರೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಅನಿವಾರ್ಯತೆ ಏರ್ಪಟ್ಟಿದೆ ‘ ಎಂದರು .

ಕರ್ನಾಟಕದ ಮುಖ್ಯ ಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ , “ ಇಂಡಿಯಾ ಆರ್ಥಿಕ ಸಮಾವೇಶ 2019 ದಕ್ಷಿಣ ಚಾಪ್ಟರ್‌ನ ಭಾಗವಾಗಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ . ಭಾರತವನ್ನು ಜಾಗತಿಕ ಶಕ್ತಿಕೇಂದ್ರವನ್ನಾಗಿಸುವ ತ್ವರಿತ ಪರಿವರ್ತನೆಯನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸುತ್ತಿರುವ ಟೈಮ್ಸ್ ನೆಟ್‌ವರ್ಕ್‌ನ ಈ ಉಪಕ್ರಮದ ಬಗ್ಗೆ ನನಗೆ ಸಂತಸವಾಗಿದೆ . ಕರ್ನಾಟಕ ಭಾರತದ 4ನೇ ಅತಿದೊಡ್ಡ ದೇಶವಾಗಿದ್ದು ಬಹಳ ವೇಗವಾಗಿ ಬೆಳೆಯುತ್ತಿರುವ ರಾಜ್ಯವೂ ಆಗಿ , 9 . 6 % ವೇಗದಲ್ಲಿ ಬೆಳೆಯುತ್ತಿದೆ . ಈ ಬೆಳವಣಿಗೆಯನ್ನು ತೀವ್ರಗೊಳಿಸಲು , ಕರ್ನಾಟಕವನ್ನು ಜಗಾತಿಕ ತಯಾರಿಕಾ ಕೇಂದ್ರವಾಗಿ ಹಾಗೂ ತಂತ್ರಜ್ಞಾನ ಮುಂದಾಳಾಗಿ ರೂಪಿಸಲು , ಸಮತುಲಿತ ಹಾಗೂ ಎಲ್ಲರನ್ನೂ ಒಳಗೊಂಡ ಊರ್ಜಿತ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ನೀತಿಗಳನ್ನು , ಯೋಜನೆಗಳನ್ನು ರೂಪಿಸಲು ನಾವು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ ‘ ಎಂದರು .

ಮುಂದುವರಿಸುತ್ತ , “ ವಿಶ್ವದ ಮೊದಲ ಐದು ಆರ್ ಮತ್ತು ಡಿ ಪರಿಸರ ವ್ಯವಸ್ಥೆಯಲ್ಲಿ ಕರ್ನಾಟಕವೂ ಸಹ ಒಂದು ಮತ್ತು ಆರಂಭಿಕ ಉದ್ದಿಮೆಗಳಿಗೆ ಎರಡನೆ ಅತ್ಯುತ್ತಮ ಪರಿಸರವ್ಯವಸ್ಥೆ , ಏಪ್ರಿಲ್ 20೦೦ ದಿಂದ ಮಾರ್ಚ್ 2019ರವರೆಗಿನ ಅವಧಿಯಲ್ಲಿ ರಾಜ್ಯವು 37 . 67 ಬಿಲಿಯನ್ ಯು ಎಸ್ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಿಸಿದೆ . ಇದು ದೇಶದ ಒಟ್ಟಾರೆ ಪ್ರಮಾಣದಲ್ಲಿ 9 % . ಇದು ಕರ್ನಾಟಕದ ಕ್ಷಣ , ಇತಿಹಾಸದಲ್ಲಿ ರಾಜ್ಯವು ಬಹಳ ನಿರ್ಧಾರಿಕ ಕ್ಷಣದಲ್ಲಿ ನಿಂತಿದೆ – ಪರಿವರ್ತನೆಗೆ ಅಪಾರ ಅವಕಾಶಗಳನ್ನು ಹೊಂದಿದೆ . ಜಾಗತಿಕ ವೇದಿಕೆಯಲ್ಲಿ ಕರ್ನಾಟಕ ಇನ್ನೂ ಹೆಚ್ಚು ಸಕ್ರಿಯ ಪಾತ್ರ ವಹಿಸುವುದನ್ನು ನೋಡಲು ನಾನು ಕಾತುರನಾಗಿದ್ದೇನೆ . ಬಲಿಷ್ಟವಾದ , ಊರ್ಜಿತವಾದ ಹಾಗೂ ಸಮತುಲಿತ ಬೆಳವಣಿಗೆಯನ್ನು ಸಾಧಿಸಲು ಬೆಳವಣಿಗೆ ಮತ್ತು ಉದ್ಯೋಗಗಳ ನಡುವೆ ಧಾನತ್ಮಕ ಸಂಬಂಧ ಸ್ಥಾಪಿಸುವುದು ನಮ್ಮ ಆದ್ಯತೆಯಾಗಿರುತ್ತದೆ . ” ಎಂದರು .

ದಿ ಇಂಡಿಯಾ ಎಕನಾಮಿಕ್ ಕಾಂಪ್ಲೇವ್ 2019 ದಕ್ಷಿಣ ಚಾಪ್ಟರ್‌ನ ಉದ್ಘಾಟನಾ ಭಾಷಣದಲ್ಲಿ ರೈಲ್ವೆ ಮತ್ತು ವಾಣಿಜ್ಯ ಮಂತ್ರಿ ಪಿಯುಷ್ ಗೋಯಲ್ , “ ಭಾರತಕ್ಕೆ ದಕ್ಷಿನ ಭಾರತ ಬಹಳ ಮುಖ್ಯವಾದ ಪ್ರದೇಶ . ಭಾರತದ ಒಟ್ಟಾರೆ ಜಿಡಿಪಿ ಗೆ ಈ ಪ್ರದೇಶ , 30 % ಕೊಡುಗೆಯೊಂದಿಗೆ ಭಾರಿ ಪ್ರಮಾಣದ ಕೊಡುಗೆ ನೀಡಿದೆ . ಕರ್ನಾಟಕ , ತಮಿಳುನಾಡು , ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯಗಳು ತಂತ್ರಜ್ಞಾನ , ಆಟೋಮೊಬೈಲ್ , ಔಷಧಿ ತಯಾರಿಕೆಯಂಥ ಪ್ರಮುಖ ಕೈಗಾರಿಕಾ ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿವೆ . ಅಷ್ಟೇ ಅಲ್ಲದೆ , ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಅಪಾರ ಸಾಮರ್ಥ್ಯ ಕಾಣುತ್ತಿದೆ . ದಕ್ಷಿಣ ಭಾರತವು ಭಾರತದ ರಕ್ಷಣಾ ವಲಯಕ್ಕೆ ಪ್ರಮುಖವಾಗಿ ಕೊಡುಗೆ ನೀಡುತ್ತಿದೆ . ಈ ಎಲ್ಲಾ ಅಂಶಗಳು ಭಾರತದ ಬೆಳವಣಿಗೆಯನ್ನು ಚುರುಕುಗೊಳಿಸಲು ಸಹಾಯಕವಾಗುತ್ತವೆ . ಜಾಗತಿಕವಾಗಿ ಆರ್ಥಿಕ ಹಿನ್ನಡೆಯಾಗುವ ಸಾಧ್ಯತೆ ಬಗ್ಗೆ ನಮಗೆ ಅರಿವಿದೆ , ಆದರೆ ಒಂದು ದೇಶವಾಗಿ , ನಾವು ನಮ್ಮ ಜನರ ಕೌಶಲ್ಯಗಳನ್ನು ಉದ್ದೀಪನಗೊಳಿಸಬೇಕು ಮತ್ತು ಅವರಿಗೆ ಹೆಚ್ಚು ಅವಕಾಶಗಳನ್ನು ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ” ಎಂದರು .

ಪ್ರಧಾನಮಂತ್ರಿಗಳಿಗೆ ಆರ್ಥಿಕ ಸಲಹಾ ಸಮಿತಿಯ ಚೇರ್ಮನ್ ಬಿಬೇಕ್ ದೇಬ್ರಾಯ , * 5 ಟ್ರಿಲಿಯನ್ ಡಾಲರುಗಳ ಮಹಾತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಬಹುದಾದರೂ , ವಿನಿಮಯ ದರಗಳ ನಿರೀಕ್ಷೆಗಳನ್ನು ಅವಲಂಬಸಿ 8 % ಅಥವಾ ಅದಕ್ಕಿಂತ ಹೆಚ್ಚಿನ ನಿಜವಾದ ಬೆಳವಣಿಗೆಯ ಅಗತ್ಯವೇರ್ಪಡುತ್ತದೆ . ಅಖಿಲ ಭಾರತ ಬೆಳವಣಿಗೆ ಪ್ರಮಾಣವನ್ನು ರಾಜ್ಯಗಳ ಮಟ್ಟದಿಂದ ಕ್ರೋಢೀಕರಿಸಲಾಗುತ್ತದೆ . ಹೀಗಾಗಿ , ದಕ್ಷಿಣ ಭಾರತವು ಅಂಶ ಪ್ರವೇಶವನ್ನು ಇನ್ನೂ ಹೆಚ್ಚು ಸಮರ್ಥವಾಗಿ ಬಳಸಿ ಉತ್ಪಾದಕತೆಯನ್ನು ವರ್ಧಿಸುವ ವಿಷಯದಲ್ಲಿ ಪ್ರಧಾನ ಪಾತ್ರ ವಹಿಸುವ ಅಗತ್ಯವಿದೆ . ವಿವಿಧ ರಾಜ್ಯಗಳಲ್ಲಿನ ಜಿಎಸ್‌ಡಿಪಿ ( Gross State Domestic Product – ಒಟ್ಟೂ ರಾಜ್ಯ ದೇಶೀಯ ಉತ್ಪತ್ತಿ ) ಬೆಳವಣಿಗೆ ದರಗಳಲ್ಲಿ ಅಪಾರ ವ್ಯತ್ಯಾಸವಿದೆ . ಭೂಮಾರುಕಟ್ಟೆ ಮತ್ತು ಭೂಕಾನೂನುಗಳಲ್ಲಿ ವ್ಯತ್ಯಾಸವಿದೆ . ದಕ್ಷಿಣದಲ್ಲಿ ಭೌಗೋಳಿಕ ಪರಿವರ್ತನೆಯ ಸ್ವರೂಪವೇ ಬೇರೆ ರೀತಿಯದ್ದಾಗಿದೆ . ಆದ್ದರಿಂದ , ಕಾರ್ಮಿಕ ಮಾರುಕಟ್ಟೆ ಮತ್ತು ಅವುಗಳ ಕ್ರಿಯೆಗಳೂ ಕೂಡ ವ್ಯತ್ಯಾಸವಾಗುತ್ತವೆ . ” ಎಂದರು .

ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕ್ ಸಾದರಪಡಿಸುವ ಇಂಡಿಯಾ ಆರ್ಥಿಕ ಸಮಾವೇಶ 2019 – ಸೌತ್ ಚಾಪ್ಟರ್ ಭಾರತದ ಮುಂಚೂಣಿ ಇಂಗ್ಲಿಷ್ ಬಿಜಿನೆಸ್‌ ಸುದ್ದಿ ವಾಹಿನಿಯಾದ ಇಟಿ ನೌ ( ET NOW ) ನಲ್ಲಿ ಧಾರಾವಣಿ ಸರಣಿಗಳಲ್ಲಿ ಪ್ರಸಾರವಾಗಲಿದೆ .

City Today News

(cityyoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.