ಶ್ರೀ ಡಿ . ಎಸ್ . ವೀರಯ್ಯನವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನ ನೀಡಿ ದಲಿತರ ಕಲ್ಯಾಣಕ್ಕೆ ಶ್ರಮಿಸುವ ಅವಕಾಶ ನೀಡಬೇಕೆಂದು ಆಗ್ರಹಿಸುತ್ತೇವೆ

ದಿನಾಂಕ : 04 – 09 – 2019 , ಶ್ರೀ ಡಿ . ಎಸ್ , ವೀರಯ್ಯರವರು ಕಳೆದ ನಾಲ್ಕು ದಶಕಗಳಿಂದ ರಾಷ್ಟ್ರದ ಮತ್ತು ರಾಜ್ಯಮಟ್ಟದ ನೂರಾರು ದಲಿತ ಸಂಘಟನೆಗಳನ್ನು ಸ್ಥಾಪಿಸಿ , ಪ್ರತಿಭಟನೆ ಮುಷ್ಕರ , ಸರ್ಕಾರದೊಂದಿಗೆ ಚರ್ಚೆ ಹಾಗೂ ಹೋರಾಟಗಳ ಮುಖಾಂತರ ದಲಿತ ಸಮುದಾಯದ ಮೂಲಭೂತ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಕೊಳ್ಳುತ್ತಾ ಬಂದಿದ್ದಾರೆ , ಶ್ರೀ ಎಸ್ . ವೀರಯ್ಯರವರು 20 ವರ್ಷಗಳ ಹಿಂದೆ ಭಾರತೀಯ ಜನತಾ ಪಕ್ಷವನ್ನು ಸೇರಿ ತಮ್ಮನ್ನು ಹಾಗೂ ಕೆಳಕಂಡ ದಲಿತ ಸಂಘಟನೆಗಳನ್ನು ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಈ ವರ್ಗದ ಬೆಂಬಲವನ್ನು ಬಿಜೆಪಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ . ಬಿಜೆಪಿಯು 2006ರ ವಿಧಾನ ಸಭಾ ಚುಣಾವಣೆಯಲ್ಲಿ 80 ಸ್ಥಾನ ಗಳಿಸಿತು , 2008 ರಲ್ಲಿ 110 ಸ್ಥಾನಗಳು ಹಾಗೂ 2018 ರಲ್ಲಿ ಗಳಿಸಿದ 105 ಸ್ಥಾನಗಳನ್ನು ಗೆಲ್ಲಲು ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗಗಳ ಸಿಂಹ ಪಾಲು ಮತಗಳು ಕಾರಣವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ . ಕರ್ನಾಟಕ ಬಹುಜನ ಸಂಘರ್ಷ ಸಮಿತಿಯು ಸ್ಲಂ ವಾಸಿಗಳ , ಬಡವರ , ದುರ್ಬಲರ ಜಾತ್ಯಾತೀತ ಸಂಘಟನೆಯಾಗಿದ್ದು ರಾಜ್ಯದ ನೂರಾರು ಸ್ಲಂಗಳ ಮನಶ್ಲೇಷನಕ್ಕೆ ಶ್ರಮಿಸಿದೆ . ರಾಜ್ಯದ ಹಲವೆಡೆ ಹಕ್ಕಿ – ಪಕ್ಕಿ ಜನಾಂಗ ಹಾಗೂ ಕೋಲೇ ಬಸವ ಜನಾಂಗಗಳಿಗೆ ಸರ್ಕಾರದ ವತಿಯಿಂದ ಪುನರ್ವಸತಿ ಕಲ್ಪಿಸಿಕೊಡಲಾಗಿದೆ . ಶ್ರೀ ಡಿ . ಎಸ್ ವೀರಯ್ಯರವರು ಭಾರತೀಯ ಜನತಾ ಪಾರ್ಟಿಯಲ್ಲಿ ನಾಲ್ಕು ಬಾರಿ ಎಸ್ಸಿ ಮೋರ್ಚಾದ ಅಧ್ಯಕ್ಷರಾಗಿ , ಒಮ್ಮೆ ಮಾತೃ ಸಂಸ್ಥೆಯ ಕಾರ್ಯದರ್ಶಿಯಾಗಿ , ರಾಷ್ಟ್ರೀಯ ಎಸ್ಸಿ ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾಗಿ , ಪಕ್ಷದ ವಕಾರರಾಗಿ ಕಾರ್ಯ ನಿರ್ವಹಿಸಿರುತ್ತಾರೆ , ರಾಜ್ಯದಲ್ಲಿ ನಡೆದ 2008ರ ಚುನಾವಣೆಯಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ , ಈ ಪ್ರಣಾಳಿಕೆಯಲ್ಲಿ ಶ್ರೀ ಡಿ . ಎಸ್ , ವೀರಯ್ಯರವರು ಅಳವಡಿಸಿದ ದಲಿತಪರವಾದ ಹಲವು ಕ್ರಾಂತಿಕಾರಿ ಕಾರ್ಯಕ್ರಮದಲ್ಲಿ ಮೂಲಭೂತ ಸೌಕರ್ಯ ಕಾರ್ಯಕ್ರಮಗಳನ್ನು ಅಳವಡಿಸಿ ಅದಲ್ಲವೂ ಸನ್ಮಾನ್ಯ ಶ್ರೀ ಬಿ . ಎಸ್ . ಯಡಿಯೂರಪ್ಪರವರ ಕಾಲದಲ್ಲಿ ಜಾರಿಗೆ ಬಂದು ಇಂದಿನ ಕಾಂಗ್ರೆಸ್ ಸರ್ಕಾರವು ತಂದ ಅನೇಕ ಕಾರ್ಯಕ್ರಮಗಳನ್ನು ಮೀರಿ ದಾಖಲೆಯನ್ನು ಮಾಡಿರುವುದರಿಂದ ಈ ವರ್ಗದ ಮತಗಳು ಬಿಜೆಪಿ ಕಡೆ ಹೆಚ್ಚು ಪ್ರಮಾಣದಲ್ಲಿ ಲಭಿಸಿದೆ . ಡಿ . ಎಸ್ . ವೀರಯ್ಯರವರ ದೂರ ದೃಷ್ಟಿ ಈ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕಾರಣವಾಗಿದೆ .

ಈ ಎಲ್ಲಾ ಅಂಶಗಳನ್ನು ಬಿಜೆಪಿ ಕೂಲಂಕುಷವಾಗಿ ಪರಿಗಣಿಸಿ ಪರಿಶಿಷ್ಟರ ಬಲಗೈ – ಎಡಗೈ ಸಮುದಾಯದ ನಾಯಕರುಗಳಿಗೆ ಹೆಚ್ಚು ಸಂಖ್ಯೆಯಲ್ಲಿ ಮುಂದಿನ ಮಂತ್ರಿಮಂಡಲದಲ್ಲಿ ವಿಸ್ತರಣೆಯಲ್ಲಿ ಸ್ಥಾನ ನೀಡಬೇಕೆಂದು ಆಗ್ರಹಿಸುತ್ತೇವೆ . ಈ ನಿಟ್ಟಿನಲ್ಲಿ ಬಲಗೈ ಸಮುದಾಯದ ನಾಯಕರಾದ ಹಾಗೂ ಬಿಜೆಪಿ ಹಿರಿಯ ನಾಯಕ , ದಲಿತ ಮುಖಂಡರಾದ ಶ್ರೀ ಡಿ . ಎಸ್ . ವೀರಯ್ಯನವರಿಗೆ ಈ ಹಿಂದೆ ಕೂಡ ಮಂತ್ರಿ ಮಾಡದಿರುವುದನ್ನು ಈ ವರ್ಗ ಗಂಭೀರವಾಗಿ ಪರಿಗಣಿಸಿದೆ . ಕಳೆದ ಬಾರಿ ಹಾಗೂ ಈ ಬಾರಿಯೂ ಸಂಸದ್ದಿಗೆ ಸ್ಪರ್ದಿಸಲು ಅವಕಾಶ ನೀಡದಿರುವುದು ಪಕ್ಷದಲ್ಲಿ ಹಿರಿಯ ಮುಖಂಡರಾದ ಶ್ರೀ ಡಿ . ಎಸ್ . ವೀರಯ್ಯನವರ ನಾಯಕತ್ವಕ್ಕೆ ದಕ್ಕೆಯಾಗಿರುತ್ತದೆ . ಪಕ್ಷನಿಷ್ಠೆ ಮೆರೆದ ಶ್ರೀ ಡಿ . ಎಸ್ . ವೀರಯ್ಯನವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನ ನೀಡಿ ದಲಿತರ ಕಲ್ಯಾಣಕ್ಕೆ ಶ್ರಮಿಸುವ ಅವಕಾಶ ನೀಡಬೇಕೆಂದು ಆಗ್ರಹಿಸುತ್ತೇವೆ . ತಪ್ಪಿದಲ್ಲಿ ಎಲ್ಲಾ ದಲಿತ ಸಂಘಟನೆಗಳೂ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ .

-ಕರ್ನಾಟಕ ಬಹುಜನ ಸಂಘರ್ಷ ಸಮಿತಿ ( ರಿ . ) ಬೆಂಗಳೂರು

City Today News

(cityyoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.