“ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ” ಹಿಂದುಳಿದ ಗಾಣಿಗ ಜನಾಂಗದ ಅಭಿವೃದ್ಧಿಗೆ ಅನುಕೂಲವಾಗುವಂತಹ ವ್ಯವಸ್ಥೆ ಮಾಡಲು ಮಾನ್ಯ ಮುಖ್ಯಮಂತ್ರಿಯವರಲ್ಲಿ ವಿನಂತಿ – ಕರ್ನಾಟಕ ರಾಜ್ಯ ಗಾಣಿಗ ಹೋರಾಟ ಸಮಿತಿ.

ಕರ್ನಾಟಕ ರಾಜ್ಯ , ಗಾಣಿಗ ಹೋರಾಟ ಸಮಿತಿ ದಿನಾಂಕ : 09 – 09 – 2019 ರಂದು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ . ಬಿ . ಎಸ್ . ಯಡಿಯೂರಪ್ಪ ಅವರಿಗೆ “ ಗಾಣಿಗ ಅಭಿವೃದ್ಧಿ ನಿಗಮ ” ಸ್ಥಾಪಿಸಲು ಮನವಿ ಪತ್ರ ಸಲ್ಲಿಸುವ ಮುನ್ನಾದಿನವಾಗಿ ಶ್ರೀ. ಗುರಣ್ಣ ಜಿ. ಗೋಡಿ-ರಾಜ್ಯಾಧ್ಯಕ್ಷರು ಈ ಪತ್ರಿಕಾ ಗೋಷ್ಠಿ ಕರೆಯಲಾಗಿ, ಗೋಷ್ಠಿ ಉದ್ದೇಶ ಕೆಲಕಂಡಂದಿರುತ್ತದೆ..

1 . ಗಾಣಿಗ ಜನಾಂಗ ವಿಶ್ವದ ಎಲ್ಲಾ ಹಳ್ಳಿ ಪಟ್ಟಣಗಳಲ್ಲಿ ವಾಸವಾಗಿದ್ದು , ಅವರು ಬಹಳ ಹಿಂದುಳಿದವರಾಗಿದ್ದಾರೆ .

2 . ಕರ್ನಾಟಕದ 31 ಜಿಲ್ಲೆಗಳಲ್ಲಿ ಅಂದಾಜು 65 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯಾ ಹೊಂದಿದ ಗಾಣಿಗ ಸಮುದಾಯ ಇದಾಗಿದೆ .

3 . ಸರ್ಕಾರದ 2ಎ ವರ್ಗದಲ್ಲಿ199 ಜಾತಿಗಳು ಒಲಗೊಂಡು ಅದರಲ್ಲಿ ಗಾಣಿಗ ಸಮುದಾಯಕ್ಕೆ ಸಮರ್ಪಕವಾಗಿ ನ್ಯಾಯ-ಸೌಲಭ್ಯ ದೊರೆಯುತ್ತಿಲ್ಲ .

4 . ಸ್ವಾತಂತ್ರ ಬಂದ ಮೇಲೆ ಅಂದಿನ ಸರ್ಕಾರ 1950ರಲ್ಲಿ ದೊಡ್ಡ ಉದ್ದಿಮೆ ಪಾಲಿಸಿ ತಂದಾಗ ಈ ಜನಾಂಗ ಮಾಡಿಕೊಂಡಿದ್ದ ಗಾಣಿಗ ಕುಲ ಕಸುಬು ಬಾಗಿಲು ಮುಚ್ಚಿದವು .

5 . 1990ರಲ್ಲಿ ಕೇಂದ್ರ ಸರ್ಕಾರ ತಂದ ಜಾಗತೀಕರಣ ನೀತಿಯಿಂದ ವಿದೇಶ ಹೂಡಿಕೆದಾರರು ಪಾಲ್ಗೊಂಡಾದನಂತರ ಇದ್ದ ಬಿದ್ದ ಮೀಲ್‌ಗಳು ಬಾಗಿಲು ಮುಚ್ಚಿದವು .

6 . ಅಂದಿನಿಂದ ಇಂದಿನ ವರೆಗೆ ಈ ಸಮುದಾಯಕ್ಕೆ ಸುಧಾರಣೆಯಾಗುವಂತ ಯಾವುದೇ ಯೋಜನೆಗಳು ಸರ್ಕಾರದಿಂದ ಗಾಣಿಗ ಸಮುದಾಯಕ್ಕೆ ದೊರೆಯಲಿಲ್ಲ .

7 . ಈ ಜನಾಂಗ ಹಳ್ಳಿಗಳಲ್ಲಿ ಬಹಳಷ್ಟು ಕಷ್ಟ ಪಟ್ಟು ಜೀವನ ಸಾಗಿಸುತ್ತಿದ್ದು ರಾಜಕೀಯವಾಗಿ , ಆರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಬಹಳ ಹಿಂದುಳಿದ ಜನಾಂಗವಾಗಿದೆ .

ಈ ಎಲ್ಲಾ ವಿಷಯಗಳನ್ನು ಪರಿಗಣಿಸಿ ಹಿಂದುಳಿದ ಗಾಣಿಗ ಜನಾಂಗದ ಆರ್ಥಿಕ ಸ್ಥಿತಿಗತಿ ಸುಧಾರಿಸಲು ಅವರು ಸಮಾಜದ ಮೂಲ ಹರಿವಿನಲ್ಲಿ ಬರಲು ಘನ ಸರ್ಕಾರ ಈ ಸಮುದಾಯಕ್ಕೆ “ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ” ಹಿಂದುಳಿದ ಗಾಣಿಗ ಜನಾಂಗದ ಅಭಿವೃದ್ಧಿಗೆ ಅನುಕೂಲವಾಗುವಂತಹ ವ್ಯವಸ್ಥೆ ಮಾಡಲು ಮಾನ್ಯ ಮುಖ್ಯಮಂತ್ರಿಯವರನ್ನು ವಿನಂತಿಸಲಾಯಿತು.

ಶ್ರೀ. ಬಸವರಾಜ ರಾಮಪ್ಪ ಗಂಗನಹಳ್ಳಿ-ಗೌರವಾಧ್ಯಕ್ಷರು

ಶ್ರೀ. ಗುರಣ್ಣ ಜಿ. ಗೋಡಿ
-ರಾಜ್ಯಾಧ್ಯಕ್ಷರು

ಶ್ರೀ . ವೇಣುಗೋಪಾಲ್ ಪರಿಸರ
-ರಾಜ್ಯ ಕಾರ್ಯಾಧ್ಯಕ್ಷರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.