ಈ ವರ್ಷದ PCL ಕ್ರೀಡಾ ಸಮಾವೇಶದಲ್ಲಿ ದುಬೈ , ಗೋವಾ , ಉದ್ಯಪುರ್ ಮತ್ತು ಬೆಳಗಾಂ ಪುಟ್ ಬಾಲ್ ತಂಡಗಳು ಭಾವಹಿಸುತ್ತಿವೆ . ! ! !

ಬೆಂಗಳೂರು , ಸೆಪ್ಟೆಂಬರ್ – 2019 : ಒಂಭತ್ತು ವರ್ಷಗಳೇ ಕಳೆದು ಹೋದವು , ನಮ್ಮ ಪ್ರಯತ್ನ ಮತ್ತು ನಂಬಿಕೆಗಳನ್ನು ಬಲವಾಗಿ ಉಳಿಸಿದ ಧನಾತ್ಮಕ ಪರಿವರ್ತನೆಯನ್ನು ಈ ಸಂದರ್ಭದಲ್ಲಿ ನಿಮ್ಮ ಜೊತೆ ಹಂಚಿಕೊಳ್ಳಲು ಹೆಮ್ಮೆ ಎನಿಸುತ್ತದೆ . ನಿಜವಾಗಿಯೂ ಕ್ರೀಡೆಯು ಬರಿಯ ಒಂದು ವಿಶೇಷ – ಪಾಠ ಕ್ರಮ ಮಾತ್ರ ಅಲ್ಲ .

* ನಮ್ಮ ಪರಿಶ್ರಮ ಬಾಲಕಿಯರ ಫುಟ್ ಬಾಲ್ ಕ್ಲಬ್ ನಿಂದ 6 ವಿದ್ಯಾರ್ಥಿನಿಯರು ರಾಷ್ಟ್ರೀಯ ಬಾಲಕಿಯರ ತಂಡಕ್ಕೆ ಆಯ್ಕೆಯಾಗಿದ್ದಾರೆ . ಅದರಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿ ಐಶ್ವರ್ಯಳೂ ಸೇರಿದ್ದಾಳೆ ಎಂಬುದು ಸಂತೋಷದ ವಿಷಯ .

* ಬಾಲಕರ ಫುಟ್ ಬಾಲ್ ತಂಡವನ್ನು ( ಈಗ ಇದೊಂದು ವಿಭಾಗೀಯ ಕ್ಲಬ್ ) ಬಿಡುಗಡೆ ಮಾಡಿದಂತೆ ಕಳೆದ ವರ್ಷ ಬಾಲಕಿಯರ ಫುಟ್ ಬಾಲ್ ಕ್ಲಬ್ ಬಿಡುಗಡೆ ಮಾಡಲಾಯಿತು . ಬೆಂಗಳೂರು ನಗರದ ವಿವಿಧ ಶಾಲೆಯ ಬಾಲಕಿಯರು ಈ ಕ್ಲಬ್ ಸದಸ್ಯರಾಗಲು ಉತ್ಸಾಹಿತರಾಗಿದ್ದಾರೆ ಹಾಗೆಯೇ ಅನೇಕರು ಆಯ್ಕೆಯಾಗಿದ್ದಾರೆ.

* ನಮ್ಮ ಅನೇಕ ಹಳೆಯ ವಿದ್ಯಾರ್ಥಿಗಳು ಕ್ರೀಡಾ ನಿರ್ವಹಣೆ ವಿಷಯವನ್ನು ಪಡೆದು ಕಾಲೇಜಿನಲ್ಲಿ ಓದುತ್ತಿದ್ದು ಇನ್ನೂ ಕೆಲವರು ಫುಟ್ ಬಾಲ್ ತರಬೇತುದಾರಾಗಿ ನಗರದ ಹಲವೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ .

* ಕೆಲವು ಹಳೆಯ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ‘ ರಾಪ್ ಸ್ಪೋರ್ಟ್ಸ್ ‘ ಎಂಬ ಕ್ರೀಡಾ ನಿರ್ವಹಣಾ ಕಂಪನಿಯನ್ನು ತೆರೆದಿದ್ದಾರೆ . ಈ ತಂಡವು ಈಗಾಗಲೇ 2019 ಜುಲೈ ತಿಂಗಳಿನಲ್ಲಿ ಕಾರ್ಪೊರೇಟ್ ಪುಟ್ ಬಾಲ್ ಟೂರ್ನಮೆಂಟ್ ನಡೆಸಿದೆ . ಇದರಲ್ಲಿ 24 ಕಾರ್ಪೊರೇಟ್ ತಂಡಗಳು ಭಾಗವಹಿಸಿದ್ದವು .

– ಈ ವರ್ಷದ ಪರಿಕ್ರಮ ಚಾಂಪಿಯನ್ ಲೀಗ್ ನಲ್ಲಿ ಏನೇನು ನಿರೀಕ್ಷಿಸಬಹುದು .

ಈ ವರ್ಷದ ‘ ಸಮಾನತೆಯ ಕಪ್ ನಲ್ಲಿ ಒಟ್ಟು 16 ತಂಡಗಳು ಹೋರಾಡಲು ಸಜ್ಜಾಗಿವೆ . ಇದರಲ್ಲಿ ಹಲವು ಸರ್ಕಾರಿ ಶಾಲೆಗಳು , 3 ಹೊರ ರಾಜ್ಯದ ತಂಡಗಳು ಮತ್ತು ದುಬೈ ನಿಂದ ಜೆಮ್ಸ್ ತಂಡಗಳು ಸೇರಿವೆ .

ಈ ವರ್ಷ ನಮ್ಮ ನಾಯಕತ್ವ ತರಬೇತಿ ಮತ್ತು ವಿನಿಮಯ ಕಾರ್ಯಕ್ರಮದ ಒಂದು ಭಾಗವಾಗಿ ‘ ವರ್ಲ್ಡ್ ವೈಡ್ ಫೈಟ್ ಸರ್ವೀಸಸ್ ‘ ( WFS ) ತಂಡವೂ ಕೂಡ ತನ್ನ ನೆರವನ್ನು ನೀಡಿದೆ . ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುವ ಪರಿಕ್ರಮ ಚಾಂಪಿಯನ್ ಲೀಗ್ ಗೆ ನಾವು ನೆರವಾಗುತ್ತಿರುವುದು ಬಹಳ ಹೆಮ್ಮೆಯ ವಿಷಯವೆನಿಸುತ್ತದೆ . ಅತ್ಯಂತ ಬಡ ಹಾಗೂ ತುಳಿತಕ್ಕೊಳಗಾದ ವರ್ಗದ ಮಕ್ಕಳ ವಿದ್ಯಾಭ್ಯಾಸ ಮತ್ತು ಅಭಿವೃದ್ದಿಯ ಪರವಾದ ಪರಿಕ್ರಮ ಫೌಂಡೆಶನ್ ಉದ್ದೇಶಗಳನ್ನು ಗೌರವಿಸುತ್ತೇವೆ . ಮಕ್ಕಳ ಭವಿಷ್ಯದ ಸ್ಫೂರ್ತಿದಾಯಕ ಅಭಿಲಾಷೆಗಳಿಗೆ ಬದ್ಧವಾಗಿರುವ ಪರಿಕ್ರಮವನ್ನು ನಾವು ಶ್ಲಾಘಿಸುತ್ತೇವೆ . ಇದು ನಮ್ಮ ಸಂಘಟಿತ ಮೌಲ್ಯಗಳಿಗೆ ಸರಿಹೊಂದುತ್ತದೆ . ಆದ್ದರಿಂದ ನಮ್ಮ W F S ನ ಎಲ್ಲಾ ಪ್ರಾರಂಭಿಕ ಅಂಶಗಳು ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಜಾಗತಿಕ ‘ ಬೂಸ್ಟ್ ‘ ಪ್ರತಿಭಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೂಲ ಅಂಶಗಳಾಗಿ ಪರಿಗಣಿಸಲಾಗುತ್ತದೆ . ಈ ವಿಶ್ವ ದರ್ಜೆಯ ಪುಟ್ – ಬಾಲ್ ಟೂರ್ನಮೆಂಟೆಗೆ ನೆರವಾಗುವುದು ನಮಗೆ ಒಂದು ಹೊಸ ಮತ್ತು ರೋಮಾಂಚಕ ಸವಾಲಾಗಿದೆ . ನಮ್ಮ ಸಮಯ ಮತ್ತು ಬಂಡವಾಳವು ಸ್ಪರ್ಧಿಗಳಿಗೆ ಒಂದು ದೊಡ್ಡ ಮೊತ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ‘ ಎಂದು W F S ನ ಮುಖ್ಯ ಕಾರ್ಯ ನಿರ್ವಾಹಕ ಶ್ರೀ.ಕ್ರೇಗ್ ಸ್ಮಿತ್ ತಿಳಿಸುತ್ತಾರೆ .

ಒಂಭತ್ತನೆಯ ವರ್ಷದ 16 ವರ್ಷದೊಳಗಿನ ಬಾಲಕರ ಪರಿಕ್ರಮ ಚಾಂಪಿಯನ್ ಲೀಗ್ ಒಂದು ಉತ್ತಮ ಮತ್ತು ದೊಡ್ಡ ಮಟ್ಟದ ಪಂದ್ಯವಾಗಲಿದೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ .

• ತರಬೇತುದಾರರ ಪ್ರತಿಜ್ಞೆ : ಎಲ್ಲಾ ತರಬೇತುದಾರರೂ ಶಾಂತಿಯುತ ಆಟಕ್ಕಾಗಿ ಪ್ರತಿಜ್ಞೆ ಮಾಡುವುದು ,

• ಒಂದು ವಿಶೇಷ ಪ್ರದರ್ಶನ ಮಿಶ್ರ ( ಬಾಲಕಿಯರು ಮತ್ತು ಬಾಲಕರು ) ಪಂದ್ಯ

• ವಿದ್ಯಾರ್ಥಿಗಳ ವಯಸ್ಸನ್ನು ನಿಖರವಾಗಿ ತಿಳಿಯಲು ಬೋನ್ ಡೆನ್ಸಿಟಿ ಟೆಸ್ಟ್ ಮಾಡಲಾಗುವುದು .

• ಸ್ಕೋರ್ ಪಟ್ಟಿ ಹೊಂದಿದ ವೀಡಿಯೋಗಳನ್ನು ಒಳಗೊಂಡ ದೊಡ್ಡ LED ಪರದೆಯನ್ನು ಅಳವಡಿಸಲಾಗಿದೆ . ಯುವ ಆಟಗಾರರು ಹೆಮ್ಮೆಯಿಂದ ಒಳ ಬರುವುದು ಮತ್ತು ಹೊರಹೋಗುವುದು ಹಾಗೂ ಪ್ರೇಕ್ಷಕರು ಸಂಭ್ರಮಾಚರಣೆಯನ್ನು ನೋಡುವುದು .

• ಅತ್ಯುತ್ತಮ ಸಾಧನೆ ಮಾಡಿದ ಕೌಶಲ್ಯವುಳ್ಳ ಆಟಗಾರರಿಗೆ ಬಹುಮಾನ ನೀಡಲಾಗುವುದು .

• ಫೈನಲ್ ಪಂದ್ಯಕ್ಕೆ ಮುಂಚೆ ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿದೆ . ಎಲ್ಲಾ 16 ತಂಡಗಳಿಂದ ಉತ್ತಮ ಆಟಗಾರರನ್ನು ಆರಿಸಿ ‘ ಪರಿಕ್ರಮ ಆಲ್ ಸ್ಟಾರ್ ‘ ತಂಡವನ್ನು ರಚಿಸಿ CEO ( ಬೆಂಗಳೂರಿನ ಮುಖ್ಯ ಕಂಪನಿಗಳ CEO ) – ಬೆಂಗಳೂರು ತಂಡದೊಂದಿಗೆ 20 ನಿಮಿಷದ ಆಟವನ್ನು ಆಡಿಸಲಾಗುವುದು .

• ಪರಿಕ್ರಮ ಚಾಂಪಿಯನ್ ಲೀಗ್ – 2019 ರಲ್ಲಿ , ಆಟದ ಮಟ್ಟವನ್ನು ಉತ್ತಮಪಡಿಸುವ ಉದ್ದೇಶದಿಂದ ಲೀಗ್ ಪಂದ್ಯಗಳನ್ನು 20 – 20 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ . ಆದರೆ , ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳನ್ನು 30 – 30 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ . ಲೀಗ್ ಹಂತದ ನಂತರ ಟಾಪ್ 8 ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪುತ್ತವೆ .

ಈ ಪರಿಕ್ರಮ ಚಾಂಪಿಯನ್ ಲೀಗ್ ಪಂದ್ಯವು WFS ಮತ್ತು ಪಡುಕೋಣೆ – ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸೆಲೆನ್ಸ್ ಇವರ ಸಹಕಾರ ಮತ್ತು ನೆರವಿನಿಂದ ಸಾಧ್ಯವಾಗಿರುವುದರಿಂದ ಅವರಿಗೆ ತುಂಬಾ ಧನ್ಯವಾದಗಳು , ಐಡೆಂಟಿಟಿಯವರು ಎಲ್ಲಾ ಅಧಿಕಾರಿಗಳಿಗೆ ಟಿ – ಶರ್ಟ್ , ಮಣಿಪಾಲ್ ಆಸ್ಪತ್ರೆಯವರು ವೈದ್ಯಕೀಯ ನೆರವನ್ನು ನೀಡಿ ಎಲ್ಲಾ ಐದೂ ದಿನಗಳೂ ತುರ್ತುಪರಿಸ್ಥಿತಿಯನ್ನು ನಿಭಾಯಿಸಲು ಒಬ್ಬ ವೈದ್ಯ ಮತ್ತು ಓರ್ವ ನರ್ಸ್ ಉಪಸ್ಥಿತರಿರುವಂತೆ ನೋಡಿಕೊಳ್ಳುತ್ತಾರೆ .

“ ನಮಗೆ ನಿಜವಾಗಿಯೂ 9 ನೆಯ PCL ಬಗ್ಗೆ ಸಂತೋಷವಿದೆ , ಹೆಮ್ಮೆಯಿದೆ . ಪ್ರತಿವರ್ಷವೂ ನಾವು ಬೆಳೆಯುತ್ತಿದ್ದೇವೆ , ವಿಕಸಿಸುತ್ತಿದ್ದೇವೆ . PCL ನ್ನು ನಿರಂತರವಾಗಿ ಒಂದು ಅತ್ಯುತ್ತಮ ಸ್ಥಿತಿಯ ಕಲಾತ್ಮಕ ಫುಟ್ ಬಾಲ್ ಟೂರ್ನಮೆಂಟ್ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ . ಈ ವೇದಿಕೆಯ ಮೂಲಕ ನಾವು ಈ ಪಂದ್ಯದ ಉತ್ಸಾಹ ಹಾಗೂ ಆಟದ ಪ್ರೇಮವನ್ನು ಮಾತ್ರ ಬೆಳೆಸಲು ಪ್ರಯತ್ನಿಸುತ್ತಿಲ್ಲ ಜೊತೆಗೆ ಕ್ರೀಡೆಯ ಉಪಯೋಗ ಮತ್ತು ಪ್ರಾಮುಖ್ಯತೆಯ ಬೆಳಕನ್ನು ಎಲ್ಲ ಕಡೆಯೂ ಹರಡುವಂತೆ ಮಾಡುವುದೂ ಆಗಿದೆ ” ಎನ್ನುತ್ತಾರೆ ಪರಿಕ್ರಮ ಹ್ಯುಮಾನಿಟಿ ಫೌಂಡೆಶನ್ CEO ಶ್ರೀಮತಿ ಶುಕ್ಲಾ ಬೋಸ್ .

PLC ಎಂದರೇನು ?

ಅತ್ಯುತ್ತಮ ಫುಟ್ ಬಾಲ್ ತಂಡವನ್ನು ಹೊಂದಿದ್ದರೂ , ಕೆಲವು ಪ್ರತಿಷ್ಟಿತ ಮತ್ತು ಅಂತರ್ ರಾಷ್ಟ್ರೀಯ ಶಾಲೆಗಳು ಆಗಾಗ್ಗೆ ನಡೆಸುವ ಅಂತರ್ – ಶಾಲಾ ಮಟ್ಟದ ಫುಟ್ ಬಾಲ್ ಲೀಗ್ ಪಂದ್ಯಗಳಿಗೆ ಪರಿಕ್ರಮ ಶಾಲೆಯ ತಂಡವನ್ನು ಆಹ್ವಾನಿಸಲು ಹಿಂಜರಿಯುತ್ತಿದ್ದವು . ಅಂದಿನಿಂದ ಈ ವರ್ಗೀಕೃತ ಅಸಮಾನತೆಯ ಪದ್ದತಿಯನ್ನು ತೊಡೆದು ಹಾಕಲು ಮತ್ತು ಒಂದು ಹೊಸ ಮಟ್ಟದ ಕ್ಷೇತ್ರವನ್ನು ಸೃಷ್ಟಿಸಲು ಪ್ರಯತ್ನವನ್ನು ನಡೆಸಲಾಯಿತು . ಅದರಂತೆ ನಮ್ಮದೇ ಆದ ಫುಟ್ ಬಾಲ್ ಟೂರ್ನಮೆಂಟನ್ನು ಆಯೋಜಿಸಿ ಪರಿಕ್ರಮ ಚಾಂಪಿಯನ್ ಲೀಗ್ ಪ್ರಾರಂಭಿಸಲಾಯಿತು . ಈ ಘಟನೆಯು ನಿಜವಾಗಿಯೂ ಶಾಲಾ ಮಟ್ಟದ ಸ್ಪರ್ಧೆಗಳಿಗೆ ಒಂದು ಗೋಡೆಯಾಗಿ ಪರಿಣಮಿಸಿತು . 2011 ರಿಂದ ಪ್ರಾರಂಭವಾದ ಈ PCL ಇಂದು ಅತ್ಯಂತ ಪ್ರತಿಷ್ಟಿತ . 2015 ರಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿದ ಮನವಿಯನ್ನು ನೀಡಲಾಯಿತು . ಅದರಲ್ಲಿ ಶಾಲೆಗಳಲ್ಲಿ ಕ್ರೀಡಾ ಸಂಧಿಗ್ಧತೆಯ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಲಾಯಿತು .

ಪರಿಕ್ರಮ ಫುಟ್ ಬಾಲ್ ಕ್ಲಬ್ ಉದಯ

ಪರಿಕ್ರಮವು ಹಳೆಯ ವಿದ್ಯಾರ್ಥಿಗಳನ್ನೊಳಗೊಂಡ ಫುಟ್ ಬಾಲ್ ಕ್ಲಬ್ ಪ್ರಾರಂಭಿಸಿತು . ಇದು ಪುಟ್ ಬಾಲ್ ಬಗ್ಗೆ ನಮ್ಮ ಮಕ್ಕಳು ಇಟ್ಟಿರುವ ಪ್ರೀತಿ ಮತ್ತು ಗೌರವವನ್ನು ತೋರಿಸುತ್ತದೆ . ಪರಿಕ್ರಮವು ಪುಟ್ ಬಾಲ್ ನಲ್ಲಿ ಪ್ರತಿಭೆಯಿರುವ ಮಕ್ಕಳಿಗೆ , ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂಧಿಗಳಿಗೆ ಒಂದು ವೇದಿಕೆಯನ್ನು ಒದಗಿಸಿತು . ಹಾಗಾಗಿ ಈ ಪುಟ್ ಬಾಲ್ ಕ್ಲಬ್ 2013 ರಲ್ಲಿ ಪ್ರಾರಂಭಾವಾಯಿತು . ಪರಿಕ್ರಮ ಪುಟ್ ಬಾಲ್ ಕ್ಲಬ್ ನ್ನು ಬೆಂಗಳೂರು ವಿಭಾಗೀಯ ತಂಡ ಎಂದು ಪ್ರಾರಂಭವಾಗಿ ಇಂದು ಬೆಂಗಳೂರು A ತಂಡವಾಗಿ ಬೆಳೆದು ನಿಂತಿದೆ ! ಪರಿಕ್ರಮ ಬಾಲಕಿಯರ ಫುಟ್ ಬಾಲ್ ಕ್ಲಬ್

ಪರಿಕ್ರಮ ಬಾಲಕಿಯರ ಫುಟ್ ಬಾಲ್ ಕ್ಲಬ್

ಈ ವರ್ಷದಿಂದ ಪ್ರಾರಂಭವಾಗಿದೆ . ನಮ್ಮ ತಂಡವು ಕರ್ನಾಟಕ ಫುಟ್ ಬಾಲ್ ಲೀಗ್ ನಲ್ಲಿ ಸ್ಪರ್ಧಿಸಿ ಸೆಮಿ ಫೈನಲ್ ಹಂತ ತಲುಪಿತ್ತು , ತಂಡದ ನಾಯಕಿಯು . ಉತ್ತಮ ಮಿಡ್ – ಫೀಲ್ಡರ್ ಅವಾರ್ಡ್ ಗಳಿಸಿದ್ದಾಳೆ .

ಪರಿಕ್ರಮ ಹ್ಯುಮಾನಿಟಿ ಫೌಂಡೆಶನ್ ಬಗ್ಗೆ

2003 ರಲ್ಲಿ ತುಳಿತಕ್ಕೊಳಗಾದ ಕುಟುಂಬದಿಂದ ಬಂದ 165 ಮಕ್ಕಳನ್ನು ಸೇರಿಸಿ , ಬೆಂಗಳೂರಿನ ರಾಜೇಂದ್ರ ನಗರದ ಒಂದು ಸಣ್ಣ ಮನೆಯ ಚಾವಣಿಯ ಮೇಲೆ ಶಾಲೆಯನ್ನು ಪ್ರಾರಂಭಿಸಿ ಹೋರಾಟ ಮಾಡಲಾಯಿತು . ಇಂದು ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ( ಜಯನಗರ , ಕೋರಮಂಗಲ , ನಂದಿನಿ ಲೇ ಔಟ್ ಮತ್ತು ಸಹಕಾರನಗರ ) ಶಾಲೆಗಳನ್ನು ತೆರೆಯಲಾಗಿದ್ದು ಒಂದು ಜೂನಿಯರ್ ಕಾಲೇಜ್ ಕೂಡ ಹೊಂದಿದೆ . ಪರಿಶ್ರಮ ಹ್ಯುಮಾನಿಟಿ ಫೌಂಡೆಶನ್ ಅತ್ಯುತ್ತಮ ಶಿಕ್ಷಣವನ್ನು ( CBSE ) ನೀಡಲು ಕಟ್ಟೆ ಬದ್ದವಾಗಿದೆ . 4 ಅನಾಥಾಶ್ರಮಗಳು ಮತ್ತು 90 ಕೊಳಚೆ ಪ್ರದೇಶಗಳಿಂದ ಸುಮಾರು 1500 ಮಕ್ಕಳಿಗೆ ಆಶಾಭಾವನೆಯನ್ನು ತುಂಬುವ ಮತ್ತು ನೆರವನ್ನು ನೀಡುವ ಕೆಲಸವನ್ನು ಪರಿಕ್ರಮ ಮಾಡುತ್ತಿದೆ . ಮಗುವಿಗೆ 5 ವರ್ಷದಿಂದಲೇ ನೆರವನ್ನು ನೀಡಿ ಅವರು 25 ವರ್ಷದವರಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲುವವರೆಗೂ ಮುಂದುವರಿಸುತ್ತೇವೆ . ಇಡೀ ದೇಶದಲ್ಲೇ ಈ ಶಾಲೆಯು ಸರಾಸರಿ 96 % ಹಾಜರಾತಿಯನ್ನು ಹೊಂದಿ ದಾಖಲೆ ಮಾಡಿರುತ್ತದೆ . ಶಾಲೆಯನ್ನು ಬಿಡುವವರ ಸಂಖ್ಯೆ ಕೇವಲ 1 % ಮಾತ್ರ .

ಹೆಚ್ಚಿನ ವಿವರಗಳಿಗೆ

log on to: WWW . parikrmafoundation . org .

ಏನು : ಪರಿಕ್ರಮ ಚಾಂಪಿಯನ್ ಲೀಗ್ – 9

ಯಾವಾಗ : 12 – 14 ಸೆಪ್ಟೆಂಬರ್ , 2019

ಎಲ್ಲಿ : ಪಡುಕೋಣೆ – ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸೆಲೆನ್ಸ್ , ಯಲಹಂಕ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.