ಜನಾಂಗದ ಅಗ್ರಮಾನ್ಯ ನಾಯಕರಲ್ಲಿ ಒಬ್ಬರಾದ ಶ್ರೀ ಡಿ . ಕೆ . ಶಿವಕುಮಾರ್‌ ರವರನ್ನು ಈ ಕೂಡಲೆ ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ರಾಜ್ಯ ಒಕ್ಕಲಿಗರ ಸಂಘ ಆಗ್ರಹಿಸುತ್ತದೆ

ರಾಜ್ಯ ಒಕ್ಕಲಿಗರ ಸಂಘ ಒಕ್ಕಲಿಗರ ಸಮಾಜದ ಪ್ರಾತಿನಿಧಿಕ ಸಂಸ್ಥೆ . ಇತ್ತೀಚಿನ ದಿನಗಳಲ್ಲಿ ಜನಾಂಗದ ಸರ್ವತೋಮುಖ ಬೆಳವಣಿಗೆಗೆ ಅಡ್ಡಿ ಮಾಡುವಂತಹ , ಜನಾಂಗದ ನಾಯಕರುಗಳನ್ನು ಬಗ್ಗುಬಡಿಯುವಂತಹ , ಸಮಾಜದ ಬೆಳವಣಿಗೆಗೆ ಕಂಟಕ ಪ್ರಾಯವಾಗಿ ಕೆಲವು ಮಹನೀಯರು ಅಡ್ಡಿ ಉಂಟು ಮಾಡುತ್ತಿದ್ದಾರೆ . ಇದು ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಅವ್ಯಾಹತವಾಗಿ ನಡೆಯುತ್ತಿದೆ . ವ್ಯವಸ್ಥೆಯ ದುರ್ಲಾಭ ಪಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನು ಬದ್ದ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ಪಿತೂರಿ , ಒಡೆದು ಆಳುವ ನೀತಿಯಿಂದ ಒಕ್ಕಲಿಗ ಮುಖಂಡರುಗಳನ್ನು ಎಲ್ಲಾ ಪಕ್ಷಗಳಲ್ಲೂ ಬಗ್ಗದ್ದುಪಡಿಯಲು ಪ್ರಯತ್ನಿಸುತ್ತಿದ್ದಾರೆ . ಅದಕ್ಕೆ ಜ್ವಲಂತ ಉದಾಹರಣೆ ಸನ್ಮಾನ್ಯ ಡಿ . ಕೆ . ಶಿವಕುಮಾರ್‌ರವರು . ಆದಾಯ ತೆರಿಗೆ , ಜಾರಿ ನಿರ್ದೇಶನಾಲಯಗಳ ಕಪಿ ಮುಷ್ಟಿಯಲ್ಲಿ ಸಿಲುಕಿಸಿ , ಭಾವಿ ಮುಖ್ಯ ಮಂತ್ರಿಯಾಗಿ ಸಮಾಜದಲ್ಲಿ ಅದ್ಭುತವಾಗಿ ಬೆಳೆಯಬಲ್ಲ ಧೀಮಂತ ನಾಯಕನೊಬ್ಬನನ್ನು ಸೆದೆಬಡಿಯುವ ಹುನ್ನಾರ ಮಾಡಲಾಗುತ್ತಿದೆ . ಶ್ರೀ ಡಿ . ಕೆ . ಶಿವಕುಮಾರ್‌ರವರಿಗಿಂತ ನೂರು ಪಟ್ಟು ಆಪಾಧನೆಗಳಿರುವ ಇತರೆ ಸಮಾಜದ ಮಹನೀಯರುಗಳು ಮಹಾಪುರುಷರ ಸೋಗಿನಲ್ಲಿ ಬೀಗುತ್ತಿದ್ದಾರೆ . ಇದು ಒಕ್ಕಲಿಗರ ಜನಾಂಗದ ನಾಯಕರುಗಳನ್ನು ರಾಜಕೀಯವಾಗಿ ತುಳಿಯುವ ಪಯತ್ನವಲ್ಲದೆ ಮತ್ತೇನು ? ಜನಾಂಗದ ಬಹುಮುಖ ವ್ಯಕ್ತಿತ್ವದ ಧೀಮಂತರುಗಳಿಗೆ ರಾಜಕೀಯವಾಗಿ ಯಾವುದೇ ಸ್ಥಾನ ಮಾನ ಸಿಗದಂತೆ ಮಾಡಿ , ಜನಾಂಗವನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ . ಈ ಧೋರಣೆಯನ್ನು ಸಮಸ್ತಿಯಾಗಿ ಖಂಡಿಸುತ್ತಾ , ಜನಾಂಗದ ಅಗ್ರಮಾನ್ಯ ನಾಯಕರಲ್ಲಿ ಒಬ್ಬರಾದ ಶ್ರೀ ಡಿ . ಕೆ . ಶಿವಕುಮಾರ್‌ರವರನ್ನು ಈ ಕೂಡಲೆ ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ರಾಜ್ಯ ಒಕ್ಕಲಿಗರ ಸಂಘ ಆಗ್ರಹಿಸುತ್ತದೆ . ಇಷ್ಟೇ ಅಲ್ಲದೆ ಸಮಾನ ಮನಸ್ಕರಾದ ನಮ್ಮ ಜನಾಂಗದ ಎಲ್ಲಾ ಸಂಘ – ಸಂಸ್ಥೆಗಳು , ಸಂಘಟನೆಗಳು ಜಿಲ್ಲಾ , ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿರುವ ನಮ್ಮ ಎಲ್ಲಾ ಒಕ್ಕಲಿಗರ ಸಂಘಗಳು ಒಗ್ಗೂಡಿ ,

ಈ ರಾಜಕೀಯ ದಬ್ಬಾಳಿಕೆಯನ್ನು ಖಂಡಿಸುವ ಸಲುವಾಗಿ ದಿನಾಂಕ : 11 – 09 – 2019 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಿಂದ ಬೆಳಿಗ್ಗೆ 11 – 00 ಗಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಿ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿ , ರಾಜ್ಯಪಾಲರವರಿಗೆ ಮನವಿಪತ್ರವನ್ನು ಸಲ್ಲಿಸಲಾಗುವುದು . ಈ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಜನಾಂಗದ ಸಮಸ್ತರೂ ಪಾಲ್ಗೊಂಡು ನಮ್ಮ ಸಮುದಾಯದವರ ರಕ್ಷಣೆಗೆ ನಿಲ್ಲಬೇಕೆಂದು ಕೋರುತ್ತೇವೆ .

ರಾಜ್ಯ ಒಕ್ಕಲಿಗರ ಸಂಘದ ಮಾಜಿ ಪದಾಧಿಕಾರಿಗಳು ನಿರ್ದೇಶಕರುಗಳು ಮತ್ತು ಸಮಾಜದ ಮುಖಂಡರುಗಳು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.