ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ ನೆನಪು – ನಾಟಕೋತ್ಸವ , ರಂಗಸಂವಾದ ಮತ್ತು ಆರು ನಾಟಕಗಳ ವಿಡಿಯೋ ದಾಖಲೀಕರಣದ ಲೋಕಾರ್ಪಣೆ

ಶಿವಮೊಗ್ಗ ರಂಗಾಯಣ ಮತ್ತು ಸಂಸ ಥಿಯೇಟರ್‌ , ಬೆಂಗಳೂರು ಸಂಸ್ಥೆಗಳ ಸಹಯೋಗದಲ್ಲಿ ‘ ರಂಗಾಯಣದ ರಂಗತೇರು ‘ ರಂಗಪಯಣದ ಭಾಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ ನೆನಪು – ನಾಟಕೋತ್ಸವ , ರಂಗಸಂವಾದ ಮತ್ತು ಆರು ನಾಟಕಗಳ ವಿಡಿಯೋ ದಾಖಲೀಕರಣದ ಲೋಕಾರ್ಪಣೆ ಕಾರಕ್ರಮಗಳನ್ನು ದಿನಾಂಕ : 11 / 09 / 2019 ಮತ್ತು 12 / 09 / 2019 ರಂದು ಆಯೋಜಿಸಲಾಗಿದೆ .

ಮೊದಲ ದಿನ ಪ್ರೊ . ಅರವಿಂದ ಮಾಲಗತ್ತಿಯವರ ಆತ್ಮಕಥನ ಆಧಾರಿತ , ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಡಾ . ಎಂ . ಗಣೇಶ ನಿರ್ದೇಶನದ ‘ ಗೌರ್ಮೆಂಟ್ ಬ್ರಾಹ್ಮಣ ‘ ನಾಟಕವ ದಿನಾಂಕ : 11 / 09 / 2019 ರಂದು ಸಂಜೆ 7 . 00 ಗಂಟೆಗೆ ಪ್ರದರ್ಶನಗೊಳ್ಳಲಿದೆ .

ಎರಡನೇ ದಿನ ರಿಪ್ ನಾಟಕದ ಖ್ಯಾತಿಯ ಸವಿತಾರಾಣಿ ನಿರ್ದೇಶನದ ‘ ಟ್ರಾನ್ಸೆಷನ್ ‘ ನಾಟಕವು ದಿನಾಂಕ : 12 / 09 / 2019 ರಂದು ಸಂಜೆ 7 . 00 ಗಂಟೆಗೆ ಪ್ರದರ್ಶನಗೊಳ್ಳಲಿದೆ .

ಈ ಎರಡು ನಾಟಕಗಳಿಗೆ ಉಚಿತ ಪ್ರವೇಶವಿರುತ್ತದೆ .

ಉದ್ಘಾಟನಾ ಸಮಾರಂಭ : – ಈ ನಾಟಕೋತ್ಸವವನ್ನು ಶ್ರೀಮತಿ ವಿಜಯಮ್ಮ , ಚಿಂತಕರು , ಬೆಂಗಳೂರು ಇವರು ಉದ್ಘಾಟಿಸಲಿದ್ದಾರೆ .

ಶಿವಮೊಗ್ಗ ರಂಗಾಯಣದಲ್ಲಿ ಕಳೆದ ಎರಡು ವರ್ಷಗಳಲ್ಲಿ ತಯಾರಾದ ಆರು ನಾಟಕಗಳ ವಿಡಿಯೋ ದಾಖಲೀಕರಣವನ್ನು ಶ್ರೀಮತಿ ಕೆ . ಎಂ . ಜಾನಕಿ , ನಿರ್ದೇಶಕರು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಲೋಕಾರ್ಪಣೆ ಮಾಡಲಿದ್ದಾರೆ .

ಈ ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ರಂಗಸಮಾಜದ ಸದಸ್ಯರಾದ ಎಂ . ಚಂದ್ರಕಾಂತ್ ರವರು ವಹಿಸಲಿದ್ದಾರೆ . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಡಾ . ಎಂ . ಗಣೇಶರವರು ವಹಿಸಲಿದ್ದಾರೆ , ಸಂಸ ಥಿಯೇಟರಿನ ಮುಖ್ಯಸ್ಥರಾದ ಸಂಸ ಸುರೇಶ್ ರವರು ಈ ಕಾಠ್ಯಕ್ರಮದ ನಿರ್ವಹಣೆಯನ್ನು ಮಾಡಲಿದ್ದಾರೆ .

ಸಮಾರೋಪ ದಿನಾಂಕ : 12 / 09 / 2019 ಗುರುವಾರ ಸ್ಥಳ : ರವೀಂದ್ರ ಕಲಾಕ್ಷೇತ್ರ , ಸಮಯ : ಸಂಜೆ 6 . 15 ಸಮಾರೋಪ ನುಡಿ : ಡಾ . ಸಿ . ಎಸ್ . ದ್ವಾರಕನಾಥ್ ಪ್ರಗತಿಪರ ಚಿಂತಕರು, ಮುಖ್ಯ ಅತಿಥಿಗಳು : ಡಾ , ಬಿ . ವಿ . ರಾಜಾರಾಂ ರಂಗಕರ್ಮಿಗಳು, ಅಧ್ಯಕ್ಷತೆ : ಡಾ . ಎಂ . ಗಣೇಶ , ನಿರ್ದೇಶಕರು , ರಂಗಾಯಣ , ಶಿವಮೊಗ್ಗ.

ವಿಚಾರ ಸಂಕಿರಣ: ಮೈಸೂರಿನ ದೊರೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ ನೆನಪಿನಲ್ಲಿ ಈ ನಾಟಕೋತ್ಸವವನ್ನು ಆಯೋಜಿಸುತ್ತಿರುವುದರಿಂದ ಮೊದಲ ದಿನ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ ಕೊಡುಗೆಗಳು ಮತ್ತು ಎರಡನೇ ದಿನ ಮೈಸೂರು ಮಹಾರಾಜರು ಮತ್ತು ರಂಗಭೂಮಿ ಕುರಿತಾಗಿ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ . ಈ ಉಪನ್ಯಾಸ ಕಾರ್ಯಕ್ರಮಗಳು ಪ್ರತಿ ದಿನ ಸಂಜೆ 4 . 00 ಗಂಟೆಯಿಂದ 5 . 30 ರವರೆಗೆ ರವೀಂದ್ರ ಕಲಾಕ್ಷೇತ್ರದ ಲಾಂಜಿನಲ್ಲಿ ನಡೆಯಲಿವೆ . ಇತಿಹಾಸತಜ್ಞರು ಮತ್ತು ರಂಗತಜ್ಞರು ಈ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ತಮ್ಮ ಉಪನ್ಯಾಸಗಳನ್ನು ನೀಡಲಿದ್ದಾರೆ .

City Today News

(cityyoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.