9,950 ಕೋಟಿ ಮೊತ್ತದ ಮತ್ತೊಂದು ಬೃಹತ್ ಹಗರಣ ” Elevated Corridor Road ನಿರ್ಮಾಣದ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ ಮಾಡುವ ಬೃಹತ್ ಹುನ್ಮಾರ

• ಮಾಜಿ ಸಚಿವ H. D. ರೇವಣ್ಣ ವಿರುದ್ಧ ACB, ಲೋಕಾಯುಕ್ತ ಮತ್ತು BMTF ಗಳಲ್ಲಿ ದೂರುಗಳು ದಾಖಲು.
• IAS ಅಧಿಕಾರಿಗಳಾದ ರಜನೀಶ್ ಗೋಯೆಲ್, P. C. ಜಾಫರ್, PWD ಇಲಾಖೆಯ ಕಾರ್ಯದರ್ಶಿಯಾಗಿದ್ದ ಕೃಷ್ಣಾರೆಡ್ಡಿ ಮತ್ತು KRDCL ನ ವ್ಯವಸ್ಥಾಪಕ ನಿರ್ದೇಶಕ B. S. ಶಿವಕುಮಾರ್ ವಿರುದ್ಧವೂ ದೂರುಗಳು ದಾಖಲು.
• ವಂಚನೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ಸಾರ್ವಜನಿಕ ಹಣ ಲೂಟಿಗೆ ಸಂಚು ಪ್ರಕರಣಗಳು ದಾಖಲು.
• KRDCL ನ ಮತ್ತೊಂದು ಬೃಹತ್ ಹಗರಣ ಬಯಲು.
• PWD ಇಲಾಖೆಯ ಅಂಗಸಂಸ್ಥೆಯಾಗಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (KRDCL)
• ಬೆಂಗಳೂರು ನಗರದಲ್ಲಿ ಮಿತಿಮೀರಿರುವ ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು Elevated Corridor Road ಯೋಜನೆಗೆ ಚಾಲನೆ.
• ಬೆಂಗಳೂರು ನಗರದ ಸುತ್ತಲೂ ಇರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಜ್ಯ ಹೆದ್ದಾರಿಗಳೊಂದಿಗೆ ನಗರದ ಪ್ರಮುಖ ಜಂಕ್ಷನ್ ಗಳಿಗೆ ಸಂಪರ್ಕ ಕಲ್ಪಿಸುವ ECR ಯೋಜನೆ.
• ಒಟ್ಟು 87.87 ಕಿ. ಮೀ. ಉದ್ದದ ECR ಯೋಜನೆ.
• ಪ್ರಾರಂಭದಲ್ಲಿ ₹ 17,000 ಕೋಟಿಗಳಷ್ಟಿದ್ದ ಅಂದಾಜು ಮೊತ್ತವನ್ನು ಏಕಾಏಕಿ ₹ 26,960 ಕೋಟಿಗಳಿಗೆ ಏರಿಸಲಾಗಿದೆ.
• ದಿಢೀರನೆ ಏರಿಕೆಯಾದ ಯೋಜನೆಯ ಮೊತ್ತ ₹ 9,960 ಕೋಟಿ.
• ಶೇ. 59% ರಷ್ಟು ಏರಿಕೆಯಾಗಿದೆ.
• ಯೋಜನೆಯ ಅನುಷ್ಠಾನದ ಹೆಸರಿನಲ್ಲಿ ಸಾವಿರಾರು ಕೋಟಿ ಹಣವನ್ನು ಲೂಟಿ ಮಾಡುವ ವ್ಯವಸ್ಥಿತ ಸಂಚನ್ನು ರೂಪಿಸಲಾಗಿದೆ.
• ಲೋಕೋಪಯೋಗಿ ಇಲಾಖೆಯ ಮಾಜಿ ಸಚಿವ H. D. ರೇವಣ್ಣ ನವರ ಸೂಚನೆಯಂತೆ ECR ನ ಮೊತ್ತ ₹ 17,000 ಕೋಟಿಯಿಂದ ₹ 26,960 ಕೋಟಿಗಳಿಗೆ ಏರಿಕೆಯಾಗಿದೆ ಎಂಬ ಗಂಭೀರ ಆರೋಪ.
• H. D. ರೇವಣ್ಣನವರ ತಾಳಕ್ಕೆ ತಕ್ಕಂತೆ IAS ಅಧಿಕಾರಿಗಳಾದ ರಜನೀಶ್ ಗೋಯೆಲ್ ಮತ್ತು P. C. ಜಾಫರ್, PWD ಇಲಾಖೆಯ ಹಿಂದಿನ ಕಾರ್ಯದರ್ಶಿ ಕೃಷ್ಣಾರೆಡ್ಡಿ ಹಾಗೂ KRDCL ನ ವ್ಯವಸ್ಥಾಪಕ ನಿರ್ದೇಶಕ B. S. ಶಿವಕುಮಾರ್ ರವರುಗಳು ಕುಣಿದಿದ್ದಾರೆ.
• HMT ಕ್ಷೇತ್ರಗಳನ್ನು ಶತಾಯಗತಾಯ ಗೆಲ್ಲಲೇಬೇಕೆಂಬ ದುರುದ್ದೇಶದಿಂದ H. D. ರೇವಣ್ಣನವರು ₹ 26,960 ಕೋಟಿ ಮೊತ್ತದ ECR ಯೋಜನೆಗೆ ಆತುರಾತುರವಾಗಿ ಅನುಮೋದನೆ ದೊರಕಿಸಿಕೊಟ್ಟಿದ್ದಾರೆ.
• KRDCL ನ ನಿರ್ದೇಶಕ ಮಂಡಳಿಯ ಸದಸ್ಯರಾಗಿದ್ದ ರಜನೀಶ್ ಗೋಯೆಲ್, P. C. ಜಾಫರ್, ಕೃಷ್ಣಾರೆಡ್ಡಿ ಮತ್ತು B. S. ಶಿವಕುಮಾರ್ ರವರು ಈ 9,960 ಕೋಟಿ ಹಗರಣದ ಸಮಾನ ಪಾಲುದಾರರು.
• ₹ 26,960 ಕೋಟಿ ಮೊತ್ತದ ECR ಯೋಜನೆಗೆ 02/03/2019 ರಂದು ಅನುಮೋದನೆ ನೀಡಿ ಸರ್ಕಾರಿ ಅದೇಶ ಹೊರಡಿಸಲಾಗಿದೆ.
• ಸರ್ಕಾರಿ ಆದೇಶ ಸಂಖ್ಯೆ : ಲೋಇ/ಇಎಪಿ/2081(81)/Dt: 02-03-2019
• 04 ಹಂತಗಳ ECR ಯೋಜನೆಯ ಮೊದಲ ಹಂತದ ಯೋಜನೆಗೆ 2019 ರ ಮಾರ್ಚ್ ತಿಂಗಳಿನಲ್ಲಿ ಚಾಲನೆ.
• 21.54 ಕಿ. ಮೀ. ಉದ್ದದ ಒಂದನೇ ಹಂತದ ಯೋಜನೆ.
• ₹ 6,855 ಕೋಟಿ ಮೊತ್ತದ 21.54 ಕಿ. ಮೀ. ಉದ್ದದ ಒಂದನೇ ಹಂತದ ಯೋಜನೆ.
• ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ – ಕಂಟೋನ್ ಮೆಂಟ್ – ರಿಚ್ ಮಂಡ್ ರಸ್ತೆ – ಶಾಂತಿನಗರ ಬಸ್ ನಿಲ್ದಾಣ – MICO ಬಾಷ್ ಆವರಣ – ಹೊಸೂರು ರಸ್ತೆ – ಸಿಲ್ಕ್ ಬೋರ್ಡ್ ಜಂಕ್ಷನ್ ಪ್ರದೇಶಗಳನ್ನು ಹೊರಹೊಲಯ ಹೆದ್ದಾರಿಗಳೊಂದಿಗೆ ಸಂಪರ್ಕ ಕಲ್ಪಿಸುವ ಯೋಜನೆ.
• ಭೂಸ್ವಾಧೀನ ಮತ್ತು ಯುಟಿಲಿಟಿ ಸ್ಥಳಾಂತರ ಕಾರ್ಯ ಸೇರಿದಂತೆ ₹ 6,855 ಕೋಟಿ ಮೊತ್ತದ ಒಂದನೇ ಹಂತ ECR ಯೋಜನೆ.
• ಒಂದನೇ ಹಂತದ ಟೆಂಡರ್ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿದೆ.
• ಟೆಂಡರ್ ನಲ್ಲಿ ಭಾಗವಹಿಸಬೇಕಾದ ಗುತ್ತಿಗೆದಾರರನ್ನು ಮೊದಲೇ ನಿಗದಿ ಪಡಿಸಲಾಗಿತ್ತು.
• H. D. ರೇವಣ್ಣ ನವರ ಅಪೇಕ್ಷೆಗಳಿಗೆ ಒಪ್ಪಿದ್ದ ಗುತ್ತಿಗೆದಾರರನ್ನು ಕೃಷ್ಣಾರೆಡ್ಡಿ ಮತ್ತು B. S. ಶಿವಕುಮಾರ್ ರವರು ಮೊದಲೇ ನಿಗದಿ ಮಾಡಿದ್ದರು.
• ₹ 6,855 ಕೋಟಿ ಮೊತ್ತದ ಒಂದನೇ ಹಂತದ ಯೋಜನೆಗೆ ಮೂರು ಪ್ಯಾಕೇಜ್ ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು.
• ಮೂರು ಪ್ಯಾಕೇಜ್ ಗಳಿಗೆ L&T ಸಂಸ್ಥೆಯನ್ನೇ ಗುತ್ತಿಗೆದಾರರೆಂದು ಪೂರ್ವ ನಿಯೋಜಿತವಾಗಿ ನಿರ್ಧರಿಸಲಾಗಿತ್ತು.
• ಮೊದಲ ಅಂದಾಜು ಮೊತ್ತಕ್ಕಿಂತಲೂ ಶೇ. 59 ರಷ್ಟು ಮೊತ್ತವನ್ನು ಏರಿಕೆ ಮಾಡಿ ಟೆಂಡರ್ ಕರೆಯಲಾಗಿತ್ತು.
• ಏರಿಕೆ ಮಾಡಲಾಗಿದ್ದ ಶೇ. 59% ರಷ್ಟು ಮೊತ್ತವನ್ನು ಸಂಪೂರ್ಣವಾಗಿ ಕಮಿಷನ್ ರೂಪದಲ್ಲಿ ನೀಡಬೇಕೆಂಬ ಷರತ್ತಿನೊಂದಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭ.
• ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದಂತೆಯೇ ತಮ್ಮ ತಮ್ಮ ಪಾಲಿನ ಕಮಿಷನ್ ಹಣವನ್ನು H. D. ರೇವಣ್ಣ ಸೇರಿದಂತೆ ಎಲ್ಲ ಅಧಿಕಾರಿಗಳು L&T ಸಂಸ್ಥೆಯಿಂದ ಪಡೆದು ಬಿಟ್ಟಿದ್ದಾರೆ.
• ಬೇರೆ ಯಾವ ಗುತ್ತಿಗೆದಾರರೂ ಸಹ ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಬೆದರಿಕೆ ತಂತ್ರ ಅನುಸರಿಸಿದ್ದ ಕೃಷ್ಣಾರೆಡ್ಡಿ ಮತ್ತು B. S. ಶಿವಕುಮಾರ್.
• ಇದು H. D. ರೇವಣ್ಣನವರ Personal Project ಎಂದು ಇತರೆ ಗುತ್ತಿಗೆದಾರರನ್ನು ಬೆದರಿಸಿದ್ದ B. S. ಶಿವಕುಮಾರ್.
• H. D. ರೇವಣ್ಣ ಸೇರಿದಂತೆ KRDCL ನ ನಿರ್ದೇಶಕ ಮಂಡಳಿಯ ಸದಸ್ಯರು ಸಾವಿರಾರು ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಗಂಭೀರ ಆರೋಪ.
• ಯೋಜನೆಯಲ್ಲಿ ನಡೆದಿರುವ ಅಪಾರ ಪ್ರಮಾಣದ ಭ್ರಷ್ಟಾಚಾರದ ಬಗ್ಗೆ ನ್ಯಾಯಾಲಯದ ಮೊರೆ ಹೋದ ಸಾಮಾಜಿಕ ಹೋರಾಟಗಾರ.
• ಟೆಂಡರ್ ಪ್ರಕ್ರಿಯೆಗೆ ತಡೆ ನೀಡಿರುವ ನ್ಯಾಯಾಲಯ.
• ಸಾವಿರಾರು ಕೋಟಿ ಅವ್ಯವಹಾರ ನಡೆದಿರುವ ECR ನ ಒಂದನೇ ಹಂತದ ಯೋಜನೆಯ ಟೆಂಡರ್ ಪ್ರಕ್ರಿಯೆಯನ್ನು ರದ್ದು ಪಡಿಸಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ N. R. ರಮೇಶ್.
• ಯೋಜನೆಯ ಮೊತ್ತ ಏಕಾಏಕಿ ₹ 9,960 ಕೋಟಿಗಳಷ್ಟು ಏರಿಕೆಯಾಗಿರುವ ಈ ಹಗರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ N. R. ರಮೇಶ್.
• ಯೋಜನೆಯ ಅಂದಾಜು ಮೊತ್ತವನ್ನು ಏಕಾಏಕಿ ಶೇ. 59 ರಷ್ಟು ಏರಿಕೆ ಮಾಡಿ ಅನುಮೋದನೆ ದೊರಕಿಸಿರುವ ರಜನೀಶ್ ಗೋಯೆಲ್, P. C. ಜಾಫರ್, ಕೃಷ್ಣಾರೆಡ್ಡಿ ಮತ್ತು B. S. ಶಿವಕುಮಾರ್ ರವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹ.
• 87.87 ಕಿ. ಮೀ. ಉದ್ದದ ECR ಯೋಜನೆಯ ಕ್ರಿಯಾಯೋಜನೆಯನ್ನು ಮತ್ತೊಮ್ಮೆ ನ್ಯಾಯಯುತವಾಗಿ ತಯಾರಿಸಲು ಸಂಬಂಧಪಟ್ಟವರಿಗೆ ಸೂಚಿಸುವಂತೆ ಆಗ್ರಹ.
• ಬೃಹತ್ ಹಗರಣಕ್ಕೆ ಸಂಬಂಧಿಸಿದ 288 ಪುಟಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ N. R. ರಮೇಶ್.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.