ಆರ್‌ಟಿಓ ಕಚೇರಿಯ ಒಳಭಾಗದಲ್ಲಿ ವಾರಸುದಾರರಿಲ್ಲದ ರೂ . 2,71,000 ನಗದು ಹಣ ಇದ್ದ ಬ್ಯಾಗ್ ಪತ್ತೆಯಾಗಿರುತ್ತದೆ

ದಿನಾಂಕ : 3 . 09 . 2019 ಬೆಂಗಳೂರು ನಗರ ಜಯನಗರದಲ್ಲಿನ ಆರ್‌ಟಿಓ ಕಚೇರಿಯಲ್ಲಿ ಮಧ್ಯವರ್ತಿಗಳ ಜೊತೆಗೆ ಶಾಮೀಲಾಗಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಕ್ರಮ ಲಂಚದ ಹಣವನ್ನು ಸಾರ್ವಜನಿಕರಿಂದ ಪಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಈ ದಿನ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯ ವಿವಿಧ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ತಂಡ ಆರ್‌ಟಿಓ ಕಚೇರಿ ಮತ್ತು ಸಂರ್ಕಿಣದ ಕೆಲವು ಮಳಿಗೆಗಳಲ್ಲಿ ತಪಾಸಣೆ ಕೈಗೊಂಡಿರುತ್ತಾರೆ . ಈ ಕಾಲಕ್ಕೆ 12 ಜನ ಮಧ್ಯವರ್ತಿಗಳ ಬಳಿ ರೂ . 1 , 40 , 000 ನಗದು , ಆರ್‌ಸಿ ಸ್ಮಾರ್ಟ್ ಕಾರ್ಡ್ , ಡಿಎಲ್ ಸ್ಮಾರ್ಟ್ ಕಾರ್ಡ್ , ವಿವಿಧ ಪರ್ಮಿಟ್‌ಗಳು ಸಿಕ್ಕಿರುತ್ತದೆ ಮತ್ತು ಆರ್‌ಟಿಓ ಕಚೇರಿಯ ಒಳಭಾಗದಲ್ಲಿ ವಾರಸುದಾರರಿಲ್ಲದ ರೂ . 2 , 71 , 000 ನಗದು ಹಣ ಇದ್ದ ಬ್ಯಾಗ್ ಪತ್ತೆಯಾಗಿರುತ್ತದೆ . 12 ಜನ ಮಧ್ಯವರ್ತಿಗಳನ್ನು ದಸ್ತಗಿರಿ ಮಾಡಿ , ನಗದು ಹಣ ಹಾಗೂ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದ್ದು , ಪ್ರಕರಣದ ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.