ವಿಶ್ವಕರ್ಮ ಜಯಂತೋತ್ಸವ-ಜೇನುಗೂಡು ವಿಶ್ವಕರ್ಮ ಬಳಗ

ವಿಶ್ವಕರ್ಮ ಜಯಂತೋತ್ಸವ ತಾ | | 22 – 09 – 2019 , ಭಾನುವಾರ ಬೆಳಗ್ಗೆ : 10 . 00ಗಂಟೆಗೆ ಸ್ಥಳ : ಮಹಾಲಕ್ಷ್ಮಿ ಬಡಾವಣೆ ಆತ್ಮೀಯ ಭಾಂದವರೇ , ಉತ್ತರ ಭಾರತದಲ್ಲಿ ವಿಶ್ವಕರ್ಮ ಮಹೋತ್ಸವವನ್ನು ಪ್ರತಿ ರಾಜ್ಯದಲ್ಲಿ ವಿಶೇಷವಾಗಿ , ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ . ಆದರೆ ದಕ್ಷಿಣ ಭಾರತದಲ್ಲಿ ಈ ಮಹೋತ್ಸವದ ಆಚರಣೆ ತುಂಭಾ ವಿರಳವಾಗಿದೆ . ಆದ್ದರಿಂದ ಈ ಉತ್ಸವವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಈ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ . ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಉತ್ಸವವನ್ನು ದಕ್ಷಿಣ ಭಾರತದಲ್ಲಿ ಯಶಸ್ವಿಯಾಗುವಂತೆ ಮಾಡಬೇಕೆಂದು ವಿನಂತಿ ಭಾರತದಲ್ಲಿ ಅಸಂಖ್ಯಾತ ಜಾತಿ ಸಮುದಾಯಗಳಿಗೆ ತನ್ನದೇ ಆದ ಶಿಲ್ಪ ಮತ್ತು ಕರಕುಶಲ ಕ್ಷೇತ್ರದಲ್ಲಿ ಸೇವೆಗಳನ್ನು ಮಾಡಿಕೊಡುತ್ತಾ ಬಂದಿರುವ ” ವಿಶ್ವಕರ್ಮ ಸಮುದಾಯವೂ ಒಂದು . ಕಬ್ಬಿಣ , ಮರ , ಕಂಚು , ಬಂಗಾರ ಮತ್ತು ಶಿಲೆಗಳನ್ನು ಆಧರಿಸಿ ಗುಡಿಗೋಪುರಗಳನ್ನು ಆರಂಭಿಸಿ , ತಮ್ಮ ಕಲಾ ನೈಪುಣ್ಯದಿಂದ ಸೌಧಗಳನ್ನು ನಿರ್ಮಿಸಿಕೊಡುತ್ತಾ , ರೈತಾಪಿ ಜನರ ಕೃಷಿ ಸಲಕರಣೆ ಮಾಡುತ್ತಾ ಸರ್ವ ಜನಾಂಗದ ನೆಚ್ಚಿನ ಸಮುದಾಯ ವಿಶ್ವಕರ್ಮ ಸಮುದಾಯವಾಗಿರುತ್ತದೆ . ಈ ಸಮುದಾಯದ ಮೂಲ ಪುರುಷ ಶ್ರೀ ಭಗವಾನ್ ವಿಶ್ವಕರ್ಮ , ತೇತ್ರಾಯುಗದಲ್ಲಿ ಲಂಕಾಪಟ್ಟಣ , ದ್ವಾಪರಯುಗದ ಮಹಾಭಾರತದಲ್ಲಿ ಉಲ್ಲೇಖ ಇರುವ ದ್ವಾರಕಾನಗರವನ್ನು ನಿರ್ಮಿಸಿದವರು ಎಂಬ ಪ್ರತೀತಿ ಹಿಂದು ಪುರಾಣಗಳಲ್ಲಿ ಉಲ್ಲೇಖ ಇದೆ . ಸಮಸ್ತ ಪಚನ ಬಂಧುಗಳು , ಸಮಸ್ತ ಭಾಂದವರು ಒಗ್ಗೂಡಿ ಬನ್ನಿ ‘ ವಿಶ್ವಕರ್ಮ ಜಯಂತೋತ್ಸವವನ್ನು ಯಶಸ್ವಿಗೊಳಿಸೋಣ ಭಗವಾನ್ ‘ ವಿಶ್ವಕರ್ಮರ ‘ ಕೃಪೆಗೆ ಪಾತ್ರರಾಗೋಣ

ವಿಶ್ವಕರ್ಮ ಜಯಂತೋತ್ಸವ ಅಂಗವಾಗಿ

ತಾ | | 22 – 09 – 2019 , ಭಾನುವಾರ ದಂದು ನಂದಿನಿ ಬಡಾವಣೆಯಲ್ಲಿ ಜಾನಪದ ತಂಡದೊಂದಿಗೆ ಪ್ರಮುಖ ಬೀದಿಗಳಲ್ಲಿ ವಿಶ್ವಕರ್ಮ ರಥ ಮೆರವಣಿಗೆ ಹಾಗೂ ಇತರೇ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಮಾನ್ಯ ಶ್ರೀ ಬಿ . ಎಸ್ . ಯಡಿಯೂರಪ್ಪನವರು ಮತ್ತು ಇತರೆ ಗಣ್ಯಾತಿ ಗಣ್ಯರಿಂದ ನಡೆಸಲಾಗುವುದು . ಹಾಗೂ ವಿವಿಧ ಕ್ರೀಡೆಗಳನ್ನು ಸಹ ನಡೆಸಲಾಗುವುದು

– : ಕ್ರೀಡೆಗಳ ವಿವರಗಳು :

1 . ಕ್ರಿಕೆಟ್ – ಟೂರ್ನಿಮೆಂಟ್ 2 . ಬ್ಯಾಟನ್ – ಟೂರ್ನಿಮೆಂಟ್ 3 . ಪ್ಲೇಯಿಂಗ್ ಟೆನ್ನಿಸ್ 4 . ರಂಗೋಲಿ ಸ್ಪರ್ಧೆ 5 . ರಕ್ತದಾನ ಶಿಬಿರ 6 . ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ 7 . ಯೋಗ ಶಿಬಿರ 8 . ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ .

ಆಸಕ್ತರು ಕಛೇರಿಯನ್ನು ಸಂಪರ್ಕಿಸಿರಿ .9448139975

– ಶ್ರೀ. ಸುದರ್ಶನ ಮೂರ್ತಿ

ಅಧ್ಯಕ್ಷರು

ಜೇನುಗೂಡು ವಿಶ್ವಕರ್ಮ ಬಳಗ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.