ದೂರುದಾರರಿಂದ ಶ್ರೀ . ರಾಜೇಶ್ ಕೆ . ಎಸ್ . ಶ್ರೀ . ಗಂಗರಾಜು ಹಾಗೂ ಗುರುಪ್ರಸಾದ್ ರವರುಗಳು ರೂ . 75 , 000 / – ಲಂಚದ ಹಣವನ್ನು ಪಡೆಯುತ್ತಿರುವಾಗ ಬೆಂಗಳೂರು ಗ್ರಾಮಾಂತರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ

ಪತ್ರಿಕಾ ಪ್ರಕಟಣೆ

ದಿನಾಂಕ 19 / 09 / 2019 , ಬೆಂಗಳೂರಿನ ಯಲಹಂಕದ ನಿವಾಸಿಯೊಬ್ಬರು ತಮ್ಮ ಸನ್ಲೈಟ್ ಸರ್ವೀಸಸ್ ಕಂಪನಿಯಿಂದ ಗುತ್ತಿಗೆ ಆಧಾರದ ಮೇರೆಗೆ ಮಾನವ ಸಂಪನ್ಮೂಲವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ಸೇವೆಯನ್ನು ಒದಗಿಸಿರುತ್ತಾರೆ . ಸದರಿಯವರಿಗೆ ಮಂಜೂರು ಮಾಡಬೇಕಾಗಿದ್ದ ರೂ . 65 , 11 , 400 / – ರೂಗಳ ವೇತನವನ್ನು ಮಂಜೂರು ಮಾಡಲು ಶ್ರೀ . ರಾಜೇಶ್ ಕೆ . ಎಸ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ , ಶ್ರೀ . ಗಂಗರಾಜು , ಪ್ರ . ದ . ಸ ಹಾಗೂ ಗುರುಪ್ರಸಾದ್ ” a ” ದರ್ಜೆ ನೌಕರ ಇವರುಗಳು ರೂ . 75 , 000 / – ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 19 / 09 / 2019 ರಂದು ದೂರುದಾರರಿಂದ ಶ್ರೀ . ರಾಜೇಶ್ ಕೆ . ಎಸ್ . ಶ್ರೀ . ಗಂಗರಾಜು ಹಾಗೂ ಗುರುಪ್ರಸಾದ್ ರವರುಗಳು ರೂ . 75 , 000 / – ಲಂಚದ ಹಣವನ್ನು ಪಡೆಯುತ್ತಿರುವಾಗ ಬೆಂಗಳೂರು ಗ್ರಾಮಾಂತರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಸದರಿಯವರುಗಳನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .

City Today News

(itytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.