” ಸಿ . ಸಿ . ಬಿ , ಕಾರ್ಯಾಚರಣೆ ” ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿ ಆಸಾಮಿಗಳ ಬಂಧನ

” ಸಿ . ಸಿ . ಬಿ , ಕಾರ್ಯಾಚರಣೆ ” ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿ ಆಸಾಮಿಗಳ ಬಂಧನ – ಮಾರಕಾಸಗಳ ವಶ ದಿನಾಂಕ : 20 – 09 – 2019 ರಂದು ರಾತ್ರಿ 08 – 45 ಗಂಟೆಯಲ್ಲಿ ರಾಜಗೋಪಾಲನಗರ ಪೋಲೀಸ್ ಠಾಣಾ ಸರಹದ್ದಿನ ಹೆಗ್ಗನಹಳ್ಳಿ , ಶ್ರೀಗಂಧನಗರ ಮುಖ್ಯರಸ್ತೆ , ಕರೀಮ್ಸಾಬ್ ಲೇಔಟ್‌ನರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಅವರಿಂದ ನಗದು – ಚಿನ್ನದ ಆಭರಣಗಳನ್ನು ದೊಚಲು ಸಜ್ಜಾಗಿದ್ದ ಆಸಾಮಿಗಳಾದ 1 , ಶಕ್ತಿಪ್ರಸಾದ್ @ ಶಕ್ತಿ ಬಿನ್ ಪೆರಿಯಸ್ವಾಮಿ 30ವರ್ಷ , ನಂ . 16 , 9ನೇ ಕ್ರಾಸ್ , ಅರುಂಧತಿನಗರ , ಚಂದ್ರಾಲೇಔಟ್ , ಬೆಂಗಳೂರು – 40 2 , ಮಣಿಕಂಠ @ ಮಣಿ ಬಿನ್ ವಿಜಯನ್ 26ವರ್ಷ , ನಂ . 46 , 9ನೇ ಕ್ರಾಸ್ , ಭೈರವೇಶ್ವರನಗರ , ಚಂದ್ರಾಲೇಔಟ್ , ಬೆಂಗಳೂರು 3 , ರವಿ ಬಿನ್ ಸಿದ್ದಗಂಗಪ್ಪ 24ವರ್ಷ , ನಂ . 304 , ಚೌಡೇಶ್ವರಿನಗರ , ಲಗ್ಗೆರೆ , ಬೆಂಗಳೂರು – 58 4 , ರಾಘವೇಂದ್ರ ಏನ್ ಮಂಜುನಾಥ್ 20ವರ್ಷ , ನಂ . 304 , ಚೌಡೇಶ್ವರಿನಗರ , ಲಗ್ಗೆರೆ , ಬೆಂಗಳೂರು – 58 ಎಂಬುವವರನ್ನು ಸಿಸಿಬಿ ಘಟಕದ ಸಂಘಟಿತ ಅಪರಾಧ ದಳದ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಗಳು ವಶಕ್ಕೆ ಪಡೆದು ಇವರುಗಳ ವಶದಿಂದ 1 ) ಎರಡು ಲಾಂಗ್ , 2 ) ಒಂದು ಚಾಕು ಮತ್ತು 3 ) ಒಂದು ಖಾರದ ಪುಡಿ ಪೊಟ್ಟಣಗಳನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ .

ಈ ಆರೋಪಿಗಳ ವಿರುದ್ದ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆಯಲ್ಲಿರುತ್ತದೆ . ಈ ಆರೋಪಿತರುಗಳ ಪೈಕಿ ಶಕ್ತಿಪ್ರಸಾದ್ @ ಶಕ್ತಿ ಈತನು ಚಂದ್ರಾ ಲೇಔಟ್ ಮತ್ತು ಜ್ಞಾನಭಾರತಿ ಪೊಲೀಸ್ ಠಾಣಾ ಸರಹದ್ದಿನ ರೌಡಿಶೀಟರ್ ಆಗಿದ್ದು ಈತನ ಮೇಲೆ ಒಂದು ಕೊಲೆ , 3 ಕೊಲೆಯತ್ನ ಸೇರಿದಂತೆ ಒಟ್ಟು 12 ಕೇಸುಗಳು ಇರುತ್ತವೆ . ಮಣಿಕಂಠ ( ಮಣಿ ಈತನು ವಿಜಯನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು ಈತನ ಮೇಲೆ ಹಲ್ಲೆ ಮತ್ತು ಕೊಲೆಯತ್ನ ಪ್ರಕರಣಗಳು ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತವೆ . ಈ ಕಾರ್ಯಾಚರಣೆಗಳನ್ನು ಬೆಂಗಳೂರು ನಗರದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ . ಸಂದೀಪ್ ಪಾಟೀಲ್ , ಐಪಿಎಸ್ ರವರ ಮಾರ್ಗದರ್ಶನ ಹಾಗೂ ಉಪ ಪೊಲೀಸ್ ಆಯುಕ್ತರಾದ ಶ್ರೀ . ಕುಲದೀಪ್ ಕುಮಾರ್ ಆರ್ ಜೈನ್ ಐಪಿಎಸ್ ರವರ ನೇತೃತ್ವದಲ್ಲಿ ಸಿಸಿಬಿ ಘಟಕದ ಸಂಘಟಿತ ಅಪರಾಧ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಎಸ್ . ಎಂ . ನಾಗರಾಜು ರವರ ಮುಂದಾಳತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಶ್ರೀ . ಎಂ . ಆರ್ . ಹರೀಶ್ ಮತ್ತು ಶ್ರೀ . ಲಕ್ಷ್ಮೀಕಾಂತಯ್ಯ ಜಿ , ಹಾಗೂ ಸಿಬ್ಬಂದಿಯವರುಗಳಾದ ಶ್ರೀ . ರವಿಕುಮಾರ್ , ಶ್ರೀ . ಉಮೇಶ್ , ಶ್ರೀ . ಯೋಗಾನಂದ್ ರವರುಗಳು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ .

City Today News

(citytoday.news)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.