“ ಯುಗಪುರುಷ ಐನ್‌ಸ್ಟೈನ್ ” – ಬಿ . ಇ . ಎಲ್ ಸಂಸ್ಥೆಯ ಸಾಹಿತ್ಯ ಕೂಟದ ಕಲಾತಂಡ ಶನಿವಾರ ದಿನಾಂಕ 28 – 09 – 2019ರ ಸಂಜೆ 6 . 00 ಘಂಟೆಗೆ ಬಿ . ಇ . ಎಲ್‌ನ ಕುವೆಂಪು ಕಲಾಕ್ಷೇತ್ರದಲ್ಲಿ ಪ್ರಪ್ರಥಮ ಪ್ರದರ್ಶನ ನೀಡಲಿದ್ದಾರೆ .

ಕನ್ನಡ ಸಾಹಿತ್ಯ ಕೂಟ , ಬಿ . ಇ . ಎಲ್ , ಬೆಂಗಳೂರು ಕರ್ನಾಟಕ ಅಸೋಸಿಯೇಷನ್ ಫಾರ್ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ , ಬೆಂಗಳೂರು ವತಿಯಿಂದ.

ಪತ್ರಿಕಾ ಪ್ರಕಟಣೆ :

ಜಗತ್ತಿನಲ್ಲಿ ಬಹಳ ಅಪರೂಪವಾಗಿ ಅವತರಿಸುವ ಅತ್ಯಂತ ಪ್ರಖಾರ ಬುದ್ಧಿಯ ವಿಜ್ಞಾನಿಗಳಲ್ಲಿ ಐನ್‌ಸ್ಟೈನ್ ಪ್ರಮುಖರು . ಬ್ರಹ್ಮಾಂಡದ ಸೃಷ್ಟಿಯ ರಹಸ್ಯವನ್ನು ತಿಳಿದುಕೊಳ್ಳಲು ಜೀವನವಿಡೀ ಶ್ರಮಿಸಿ ಸಾರ್ಥಕ ಸಾಧನೆಯನ್ನು ಮಾಡಿ , ವಿಜ್ಞಾನ ಪ್ರಪಂಚದ ಚಕ್ರವರ್ತಿಯಾದ ಶ್ರೇಷ್ಠ ವಿಜ್ಞಾನಿ . ಒಂದು ಜೀವಮಾನದಲ್ಲಿ ಬೆಳಕು , ಕಾಲ , ಸ್ಥಳ , ( Space ) ಶಕ್ತಿ ಮತ್ತು ವಸ್ತು ಮತ್ತು ಗುರುತ್ವಗಳನ್ನು ಒಂದುಗೂಡಿಸಿ , ಅಪರೂಪದ ಸಾಧನೆ ಮಾಡಿದ ಶ್ರೇಷ್ಠ ವಿಜ್ಞಾನಿ , ವಿಜ್ಞಾನ ಮತ್ತು ತತ್ವಜ್ಞಾನಗಳನ್ನು ಸರಿ ಸಮಾನಗೊಳಿಸಿದ ಮಹಾದಾರ್ಶನಿಕ , ನ್ಯೂಟನ್ನು ಕಂಡು ಹಿಡಿದ ಸಿದ್ದಾಂತಗಳಲ್ಲಿನ ನ್ಯೂನತೆಗಳನ್ನು ಗುರುತಿಸಿ , ಬ್ರಹ್ಮಾಂಡದ ವಿಸ್ಮಯಗಳನ್ನು ಬಯಲು ಮಾಡಿದ ದಿಗ್ಗಜ .

ಅವನ ಫೋಟೊ ಇಲೆಕ್ಟ್ರಿಕ್ ಪರಿಣಾಮದ ಸಿದ್ದಾಂತ , ಆಧುನಿಕ ವಿಜ್ಞಾನದ ಕ್ರಾಂತಿಗೆ ನಾಂದಿಯಾಯಿತು . ತನ್ನ ಜೀವಿತದಲ್ಲಿಯೇ ಅತ್ಯಂತ ದೊಡ್ಡ Celebrity ಯಾಗಿದ್ದನಲ್ಲದೆ , 2001ರಲ್ಲಿಯೂ ಸಹಸ್ರಮಾನದ ವ್ಯಕ್ತಿಯೆಂದು ವಿಶ್ವದ ಜನತೆಯಲ್ಲಿ ಗುರುತಿಸಿಕೊಂಡ ಸಾರ್ವಭೌಮ . ಇವೆಲ್ಲ ಸಾಧನೆಗಳ ಜತೆಗೆ , ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಸತತವಾಗಿ ಶ್ರಮಿಸಿದ ಶಾಂತಿದೂತನೂ ಹೌದು .

ಮಹಾತ್ಮ ಗಾಂಧಿಯವರ ಆರಾಧಕನಾಗಿದ್ದ ಐನ್‌ಸ್ಟೈನ್ ಭಾರತದ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು . ರವೀಂದ್ರನಾಥ ಟ್ಯಾಗೂರ್ , ಜವಾಹರಲಾಲ್ ನೆಹರು, ವಿಜ್ಞಾನಿ ಬೋಸ್ ಇವರೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದರು . .

ಈ ಧೀಮಂತ ವ್ಯಕ್ತಿಯ ಬದುಕನ್ನು ಪರಿಚಯಿಸುವ ಈ “ ಯುಗಪುರುಷ ಐನ್‌ಸ್ಟೈನ್ ‘ ನಾಟಕವನ್ನು ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರಾಧ್ಯಾಪಕರು , ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ ಆದ ಡಾ . ಕೆ . ಸಿದ್ದಪ್ಪನವರು ರಚಿಸಿದ್ದಾರೆ . ಬಿ . ಇ . ಎಲ್ ಸಂಸ್ಥೆಯ ಸಾಹಿತ್ಯ ಕೂಟದ ಕಲಾತಂಡ ಶನಿವಾರ ದಿನಾಂಕ 28 – 09 – 2019ರ ಸಂಜೆ 6 . 00 ಘಂಟೆಗೆ ಬಿ . ಇ . ಎಲ್‌ನ ಕುವೆಂಪು ಕಲಾಕ್ಷೇತ್ರದಲ್ಲಿ ಪ್ರಪ್ರಥಮ ಪ್ರದರ್ಶನ ನೀಡಲಿದ್ದಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.