ಜೆ. ಎಚ್. ಪಟೇಲ್‌ರವರ ೯೦ನೇ ಜನ್ಮದಿನದ ಅಂಗವಾಗಿ ಜನತಾದಳ ( ಸಂಯುಕ್ತ ) ಪಕ್ಷವು ಜೆ . ಎಚ್ . ಪಟೇಲ್ ಫೌಂಡೇಶನ್ ಮತ್ತು ಬೆಂಗಳೂರು ಸಂಜಯನಗರ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಬೆಂಗಳೂರು ನಗರದಲ್ಲಿ ರಕ್ತದಾನ ಶಿಬಿರ

ರಾಜಕೀಯ ಮುತ್ಸದ್ದಿ , ಸಮಾಜವಾದಿ , ಮಾಜಿ ಮುಖ್ಯಮಂತ್ರಿ ದಿ . ಜೆ . ಎಚ್ . ಪಟೇಲ್‌ರವರ ಜನ್ಮದಿನವಾದ ಅಕ್ಟೋಬರ್ ೧ ರಂದು ಜನತಾದಳ ( ಸಂಯುಕ್ತ ) ಪಕ್ಷ ಮತ್ತು ಜೆ . ಎಚ್ . ಪಟೇಲ್ ಫೌಂಡೇಶನ್‌ನಿಂದ ಪ್ರತಿ ವರ್ಷವೂ ವಿವಿಧ ಬಗೆಯ ಸಮಾಜಮುಖಿ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ . ದೇಶದ ಮಹಾನ್ ಚಿಂತಕ , ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಅವರ ಮೂರ್ತರೂಪದಂತಿದ್ದ ಜೆ . ಎಚ್ . ಪಟೇಲ್ , ಕರ್ನಾಟಕದಲ್ಲಿ ಸಮಾಜವಾದ ನೆಲೆ ಊರಲು ಸಾಕಷ್ಟು ಶ್ರಮಿಸಿದವರು . ಗೋಪಾಲಗೌಡರ್ ಬೆನ್ನೆಲುಬಾಗಿ ನಿಂತಿದ್ದ ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಕಳಂಕರಹಿತ , ಹಗರಣ ಮುಕ್ತ , ನಿಷ್ಕಲ್ಮಶ ಅಧಿಕಾರ ನೀಡಿದವರು . ತಮ್ಮ ವಾಕ್ಚಾತುರ್ಯದಿಂದ ಇಡೀ ಸದನವನ್ನೇ ನಿಬ್ಬೆರಗುಗೊಳಿಸುತ್ತಿದ್ದ ಪಟೇಲರು , ಆಗರ್ಭ ಶ್ರೀಮಂತರಾಗಿದ್ದರೂ ಬಡಜನರ ಕಷ್ಟಗಳನ್ನು ಅರ್ಥಮಾಡಿಕೊಂಡು ಅವರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದವರು . ಲೋಕಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಸದನದಲ್ಲಿ ಕನ್ನಡದಲ್ಲಿ ಮಾತನಾಡಿ ರಾಜ್ಯದ ಅಸ್ಮಿತೆಯನ್ನು ಎತ್ತಿಹಿಡಿದವರು .

ಈ ಬಾರಿಯೂ ಜೆ . ಎಚ್ . ಪಟೇಲ್‌ರವರ ೯೦ನೇ ಜನ್ಮದಿನದ ಅಂಗವಾಗಿ ಜನತಾದಳ ( ಸಂಯುಕ್ತ ) ಪಕ್ಷವು ಜೆ . ಎಚ್ . ಪಟೇಲ್ ಫೌಂಡೇಶನ್ ಮತ್ತು ಬೆಂಗಳೂರು ಸಂಜಯನಗರ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಬೆಂಗಳೂರು ನಗರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದೆ .

ಶಿಬಿರದ ದಿನಾಂಕ : ೧ನೇ ಅಕ್ಟೋಬರ್ ೨೦೧೯

ಸ್ಥಳ : ನಂ . ೧ ಮತ್ತು ೨ , ೬ನೇ ಅಡ್ಡರಸ್ತೆ , ೯ನೇ ಬ್ಲಾಕ್ , ಕುಮಾರಿ ಪಾರ್ಕ್ ಪಶ್ಚಿಮ ಶೇಷಾದ್ರಿಪುರಂ , ಬೆಂಗಳೂರು ( ಜೆ . ಡಿ . ಯು ಪಕ್ಷದ ರಾಜ್ಯ ಕಛೇರಿ )

ಸಮಯ : ಬೆಳಗ್ಗೆ ೯ . ೩೦ರಿಂದ ಮಧ್ಯಾಹ್ನ ೧ . ೩೦ರ ವರೆಗೆ

ಈ ಕಾರ್ಯಕ್ರಮಕ್ಕೆ ರಕ್ತದಾನ ಮಾಡಲು ಆಸಕ್ತಿ ಇರುವವರನ್ನು ಆಹ್ವಾನಿಸಲಾಗಿದ್ದು , ದಾನಿಗಳೊಂದಿಗೆ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ .

ಪತ್ರಿಕಾ ಘೋಷ್ಠಿಯಲ್ಲಿ ರಾಜ್ಯ ವಕ್ತಾರರಾದ ಚಂದ್ರಶೇಖರ್ ಸ್ವಾವರಮಠ , ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಈ ಆನಂದ್ , ಬಿ . ಪಿ . ರಮೇಶ್ ಗೌಡ್ರು , ಬೆಂಗಳೂರು ನಗರ ಅಧ್ಯಕ್ಷರಾದ ಕೆ . ಎಂ . ಪಾಲಾಕ್ಷ , ನಗರ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಬಷೀರ್ , ಮತ್ತು ರಾಜಾಜಿನಗರ ಕ್ಷೇತ್ರದ ಅಧ್ಯಕ್ಷರಾದ ಎಸ್ . ವಿ . ಪ್ರವೀಣ್ ಕುಮಾರ ರವರು ಉಪಸ್ಥಿತರಿದ್ದರು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.