ಸಿಂಗಿಂಗ್ ರಿಯಾಲಿಟಿ ಶೋ “ಗಾನ ಚಂದನ – ಕರುನಾಡ ಗಾನ ತಾರೆ”

ಸಿಂಗಿಂಗ್ ರಿಯಾಲಿಟಿ ಶೋ ಗಾನ ಚಂದನ – ಕರುನಾಡ ಗಾನ ತಾರೆ ದೂರದರ್ಶನ ಚಂದನವಾಹಿನಿಯು ಶಿಕ್ಷಣ , ಕೃಷಿ , ಆರೋಗ್ಯ , ನೃತ್ಯ , ಸಾಹಿತ್ಯ ಹೀಗೆ ಹಲವಾರು ಸಮಾಜಮುಖಿ ಉಪಯುಕ್ತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ . ಮನೋರಂಜನೆಗಾಗಿ ಕನ್ನಡ ಸಿನಿಮಾಗಳು ಮತ್ತು ಚಿತ್ರಮಂಜರಿ , ರಂಗವಲ್ಲಿ ಮತ್ತು ಮಧುರ ಮಧುರವೀ ಮಂಜುಳಗಾನದಂತಹ ಸಂಗೀತ ಕಾರ್ಯಕ್ರಮ ಳನ್ನೂ ಪ್ರಸಾರ ಮಾಡುತ್ತಲೇ ಬರುತ್ತಿದೆ . . ಈ ನಿಟ್ಟಿನಲ್ಲಿ ಮತ್ತೊಂದು ಗರಿಯಾಗಿ ನಮ್ಮ ಚಂದನವಾಹಿನಿಯಲ್ಲಿ ಹೊಚ್ಚ ಹೊಸ ಸಿಂಗಿಂಗ್ ರಿಯಾಲಿಟಿ ಶೋ ” ಗಾನ ಚಂದನ – ಕರುನಾಡ ಗಾನ ತಾರೆ ” ಅಕ್ಟೋಬರ್ 2 ರಿಂದ ಪ್ರಾರಂಭವಾಗಲಿದ್ದು , ಸಂಗೀತ ಪ್ರೇಮಿಗಳಿಗೆ ರಸದೌತಣವನ್ನು ನೀಡಲಿದೆ . ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಯುವ ಪ್ರತಿಭೆಗಳನ್ನು ಅನಾವರಣಗೊಳಿಸಿ , ಅವರಿಗೆ ಗಾನ ವೇದಿಕೆಯನ್ನು ಕಲ್ಪಿಸಿ ಕೊಡುವುದಾಗಿದೆ . ಎಲ್ಲ ಪ್ರತಿಭೆಗಳಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಡುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯ ಲ್ಲಿ ಆಡಿಷನ್‌ಗಳನ್ನು ನಡೆಸಿ , ಪ್ರತಿ ಜಿಲ್ಲೆಯಿಂದ ಸುಮಾರು 15 ಪ್ರತಿಭೆಗಳನ್ನು ಆಕಾಶವಾಣಿಯ ನುರಿತ ಸಂಗೀತಗಾರರಿಂದ ಆಯ್ಕೆ ಮಾಡಲಾಗಿದೆ . ನಮ್ಮ ಹಿರಿಯ , ಕಿರಿಯ ಗಾಯಕರಿಗೆ ಮಾರ್ಗದರ್ಶನ ನೀಡಲು ಈ ಸಂಗೀತ ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ಗಾಯಕಿ ಬಿ . ಆರ್ . ಛಾಯಾ ಮತ್ತು ಖ್ಯಾತ ಸಂಗೀತ ನಿರ್ದೇಶಕರಾದ ವಿ . ಮನೋಹರ್ ಅವರು ತೀರ್ಪುಗಾರರಾಗಿ ಭಾಗವಹಿಸುತ್ತಿದ್ದು , ತಾರಾ ದಂಪತಿಗಳಾದ ವಿಕ್ರಮ್ ಸೂರಿ ಮತ್ತು ನಮಿತಾ ರಾವ್ ಅವರು ನಿರೂಪಕರಾಗಿ ಈ ಕಾರ್ಯಕ್ರಮಕ್ಕೆ ಮೆ ಗು ನೀಡಿದ್ದಾರೆ . ಇದೇ ಅಕ್ಟೋಬರ್ 2 , 2019 ರಿಂದ ಪ್ರಾರಂಭವಾಗುವ “ ಗಾನ ಚಂದನ – ಕರುನಾಡ ಗಾನ ತಾರೆ ” ಪ್ರತಿ ರಾತ್ರಿ 8 . 00 ಗಂಟೆಯಿಂದ 9 . 00 ಗಂಟೆಗೆ ಗುರುವಾರದಿಂದ ಶನಿವಾರದವರೆಗೆ ಹಾಗೂ ಮರುಪ್ರಸಾರ ಸೋಮವಾರದಿಂದ ಬುಧವಾರದವರೆಗೆ ಅದೇ ಸಮಯದಲ್ಲಿ ಪ್ರಸಾರವಾಗಲಿದೆ . ಪ್ರಥಮ ಹಂತದಲ್ಲಿ ಆಯ್ಕೆಯಾದ ಪ್ರತಿಭೆಗಳ ನಡುವೆ ಸ್ಪರ್ಧೆ ನಡೆದು ಪ್ರತೀ ಜಿಲ್ಲೆಯಿಂದ ಇಬ್ಬರು ಸ್ಪರ್ಧಿಗಳನ್ನು ಆಯ್ಕೆಮಾಡಲಾಗುತ್ತದೆ .

ಅಂತಿಮವಾಗಿ ಆಯ್ಕೆಗೊಂಡು ವಿಜೇತರಾದ ಇಬ್ಬರು ಸ್ಪರ್ಧಿಗಳಲ್ಲಿ ಒಬ್ಬರನ್ನು ಕರುನಾಡ ಗಾನತಾರೆ ಎಂದೂ ಮತ್ತೊಬ್ಬರನ್ನು ರನ್ನರ್ ಅಪ್ ಎಂದೂ ಘೋಷಿಸಿ , ಪ್ರಥಮ ಬಹುಮಾನವಾಗಿ 1 , 00 , 000 / – ರೂಪಾಯಿ ನಗದು ಬಹುಮಾನ ಮತ್ತು ಎರಡನೇ ಬಹುಮಾನವಾಗಿ 50 , 000 / – ರೂಪಾಯಿ ಪುರಸ್ಕಾರ ದೊರೆಯಲಿದೆ . ಈ ನೂತನ “ ಗಾನ ಚಂದನ – ಕರ್ನಾಟಕದ ಗಾನ ತಾರೆ ” ಕಾರ್ಯಕ್ರಮವು ಕರ್ನಾಟಕದ ಹಾಡುಗಾರರಿಗೆಲ್ಲರಿಗೂ ಒಂದು ಪ್ರೋತ್ಸಾಹದ ವೇದಿಕೆ ಅಷ್ಟೇ ಅಲ್ಲದೆ , ಕರುನಾಡ ಜನತೆಗೆ ಮನರಂಜನೆಯ ಆಗರವೂ ಆಗಲಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.