ಅಕ್ಟೋಬರ್ 10 ರಿಂದ 17ರ ತನಕ , ಕೋಟೇಶ್ವರದ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾವಳಿ

ಕಶ್ಚಿ ಚೆಸ್ ಸ್ಕೂಲ್ ಕುಂದಾಪುರ ನೇತೃತ್ವದಲ್ಲಿ , ಹಳೆ ವಿದ್ಯಾರ್ಥಿಗಳ ಸಂಘ ಕರ್ನಾಟಕ ಪಬ್ಲಿಕ್ ಸ್ಕೂಲ್,ಕೋಟೇಶ್ವರ ಇವರ ಜಂಟಿ ಸಹಯೋಗದೊಂದಿಗೆ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಇದೇ ಬರುವ ಅಕ್ಟೋಬರ್ 10 ರಿಂದ 17ರ ತನಕ , “ ಅಂತರಾಷ್ಟ್ರೀಯ ಮಟ್ಟದ ಮುಕ್ತ ಫಿಡೆ ರೇಟಿಂಗ್ ” ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮೈದಾನದಲ್ಲಿ ನಡೆಯಲಿದೆ . ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಪಠ್ಯದ ಜೊತೆಯಲ್ಲಿ ಮಾನಸಿಕವಾಗಿ ಹಾಗೂ ಭೌದ್ದಿಕವಾಗಿ ಅಭಿವೃದ್ಧಿ ಹೊಂದಲು ಮತ್ತು ಬೆಳೆಯಲು ಚೆಸ್ ಆಟ ಅತ್ಯಂತ ಪೂರಕವಾಗಿದೆ . ಈ ನಿಟ್ಟಿನಲ್ಲಿ ಕಲ್ವ ಚೆಸ್ ಸ್ಕೂಲ್ ಚೆಸ್ ಆಟದ ತರಬೇತಿ ನೀಡುವುದಲ್ಲದೇ ಮಕ್ಕಳಿಗೆ ಪಂದ್ಯಾಟದಲ್ಲಿ ಭಾಗವಹಿಸಲು ಸದವಕಾಶವನ್ನು ಕಲ್ಪಿಸುತ್ತಿದೆ .

ಈ ದಿಶೆಯಲ್ಲಿ ಈಗಾಗಲೇ ಕುಂದಾಪುರದಲ್ಲಿ ಜಿಲ್ಲಾ ಮಟ್ಟ , ಅಂತರ್ ಜಿಲ್ಲಾ ಮಟ್ಟ , ರಾಜ್ಯ ಮಟ್ಟ , ಹೊನಲು ಬೆಳಕು ಹಾಗೂ ಸಮುದ್ರ ಕಿನಾರೆಯಲ್ಲಿ ಚೆಸ್ ಪಂದ್ಯಾವಳಿಗಳನ್ನು ಆಯೋಜಿಸಿ ಈ ಭಾಗದಲ್ಲಿ ಚೆಸ್ ಆಟದ ಹೊಸ ಆಯಾಮವನ್ನೇ ಆರಂಭಿಸಿದ್ದೇವೆ . ವಿದ್ಯಾರ್ಥಿ ವೇತನವನ್ನು , ಉಚಿತ ಚೆಸ್ ತರಬೇತಿ , ಪ್ರತಿ ತಿಂಗಳು ಉಚಿತ ಚೆಸ್ ಪಂದ್ಯಾಕೂಟವನ್ನು ಹೀಗೆ ಹಲವಾರು ಕಾರ್ಯಕ್ರಮ ನೆಡೆಸಿರುತ್ತೇವೆ . ಹಳೆ ವಿದ್ಯಾರ್ಥಿಗಳ ಸಂಘ ಕರ್ನಾಟಕ ಪಬ್ಲಿಕ್ ಸ್ಕೂಲ್ ( 8 ) ಕೋಟೇಶ್ವರ ನಮ್ಮ ಈ ಸಂಸ್ಥೆಯು ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದ್ದು , ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ . ಶಿಕ್ಷಣ , ಕ್ರೀಡೆ ಮತ್ತು ಸಾಂಸ್ಕೃತಿಕಕ್ಕಾಗಿ ವಿದ್ಯಾರ್ಥಿವೇತನವನ್ನು ಒದಗಿಸುವುದರ ಜೊತೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗುವುದರ ಮೂಲಕ ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರವನ್ನು ನೀಡುತ್ತಾ ಬಂದಿರುತ್ತೇವೆ . ಇದೀಗ ರಾಷ್ಟ್ರಮಟ್ಟದಲ್ಲಿ ಕುಂದಾಪುರದ ಹೆಸರನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಫಿಡೆ ರೇಟಿಂಗ್ ಚೆಸ್ ಪಂದ್ಯಾವಳಿಗೆ ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿದೆ .

ದಕ್ಷಿಣ ಭಾರತದ ಚೆಸ್ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ರೂ . 20 , 32 , 000 ಕ್ಕೂ ಮೊತ್ತದ ನಗದು ಬಹುಮಾನ ಹಾಗೂ 161 ಟ್ರೋಫಿಗಳನ್ನು , ಪ್ರತಿ ವಿಭಾಗ ಹಾಗೂ ವಿವಿಧ ವಯೋಮಿತಿಯಲ್ಲಿ ಗೆದ್ದವರಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು . ಜೊತೆಗೆ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು . ಈ ಪಂದ್ಯಾವಳಿಯಲ್ಲಿ ಕರ್ನಾಟಕ , ಕೇರಳ , ಗೋವಾ , ತಮಿಳುನಾಡು , ದೆಹಲಿ , ಮಹಾರಾಷ್ಟ್ರ , ಆಂಧ್ರಪ್ರದೇಶ , ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಂದ ಹಾಗೂ ವಿದೇಶಗಳಿಂದಲೂ ಒಂದು ಸಾವಿರಕ್ಕೂ ಅಧಿಕ ಚೆಸ್ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ . ಹಾಗೆಯೇ ಚೆಸ್ ಗ್ರಾಂಡ್ ಮಾಸ್ಟರ್ಸ್ , ಅಂತರಾಷ್ಟ್ರೀಯ ಚೆಸ್ ಮಾಸ್ಟರ್ಸ್ ಹಾಗೂ ಅಗ್ರ ಶ್ರೇಯಾಂಕಿತ ಚೆಸ್ ಆಟಗಾರರು ಭಾಗವಹಿಸಲಿದ್ದಾರೆ .

-ಸುಬ್ರಹ್ಮಣ್ಯ ಶೆಟ್ಟಿಗಾರ

ಹಳೆ ವಿದ್ಯಾರ್ಥಿಗಳ ಸಂಘ ಕರ್ನಾಟಕ ಪಬ್ಲಿಕ್ ಸ್ಕೂಲ್ ( ರಿ )

-ನರೇಶ್

ಕಶ್ಚಿ ಚೆಸ್ ಸ್ಕೂಲ್

City Today News

(citytoday.media)

9341997946

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.