ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಮುಷ್ಕರ

ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವ ಬಗ್ಗೆ . ಸೂಚಿತ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ 412 ಸರ್ಕಾರಿ ಪದವಿ ಕಾಲೇಜುಗಳಲ್ಲಿ 15 – 20 ವರ್ಷಗಳಿಂದ ಕಡಿಮೆ ಗೌರವಧನಕ್ಕೆ ಸುಮಾರು ಹತ್ತು ಸಾವಿರ ಅತಿಥಿ ಉಪನ್ಯಾಸಕರು ಸೇವೆಸಲ್ಲಿಸುತ್ತಿದ್ದು ಸರ್ಕಾರ ನೀಡುತ್ತಿರುವ 11000 / – ಮತ್ತು 13000 / – ದಿಂದ ಜೀವನ ನಿರ್ವಹಣೆ ಮಾಡಲು ಕಷ್ಟವಾಗಿದೆ . ನಮ್ಮನ್ನಾಳುವ ಸರ್ಕಾರದ ಮುಂದ ನಮಗೆ ಕನಿಷ್ಠ 35000 / – ವೇತನ ಹಾಗೂ ಸೇವಾ ಭದ್ರತೆ ಒದಗಿಸಬೇಕೆಂದು ಮನವಿ ಮಾಡಿಕೊಳ್ಳುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ , ಕಳೆದ ಸರ್ಕಾರ 5000 ರೂ ಗೌರವಧನ ಹೆಚ್ಚಳ ಮಾಡಿದ್ದೇವೆ ಎಂದು ಮಾಧ್ಯಮದಲ್ಲಿ ಹೇಳಿಕೆ ನೀಡಿತ್ತು ಆದರೆ ಅದು ಅಧಿಕೃತ ಸರ್ಕಾರಿ ಆದೇಶವಾಗಿ ಹೊರಬರಲಿಲ್ಲ , ಈಗಿನ ಸರ್ಕಾರ ನಮ್ಮ ಗೌರವಧನ ಹೆಚ್ಚಳ ಮಾಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ನಮ್ಮ ಪ್ರಮುಖ ಬೇಡಿಕೆಯಾದ ಸೇವಾಭದ್ರತೆ ಬಗ್ಗೆ ಯಾವುದೇ ಸ್ಪಷ್ಟವಾದ ನಿಲುವನ್ನು ತಳೆದಿರುವುದಿಲ್ಲ . ಆದ್ದರಿಂದ ನಮ್ಮ ಹಲವಾರು ವರ್ಷಗಳ ನ್ಯಾಯಯುತವಾದ ಬೇಡಿಕೆಯ ಈಡೇರಿಕೆಗಾಗಿ ರಾಜ್ಯಾದ್ಯಂತ ಪದವಿ ಕಾಲೇಜುಗಳ ತರಗತಿಗಳನ್ನು ಬಹಿಷ್ಕರಿಸಿ ದಿನಾಂಕ 11 / 10 / 2019 ರ ಶುಕ್ರವಾರದಿಂದ ಅನಿಷ್ಟಾವದಿ ಮುಷ್ಕರ ಮಾಡಲು ತೀರ್ಮಾನಿಸಲಾಗಿದೆ . ಈ ಮುಷ್ಕರದಲ್ಲಿ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ಪಾಲ್ಗೊಳ್ಳಲಿದ್ದಾರೆ .

ಬೇಡಿಕೆಗಳು

1 ) ಈ ಹಿಂದಿನ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಹೆಚ್ಚಳ ಮಾಡಲು ಉದ್ದೇಶಿಸಿದ್ದ 5000 / – ರೂಗಳ ಗೌರವಧನವನ್ನು ಜುಲೈ ತಿಂಗಳಿಗೆ ಪೂರ್ವಾನ್ವಯವಾಗುವಂತೆ ಬಿಡುಗಡೆ ಮಾಡುವುದು ,

2 ) ಯು . ಜಿ . ಸಿ ನಿಯಮಾವಳಿ ಪ್ರಕಾರ ಅತಿಥಿ ಉಪನ್ಯಾಸಕರಿಗೆ ಒಂದು ಗಂಟೆಗೆ 1500 / – ಅಥವಾ ಮಾಸಿಕ 50 , 000 / – ರೂಗಳನ್ನು ಗೌರವಧನವಾಗಿ ನೀಡಬೇಕೆಂದು ಉನ್ನತ ಶಿಕ್ಷಣ ಇಲಾಖೆಗೆ ನೀಡಿರುವ ನಿರ್ದೇಶನವನ್ನು ಜಾರಿಗೊಳಿಸುವುದು ,

3 ) ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಒದಗಿಸಲು ಸೂಕ್ತ ಕಾನೂನು ನಿಯಮಾವಳಿ ರೂಪಿಸಲು ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಶಿಕ್ಷಣ ಇಲಾಖೆ ಸಚಿವರು ಮತ್ತು ಅಧಿಕಾರಿಗಳು ಹಾಗೂ ಅತಿಥಿ ಉಪನ್ಯಾಸಕರ ಸಂಘಟನೆಗಳನ್ನೊಳಗೊಂಡಂತೆ ಶೀಘ್ರವಾಗಿ ಸಭೆ ಕರೆಯುವುದು .

4 ) ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸುವವರೆಗೆ ಅವರನ್ನೇ ಸೇವೆಯಲ್ಲಿ ಮುಂದುವರಿಸಿ ವರ್ಷದ ಹನ್ನೆರಡು ತಿಂಗಳೂ ಗೌರವಧನ ಪಾವತಿಸುವುದು ,

City Today News

(citytoday.media)

9341997946

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.