ನಿರಾಶ್ರಿತರ ಬಗ್ಗೆ ಉದಾಸೀನ ಮಾಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿಸಿ ದಿನಾಂಕ : 10 – 10 – 2019ರಂದು ಬೆಳಿಗ್ಗೆ 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸಾವಿರಾರು ಸಂಖ್ಯೆಯ ರೈತರು ಪ್ರತಿಭಟನಾ ಮೆರವಣಿಗೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯು ತಮ್ಮಲ್ಲಿ ಮನವಿ ಮಾಡುವುದೇನೆಂದರೆ ರಾಜ್ಯದಲ್ಲಿ ಪ್ರವಾಹ ಹೊಡೆತಕ್ಕೆ ಮನೆ ಮಠ , ಬೆಳೆದ ಬೆಳೆ ಕಳೆದುಕೊಂಡು ನಿರಾಶ್ರಿತರಾಗಿ ಬೀದಿಗೆ ಬಂದಿರುವ ರೈತರನ್ನು ಕಾಪಾಡಲು ತಾತ್ಕಾಲಿಕ ಗಂಜಿ ಕೇಂದ್ರ ತೆರೆದರು . ಇದಕ್ಕೆ ರಾಜ್ಯದ ಎಲ್ಲಾ ಕಡೆಯಿಂದಲೂ ನಾಗರೀಕರು ತಮ್ಮ ಕೈಲಾದ ಮಟ್ಟಿಗೆ ನೆರವು ನೀಡುವ ಮೂಲಕ ಗಂಜಿ ಕೇಂದ್ರಗಳು ನಡೆದವು . ಈಗ ಎಷ್ಟು ಗಂಜಿ ಕೇಂದ್ರಗಳು ನಡೆಯುತ್ತಿವೆ . ಅಧಿಕಾರಿಗಳು ಬಂದು ನೀವು ನಿಮ್ಮ ನಿಮ್ಮ ಬಂಧುಗಳ ಮನೆಗೆ ಹೋಗಬಹುದು . ಬೇರೆ ಎಲ್ಲಿಯಾದರೂ ಹೋಗಿ ಎಂದು ಹೇಳಿ ನೊಂದ ನಿರಾಶ್ರಿತರನ್ನು ಗಂಜಿಕೇಂದ್ರಗಳಿಂದ ಹೊರಕಳುಹಿಸಿ ಗಂಜಿ ಕೇಂದ್ರಗಳನ್ನು ಮುಚ್ಚಿದ್ದಾರೆ . ಬದುಕು ಕಳೆದುಕೊಂಡ ಜನರು ಹೊಸ ಜೀವನ ಕಟ್ಟಿಕೊಳ್ಳಲು ಚಡಪಡಿಸುತ್ತಿರುವಾಗ ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರವು ಸಹ ಅವರ ನೆರವಿಗೆ ಬಾರದೆ ನಿರಾಶ್ರಿತರನ್ನು ಮತ್ತೆ ಬೀದಿಗೆ ತಳ್ಳುತ್ತಿದೆ . ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡುತ್ತಿಲ್ಲ . ಬೆಳೆ ನಷ್ಟ ತುಂಬಿಕೊಟ್ಟರೆ ಸಾಕು ಹೇಗಾದರೂ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ರೈತರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ . ಆದರೆ ರಾಜ್ಯ ಸರ್ಕಾರವು ನಿರಾಶ್ರಿತರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ತಮಗೆ ತೋಚಿದಂತೆ ಹೇಳಿಕೆಗಳನ್ನು ನೀಡುವ ಮೂಲಕ ಮತ್ತಷ್ಟು ನೋವು ನೀಡುತ್ತಿದ್ದಾರೆ . * ರಾಜ್ಯವು ಪ್ರವಾಹದಿಂದ ತತ್ತರಿಸಿ ಸಾವು – ನೋವು ಸಂಭವಿಸಿದ್ದರೂ ಸಹ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ರವರು ರಾಜ್ಯಕ್ಕೆ ಭೇಟಿ ನೀಡದೆ ಕೇವಲ ತಮ್ಮ ಪ್ರತಿಷ್ಠೆ ಹಾಗೂ ಪ್ರಚಾರಕ್ಕೋಸ್ಕರ ಚಂದ್ರಯಾನ ಉಡಾವಣೆಯ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡಿದರು . ಆಗಲೂ ಸಹ ರಾಜ್ಯದಲ್ಲಿ ಸಂಕಷ್ಟಕ್ಕೀಡಾಗಿರುವವರ ಪರಿಸ್ಥಿತಿಯ ಬಗ್ಗೆ ಕಿಂಚಿತ್ತೂ ಮಾತನಾಡದೇ ಇರುವುದನ್ನು ಕಂಡರೆ ಇವರಿಗೆ ರೈತರ ಮೇಲೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎಂಬುದು ಸಾಬೀತಾಗುತ್ತದೆ . ಮೋದಿಯವರು ಅಧಿಕಾರಕ್ಕೇರುವ ಮುನ್ನ ರೈತರಿಗೆ ನೀಡಿದ್ದ ಭರವಸೆಗಳೆಲ್ಲವೂ ಸಹ ಸುಳ್ಳಾಗಿಸಿವೆ . ಇದರಿಂದ ಇವರು ರೈತ ವಿರೋಧಿ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ . ಕಳೆದ ವರ್ಷದ ಬರಗಾಲದ ಪರಿಹಾರವು ಈಗಿನವರೆಗೂ ಒಂದು ನಯಾ ಪೈಸೆಯು ರೈತರಿಗೆ ಸೇರಿರುವುದಿಲ್ಲ . ಕೇಂದ್ರ ಸರ್ಕಾರ 2018ರ ಬರಗಾಲದ ಪರಿಹಾರವಾಗಿ 1059 ಕೋಟಿ ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರ ಈಗಿನವರೆಗೂ ರೈತರಿಗೆ ನೀಡಿರುವುದಿಲ್ಲ . ಇದನ್ನು ಗಮನಿಸಿದರೆ ಆಳುವ ಸರ್ಕಾರಗಳಿಗೆ ರೈತರ ಮೇಲೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎಂಬುದು ಸಾಬೀತಾಗುತ್ತದೆ .

ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ಪ್ರತಿ ವರ್ಷ ನಡೆಸುತ್ತಿದ್ದರು . ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ಥರ ವಿರೋಧ ಎದುರಿಸಬೇಕಾಗುತ್ತದೆ ಎಂಬ ಮುನ್ಸೂಚನೆಯನ್ನು ಅರಿತುಕೊಂಡ ಸರ್ಕಾರವು ಬೆಂಗಳೂರಿನಲ್ಲಿಯೇ ಅಧಿವೇಶನ ನಡೆಸಲು ತೀರ್ಮಾನಿಸಿರುವುದು ದುರಂತವೇ ಸರಿ . ಈ ರೀತಿ ನಿರಾಶ್ರಿತರ ಬಗ್ಗೆ ಉದಾಸೀನ ಮಾಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿಸಿ ದಿನಾಂಕ : 10 – 10 – 2019ರಂದು ಬೆಳಿಗ್ಗೆ 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸಾವಿರಾರು ಸಂಖ್ಯೆಯ ರೈತರು ಪ್ರತಿಭಟನಾ ಮೆರವಣಿಗೆಯೊಂದಿಗೆ ಹೊರಟು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ .

-ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯಾಧ್ಯಕ್ಷರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.