ಕನಕಪುರ ತಾಲ್ಲೂಕು , ತಹಶೀಲ್ದಾರ್‌ ಮತ್ತು – ಇತರರ ವಿರುದ್ಧ ದೂರು

ಕನಕಪುರ ತಾಲ್ಲೂಕು , ಕಸಬಾ ಹೋಬಳಿ , ವೆಂಕಟಪ್ಪನದೊಡ್ಡಿ ವಾಸಿಯಾದ ನಾನು ಈ ಮೂಲಕ ಬರೆಸಿದ ದೂರಿನ ವಿವರ ಏನೆಂದರೆ , ನಮ್ಮ ತಂದೆಯಾದ ವೆಂಕಟಪ್ಪ ಬಿನ್ ಲೇಟ್ ನಾಗೇಗೌಡ ರವರ ಹೆಸರಿನಲ್ಲಿ ಕನಕಪುರ ತಾಲ್ಲೂಕು , ಕಸಬಾ ಹೋಬಳಿ , ಅರಳಾಳುಸಂದ್ರ ಗ್ರಾಮದ ಸರ್ವೆ ನಂ . 159 / 1ರಲ್ಲಿ 1 ಎಕರೆ 10 ಗುಂಟೆ ಜಮೀನನ್ನು ಅಕ್ರಮವಾಗಿ ನಮ್ಮ ತಂದೆಯ ಹೆಸರಿನಲ್ಲಿ ವಂಶವೃಕ್ಷ ನಕಲು ಮಾಡಿ ನಮ್ಮ ತಂದೆಯವರ ಹೆಸರಿನಲ್ಲಿ ರಾಜು ಬಿನ್ ವೆಂಕಟಪ್ಪ ಹೆಸರಿಗೆ ಪೌತಿ ಖಾತೆಗೆ ಅರ್ಜಿ ಸಲ್ಲಿಸಿದ್ದು , ಇವರು ಕಸಬಾ ಹೋಬಳಿ , ಗಾಣಾಳು ಗ್ರಾಮದ ವಾಸಿಯಾಗಿರುತ್ತಾರೆ . ಇದೇ ಗ್ರಾಮದ ವಾಸಿಯಾದ ಮೂಗಯ್ಯ ಬಿನ್ ಲೇಟ್ ಬ್ಯಾಟೇಗೌಡರ ಮಗ ಮೂಗಯ್ಯ ನಾನೇ ಎಂದು ನಕಲಿ ಮೂಗಯ್ಯನ ಹೆಸರಿನಲ್ಲಿ ಸಹಿಮಾಡಿ ಕನಕಪುರ ತಾಲ್ಲೂಕು , ಕಸಬಾ ಹೋಬಳಿ , ಅರಳಾಳುಸಂದ್ರ ಗ್ರಾಮದ ಜಯರಾಮ ಬಿನ್ ಲೇಟ್ ಕರಿಯಯ್ಯ ಎಂಬುವನು ಸಹಿ ಮಾಡಿಖಾತೆ ಮಾಡಲು ತಕರಾರು ಸಲ್ಲಿಸಿದ್ದು , ಈ ವ್ಯಕ್ತಿಯು ಎಸ್‌ಸಿ / ಎಸ್‌ಟಿ ಜನಾಂಗದವರಾಗಿರುತ್ತಾರೆ . ಮೂಗಯ್ಯ ಬಿನ್ ಲೇಟ್ ಬ್ಯಾಟೇಗೌಡ ರವರು ಒಕ್ಕಲಿಗಜನಾಂಗಕ್ಕೆ ಸೇರಿದವರಾಗಿರುತ್ತಾರೆ . ನಂತರ ತಹಶೀಲ್ದಾರ್ ಕನಕಪುರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು , ಆರ್‌ಆರ್‌ಟಿ ( ಡಿಸ್ ) ನಂ . 129 / 2016 – 17 ರಂತೆ ಕನಕಪುರ ತಹಶೀಲ್ದಾರಾದ ಆನಂದಯ್ಯ ರವರ ನ್ಯಾಯಾಲಯದ ಮುಂದೆ ನಕಲಿ ಮೂಗಯ್ಯನ ಸಹಿಯನ್ನು ಜಯರಾಮ ಬಿನ್ ಕರಿಯಯ್ಯ ಎಂಬುವನು ಮತ್ತು ರಾಜು ಬಿನ್ ಲೇಟ್ ವೆಂಕಟಪ್ಪ ಉರುಫ್ ವೆಂಕಟೇಗೌಡ ಎಂಬ ವೆಂಕಟಪ್ಪನಮಗ ರಾಜು ಎಂದು ಹೇಳಿ ಮಾನ್ಯ ತಹಶೀಲ್ದಾರ್ ರವರ ನ್ಯಾಯಾಲಯದಲ್ಲಿ ನಕಲಿ ರಾಜಿ ಪ್ರಮಾಣ ಪತ್ರ ಸಲ್ಲಿಸಿ ರಾಜು ಬಿನ್ ವೆಂಕಟಪ್ಪ ಎಂಬುವವರಿಗೆ ಮಾನ್ಯ ತಹಶೀಲ್ದಾರ್‌ ಆನಂದಯ್ಯರವರು ದಿನಾಂಕ : 29 . 9 . 2016 ಇವರುಗಳ ಜೊತೆ ಶಾಮೀಲಾಗಿ ಆರ್‌ಆರ್‌ಟಿ ( ಡಿಸ್ ) ನಂ . 129 / 2016 – 17 ರಂತೆ ಈ ಮೇಲ್ಕಂಡ ವ್ಯಕ್ತಿಗಳ ಹೆಸರಿಗೆ ಆದೇಶ ಮಾಡಿರುತ್ತಾರೆ . ಮತ್ತು ಸ್ಥಳ ಪರಿಶೀಲನೆಮಾಡದೆ ಹಾಗೂ ಗ್ರಾಮಸ್ಥರ ಹೇಳಿಕೆಯನ್ನು ಕೇಳದೆ ಪಾರ್ಥ ಬಿನ್ ಲೇಟ್ ವೆಂಕಟಾಚಲಯ್ಯ ಗಾಣಾಳು ದಾಖೆ , ಗೆಂಡೆಕೆರೆ ಗ್ರಾಮದ ವಾಸಿಯಾಗಿರುತ್ತಾನೆ . ಕನಕಪುರ ತಾಲ್ಲೂಕು , ಕಸಬಾ ಹೋಬಳಿ , ತಿಗಳರಹಳ್ಳಿ ಮತ್ತು ತಾಮಸಂದ್ರ ವೃತ್ತ ಗ್ರಾಮ ಲೆಕ್ಕಾಧಿಕಾರಿಯಾದ ಸೋಮಶೇಖರ್ , ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರಾದ ದೊರೆಸ್ವಾಮಿ , ತಹಶೀಲ್ದಾರರಾದ ಆನಂದಯ್ಯ ಇವರು ಲಕ್ಷಾಂತರ ಬೆಲೆ ಬಾಳುವ ನಮ್ಮ ಜಮೀನನ್ನು ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಿ ಪಹಣಿ ಬಂದ ನಂತರ ಕನಕಪುರ ಉಪ ನೋಂದಣಿ ಸಂಖ್ಯೆ : 1367ರಂತೆ ದಿನಾಂಕ : 19 . 05 . 2017ರಂದು ಪಾರ್ಥ ಬಿನ್ ಲೇಟ್ ವೆಂಕ ಟಾಚಲಯ್ಯ ಎಂಬುವನ ಹೆಸರಿಗೆ ಕೋಟ್ಯಂತರ ರೂಪಾಯಿಗಳಿಗೆ ಬೆಲೆ ಬಾಳುವ ಆಸ್ತಿಯನ್ನು ಕ್ರಯದ ಕರಾರು ನೋಂದಾಯಿಸಿ , ನೋಂದಣಿಯಲ್ಲಿ ಕಡಿಮೆ ದರ ನಮೂದಿಸಿ ಬಂದ ಹಣದಲ್ಲಿ ಈ ಮೇಲ್ಕಂಡ ಕನಕಪುರ ತಹಶೀಲ್ದಾರ್ ಆನಂದಯ್ಯ , ರಾಜು ಬಿನ್ ಲೇಟ್ ವೆಂಕಟಪ್ಪ , ಪಾರ್ಥ ಬಿನ್ ಲೇಟ್ ವೆಂಕಟಾಚಲಯ್ಯ ಎಂಬುವವರು ಮತ್ತು ರೆವಿನ್ಯೂ ಅಧಿಕಾರಿಗಳು ದುರುಪಯೋಗಪಡಿಸಿಕೊಂಡಿರುತ್ತಾರೆ . ಈ ಮೇಲ್ಕಂಡ ವ್ಯಕ್ತಿ ನಮ್ಮ ತಂದೆಯ ಹೆಸರಿನಲ್ಲಿನ ಜಮೀನನ್ನು ವಂಚನೆಮಾಡಿ ಹಾಗೂ ತಹಶೀಲ್ದಾರ್‌ಆನಂದಯ್ಯ ನಂತರ ನಾನು ತಹಶೀಲ್ದಾರ್ ರವರ ಬಳಿ ಎಲ್ಲಾ ದಾಖಲೆಗಳನ್ನು ತೋರಿಸಲು ಹೋದಾಗ ಮಾನ್ಯ ಉಪವಿಭಾಗಾಧಿಕಾರಿಗಳಿಗೆ ರದ್ದುಪಡಿಸಿ ನಿನ್ನ ಹೆಸರಿಗೆ ಖಾತೆ ವರ್ಗಾಯಿಸಲು ರೂ . 5 , 00 , 000 / – ( ಐದು ಲಕ್ಷ ರೂಪಾಯಿಗಳನ್ನು ಕೊಡಬೇಕಾಗುತ್ತದೆ ಎಂದು ತಿಳಿಸಿದರು ಅಲ್ಲದೆ ಮಾನ್ಯ ತಹಶೀಲ್ದಾರ್ ರವರು ತಾವೆ ಮಾಡಿದ ನಕಲು ಆದೇಶವನ್ನು ಮುಚ್ಚಿಡಲು ನನ್ನ ಬಳಿ ಹಣಕ್ಕೆ ಒತ್ತಾಯಿಸಿರುವುದು ಸರಿಯಷ್ಟೆ , ಈ ಮೇಲ್ಕಂಡ ವ್ಯಕ್ತಿಗಳ ಜೊತೆ ಸೇರಿ ನಮ್ಮ ತಂದೆಯ ಹೆಸರಿನಲ್ಲಿದ್ದ ಜಮೀನನ್ನು ಮಾರಾಟ ಮಾಡಿ ವಂಚಿಸಿರುತ್ತಾರೆ . ಅದಲ್ಲದೆ ಈ ಹಿಂದೆ ಕನಕಪುರ ತಾಲ್ಲೂಕು , ಕಸಬಾ ಹೋಬಳಿ , ತುಂಗಣಿ ಗ್ರಾಮದ ಸರ್ವೆ ನಂ . 42 / 2ರಲ್ಲಿ 7 ಎಕರೆ 18 ಗುಂಟೆ ಕ್ರಯ ಪತ್ರದ ಸಂಖ್ಯೆ : 344 / 83 , ದಿನಾಂಕ : 26 . 5 . 1983 ರಂತೆ 2013 – 14 ರ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ – 209ಕ್ಕೆ ಭೂ ಸ್ವಾಧೀನವಾಗಿದ್ದು , ಜಮೀನಿನ ಕ್ರಯದಾರರಾದ ಆರ್ ರವಿರಾಜ್ ಬಿನ್ ರಾಜು ಜಿ ಇವರ ಹೆಸರಿನಲ್ಲಿ ಇದ್ದ ಪಹಣಿಯನ್ನು 1998 ರ ಸಾಲಿನನಂತರ ತುಂಗಣಿ ಗ್ರಾಮದ ಸರ್ವೆ ನಂ . 42 / 2 ರಲ್ಲಿ 7 ಎಕರೆ ಪೈಕಿ 18 ಗುಂಟೆ ಮೂಲ ಖಾತೆದಾರರಿಂದ ಮೇಲ್ಕಂಡ ವ್ಯಕ್ತಿಗಳು ಎಂ . ಆರ್ ಹೆಚ್ 77 / 2014 – 15 ರಲ್ಲಿ ಪೌತಿ ಖಾತೆಯಂತೆ ಗೌರಮ್ಮ ಕೋಂ . ಕರಿಯಪ್ಪ ಎಂಬುವರ ಹೆಸರಿಗೆ ಖಾತೆ ವರ್ಗಾಯಿಸಿ ರಾಷ್ಟ್ರೀಯ ಹೆದ್ದಾರಿ 209 ಮಳವಳ್ಳಿ ಕನಕಪುರ ತಾಲ್ಲೂಕು , ಕಸಬಾ ಹೋಬಳಿ , ತುಂಗಣಿ ಗ್ರಾಮದ ಸರ್ವೆ ನಂ , 42 / 2ರಲ್ಲಿ 7 ಎಕರೆ 8 ಗುಂಟೆ ಜಮೀನಿನ ಪೈಕಿ 1 ಎಕರೆ 20 ಗುಂಟೆ ಜಮೀನನ್ನು ಪರಿಹಾರ ಮೊತ್ತ ತೆಗೆದುಕೊಂಡು ವಂಚಿಸಿರುತ್ತಾರೆ . ಇವರ ಕುಟುಂಬದ ಸಂಬಂಧಿಕರುಗಳು ಇವರ ಮೇಲೆ ಕನಕಪುರ ಪರ ಠಾಣೆಯಲ್ಲಿ ದಿನಾಂಕ : 21 . 12 . 2016 ರಲ್ಲಿ ಅಪರಾಧ ಸಂಖ್ಯೆ ಎಫ್‌ಐಆರ್‌ . 0078 / 2016 ವಂಚನೆ ಪ್ರಕರಣವು ದಾಖಲಾಗಿರುತ್ತದೆ . ಆದ್ದರಿಂದ ಖಾವಂದರಾದ ತಾವುಗಳು ಮೇಲ್ಕಂಡ ವ್ಯಕ್ತಿಗಳು ಪದೇ ಪದೇ ಬೇರೆಯವರ ಜಮೀನುಗಳನ್ನು ನಕಲಿ ಖಾತೆ , ನಕಲಿ ಕ್ರಯಗಳನ್ನು ಮಾಡಿ , ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿರುತ್ತಾರೆ . ನನಗೆ ಈ ಎಲ್ಲಾ ವಿಚಾರಗಳು ದಾಖಲೆಗಳು ತಡವಾಗಿ ತಿಳಿದಿರುವುದರಿಂದ ಇವರ ವಿರುದ್ಧ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಕೋರುತೇನೆ .

-ಬಾಲರಾಜು

ಬಿನ್ ಲೇಟ್ ವೆಂಕಟಪ್ಪ @ ವೆಂಕಟೇಗೌಡ ವೆಂಕಟಪನದೊಡ್ಡಿ ಗ್ರಾಮ ಗಾಣಾಳು ದಾಖೆ ( ಅಂಚೆ ) , ಕಸಬಾ ಹೋಬಳಿ , ಕನಕಪುರ ತಾಲ್ಲೂಕು

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.