ಈ ಬಾರಿಯ ಹಬ್ಬದ ಋತುವನ್ನು ಸಂಭ್ರಮಿಸಲು ಹೆಚ್ಚಿನ ಕಾರಣಗಳನ್ನು ನೀಡಿದ ಸ್ಯಾಮ್ಸಂಗ್ ಇಂಡಿಯಾ , ನೂತನ ಗೆಲಾಕ್ಸಿ ಎ70ಎಸ್‌ಗಳ ಜೊತೆಗೆ ಉತ್ಸಾಹಕರ ಕೊಡುಗೆಗಳನ್ನು ಪ್ರಕಟಿಸಿದೆ

ಬೆಂಗಳೂರು , ಅಕ್ಟೋಬರ್ 25 , 2019 : – ಭಾರತದ ಅತ್ಯಂತ ದೊಡ್ಡ ಗ್ರಾಹಕ ವಿದ್ಯುನ್ಮಾನ ಮತ್ತು ಸ್ಟಾರ್ಟ್ ಫೋನ್ ಬ್ರಾಂಡ್ ಆದ ಸ್ಯಾಮ್‌ಸಂಗ್ ಹಬ್ಬದ ಋತುವಿನ ಆನಂದಕ್ಕೆ ಸೇರ್ಪಡೆಯಾಗಿ ತನ್ನ ಗ್ರಾಹಕರಿಗೆ ಉತ್ಸಾಹಕರ ಕೊಡುಗೆಗಳನ್ನು ಪ್ರಕಟಿಸಿದೆ , ಗೆಲಾಕ್ಸಿ ಎ70ಎಸ್ ಅನ್ನು ಖರೀದಿಸುವ ಗ್ರಾಹಕರು 1 , 999 ರೂ . ಗಳ ಬೆಲೆಯ ಐಟಿಫಿಟ್ ಬ್ಯೂಟೂತ್ ಇಯರ್‌ಫೋನ್ ಅನ್ನು ಉಚಿತವಾಗಿ ಪಡೆಯುತ್ತಾರೆ . ಸ್ಯಾಮ್‌ಸಂಗ್ ಇಂಡಿಯಾ ತನ್ನ ಅತ್ಯಂತ ನೂತನ ಸ್ಮಾರ್ಟ್‌ಫೋನ್ ಗೆಲಾಕ್ಸಿ ಎ70ಎಸ್ ಅನ್ನು ಕಳೆದ ತಿಂಗಳು ಜನಪ್ರಿಯ ಗೆಲಾಕ್ಸಿ ಎ ಶ್ರೇಣಿಯಲ್ಲಿ ಬಿಡುಗಡೆ ಮಾಡಿತ್ತು . ಗೆಲಾಕ್ಸಿ ಎ70ಎಸ್ ಟ್ರಿಪಲ್ ಕ್ಯಾಮರಾ ಸೆಟ್ ಅಪ್ ಹೊಂದಿದ್ದು , ಸ್ಯಾಮ್‌ಸಂಗ್‌ನ ಇತ್ತೀಚಿನ ನವೀನತೆಗಳಿಂದ ಚಾಲಿತವಾಗಿರುವುದಲ್ಲದೆ , 64ಎಂಪಿ ಪ್ರಮರಿ ಶೂಟರ್ ಹೊಂದಿರುತ್ತದೆ , ಗೆಲಾಕ್ಸಿ ಎ70ಎಸ್ ಗಮನಸೆಳೆಯುವಂತಹ ವಿನ್ಯಾಸ ಹೊಂದಿರುವುದಲ್ಲದೆ , ಶಕ್ತಿಶಾಲಿ 4500 ಎಂಎಎಚ್ ಬ್ಯಾಟರಿ ಹೊಂದಿದ್ದು , ಸ್ಯಾಮ್‌ಸಂಗ್ ಪೇ ಆನ್ನು ಬೆಂಬಲಿಸುತ್ತದೆ , ಈ ಆಕರ್ಷಕ ಕೊಡುಗೆ ಅಕ್ಟೋಬರ್ 22 , 2019ರಿಂದ ಲಭ್ಯವಾಗಲಿದೆ . ಜೀವನ ನಡೆಯುತ್ತಿರುವಂತೆಯೇ ಅದನ್ನು ಹಿಡಿದಿಡುವ , ಸಂಪರ್ಕ ಹೊಂದುವ ಮತ್ತು ಹಂಚಿಕೊಳ್ಳಲು ಇಚ್ಚಿಸುವ ಸ್ಥಳೀಯ ಡಿಜಿಟಲ್ ಜನರಿಗಾಗಿ ವಿನ್ಯಾಸಗೊಳಿಸಲಾಗಿರುವ ಗೆಲಾಕ್ಸಿ ಎ70ಎಸ್ ತನ್ನ ವರ್ಗದಲ್ಲಿ ಅತ್ಯುತ್ತಮವಾದ ಹಾಗೂ ನೈಟ್ ಮೋಡ್ ಮತ್ತು ಸೂಪರ್ ಸ್ಪಡಿ ವಿಡಿಯೋ ಜೊತೆಗಿನ 64ಎಂಪಿ ಪ್ರೈಮರಿ ಕ್ಯಾಮರಾ ಹೊಂದಿದ , ವೈಭವಯುತವಾದ 6 . 7 ಇಂಚು ಎಫ್ ಎಚ್ಡಿ + ಇನಿನಿಟಿ – ಯು ಸೂಪರ್ ಅಮೊಎಲ್‌ಇಡಿ ಡಿಸ್‌ಪ್ಲೇ ವೈಶಿಷ್ಟ , ಹೊಂದಿದ್ದು , ಹೆಚ್ಚು ಪೂರ್ಣವಾದ ದೃಶ್ಯ ನೀಡುತ್ತದೆಯಲ್ಲದೆ , ದೈನಂದಿನ ಚಟುವಟಿಕೆಗಳ ಮೂಲೆಯಿಂದ ಮೂಲೆಯವರೆಗಿನ ಸಂಪೂರ್ಣ ಅನುಭವವನ್ನು ನೀಡುತ್ತದೆ , 4500ಎಂಎಎಚ್ ಬ್ಯಾಟರಿ ಜೊತೆಗೆ 25ಡಬ್ಬು , ಸೂಪರ್ ಫಾಸ್ಟ್ ಚಾರ್ಜಿಂಗ್ , ಸ್ಯಾಮ್‌ಸಂಗ್ ಪೇ ಮತ್ತು ನಾಕ್ಸ್ ಸಕ್ಯೂರಿಟೆಗಳನ್ನು ಇದು ಹೊಂದಿರುತ್ತದೆ . ಈ ಉತ್ಪನ್ನ ಆಕ್ಷಾ – ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 675 ಪ್ರೊಸೆಸರ್ ಜೊತೆಗೆ ಗೇಮ್ ಬೂಸ್ಟರ್ ಅನ್ನು ಒಳಗೊಂಡಿದ್ದು , ಅತ್ಯಂತ ಬೇಡಿಕೆ ಇರುವ ಕಾರಗಳನ್ನು ಇದು ಅತ್ಯಂತ ಸುಲಭವಾಗಿ ನಿಭಾಯಿಸುತ್ತದೆ . ಗಮನಸೆಳೆಯುವ ವಿನ್ಯಾಸದ ಜೊತೆಗೆ ಇದು ಅನನ್ಯವಾದ ಜ್ಯಾಮಿತಿಯ ರೂಪಗಳಿಂದ ಸ್ಫೂರ್ತಿಗೊಂಡ ಮತ್ತು ಭವಿಷ್ಯಾತ್ಮಕ ಹೊಲೋಗ್ರಾಫಿಕ್ ಪರಿಣಾಮವನ್ನು ಹಿಂಭಾಗದಲ್ಲಿ ಹೊಂದಿರುತ್ತದೆ . ಗೆಲಾಕ್ಷಿ ಎ70ಎಸ್ ವಿಶೇಷ ಶೈಲಿಯ ನೋಟ ಮತ್ತು ಅನುಭವ ಪ್ರದರ್ಶಿಸುತ್ತದೆ . ಮೂರು ಬೆರಗುಮೂಡಿಸುವ ಬಣ್ಣಗಳಾದ ಪ್ರಿಸಂ ಕ್ರಷ್ ರೆಡ್ , ಕಪ್ಪು ಮತ್ತು ಬಿಳುಪಿನ ಬಣ್ಣಗಳು ಇದರಲ್ಲಿ ಸೇರಿವೆ . ಉಚಿತ ಐಟಿಫಿಟ್ ಬ್ಯೂ ಟೂತ್ ಇಯರ್‌ಫೋನ್ ಅನ್ನು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇ . 10ರ ಹೆಚ್ಚುವರಿ ಕ್ಯಾಷ್‌ಬ್ಯಾಕ್‌ಗಳ ಜೊತೆಗೆ ಉತ್ಸಾಹಕರ ಕೊಡುಗೆಯಾಗಿ ಗೆಲಾಕ್ಸಿ 70ಎಸ್ ಗ್ರಾಹಕರಿಗೆ ನೀಡಲಾಗುತ್ತಿದ್ದು , ಇದು ಶೈಲಿಯ ಸೂಚ್ಯಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ . ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇ . 10ರ ಎಲ್ಲಾ ಕ್ಯಾಷ್‌ಬ್ಯಾಕ್ ಕೊಡುಗೆಯನ್ನು ಎ80 , ಎ50ಎಸ್ , ಎ30ಎಸ್ , ಎ20ಎಸ್‌ಗಳಿಗೆ ಕೂಡ ವಿಸ್ತರಿಸಲಾಗಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.