ಸುಚಿತ್ರ ಫಿಲ್ಮ್ ಸೊಸೈಟಿ ಯಲ್ಲಿ ನಡೆಯಲಿರುವ ಅವಳಹೆಜ್ಜೆಯ 3ನೇ ವರ್ಷದ ಕನ್ನಡತಿ ಉತ್ಸವ

ಪತ್ರಿಕಾ ಪ್ರಕಟಣೆ
ದಿನಾಂಕ : 28/10/2019

ದಿನಾಂಕ 03/11/2019ರಂದು ಸುಚಿತ್ರ ಫಿಲ್ಮ್ ಸೊಸೈಟಿ ಯಲ್ಲಿ ನಡೆಯಲಿರುವ ಅವಳಹೆಜ್ಜೆಯ 3ನೇ ವರ್ಷದ ಕನ್ನಡತಿ ಉತ್ಸವ ದ ಬಗ್ಗೆ

ಅವಳಹೆಜ್ಜೆ ಸಂಸ್ಥೆಯ 2019 ರ ಕನ್ನಡತಿ ಉತ್ಸವದ ನಿಮಿತ್ತ ಈ ವರ್ಷ ರಾಜ್ಯಮಟ್ಟದ ಅಂತರ-ಕಾಲೇಜು ಕಿರುನಾಟಕ ಸ್ಪರ್ಧೆ ಯನ್ನು ಏರ್ಪಡಿಸಿದ್ದು, ಹಲವಾರು ಕಾಲೇಜುಗಳು ನೋಂದಣಿಯನ್ನು ದಾಖಲಿಸಿದ್ದವು. ಮೊದಲ ಹಂತದಲ್ಲಿ ಆಯ್ಕೆಯಾದ ಕಾಲೇಜುಗಳಲ್ಲಿ ಈಗಾಗಲೇ ಆಡಿಷನ್ ಮಾಡಲಾಗಿದ್ದು, ಐದು ತಂಡಗಳು ಕೊನೆಯ ಹಂತದ ಸ್ಪರ್ಧೆಗೆ ಅರ್ಹತೆ ಪಡೆದಿವೆ. ಈ ತಂಡಗಳನ್ನು 03/11/2019 ರಂದು ನಡೆಯಲಿರುವ ಅವಳಹೆಜ್ಜೆಯ 3ನೇ ವರ್ಷದ ಕನ್ನಡತಿ ಉತ್ಸವ ದಲ್ಲಿ ಪ್ರದರ್ಶನ ನೀಡಲು ಆಹ್ವಾನಿಸಲಾಗಿದೆ.

ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ, ಕನ್ನಡತಿಯರ ಪಾತ್ರವನ್ನು ಮರೆಯದೇ ಸ್ಮರಿಸುವ ಆಶಯದಿಂದ 2017ರಲ್ಲಿ ಅವಳಹೆಜ್ಜೆ ವತಿಯಿಂದ ಪ್ರಾರಂಭಿಸಿದ ವಾರ್ಷಿಕ ಹಬ್ಬ “ಕನ್ನಡತಿ ಉತ್ಸವ”. ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಮುಖಾಂತರ ಸ್ತ್ರೀ ನೋಟ ದ ಅನಾವರಣ ಕನ್ನಡತಿ ಉತ್ಸವದ ಧ್ಯೇಯ ಮತ್ತು ಆ ಮೂಲಕ ಸಮಾನತೆಯತ್ತ ಪುಟ್ಟ ಹೆಜ್ಜೆಗಳನ್ನು ಇಡುವ ಪ್ರಯತ್ನ ಅವಳಹೆಜ್ಜೆಯದು.

ಅದರಂತೆಯೇ ಈ ವರ್ಷ ಮಹಿಳಾ ಪ್ರಧಾನ, ಮಹಿಳೆಯರಿಂದಲೇ ರಚಿತವಾದ ಮತ್ತು ನಿರ್ದೇಶಿಸಲ್ಪಟ್ಟ ಕಿರುನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಕಾಲೇಜುಗಳ ಹೆಣ್ಣು ಮಕ್ಕಳು ಕಡಿಮೆ ಕಾಲಾವಧಿಯಲ್ಲಿ, ಅತ್ಯದ್ಭುತ ನಾಟಕ ಕಥಾವಸ್ತುಗಳನ್ನು ಎಣೆದು, ನಿರ್ದೇಶಿಸಿ, ಉತ್ತಮವಾದ ಪ್ರದರ್ಶನವನ್ನು ನೀಡಿರುತ್ತವೆ. ಭಾಗವಹಿಸಿದ ಎಲ್ಲಾ ಕಾಲೇಜು ವಿದ್ಯಾರ್ಥಿನಿಯರಿಗೂ, ಪ್ರಾಧ್ಯಾಪಕರಿಗೂ ಹಾಗು ಪ್ರಾಂಶುಪಾಲರಿಗೂ ಅವಳಹೆಜ್ಜೆ ತಂಡವು ಅಭಾರಿಯಾಗಿರುತ್ತದೆ.

ಐದು ತಂಡಗಳು “ಕನ್ನಡತಿ ಉತ್ಸವ”ದ ವೇದಿಕೆಯಲ್ಲಿ ಪ್ರದರ್ಶನ ನೀಡುವ ಮೂಲಕ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. ಗೆದ್ದ ಮೂರು ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು ಹಾಗೂ ಭಾಗವಹಿಸಿದ ಎಲ್ಲಾ ಕಾಲೇಜುಗಳಿಗೂ ಅವಳಹೆಜ್ಜೆ ವತಿಯಿಂದ ಮಹಿಳಾ ಸಬಲೀಕರಣ ಮತ್ತು ಕೌಶಲ್ಯಾಭಿವೃದ್ಧಿ ಸಂಬಂಧಿಸಿದ ಒಂದು ದಿನದ ಉಚಿತ ಕಾರ್ಯಾಗಾರ ವನ್ನು ನೀಡಲಾಗುವುದು. ಈ ಸ್ಪರ್ಧೆಯ ತೀರ್ಪುಗಾರರಾಗಿ ರಂಗಭೂಮಿಯ ನುರಿತ ಕಲಾವಿದೆಯರು ಜವಾಬ್ದಾರಿ ವಹಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ನಾತಿಚರಾಮಿ ಖ್ಯಾತಿಯ ಶರಣ್ಯಾ ರವರು ನೆರವೇರಿಸಲಿದ್ದಾರೆ. ಕಿರುನಾಟಕ ಸ್ಪರ್ಧೆಯ ನಂತರ ಸ್ತ್ರೀನೋಟ ವಿಷಯಾಧಾರಿತ ಸಂವಾದ ನಡೆಯಲಿದ್ದು ಸಾಹಿತಿ, ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕರಾದ ಬಿ.ಸುರೇಶರವರು,ಶರಣ್ಯ, ಮಾನಸಿಕ ತಜ್ಞೆ ಪದ್ಮಾಕ್ಷಿ ಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನವೆಂಬರ್ 3 ನೇ ತಾರೀಖು ಭಾನುವಾರದಂದು ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯ ‘ನಾಣಿ ಅಂಗಳ’ ವು ಬೆಳಗ್ಗೆ 9:30 ರಿಂದ 1:30 ವರೆಗೆ ಕನ್ನಡತಿ ಉತ್ಸವ ಕ್ಕೆ ಸಾಕ್ಷಿಯಾಗಲಿದೆ. ಈ ಕಾರ್ಯಕ್ರಮವು ಯಶಸ್ವಿಯಾಗಲು ನಿಮ್ಮೆಲ್ಲರ ಸಹಕಾರ, ಬೆಂಬಲವನ್ನು ಕೋರುತ್ತಾ ನಾಡಿನ ಎಲ್ಲಾ ಕನ್ನಡಿಗರನ್ನು, ಕನ್ನಡತಿಯರನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ.

ಉಚಿತ ಪ್ರವೇಶ : ನೋಂದಾಯಿಸಲು ಸಂಪರ್ಕಿಸಿ 9742607082

ಧನ್ಯವಾದಗಳು,
ಶಾಂತಲಾ ದಾಮ್ಲೆ,
ಸ್ಥಾಪಕಿ ಮತ್ತು ಮುಖ್ಯಸ್ಥೆ, ಅವಳಹೆಜ್ಜೆ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.