ಶ್ರೀ ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿ ಕೇವಲ ಪ್ರಚಾರಕ್ಕಾಗಿ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ – ಬಿ . ಎಸ್ . ಯಡಿಯೂರಪ್ಪ

ಬೆಳಗಾವಿಯಲ್ಲಿ ನಿಂತು ವಿಪಕ್ಷ ನಾಯಕರಾದ ಶ್ರೀ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆ :

• ಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡಿರುವುದಿಲ್ಲ

• ಹತ್ತು ಸಾವಿರ ರೂಪಾಯಿ ಸಹ ತಲುಪಿಲ್ಲ .

• ಸರ್ಕಾರ ಸತ್ತು ಹೋಗಿದೆ ,

ಶ್ರೀ ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿ ಕೇವಲ ಪ್ರಚಾರಕ್ಕಾಗಿ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ . ಈ ಹಿಂದೆ ಐದು ವರ್ಷ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಸಿದ್ದರಾಮಯ್ಯನವರಿಗೆ ಜಿಲ್ಲಾಧಿಕಾರಿಗಳಿಂದ ಅಧಿಕೃತವಾಗಿ ಮಾಹಿತಿ ಪಡೆದು ಹೇಳಿಕೆ ನೀಡಬಹುದಾಗಿತ್ತೆಂಬ ಸಾಮಾನ್ಯ ಅರಿವು ಇಲ್ಲದಿರುವುದು ದುರದೃಷ್ಟಕರ . ಈ ರೀತಿಯ ಹೇಳಿಕೆ ಕೊಟ್ಟು ಸಂತ್ರಸ್ತರ ಮಧ್ಯೆ ಗೊಂದಲ ಸೃಷ್ಟಿ ಮಾಡುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ .

ಈಗ ತಾನೆ ನಾನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮಾತನಾಡಿದ್ದು , ಅವರ ಕೊಟ್ಟ ಮಾಹಿತಿ ಪ್ರಕಾರ :

• ಒಂದು ಲಕ್ಷ ಹನ್ನೆರಡು ಸಾವಿರ ಜನರಿಗೆ ಹತ್ತು ಸಾವಿರದಂತೆ ಪರಿಹಾರ ಬಿಡುಗಡೆ ಮಾಡಲಾಗಿದೆ . ಮನೆ ಕಟ್ಟಿಕೊಳ್ಳಲು ಸರ್ಕಾರ ಘೋಷಿಸಿರುವ ರೂ ಐದು ಲಕ್ಷಗಳಲ್ಲಿ , ಅಡಿಪಾಯ ಹಾಕಲು ಪ್ರಾರಂಭಿಕ ಕಂತಾಗಿ ಹದಿನಾಲ್ಕು ಸಾವಿರ ಜನರಿಗೆ , ರೂ . ಒಂದು ಲಕ್ಷದಂತೆ ಈಗಾಗಲೇ ಬಿಡುಗಡೆ ಆಗಿದೆ .

• ಇಪ್ಪತ್ತೂರು ಸಾವಿರ ಜನರಿಗೆ ಮನೆ ರಿಪೇರಿ ಹಾಗೂ ಇತರೆ ಅವಶ್ಯಕತೆಗಳಿಗಾಗಿ ರೂ . 50 ಸಾವಿರದಂತೆ ಕೊಡಲಾಗಿದೆ , ಬೆಳೆ ಪರಿಹಾರಕ್ಕಾಗಿ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ , ಸಂತ್ರಸ್ತರ ಖಾತೆಗೆ ಜಮಾ ಮಾಡಲು ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ .

ಈ ಅಂಕಿ ಅಂಶಗಳು ಬಗ್ಗೆ ವಾಸ್ತವತೆ ತಿಳಿದುಕೊಂಡು ಶ್ರೀ ಸಿದ್ದರಾಮಯ್ಯನವರು ಹೇಳಿಕೆ ನೀಡುವುದು ಅವರ ಸ್ಥಾನಕ್ಕೆ ಗೌರವ ತರುತ್ತದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.