ಅಖಿಲ ಭಾರತ ಯಾದವ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿ ಪರಿಷತ್ತಿನ ಸಭೆ ಹಾಗು ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಸಂಘಗಳ ಪದಾಧಿಕಾರಿಗಳ ಸಮಾವೇಶ

ದಿನಾಂಕ 10 – 11 – 2019ರಂದು ( ಭಾನುವಾರ ) ಬೆಂಗಳೂರು ನಗರ ಕೃಷ್ಣರಾಜಪುರದಲ್ಲಿರುವ ಸೌತ್ ಈಸ್ಟ್ ಏಶಿಯಾ ಕಾಲೇಜಿನಲ್ಲಿ ಅಖಿಲ ಭಾರತ ಯಾದವ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿ ಪರಿಷತ್ತಿನ ಸಭೆ ಹಾಗು ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಸಂಘಗಳ ಪದಾಧಿಕಾರಿಗಳ ಸಮಾವೇಶವನ್ನು ಹಮ್ಮಿಕೊಂಡಿದ್ದು ಸದರಿ ಸಮಾವೇಶವನ್ನು ಶ್ರೀ ಶ್ರೀ ಶ್ರೀ ಯಾದವಾನಂದ ಸ್ವಾಮೀಜಿಯವರ ಸಮಕ್ಷಮದಲ್ಲಿ ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ . ಬಿ . ಎಸ್ . ಯಡ್ಯೂರಪ್ಪನವರು ಉದ್ಘಾಟಿಸಲಿದ್ದಾರೆ .

ಸದರಿ ಸಮಾರಂಭದಲ್ಲಿ ಕೇಂದ್ರದ ಸಚಿವರುಗಳಾದ ಶ್ರೀ . ಡಿ . ವಿ . ಸದಾನಂದಗೌಡರು ಮಾನ್ಯ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು , ಶ್ರೀ ನಿತ್ಯಾನಂದ್ ರೈ ಯಾದವ್ , ಮಾನ್ಯ ಗೃಹ ರಾಜ್ಯ ಸಚಿವರು ಹಾಗು ನಮ್ಮ ರಾಜ್ಯದ ಸಚಿವರುಗಳಾದ ಡಾ . ಸಿ . ಎನ್ ಅಶ್ವಥ್‌ನಾರಾಯಣ್ , ಮಾನ್ಯ ಉಪಮುಖ್ಯಮಂತ್ರಿಗಳು , ಶ್ರೀ . ಕೆ . ಎಸ್ . ಈಶ್ವರಪ್ಪ ಮಾನ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು , ಶ್ರೀ . ಕೆ . ಆರ್ . ಅಶೋಕ್ ಮಾನ್ಯ ಕಂದಾಯ ಸಚಿವರು , ಶ್ರೀ . ಸುರೇಶ್ ಕುಮಾರ ಮಾನ್ಯ ಶಿಕ್ಷಣ ಸಚಿವರು , ಡಾ . ಉದಯ್ ಪ್ರತಾಪ್‌ ಸಿಂಗ್‌ಜಿ , ಅಧ್ಯಕ್ಷರು ಅಖಿಲ ಭಾರತ ಯಾದವ ಮಹಾಸಭಾ ಹಾಗು ಯಾದವ ಜನಾಂಗದ ಇತರೆ ರಾಜ್ಯಗಳ ಸಚಿವರಾದ ಶ್ರೀ ಅನಿಲ್ ಕುಮಾರ್ ಮಾನ್ಯ ನೀರಾವರಿ ಸಚಿವರು , ಆಂಧ್ರ ಪ್ರದೇಶ , ಶ್ರೀ ಸಚಿನ್ ಯಾದವ್ ಮಾನ್ಯ ಕೃಷಿ ಮತ್ತು ತೋಟಗಾರಿಕೆ ಸಚಿವರು ಮಧ್ಯ ಪ್ರದೇಶ , ಶ್ರೀ ವಾಸನ್ ಬಾಯ್ ಅಹೀರ್ ಮಾನ್ಯ ಮಹಿಳಾ ಮತ್ತು ಕಲ್ಯಾಣ ಸಚಿವರು ಗುಜರಾತ್ , ಶ್ರೀ ಹರೀಶ ಯಾದವ್ ಗ್ರಾಮ ಕೈಗಾರಿಕೆಗಳು ಮತ್ತು ನವೀಕರಿಸಬಹುದಾದ ಇಂಧನ ಸಚಿವರು ಮಧ್ಯಪ್ರದೇಶ , ಶ್ರೀ ಅಶೋಕ್ ಸಿಂಗ್ ಯಾದವ್ ಅಧ್ಯಕ್ಷರು , ಅಪೆಕ್ಸ್ ಬ್ಯಾಂಕ್ ಮಧ್ಯಪ್ರದೇಶ , ಶ್ರೀ ಅರುಣ್ ಯಾದವ್ , ಮಾಜಿ ಸಚಿವರು ಭಾರತ ಸರ್ಕಾರ . ಶ್ರೀ ಕೆ . ಪಿ . ಯಾದವ್ , ಮಾನ್ಯ ಲೋಕಸಭಾ ಸದಸ್ಯರು ಗುಣಶಿವಪುರಿ , ಶ್ರೀ ಶ್ಯಾಮ್ ಸಿಂಗ್ ಯಾದವ , ಮಾನ್ಯ ಲೋಕಸಭಾಸದಸ್ಯರು ಉತ್ತರಪ್ರದೇಶ , ಶ್ರೀಮತಿ ಕೆ . ಪೂರ್ಣಿಮಾ ಶ್ರೀನಿವಾಸ್ ಮಾನ್ಯ ಶಾಸಕರು ಹಿರಿಯೂರು ಕ್ಷೇತ್ರ , ಶ್ರೀಮತಿ ಜಯಮ್ಮ ಬಾಲರಾಜ್ ಮಾನ್ಯವಿಧಾನಪರಿಷತ್ ಸದಸ್ಯರು , ಡಾ . ಸೋಪನ್ ಕುಮಾರ ಗೋಶ್‌ಜೀ ಕಾರ್ಯಾಧ್ಯಕ್ಷರು , ಅಖಿಲ ಭಾರತ ಯಾದವ ಮಹಾಸಭಾ , ಶ್ರೀ ಸತ್ಯಪ್ರಕಾಶ್ ಸಿಂಗ್ ಯಾದವ್ * ನಿಧಿ ‘ ಶ್ರೀ ಸತ್ಯಪ್ರಕಾಶ್ ಸಿಂಗ್ ಯಾದವ್‌ಜೀ ಪ್ರಧಾನ ಕಾರ್ಯದರ್ಶಿಗಳು , ಅಖಿಲ ಯಾದವ ಮಹಾಸಭಾ , ಶ್ರೀ ಡಿ . ಎ . ನರಸಿಂಹೇಗೌಡ ಅಧ್ಯಕ್ಷರು , ಕರ್ನಾಟಕ ರಾಜ್ಯ ಗೋಲ್ಲ ( ಯಾದವ ) ನೌಕರರ ಕ್ಷೇಮಾಭಿವದಿ ಸಂಘ , ಬೆಂಗಳೂರು , ಶ್ರೀ . ಎನ್ ತ್ಯಾಗರಾಜ್ , ಅಧ್ಯಕ್ಷರು , ಕರ್ನಾಟಕ ಯಾದವ ಶಿಕ್ಷಣ ಸೊಸೈಟಿ ಇವರುಗಳು ಭಾಗವಹಿಸುತ್ತಿದ್ದಾರೆ .

ಸದರಿ ಸಮಾರಂಭ ಅಧ್ಯಕ್ಷತೆಯನ್ನ ಕರ್ನಾಟಕ ರಾಜ್ಯ ಯಾದವ ಸಂಘದ ಅಧ್ಯಕ್ಷರಾದ ಶ್ರೀ . ಡಿ . ಟಿ . ಶ್ರೀನಿವಾಸ್‌ರವರು ವಹಿಸಲಿದ್ದು ಸದರಿ ಸಮಾರಂಭದಲ್ಲಿ ಜನಾಂಗದ ಅಭಿವೃದ್ದಿಗೆ ಬೇಡಿಕೆಗಳನ್ನ ಸಲ್ಲಿಸಲಾಗಿದ್ದು ಅವು ಈ ಕೆಳಕಂಡಂತಿದೆ .

1 . ಭಾರತೀಯ ಜನತಾ ಪಕ್ಷದ ತಮ್ಮ ಸರ್ಕಾರದ ಸಚಿವ ಸಂಪುಟದಲ್ಲಿ ಗೊಲ್ಲ ಜನಾಂಗದ ಏಕಮೇವ – ಶಾಸಕಿಯಾದ ಶ್ರೀಮತಿ ಕೆ . ಪೂರ್ಣಿಮಾ ಶ್ರೀನಿವಾಸ್‌ರವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ .

2 . ಗೊಲ್ಲ ಸಮಾಜದ ಆರ್ಥಿಕ ಹಾಗು ಶೈಕ್ಷಣಿಕ ಅಭಿವೃದ್ದಿಗೆ ಪ್ರತ್ಯೇಕವಾದ ಗೊಲ್ಲರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಬಗ್ಗೆ

3 , ಗೊಲ್ಲ ( ಯಾದವ ) ಜನಾಂಗ ಹಾಗು ಅದರಡಿಯಲ್ಲಿ ಬರುವ ಉಪಜಾತಿಗಳನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮ ವಹಿಸುವ ಬಗ್ಗೆ .

4 . ಕರ್ನಾಟಕ ರಾಜ್ಯ ಗೊಲ್ಲ / ಯಾದವ ಜನಾಂಗದ ವಿದ್ಯಾರ್ಥಿಗಳಿಗೆ ವಿಧಿಸಿರುವ ಆದಾಯ ಮಿತಿಯನ್ನ ತೆರವುಗೊಳಿಸುವ ಬಗ್ಗೆ ,

5 . ಬೆಂಗಳೂರು ಕರ್ನಾಟಕ ರಾಜ್ಯ ಯಾದವ ಸಂಘದ ಸಮುದಾಯಭವನ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ರೂ . 3 . 00 ಕೋಟಿ ಅನುದಾನವನ್ನ ಒದಗಿಸುವ ಬಗ್ಗೆ ಹಾಗು ರಾಜ್ಯದ ಇತರೇ ಜಿಲ್ಲೆಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಸೂಕ್ತ ಅನುಧಾನ ಒದಗಿಸುವ ಬಗ್ಗೆ ಮತ್ತು ಈಗಾಗಲೇ ದೊಡ್ಡಬಳ್ಳಾಪುರದ ಘಾಟಿ ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನಕ್ಕೆ ಅನುದಾಣ ಒದಗಿಸುವ ಬಗ್ಗೆ .

6 . ಗೊಲ್ಲರ ಹಟ್ಟಿಗಳ ಅಭಿವೃದ್ಧಿಗೆ ವಿಶೇಷ ಅನುಧಾನವನ್ನ ಬಿಡುಗಡೆ ಮಾಡುವ ಬಗ್ಗೆ .

7 . ರಾಜ್ಯದ ನಿಗಮ ಮಂಡಳಿಗಳಲ್ಲಿ ಗೊಲ್ಲ / ಯಾದವ ಜನಾಂಗದವರಿಗೆ ಸೂಕ್ತ ಅವಕಾಶ ಕಲ್ಪಿಸಿಕೊಡುವ

8 , ಆಗ್ನೆಯ ಪದವೀಧರರ ಕ್ಷೇತ್ರದ ವ್ಯಾಪ್ತಿಯಲ್ಲಿ ಗೊಲ್ಲ ( ಯಾದವ ) ಜನಾಂಗದ ಪದವೀದರರು ಅತಿ ಹೆಚ್ಚಾಗಿರುವುದರಿಂದ ( ಕೋಲಾರ , ಚಿಕ್ಕಬಳ್ಳಾಪುರ , ತುಮಕೂರು , ಚಿತ್ರದುರ್ಗ , ಧಾವಣಗೆರೆ ) ನಮ್ಮ ಜನಾಂಗದ ರಾಜ್ಯಾಧ್ಯಕ್ಷರಾದ ಶ್ರೀ . ಡಿ . ಟಿ . ಶ್ರೀನಿವಾಸ್‌ರವರಿಗೆ ಪದವೀಧರರ ಕ್ಷೇತ್ರದಲ್ಲಿ ಸ್ಪರ್ಧಿಸಲು ಭಾರತೀಯ ಜನತಾ ಪಾರ್ಟಿ ವತಿಯಿಂದ ಟಿಕೆಟ್ ನೀಡುವ ಬಗ್ಗೆ .

ಶ್ರೀ . ಡಿ . ಟಿ . ಶ್ರೀನಿವಾಸ್ ಯಾದವ್

ಅಧ್ಯಕ್ಷರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.