ಡಿಸೆಂಬರ್ 11 , 2019 ರಲ್ಲಿ 7ನೇ ವರ್ಷದ ಕರಾಳ ದಿನಾಚರಣೆಯನ್ನು ಚಿಕ್ಕಬಳ್ಳಾಪುರದಲ್ಲಿ ಆಚರಿಸೋಣ-MRHS

ಡಿಸೆಂಬರ್ 11 , 2019 ರಲ್ಲಿ 7ನೇ ವರ್ಷದ ಕರಾಳ ದಿನಾಚರಣೆಯನ್ನು ಚಿಕ್ಕಬಳ್ಳಾಪುರದಲ್ಲಿ ಆಚರಿಸೋಣ . ನಾವು ರಾಜಕೀಯವಾಗಿ ಬಹುಸಂಖ್ಯಾತರು ಮತ್ತು ಶಕ್ತಿಯುಳ್ಳವರು . ನಾವು ಅಂಗಲಾಚಿ ಬೇಡುವವರಲ್ಲ . ನಮ್ಮ ಹಕ್ಕಾದ ಒಳಮೀಸಲಾತಿಯನ್ನು ಜಾರಿಗೊಳಿಸಲು ಐಕ್ಯತೆಯಿಂದ ಒಂದಾಗಿ ಹೋರಾಡೋಣ .

1 ) ಒಳಮೀಸಲಾತಿ ಹೋರಾಟ ರಾಜಕೀಯ ಸಮಸ್ಯೆಯಾಗಿ ರೂಪುಗೊಂಡಿದೆ . ರಾಜಕೀಯ | ಹೋರಾಟವನ್ನು ರಾಜಕೀಯವಾಗಿಯೇ ಪರಿಗಣಿಸಿ ಅದಕ್ಕೆ ರಾಜಕೀಯವಾಗಿ ಪರಿಷ್ಕಾರವನ್ನು ಕಂಡುಕೊಳ್ಳಬೇಕು .

2 ) ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿಯ ಸೌಲಭ್ಯಗಳ ಹಂಚಿಕೆಯಲ್ಲಾದ ತಾರತಮ್ಯವನ್ನು ನಿವಾರಿಸಲು ಎಲ್ಲಾ ಜಾತಿಗಳಿಗೂ ಜನಸಂಖ್ಯೆಗಳಿಗನುಗುಣವಾಗಿ ರಾಜಕೀಯ , ಆರ್ಥಿಕ ಸೌಲಭ್ಯಗಳನ್ನು ಹಂಚುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಜೂನ್ – 14 2012 ರಂದು ನ್ಯಾ . ಎ . ಜೆ . ಸದಾಶಿವ ರವರು ಆಯೋಗದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು . 11 – 12 – 2012 ರಂದು ಈ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲು ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧವನ್ನು ಮುತ್ತಿಗೆ ಹಾಕಲಾಯಿತು . ಅಂದಿನ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ರವರು ಜನರ ಮೇಲೆ ಲಾಟಿ ಪ್ರಯೋಗ ಮಾಡಿಸಿ ತಲೆ ಬುರುಡೆಗಳನ್ನು ಕೈ ಕಾಲುಗಳನ್ನು ಮುರಿಯುವಂತೆ ಹೊಡೆದು ಬಂಧಿಸಿ ಕೇಸ್‌ಗಳನ್ನು ಹಾಕಲಾಯಿತು . 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲುಂಡಿತು .

3 ) 11 – 12 – 2016 ರಂದು ಹುಬ್ಬಳ್ಳಿಯಲ್ಲಿ ಐತಿಹಾಸಿಕವಾಗಿ 5 ಲಕ್ಷಕ್ಕಿಂತ ಹೆಚ್ಚಿನ ಜನ ಒಳಮೀಸಲಾತಿಗಾಗಿ ಒತ್ತಾಯಿಸಿ ಸಮಾವೇಶಗೊಂಡಾಗ ಈ ಸಮಾವೇಶಕ್ಕೆ ಬರುತ್ತಿದ್ದ 7 ಜನ ಹುತಾತ್ಮರಾದರು . ಮಾನ್ಯ ಸಿದ್ದರಾಮಯ್ಯನವರು ಒಳ ಮೀಸಲು ವರದಿಯನ್ನು ನಿರ್ಲಕ್ಷ್ಯ ಮಾಡಿದ್ದರಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುಂಡಿತು . ಸಮ್ಮಿಶ್ರ ಸರ್ಕಾರ ಉದಯವಾಯಿತು . 14 ತಿಂಗಳು ಗತಿಸಿದ್ದರೂ ಅಂದಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರ ಸಮ್ಮಿಶ್ರ ಸರ್ಕಾರವು ಒಳಮೀಸಲು ಹೋರಾಟಕ್ಕೆ ಬೆಂಬಲ ನೀಡಲಿಲ್ಲ .

4 ) ಮಾನ್ಯ ಪತ್ರಕರ್ತ ಮಿತ್ರರೇ 2004 ರಿಂದ ಇಲ್ಲಿಯವರೆವಿಗೂ ಎಲ್ಲಾ ಚುನಾವಣೆಗಳಲ್ಲೂ ಕೂಡ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ನಿರ್ಲಕ್ಷ್ಯ ಮಾಡಿದ ಆಡಳಿತ ಸರ್ಕಾರಗಳು ಮಾದಿಗರ ಶಾಪಕ್ಕೆ ಗುರಿಯಾಗಿ ಅಧಿಕಾರವನ್ನು ಕಳೆದುಕೊಂಡಿವೆ .

5 ) ಡಿಸೆಂಬರ್ 2019 ರಲ್ಲಿ ನಡೆಯುವ ಉಪಚುನಾವಣೆಗೆ ಮುಂಚೆ ಅಂದರೆ ನೀತಿ ಸಂಹಿತ ಜಾರಿಯಾಗುವುದಕ್ಕಿಂತ ಪೂರ್ವದಲ್ಲಿ ರಾಜ್ಯ ಸರಕಾರದ ಆಡಳಿತ ಪಕ್ಷವಾದ ಬಿ . ಜೆ . ಪಿಯು ನ್ಯಾ . ಎ . ಜೆ . ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವ ಕುರಿತು ತನ್ನ ಅಭಿಪ್ರಾಯ ಸ್ಪಷ್ಟಪಡಿಸಬೇಕು . ಇಲ್ಲದಿದ್ದರೆ ಮುಂದೆ ಬರುವ 15 ಕ್ಷೇತ್ರದ ಉಪಚುನಾವಣೆಯಲ್ಲಿ ಪರಿಶಿಷ್ಟರೇ ಬಹುಸಂಖ್ಯಾತರಾದ ಮಾದಿಗರು ಆಡಳಿತ ಪಕ್ಷದ ವಿರುದ್ಧ ಮತ ಚಲಾಯಿಸಬೇಕಾಗುತ್ತದೆ ಮತ್ತು ಯಾವ ಅಭ್ಯರ್ಥಿಯು ಮಾದಿಗರ ಸಮಸ್ಯೆಗೆ ಬೆಂಬಲಿಸುತ್ತಾರೋ ಅವರಿಗೆ ಮಾತ್ರ ನಮ್ಮ ಬೆಂಬಲವೆಂದು ಆಡಳಿತ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ .

6 ) ಮಾದಿಗ ಮೀಸಲಾತಿ ಹೋರಾಟ ಸಮಿತಿ ( ಸಂಸ್ಥಾಪಕ ಸಮಿತಿ ) ಡಿಸೆಂಬರ್ 11 ಪ್ರಹಾರವನ್ನು ಪ್ರತೀ ವರ್ಷ ಕರಾಳ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ . 2019 ರಲ್ಲಿ 7ನೇ ವರ್ಷದ ಕರಾಳ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ . 2019 ರಲ್ಲಿ 7ನೇ ವರ್ಷದ ಕರಾಳ ದಿನಾಚರಣೆಯನ್ನು ಚಿಕ್ಕಬಳ್ಳಾಪುರದಲ್ಲಿ ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು , ಹಿತೈಷಿಗಳು , ವಿದ್ಯಾರ್ಥಿ , ಚಿಂತಕರು ಮತ್ತು ವಿವಿಧ ಸಂಘಟನೆಗಳಲ್ಲಿ ಶ್ರಮಿಸುತ್ತಿರುವ ಮತ್ತು ಸಮ ಸಮಾಜಕ್ಕಾಗಿ ಹಂಬಲಿಸುತ್ತಿರುವವರು ಈ ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಕೋರುತ್ತೇವೆ .

7 ) ಬಿಜಾಪುರ ಜಿಲ್ಲೆಯ ರೇಣುಕ ಮಾದರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಹಾಗೂ ಬಾಗಲಕೋಟ ಜಿಲ್ಲೆಯ ಮುದೋಳ ತಾಲ್ಲೂಕಿನ ಶಿರೋಳ ಗ್ರಾಮದಲ್ಲಿ ದಲಿತರ ಜೋಡಿ ಕೊಲೆ ಪ್ರಕರಣವನ್ನು ರಾಜ್ಯ ಸಮಿತಿಯು ತೀವ್ರ ಖಂಡಿಸುತ್ತದೆ . ಈ ಘಟನೆಗೆ ಕಾರಣರಾದ ಆರೋಪಿಗಳನ್ನು ರಾಜ್ಯ ಸರ್ಕಾರವು ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸುತ್ತದೆ ಹಾಗೂ ರಾಜ್ಯ ಸರ್ಕಾರವು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಜಾತಿ ಜನಾಂಗಗಳ ಮಧ್ಯೆ ಮೌಡ್ಯತೆಯನ್ನು ನಿರ್ನಾಮ ಮಾಡಬೇಕು ಎಂದು ಒತ್ತಾಯಿಸುತ್ತೇವೆ .

8 ) ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಅಂತರಜಾತಿ ವಿವಾಹವಾಗಿದ್ದ ರಮೇಶ್ ಮಾದರ ( 29 ವರ್ಷ ) ಹಾಗೂ ಗಂಗಮ್ಮ ರಾಥೋಡ್ ( 23 ವರ್ಷ ) ಇವರಿಬ್ಬರನ್ನು ಬುಧವಾರ ಮಧ್ಯಾಹ್ನ ಮನೆಗೆ ನುಗ್ಗಿ ಏಕಾಏಕಿ ಗಂಗಮ್ಮನ ಸಹೋದರರಾದ ರವಿ , ರಮೇಶ್ ಹಾಗೂ ಶಿವು ರಾಥೋಡ್ ಮತ್ತು ಇತರರು ಸೇರಿಕೊಂಡು ಬರ್ಭರವಾಗಿ ಕೊಲೆ ಮಾಡಿದ್ದಾರೆ . ಕೊಲೆಯಾದ ರಮೇಶ್ ಹಾಗೂ ಗಂಗಮ್ಮ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ . ಮೂರು ವರ್ಷದ ಅನಿಲ್ ಹಾಗೂ ಎರಡು ತಿಂಗಳ ಹಸುಗೂಸು ಅರ್ಜುನ , ಅವರಿಗೆ ಲೋಕಜ್ಞಾನವೂ ಇಲ್ಲ . ಅಂತರಜಾತಿಯ ಮಾಹಿತಿಯೂ ಇಲ್ಲ . ಇವರಿಬ್ಬರೂ ತಂದೆ – ತಾಯಿಗಳನ್ನು ಕಳೆದುಕೊಂಡು ಅನಾಥರಾಗಿದ್ದು , ಘಟನೆಯ ಅರಿವಿಲ್ಲದೆ ರೋಧಿಸುತ್ತಿದ್ದಾರೆ . ಈ ಮರ್ಯಾದೆ ಹತ್ಯೆಯನ್ನು ನಮ್ಮ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ . ಗಜೇಂದ್ರಗಡ ಪೊಲೀಸ್ ಅಧಿಕಾರಿಗಳು ಕೇವಲ ಇಬ್ಬರನ್ನು ಮಾತ್ರ ಬಂಧಿಸಿರುತ್ತಾರೆ . ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಒತ್ತಾಯಿಸುತ್ತೇವೆ ಹಾಗೂ ಈ ಇಬ್ಬರ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಹೊರೆಯನ್ನು ಸರ್ಕಾರವೇ ವಹಿಸಿಕೊಳ್ಳಬೇಕೆಂದು ಮತ್ತು ರೂ ಐವತ್ತು ಲಕ್ಷಗಳನ್ನು ಪರಿಹಾರದ ಹಣವಾಗಿ ನೀಡಬೇಕೆಂದು ಒತ್ತಾಯಿಸುತ್ತೇವೆ .

– ಮಾದಿಗ ಮೀಸಲಾತಿ ಹೋರಾಟ ಸಮಿತಿ ( MRHS ) ( ಸಂಸ್ಥಾಪಕ ) ರಾಜ್ಯ ಸಮಿತಿ , ಬೆಂಗಳೂರು

ಪತ್ರಿಕಾ ಗೋಷ್ಠಿಯಲ್ಲಿ ಬಾಗವಹಿಸಿದವರುಗಳು

ರಾಜ್ಯ ಗೌರವಾಧ್ಯಕ್ಷರು – ಎಸ್ . ಮಾರೆಪ್ಪ, ರಾಜ್ಯ ಕಾರ್ಯಾಧ್ಯಕ್ಷರು – ಕೇಶವಮೂರ್ತಿ ಬಿ . ಎ, ರಾಜ್ಯಾಧ್ಯಕ್ಷರು – ಪರಶುರಾಮ್ ಮಾರೆಗುದ್ದಿ, ರಾಜ್ಯ ಉಪಾಧ್ಯಕ್ಷರು – ಕಂಬಣ್ಣನವರ್, ರಾಜ್ಯ ಪ್ರ. ಕಾರ್ಯದರ್ಶಿ – ಶಿವರಾಯ ಅಕ್ಕರಕಿ, ರಾಜ್ಯ ಕಾರ್ಯದರ್ಶಿ – ಭಾನುಪ್ರಸಾದ್, ರಾಜ್ಯ ಕಾರ್ಯದರ್ಶಿ – ಮಾಗಡಿ ಕೃಷ್ಣ, ಬೆಳಗಾಂ ವಿ . ರಾಜ್ಯ ಕಾರ್ಯದರ್ಶಿ – ಸೋಮು ಚೂರಿ ಮತ್ತು ಪ್ರಧಾನ ಕಾರ್ಯದರ್ಶಿಗಳು – ಮೂರ್ತಿ.ಎನ್.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.