ಮನೋರಂಗ ಬೆಂಗಳೂರು ತಂಡದ ಐದನೇ ವರ್ಷದ ಸಂಭ್ರಮದ ಬಗ್ಗೆ ಹಾಗೂ ಹೊಸ ಪ್ರಯೋಗ ಕುರಿತು .

ಇಂದಿನ ಕಲಿಕಾಕ್ರಮವೆಲ್ಲವೂ ಸಮಯಾಧಾರಿತವಾಗಿಯೋ ಅಥವಾ ವ್ಯಾವಹಾರಿಕ ಧೋರಣೆಗಾಗಿಯೋ ಸಿದ್ಧಪಡಿಸಿವೆಯೇನೋ ಎಂಬ ಕಾಳಜಿಯಿಂದಾಗಿ ‘ ಮನೋರಂಗ ” ವು ಸಹಜವಾದ ರಂಗತರಬೇತಿಯನ್ನು ರೂಢಿಸಿಕೊಳ್ಳುತ್ತಾ ಮುನ್ನಡೆದಿದೆ . ಯಾವತ್ತೂ ರಂಗಾಭ್ಯಾಸಿಗಳಿಗೆ ಬದುಕಿನ ಜಂಜಡದ ನಡುವೆಯೂ ರಂಗಾಭ್ಯಾಸದ ಸಾಧ್ಯತೆಯನ್ನು ಸುಲಭವಾಗಿಸುವ ಸಾಧ್ಯತೆಯನ್ನು ಹಾಗೂ ಕಲಿಕೆಯ ಮಹತ್ತನ್ನು ಮನಗಾಣಿಸುವ ಪ್ರಯತ್ನವು ಮನೋರಂಗದ್ದಾಗಿದ .

ಅದಾಗಿ ನಮ್ಮ ತಂಡವು ಕಳದ ಐದು ಸಂವತ್ಸರಗಳಿಂದ ಸತತವಾಗಿ ರಂಗ ಪ್ರಕ್ರಿಯೆಯ ಹಲವು ಆಯಾಮಗಳಲ್ಲಿ ತಡಗಿಕೊಂಡಿದ್ದು ಅರಿವ ಪ್ರಹಸನ , ಲೀಲಾಂತ ಕರ್ಣ ರಸಾಯನ , ಕಾಡ್ರನ್ನ , ಎಚ್ಚರಿಕೆ , ಬಾದರಾಯಣ , ಕವಿತೆಯ ವರ್ಗಮೂಲ ಮುಂತಾದ ಯಶಸ್ವಿ ರಂಗ ಪ್ರಯೋಗಳು ಹಾಗೂ ಪ್ರದರ್ಶನಗಳನ್ನು ನೀಡುತ್ತಾ ಐದು ಸಂತಸದ ಸಂವತ್ಸರಗಳನ್ನು ಪೂರೈಸಿದ , ಪ್ರಸಕ್ತ ಸಾಲಿನಲ್ಲಿ ಕಳೆದೈದು ವರ್ಷಗಳಲ್ಲಿ ಆಯ್ದ ಐದು ನಾಟಕಗಳ ಪುನಾರಚನೆ ಹಾಗು ಹೊಸ ನಿರ್ಮಿತಿಯ ಐದು ರಂಗಪ್ರಯೋಗಗಳನ್ನು ಸಹೃದಯರಿಗೆ ನೀಡುವ ಹುಮ್ಮಸ್ಸು ನಮ್ಮದಾಗಿದೆ .

ಈ ಎಲ್ಲ ಪ್ರಯತ್ನಗಳ ಅಂತರ್ಗತ ಅಭಿಲಾಷಯ ಹರಹಿನಲ್ಲಿ ಇದೀಗ “ ಪರಿಣಯ ಪ್ರಸಂಗ ” ಎಂಬ ಹೊಸ ನಾಟಕವನ್ನು ರಂಗಾಸಕ್ತರಿಗೆ ನೀಡಲು ನಮ್ಮ ತಂಡ ಸಿದ್ಧವಿದ . “ ಪರಿಣಯ ಪ್ರಸಂಗ ” ವು ಪಂಚತಂತ್ರದ ಕಥಾವಳಿಯ ಪ್ರಸಂಗವೊಂದನ್ನಾಧರಿಸಿದ ನಾಟಕ . ಈ ನಾಟಕದ ರಚನೆ , ವಿನ್ಯನ ಹಾಗು ನಿರ್ದೇಶನ – ಮುರಳಿ ಶೃಂಗೇರಿ , ಸಂಗೀತ – ಶ್ರೀ ಶ್ರೀನಿವಾಸ ಭಟ್ ( ಚೀನಿ ) , ಬೆಳಕಿನ ವಿನ್ಯಾಸ – ಶ್ರೀ ಅರುಣ ಮೂರ್ತಿ , ವಸ್ತ್ರ ವಿನ್ಯಾಸ – ಯಶಸ್ವಿನಿ ಆರ್ , ಪ್ರಚಾರ ಕಲೆ – ಸಕ್ಕತ ಶರತ , ನಿರ್ವಹಣೆ – ದಕ್ಷಿಣಾ ಮೂರ್ತಿ ನಿರ್ವಹಿಸುತ್ತಿದ್ದಾರೆ .

ಇದೇ ಮಾಹೆಯ ದಿನಾಂಕ 16 ಹಾಗೂ 17 ರಂದು ಜೆ . ಪಿ . ನಗರದ ‘ ಮ್ಯೂಮ ‘ ರಂಗ ಮಂದಿರದಲ್ಲಿ ಸಂಜೆ 7 . 30ಕ್ಕೆ ” ಪರಿಣಯ ಪ್ರಸಂಗ ‘ ದ ಮೊದಲ ಪರಿಚಯವಾಗಲಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.