“ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯು ಹಮ್ಮಿ ಕೊಂಡಿರುವ ‘ 21ನೇ ವರ್ಷದ ಉಚಿತ ಸಾಮೂಹಿಕ ವಿವಾಹ ” ಮಹೋತ್ಸವ

” ಶ್ರೀ ಬನಶಂಕರಿ ದೇವಿ ಸನ್ನಿಧಾನದಲ್ಲಿ “ ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ? ” ಆಶ್ರಯದಲ್ಲಿ 21ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಈ ವರ್ಷವು ಸಹ ಏರ್ಪಡಿಸಿದ್ದು , ದಿನಾಂಕ : 30 / 01 / 2020ನೇ ಗುರುವಾರದಂದು ನಡೆಸಲು ವೇದಿಕೆಯು ತೀರ್ಮಾನಿಸಿದೆ . ಕಳೆದ ಇಪ್ಪತ್ತು ವರ್ಷಗಳ ಕಾಲ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅರ್ಥಪೂರ್ಣ ರೀತಿಯಲ್ಲಿ ವೇದಿಕೆಯು ಆಚರಿಸಿಕೊಂಡು ಬಂದಿದ್ದು , ಈ ಬಾರಿಯು ಸಹ ಅದೇ ರೀತಿ ಸಾಮೂಹಿಕ ವಿವಾಹವನ್ನು ನಡೆಸಲು ವೇದಿಕೆಯು ಉತ್ಸುಕವಾಗಿದೆ . ಕಳೆದ ಇಪ್ಪತ್ತು ವರ್ಷಗಳಲ್ಲಿ ಸರಿ ಸುಮಾರು 1079 ಕ್ಕೂ ಹೆಚ್ಚು ಜೋಡಿಗಳು ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ . ಬಡವರು , ಹಿಂದುಳಿದ ವರ್ಗಗಳ ಜನರಿಗೆ ವಿವಾಹವು ಇತ್ತೀಚಿನ ದಿನಗಳಲ್ಲಿ ದುಬಾರಿಯಾಗುತ್ತಿರುವುದನ್ನು ವೇದಿಕೆಯು ಮನಗಂಡು ಶ್ರೀ ಬನಶಂಕರಿ ೬ ಆಶೀರ್ವಾದ ಪಡೆದು ಅಂತಹ ವರ್ಗದ ಜನರಿಗೆ ಸರಳ ಹಾಗೂ ಉಚಿತವಾಗಿ ವಿವಾಹ ನಡೆಸುವ ಸಂಬಂಧಕ್ಕಾಗಿ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಯಿತು . – 1999ರಲ್ಲಿ ವೇದಿಕೆಯು ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿತು . ಆರಂಭದ ವರ್ಷದಲ್ಲಿ 41 ಜೋಡಿಗಳು ವೈವಾಹಿಕ ಜೀವನಕ್ಕೆ ಪ್ರವೇಶಿಸಿದವು . ಇದರಿಂದ ಪ್ರೇರಣೆಗೊಂಡ ವೇದಿಕೆಯು ಇಂತಹ ಧಾರ್ಮಿಕ , ಸಾಮಾಜಿಕ ಕಾಳಜಿ ಪರ ಕಾರ್ಯಕ್ರಮವನ್ನು ಪ್ರತೀ ವರ್ಷವು ಸಹ ಮುಂದುವರೆಸುವ ಸಂಕಲ್ಪ ಮಾಡಿ ಅದರ ಪರಿಣಾಮ ಇದೀಗ ಇಪ್ಪತ್ತೊಂದನೇ ? ” ವರ್ಷಕ್ಕೆ ಕಾಲಿರಿಸಲು ಕಾರಣವಾಯಿತು . – ಜಾತಿ , ಮತ , ಭೇಧ ಎಲ್ಲಾ ಸಂಗತಿಗಳನ್ನು ದೂರ ಇರಿಸಿ ಎಲ್ಲಾ ವರ್ಗದ ಜನರನ್ನು ಒಂದೇ ಮದುವೆ ಮಂಟಪದಲ್ಲಿ ಕಲೆ ಹಾಕಿ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ . ಎಂದಿನಂತೆ ಮಠಾಧೀಶರ ಆಶೀರ್ವಾದ , ಹಿರಿಯ ರಾಜಕಾರಣಿಗಳ ಮಾರ್ಗದರ್ಶನ ಹಾಗೂ ಸೇವಾ ಮನೋಭಾವವುಳ್ಳ ವ್ಯಕ್ತಿಗಳ , ಸಂಸ್ಥೆಗಳ ಸಹಕಾರದೊಂದಿಗೆ ಈ ಬಾರಿ ಹೆಚ್ಚಿನ ಜೋಡಿಗಳ ವಿವಾಹ ಮಹೋತ್ಸವದ – ಗುರಿ ಹೊಂದಲಾಗಿದೆ . ದಿನಾಂಕ 30 / 01 / 2020ನೇ ಗುರುವಾರ ಬೆಳಗ್ಗೆ 10 – 35 ರಿಂದ 11 – 10ರ ಮೀನ ಲಗ್ನದಲ್ಲಿ ಶ್ರೀ ಬನಶಂಕರಿ ದೇವಸ್ಥಾನ , ಕನಕಪುರ ಮುಖ್ಯರಸ್ತೆ , ಬನಶಂಕರಿ , ಬೆಂಗಳೂರು . ಇಲ್ಲಿ ಇರುವ ದೇವಾಲಯದ ಪ್ರಾಂಗಣದಲ್ಲಿ ಉಚಿತ ವಿವಾಹ ಮಹೋತ್ಸವವನ್ನು ಏರ್ಪಡಿಸಲಾಗಿದೆ . ಬೆಂಗಳೂರು ನಗರ , ಬೆಂಗಳೂರು ಗ್ರಾಮೀಣ ಹಾಗೂ ರಾಜ್ಯದ ವಿವಿಧ ಪ್ರದೇಶಗಳಲ್ಲಿ ವಾಸವಿರುವ ಇಚ್ಛೆಯುಳ್ಳ ವಧು – ವರರ ಬಂಧು , ತಂದೆ – ಖಾಯಿಯರು ಮತ್ತು ಪೋಷಕರುಗಳು ದಿನಾಂಕ 25 / 01 / 2020 ರೊಳಗೆ ತಮ್ಮ ವಿವಾಹವಾಗಲಿರುವ ವಧು – ವರರ ಹೆಸರುಗಳನ್ನು ನೋಂದಾಯಿಸ ತಕ್ಕದ್ದು . ಆಸಕ್ತ ಪೋಷಕರು ಹಾಗೂ ತಂದೆ – ತಾಯಿಯರು ಹೆಚ್ಚಿನ ಮಾಹಿತಿಗಾಗಿ 080 – 26712988 , 8553389814 , ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವುದು . ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಧು – ವರರಿಗೆ ಹಿಂದೂ ಸಂಪ್ರದಾಯದಂತೆ ಸಮವಸ್ತ್ರ , ಬಾಸಿಂಗ , ಕಂಕಣಧಾರ , ಹೂವಿನ ಹಾರ , ಮಾಂಗಲ್ಯ , ಕಾಲುಂಗರ , ಪೇಟ ಮತ್ತು ವಧು – ವರರ ಬಂಧು ಬಳಗದವರಿಗೆ , ಅಥಿತಿಗಳಿಗೆ ಹಾಗೂ ಸ್ಥಳೀಯರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ . – ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯು ಹಮ್ಮಿ ಕೊಂಡಿರುವ ‘ 21ನೇ ವರ್ಷದ ಉಚಿತ ಸಾಮೂಹಿಕ ವಿವಾಹ ” ಮಹೋತ್ಸವದ ಬಗ್ಗೆ ತಮ್ಮ ಘನ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟಿಸಿ ಇಚ್ಛೆಯುಳ್ಳ ವಧು – ವರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅನುವು ಮಾಡಿ ಕೊಡಬೇಕೆಂದು ತಮ್ಮಲ್ಲಿ ಕೋರುತ್ತೇವೆ .

– ಎ . ಹೆಚ್ . ಬಸವರಾಜು

ಅಧ್ಯಕ್ಷರು-ಬನಶಂಕರಿದೇವಾಲಯ ಅಭಿವೃದ್ದಿಸಮಿತಿ , ಜಿ ವಿರೋಧಪಕ್ಷದ ನಾಯಕರು , ಬಿಬಿಎಂಪಿ .

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.