ಕೋಳಿ ಮರಿ ಉತ್ಪಾದನೆ ಮಾಡುತ್ತಿರುವ ಕಂಪನಿಗಳು ರೈತರ ಹೆಸರಿನಲ್ಲಿ ರೈತರಿಗೆ ಶೋಷಣೆ

“ಕೋಳಿ ಮರಿ ಉತ್ಪಾದನೆ ಮಾಡುತ್ತಿರುವ ಕಂಪನಿಗಳು ರೈತರ ಹೆಸರಿನಲ್ಲಿ ರೈತರಿಗೆ ಶೋಷಣೆ ಮಾಡುತ್ತಿರುವ ಬಗ್ಗೆ “

ದೇಶದ ಮೂಲನಿವಾಸಿಗಳಾದ ರೈತರಾದ ನಾವುಗಳು ವ್ಯವಸಾಯದ ಉಪ ಕಸುಬಾಗಿ ಕೋಳಿ ಸಾಕಾಣಿಕೆ ಉದ್ಯಮದಲ್ಲಿ ತೊಡಗಿಕೊಂಡು ಈ ದೇಶಕ್ಕೆ ಆಹಾರ ಭದ್ರತೆ ಒದಗಿಸುತ್ತಿರುವುದು ಸರಿಯಷ್ಟೇ ಇತ್ತೀಚಿನ ವರ್ಷಗಳಿಂದ ನಮ್ಮ ರಾಜ್ಯ ಮತ್ತು ರಾಷ್ಟ್ರದಲ್ಲಿ ಬಹುರಾಷ್ಟ್ರೀಯ ಮತ್ತು ದೇಶಿಯ ಬಂಡವಾಳಶಾಯಿ ಕಂಪನಿಗಳಾದ ವೆಂಕಟೇಶ್ವರ್‌ ಹ್ಯಾಚ್ಚರಿಸ್ , ( ವಕೋಬ್ ) ಕೊರಿಯನ್ ಪಾಂಗ್ ಪಾಂಡ್ , ಗೋದ್ರೇಜ್ , ಸುಗುಣ , ಐ . ಬಿ . ಕಂಪನಿ ಇನ್ನಿತರೆ ಕಂಪನಿಗಳು ಸೇರಿ ಕೋಳಿ ಸಾಕಾಣಿಕೆ ರೈತರ ಹೆಸರಿನಲ್ಲಿ ( KPFBA ) ಕರ್ನಾಟಕ ಪೌಲ್ಟ್ರಿ ಫಾರ್ಮಸ್ ಅಂಡ್ ಬ್ರಿಡರ್ ಅಶೋಷಿಯೇಷನ್ ವಸಂತ ನಗರ ಬೆಂಗಳೂರು ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿಕೊಂಡು ರೈತರ ಹೆಸರಿನಲ್ಲಿ ಈ ಮೇಲ್ಕಂಡ ಕಂಪನಿಗಳ ಸದರಿ ಸಂಸ್ಥೆಯಲ್ಲಿ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಈ ಮೇಲ್ಕಂಡ ಸಂಸ್ಥೆಯ ಸದಸ್ಯರುಗಳಾಗಿ ರೈತರೆಂದು ಹೇಳಿಕೊಳ್ಳುತ್ತಾ ಸರ್ಕಾರಕ್ಕೂ ತಪ್ಪು ಮಾಹಿತಿ ನೀಡಿ ಸದರಿ ಕಂಪನಿಗಳು ಉತ್ಪಾಧಿಸುತ್ತಿರುವ ಒಂದು ದಿನದ ಕೋಳಿ ಮರಿಗಳ ದರವನ್ನು ಸದರಿ ಸಂಸ್ಥೆಯ ( KPFBA ) ಹೆಸರಿನ ಅಂರ್ತಜಾಲದಲ್ಲಿ ಉತ್ಪಾದನ ವ್ಯಚಕ್ಕಿಂತ ಶೇಕಾಡ ಮೂರರಿಂದ ನಾಲ್ಕುಪಟ್ಟು ಹೆಚ್ಚು ಬೆಲೆ ನಿಗಧಿ ಪಡಿಸಿ ರೈತರಿಗೆ ಮಾರಾಟ ಮಾಡುವ ಮೂಲಕ ಶೋಷಣೆ ಮಾಡುತ್ತಿದ್ದಾರೆ . ಹಾಗೂ ಹೈಬ್ರೆಡ್ ಕೋಳಿ ಮರಿ ತಳಿ ಉತ್ಪಾದನೆ ಹೆಸರಿನಲ್ಲಿ ಕೋಳಿ ಸಾಕಾಣಿಕೆ ಉದ್ಯಮಕ್ಕೆ ಕಾಲಿಟ್ಟು ದೇಶದ ಆಹಾರ ಭದ್ರತೆಯನ್ನು ಕಪಿ ಮುಷ್ಠಿಯಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಉದ್ಯಮದಲ್ಲಿ ರೈತರನ್ನು ನಷ್ಟಕ್ಕೆ ಸಿಲುಕಿಸಿ ಉದ್ಯಮದಿಂದ ಒಕ್ಕಲೆಬ್ಬಿಸುವ ಹುನ್ನಾರವನ್ನು ರೂಪಿಸಿರುತ್ತವೆ . ಈ ವಿಚಾರವಾಗಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೂ ಮತ್ತು ಕೇಂದ್ರ ಸರ್ಕಾರಕ್ಕೂ ಕಂಪನಿಗಳ ವಿರುದ್ಧ ಕ್ರಮ ಕೈಗೊಳಳುವಂತೆ ಪ್ರತಿಭಟಿಸುವ ಮೂಲಕ ಮನವಿ ಸಲ್ಲಿಸಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ ಮತ್ತೊಮ್ಮೆ ಸರ್ಕಾರಕ್ಕೆ ಒತ್ತಾಯಿಸುವುದೇನೆಂದರೆ , ಇದೇ ರೀತಿ ಕಂಪನಿಗಳ ಕಪಿ ಮುಷ್ಠಿಯಲ್ಲಿ ಆಹಾರ ಭದ್ರತೆಯು ಸಿಲುಕಿದ್ದೇ ಆದರೆ ದೇಶದ ಆರ್ಥಿಕ ಭದ್ರತೆಗೆ ತುಂಬಾ ಪೆಟ್ಟು ಬೀಳುವುದಲ್ಲದೇ ದೇಶದ ನಾಗರೀಕರ ದಿನನಿತ್ಯ ಜೀವನದ ಮೇಲೆ ದುಷಫರಿಣಾಮ ಬಿಳವುದಲ್ಲದೇ ರೈತರ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ . ಈ ವಿಚಾರವಾಗಿ ತಮ್ಮ ಬಳಿ ಹಲವಾರು ಬಾರಿ ತಮ್ಮಲ್ಲಿ ಈ ಕಂಪನಿಗಳ ಮೇಲೆ ಕ್ರಮ ಕೈಗೊಂಡು ಕೋಳಿ ಸಾಕಾಣಿಕೆ ರೈತರ ರಕ್ಷಣೆಗೆ ದಾವಿಸಬೇಕಾಗಿ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜ ಆಗಿರುವುದಿಲ್ಲ ಆದ್ದರಿಂದ ತಮ್ಮಲ್ಲಿ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಾ ಕೇಳಿಕೊಳ್ಳವುದುದೇನೆಂದರೆ , ಕೊಡಲೇ ಈ ಕೋಳಿ ಮಾಂಸದ ಉದ್ಯಮದ ಮೇಲೆ ಹಿಡಿತ ಇಟ್ಟುಕೊಂಡಿರುವ ಕಂಪನಿಗಳನ್ನು ಈ ರಾಜ್ಯದಿಂದ ಗಡಿ ಪಾರು ಮಾಡಿ ( KPFBA ) ಎಂಬ ಹೆಸರಿನ ಸಂಸ್ಥೆಯಲ್ಲಿ ನಡೆದಿರುವ ವ್ಯವಾಹರದ ಅಕ್ರಮವನ್ನು ತನಿಖೆ ಮಾಡಿ ಕಂಪನಿಗಳ ಗಳಸಿರುವ ವ್ಯವಾಹರದ ಲಾಭದಲ್ಲಿ ಸರ್ಕಾರಕ್ಕೆ ತೆರಿಗೆಯನ್ನು ಕಟ್ಟಿಸಬೇಕು ಹಾಗೂ ಕೋಳಿ ಮಾಂಸ ಉತ್ಪಾದನೆಯಲ್ಲಿ ತೊಡಗಿರುವ ನಮ್ಮ ರಾಜ್ಯದ ರೈತರಿಗೆ ಮಾರುಕಟ್ಟೆ ರಕ್ಷಣೆ ನೀಡಬೇಕಾಗಿ ಈ ಮೂಲಕ ಕೋರುವ.

– ಮಲ್ಲಾಪುರ ದೇವರಾಜ್ ಕಾರ್ಯಧ್ಯಕ್ಷರು

ನಿರ್ದೇಶಕರುಗಳು :ಶ್ರೀ . ಗುರುಮೂರ್ತಿ, ಐ , ಶಿವಮೂರ್ತಪ್ಪ, ಚಿ . ಮೂರ್ತಿ ಆನೇಕಲ್ , ಕೃಷ್ಣಪ್ಪ , ಮ . ಹನೀಫ್ , ಅಶೋಕ ದಲಾಲ್ ಪ್ರಕಾಶ, ಬಳ್ಳಾರಿ ಹನುಮಂತಪ್ಪ , ಚಿತ್ರದುರ್ಗ ಚನ್ನಕೇಶವ , ಶಿರಾ ಗೋವಿಂದರಾಜ , ಮೈಸೂರು ಸೋಮಶೇಖರ , ಹರಿಹರ ಅಭಿಷೇಕ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.