ಜಾವಹರ್ ನವೋದಯ ವಿದ್ಯಾಲಯದ 560 ಐಐಟಿ ಮತ್ತು ಎನ್‌ಐಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಸ್ಯಾಮ್ಸಂಗ್ ಸ್ಟಾರ್ ವಿದ್ಯಾರ್ಥಿವೇತನವನ್ನು ನೀಡಲಿದೆ

“ಬೋಧನೆ , ಪರೀಕ್ಷೆ , ಹಾಸ್ಟೆಲ್ ಮತ್ತು ಮೆಸ್ ಶುಲ್ಕಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ವಾರ್ಷಿಕ ವೆಚ್ಚಗಳನ್ನು 2 ಲಕ್ಷ ರೂ . ಗಳವರೆಗೂ ಭರಿಸಲಿದೆ”

ಭಾರತ – ನವೆಂಬರ್ 15 , 2019 : ಸ್ಯಾಮ್ಸಂಗ್ ಇಂಡಿಯಾ ತನ್ನ ಸ್ಯಾಮ್ಸಂಗ್ ಸ್ಟಾರ್ ಸ್ಕಾಲರ್ ಕಾಂರ್ಯಕ್ರಮದಡಿ 560 ಜವಾಹರ್ ನವೋದಯ ವಿದ್ಯಾಲಯ ( ಜೆಎನ್‌ವಿ ) ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಪ್ರಕಟಿಸಿದೆ . ಈ ಕಾರ್ಯಕ್ರಮದಡಿಯಲ್ಲಿ , ಪ್ರತಿ ವರ್ಷ , ಸ್ಯಾಮ್ಸಂಗ್ ಯಾವುದೇ ಭಾರತೀಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ( ಐಐಟಿ ) ಯಲ್ಲಿ ಅಥವಾ ನ್ಯಾಷನಲ್ ಇನ್ಸಿಟ್ಯೂಟ್ ಆದ್ ಟೆಕ್ನಾಲಜಿ ( ಎನ್‌ಐಟಿ ) ಯಲ್ಲಿ ಪೂರ್ಣಾವಧಿಯ ಬಿಟೆಕ್ / ಎರಡು ಸ್ನಾತಕೋತ್ತರ ಪದವಿ ( ಬಿ . ಟೆಕ್ + ಎಂ . ಟೆಕ್ ) ಪಠ್ಯಕ್ರಮದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ನೀಡಲಿದೆ . ಸ್ಯಾಮ್ಸಂಗ್ ಇಂಡಿಯಾ ಪ್ರಸ್ತುತ 2019 – 2020ರ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಸ್ವೀಕರಿಸುತ್ತಿದೆ ಮತ್ತು ಅರ್ಜಿ ಮತ್ತು ಎಲ್ಲಾ ಸಂಬಂಧಿತ ದಾಖಲೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 10 , 2019 ಆಗಿದೆ . ಸ್ಯಾಮ್ಸಂಗ್ ಸ್ಟಾರ್ ಸ್ಕಾಲರ್ ಕಾರ್ಯಕ್ರಮವು ಒಂದು ಶೈಕ್ಷಣಿಕ ವರ್ಷಕ್ಕೆ ಬೋಧನೆ , ಪರೀಕ್ಷೆ , ಹಾಸ್ಟೆಲ್ ಮತ್ತು ಮೆಸ್ ಸಂಬಂಧಿಸಿದ ವೆಚ್ಚಗಳಿಗಾಗಿ 2 ಲಕ್ಷ ರೂ . ಗಳ ವಿದ್ಯಾರ್ಥಿವೇತನವನ್ನು ನೀಡುತ್ತದೆ . ಕುತೂಹಲಕಾರಿಯಾಗಿ , ವಿದ್ಯಾರ್ಥಿಯು ತನ್ನ / ಅವಳ ಪಠ್ಯಕ್ರಮವನ್ನು ಮುಗಿಸಿದ ನಂತರದ ವರ್ಷಗಳಲ್ಲಿ ಕೆಲವು ಮಾನದಂಡಗಳನ್ನು ಪೂರೈಸಿದರೆ ವಿದ್ಯಾರ್ಥಿವೇತನ ನವೀಕರಣವನ್ನು ವಿಸ್ತರಿಸಬಹುದಾಗಿದೆ . ಮೊದಲ ವರ್ಷದ ಅರ್ಜಿದಾರರ ಆಯ್ಕೆಯು ಜಾಯಿಂಟ್ ಎಂಟೈಂಸ್ ಎಕ್ಸಾಮಿನೇಶನ್ ( ಜೆಇಇ ಮೇಯಿನ್ ) ಅವರ ಆಲ್ ಇಂಡಿಯಾ ಬ್ಯಾಂಕ್ ( ಎಐಆರ್ ) ಅನ್ನು ಆಧರಿದ್ದರೆ , 2 ರಿಂದ 4ನೇ ವರ್ಷದವರೆಗೆ ವಿದ್ಯಾರ್ಥಿವೇತನದ ನವೀಕರಣವನ್ನು ಪಡೆಯಲು , ಅರ್ಜಿದಾರರು ಸೆಮಿಸ್ಟರ್ ಗ್ರೇಡ್ ಪಾಯಿಂಟ್ ಆವರೇಜ್ ( ಎಸ್‌ಜಿಪಿಎ ) ಅಥವಾ ಕ್ಯುಮುಲೇಟಿವ್ ಗ್ರೇಡ್ ಪಾಯಿಂಟ್ ಆವರೇಜ್ ( ಸಿಜಿಪಿಎ ) ರೇಟಿಂಗ್ 5 ಅಥವಾ ಹೆಚ್ಚು ನಿರ್ವಹಿಸಬೇಕು . ಈ ವರ್ಷಕ್ಕೆ ಯೋಜಿಸಲಾಗಿರುವ 560 ವಿದ್ಯಾರ್ಥಿವೇತನಗಳಲ್ಲಿ 150 ಹೊಸ ಅರ್ಜಿದಾರರಿಗೆ ಮತ್ತು 410 ವಿದ್ಯಾರ್ಥಿಗಳಿಗೆ ಅವರ ಅಸ್ತಿತ್ವದಲ್ಲಿರುವ ವಿದ್ಯಾರ್ಥಿವೇತನದ ನವೀಕರಣವನ್ನು ನೀಡಬಹುದು . “ ಸ್ಯಾಮ್ಸಂಗ್ , ನಾವು ಯುವಕರನ್ನು ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ಕಾರ್ಯಕ್ರಮಗಳ ಮೂಲಕ ಪ್ರತಿಭೆಯನ್ನು ಬೆಳೆಸುವತ್ತ ಕೆಲಸ ಮಾಡುತ್ತೇವೆ . ‘ ಸ್ಯಾಮ್ಸಂಗ್ ಸ್ಟಾರ್ ಸ್ಕಾಲರ್ ‘ ಕಾರ್ಯಕ್ರಮವು ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ , ಪ್ರತಿಷ್ಠಿತ ಐಐಟಿಗಳು ಮತ್ತು ಎಸ್‌ಐಟಿಗಳಲ್ಲಿ ಬಿ . ಟೆಕ್ ‘ ಮತ್ತು ಎಂ . ಟೆಕ್ ಪಠ್ಯಕ್ರಮಗಳನ್ನು ಅಧ್ಯಯನ ಮಾಡಲು ದೇಶದಾಸ್ವಂತದ ಜವಾಹರ್ ನವೋದಯ ವಿದ್ಯಾಲಯದ ೫೬೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿಸ್ತರಿಸಲು ನಾವು ಯೋಜಿಸಿದ್ದೇವೆ , ಭವಿಷ್ಯದ ಇಂಜಿನಿಯರ್‌ಗಳಾಗುವ ಕನಸನ್ನು ಬಿಚ್ಚಿಡಲು ಈ ಯುವ ಬುದ್ದಿವಂತ ಚೇತನಗಳನ್ನು ವಿದ್ಯಾರ್ಥಿವೇತನವು ಬೆಂಬಲಿಸುತ್ತದೆ ” ಎಂದು ಸ್ಯಾಮ್ಸಂಗ್ ಇಂಡಿಯಾದ ಕಾರ್ಪೊರೇಟ್ ಉಪಾಧ್ಯಕ್ಷ ಪೀಟರ್ ರೀ ಹೇಳಿದರು ‘ ಸ್ಯಾಮ್ಸಂಗ್ ಸ್ಟಾರ್ ಸ್ಕಾಲರ್ ‘ ಕಾರ್ಯಕ್ರಮದ ಕುರಿತು ಇನ್ನಷ್ಟು ತಿಳಿದು ಕೊಳ್ಳಲು , ಅಥವಾ ದಾಖಲಾತಿಗಾಗಿ ಅಪ್ಲಿಕೇಶನ್ ಡೌನ್ಲೋಡ್ ಮಾಡಲು , ವಿದ್ಯಾಥಿಗಳು ಸ್ಯಾಮ್ಸಂಗ್ ವೆಬ್ ಸೈಟ್ ಗೆ ಭೇಟಿ ನೀಡಬಹುದು . https : / www. Samsung.com/in/microsite/ Sapne-hue – bade / star – Scholar/ ಸ್ಯಾಮ್ಸಂಗ್ ಇಂಡಿಯಾ ಮತ್ತು ನವೀದಯ ವಿದ್ಯಾಲಯ ಸಮಿತಿ ಸಹಭಾಗಿತ್ವವು 2013ರಲ್ಲಿ ‘ ಸ್ಯಾಮ್ಸಂಗ್ ಸ್ಮಾರ್ಟ್ ಕ್ಲಾಸ್ ‘ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು . ಇದು ಗ್ರಾಮೀಣ ಹಿನ್ನೆಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿತ್ತು . ಪ್ರಸ್ತುತ ಸ್ಯಾಮ್ಸಂಗ್ ಸ್ಮಾರ್ಟ್ ಕ್ಲಾಸ ಕಾರ್ಯಕ್ರಮವು ದೇಶಾದ್ಯಂತ 645 ಜವಾಹರ್ ನವೋದಯ ವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ . 2013ರಿಂದ , 2 . 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದಿದ್ದಾರೆ ಮತ್ತು ಕಲಿಸಲು ಸಂವಾದಾತ್ಮಕ ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದರ ಕುರಿತು 8 , 000ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಲಾಗಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.