ಸಿ . ಎಂ . ಸಿ . ಎ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಸರ್ವಮಾನ್ಯತೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ “ಪ್ರತಿಭಟನಾ ರಾಲಿ ಮತ್ತು ಐಕ್ಯತಾ ಸಮಾವೇಶ”

ಸಂವಿಧಾನ ವಿರೋಧಿ ನಿಲುವುಳ್ಳ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು , ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು , ಸಿ . ಎಂ . ಸಿ . ಎ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಸರ್ವಮಾನ್ಯತೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ “ಪ್ರತಿಭಟನಾ ರಾಲಿ ಮತ್ತು ಐಕ್ಯತಾ ಸಮಾವೇಶ” ದಿನಾಂಕ : 26 ನವೆಂಬರ್ , 2019 ಬೆಳಗ್ಗೆ 10ಗಂಟೆಗೆ ಬೆಂಗಳೂರಿನ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ – ಭಾರತ ದೇಶದ ಸರ್ವಜನಾಂಗದ ಬಂಧುಗಳೇ , ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್‌ರವರು ಸ್ವತಂತ್ರ ಭಾರತಕ್ಕೆ ಸಂವಿಧಾನವನ್ನು ರಚಿಸದೇ ಇದ್ದಿದ್ದರೆ ಇಂದು ದೇಶದ ಶೇಕಡಾ 50ರಷ್ಟು ಜನಸಂಖ್ಯೆಯಿರುವ ಹಿಂದುಳಿದ ವರ್ಗ ( OBC ) ಗಳಾದ ಲಿಂಗಾಯಿತ , ಒಕ್ಕಲಿಗ – ಗೌಡ ಕುರುಬ , ಕುಂಬಾರ , ಅಗಸ ಉಪಾರ , ಗಾಣಿಗ , ಈಡಿಗ , ಗೊಲ್ಲ . ಬಲಿಜಿಗ , ರೆಡಿ ನಾಯ್ತು , ನೇಕಾರ ದೇವಾಂಗ , ವಿಶ್ವಕರ್ಮ , ಸವಿತಾ ಸಮಾಜ ಇನ್ನೂ ಮುಂತಾದ ಸಾವಿರಾರು ಶೂದ್ರ ಜಾತಿಗಳ ಜನಬಾಂಧವರು , ಮತ್ತು ಶೇಕಡಾ 30ರಷ್ಟಿರುವ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ( SC / ST ) ಸಮುದಾಯಗಳಾದ ವಾಲ್ಮೀಕಿ , ನಾಯಕ , ಬೆಸ್ತ ಕಾಡುಕುರುಬ ಜೇನುಕುರುಬ , ಬೋವಿ , ಲಂಬಾಣಿ , ಕೊರಚ , ಕೊರಮ , ಮಾದಿಗ ಹೋಲಯ , ಆದಿವಾಸಿ ಅಲೆಮಾರಿ ಮುಂತಾದ ಸ್ಪಶ್ರ ಮತ್ತು ಅಸ್ಪಶ್ಯ ಸಮುದಾಯಗಳ ಜನಬಾಂಧವರು ಮತ್ತು ಶೇ . 15 % ರಷ್ಟಿರುವ ಧಾರ್ಮಿಕ ಅಲ್ಪಸಂಖ್ಯಾತರಾದ ( RM ) ಮುಸಲ್ಮಾನರು , ಕ್ರೈಸ್ತರು , ಸಿಬ್ಬರು , ಬೌದ್ಧರು ಮುಂತಾದ ಜನಬಾಂಧವರು ಮತ್ತು ಎಲ್ಲಾ ಜಾತಿ ಧರ್ಮಗಳ ಮಹಿಳೆಯರು ಇಂದು ಶಿಕ್ಷಣವಿಲ್ಲದೆ ಗೌರವಯುತ ಉದ್ಯೋಗವಿಲ್ಲದೆ ಯಾವುದೇ ರೀತಿಯ ಹಕ್ಕು – ಅಧಿಕಾರಗಳಿಲ್ಲದೆ ಆಸ್ತಿ – ಸಂಪತ್ತು ಹೊಂದಲಾಗದೆ ಸ್ವಾಂತಂತ್ರ್ಯವಿರದೆ ಘನತೆಯುಕ್ತ ಬದುಕಿಲ್ಲದೆ ಬಾಬಾಸಾಹೇಬರ ಸಂವಿಧಾನ ಜಾರಿಗೆ ಬರುವ ಮುನ್ನ ಅವರವರ ಜಾತಿಗಳಿಗೊಪ್ಪಿಸಿದ್ದ ಕುಲಕುಸುಬುಗಳಿಗೇ ಅಂಟಿಕೊಂಡು ‘ ‘ ಮನುಸ್ಮೃತಿ ‘ ಯ ಕಾಲದಲ್ಲಿದ್ದಂತೆ ಈ ಮೇಲಿನ ಎಲ್ಲಾ ಜನಸಮುದಾಯಗಳು ತಮ್ಮ ಹೂರ್ವಿಕರಂತೆಯೇ ಅನಕರಸರಾಗಿ ಗುಲಾಮರಾಗಿ ಜೀವನ ನಡೆಸಬೇಕಾಗುತ್ತಿತ್ತು ! * ಮನುಸ್ಮೃತಿಯ ಕ್ರೂರ ಜಾತಿ ಪದ್ಧತಿಯಿಂದಾಗಿ ಶತಶತಮಾನಗಳಿಂದಲೂ ಶಿಕ್ಷಣ , ಆಯುಧ ಅಧಿಕಾರ , ಆಸ್ತಿ ಸಂಪತ್ತು , ಗೌರವಗಳಿಂದ ವಂಚಿತವಾಗಿದ ಈ ಮೇಲಿನ ಎಲಾ ಜನಸಮುದಾಯಗಳನು , ಸರ್ವ ರೀತಿಯಿಂದಲೂ 5 ರೀತಿಯಿಂದಲೂ ವಿಮೋಚನೆಗೊಳಿಸಲೆಂದೇ ಬಾಬಾ ಸಾಹೇಬರು ಆಧುನಿಕ ಭಾರತದ ಸಂವಿಧಾನ ರಚಿಸುವ ಹೊಣೆಯನ್ನು ಸ್ವ ಇಚ್ಛೆಯಿಂದ ಹೆಗಲಿಗೇರಿಸಿಕೊಂಡರು .

ಸಂವಿಧಾನ ರಚನಾ ಸಮಿತಿಗೆ ನೇಮಕಗೊಂಡಿದ್ದ ಇತರೆ ಆರು ಜನ ಸದಸ್ಯರು ಕಾರಣಾಂತರಗಳಿಂದ ಈ ಕೆಲಸದಲ್ಲಿ ಭಾಗಿಯಾಗಲು ಸಾಧ್ಯವಾಗದಿದ್ದರೂ ಲೆಕ್ಕಿಸದೆ , ಎದೆಗುಂದದೆ ಬಾಬಾಸಾಹೇಬ್ ಆಂಬೇಡ್ಕರ್‌ರವರು ಒಬ್ಬರೇ 2ವರ್ಷ 11 ತಿಂಗಳು 18ದಿನಗಳ ಕಾಲ ನಿರಂತರವಾಗಿ ಹಗಲಿರುಳೆನ್ನದೆ ತಮ್ಮ ಆರೋಗ್ಯ ಆಯುಷ್ಯವನ್ನು ತೇಯ್ದು , ಸರ್ವಜನಾಂಗಗಳಿಗೂ ಸಮಾನತೆ , ಸ್ವಾತಂತ್ರ್ಯ ನ್ಯಾಯ ಮತ್ತು ಸಹಬಾಳ್ವೆಯ ಜೀವನ ನಡೆಸುವಂಥ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ರಚಿಸಿ 26 ನವೆಂಬರ್ 1949 ರಂದು ನಮ್ಮ ಭಾರತ ದೇಶಕ್ಕೆ ಸಮರ್ಪಿಸಿದರು . ಈ ಘನಕಾರ್ಯಕ್ಕಾಗಿ ದೇಶದ ಮಹಾನ್ ವ್ಯಕ್ತಿಗಳಿಂದ ಹಾಗೂ ಜಗತ್ತಿನ ಶ್ರೇಷ್ಠರಿಂದ ಪ್ರಶಂಸೆಗೆ ಒಳಗಾಗಿ ‘ ಭಾರತದ ಸಂವಿಧಾನ ಪಿತಾಮಹ ‘ ಎನಿಸಿಕೊಂಡರು .

ಶತಶತಮಾನಗಳಿಂದ OBC / SC / ST / RM ಮತ್ತು ಮಹಿಳೆಯರಿಗೆ ಮನುಸ್ಮೃತಿಯು ಯಾವ ವಿದ್ಯೆ , ಆಸ್ತಿ , ಅಧಿಕಾರ , ಗೌರವಗಳನ್ನು ವಂಚಿಸಿ ಅದನ್ನು ಬಾಬಾಸಾಹೇಬರು ತಮ್ಮ 40 ವರ್ಷಗಳ ಸತತ ಹೋರಾಟದಿಂದ ತಮ್ಮ ಸಮಾನತಾ ಸಂವಿಧಾನದ ಮೂಲಕ ಮರಳಿ ಕೊಡಿಸಿಕೊಟ್ಟರು . ಹಾಗಾಗಿ ಮನುಸ್ಮತಿಯ ವಾರಸುದಾರರಾದ ಮನುವಾದಿಗಳು ಬಾಬಾಸಾಹೇಬರನ್ನು ಮತ್ತು ಅವರ ಸಂವಿಧಾನವನ್ನು ಆರಂಭದಿಂದಲೂ ಟೀಕಿಸುತ್ತಾ ವಿರೋಧಿಸಿಕೊಂಡೇ ಬಂದರು . ಸರ್ವಸಮುದಾಯಗಳನ್ನು ಹೆತ್ತತಾಯಿಯಂತೆ ಕಾಯುತ್ತಿರುವ ಬಾಬಾಸಾಹೇಬರ ಸಂವಿಧಾನವನ್ನು ಈಗಂತೂ ಬದಲಾಯಿಸಿಯೇ ಬಿಡಬೇಕೆಂದು ಮತ್ತು ಹಿಂದಿನಂತೆ ಕೂರ ಅಸಮಾನ ಮನುಸ್ಮತಿಯನ್ನು ಮತ್ತೆ ಮೂಲಭಾರತೀಯರ ಮೇಲೆ ಹೇರಬೇಕೆಂದು ಮನುವಾದಿಗಳು ಹುನ್ನಾರ ಹೂಡಿದ್ದಾರೆ ! ಈ ಹುನ್ನಾರದ ಭಾಗವಾಗಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು ಇತ್ತೀಚೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ‘ ಸಂವಿಧಾನ | ದಿನ ‘ ವನ್ನು ಆಚರಿಸುವಂತೆ ಆದೇಶಿಸಿ ಸುತ್ತೋಲೆಯೊಂದನ್ನು ಹೊರಡಿಸಿ ಅದರ ಜೊತೆಗೊಂದು ಮಾರ್ಗದರ್ಶಿ ಕೈಪಿಡಿಯನ್ನು ಕಳುಹಿಸಿ ‘ ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಬರೆದಿಲ್ಲ ‘ ಎಂಬ ಮಹಾಸುಳೊಂದನ್ನು ಮುಗ್ಧ ಮಕ್ಕಳ ತಲೆಗೆ ತುಂಬುವ ಷಡ್ಯಂತರ ಮಾಡಿತ್ತು . ಇದರ ಹಿಂದಿನ ಮನುವಾದಿ ಮರ್ಮವನ್ನು ಬಹಳ ಬೇಗ ಅರ್ಥಮಾಡಿಕೊಂಡ ನಾಡಿನ ಪ್ರಜ್ಞಾವಂತ ಜನ ರಾಜ್ಯದ ಮೂಲೆ ಮೂಲೆಯಲ್ಲಿಯೂ ಪ್ರತಿಭಟಿಸಿ ಉಗ್ರವಿರೋಧ ವ್ಯಕ್ತಪಡಿಸಿದ ಕಾರಣ ಎಚ್ಚೆತ್ತುಕೊಂಡಂತೆ ನಟಿಸಿದ ಶಿಕ್ಷಣ ಇಲಾಖೆಯು ಆ ವಿವಾದಾತ್ಮಕ ಸುತ್ತೋಲೆಯನ್ನು ಹಿಂಪಡೆದು ಕೇವಲ ಇಲಾಖೆಯ ನಿರ್ದೇಶಕರನ್ನು ಅಮಾನತು ಮಾಡಿ ಕೈತೊಳೆದುಕೊಂಡಿದೆ . ಆದರೆ ಇನ್ನು ಸಂವಿಧಾನಕ್ಕೆ ಮತ್ತು ಸಂವಿಧಾನ ಪಿತಾಮಹರಿಗೆ ಅಪಮಾನ ಮಾಡಿರುವ ಈ ಹುನ್ನಾರದ ಪ್ರಮುಖ ಜವಾಬ್ದಾರಾದ ಶಿಕ್ಷಣ ಸಚಿವರ , ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ , ಮತ್ತು ಆಯುಕ್ತರ ತಲೆದಂಡವಾಗಬೇಕೆಂಬುದು ನಮ್ಮ ಒಕ್ಕೊರಲಿನ ಒತ್ತಾಯವಾಗಿದೆ . ಈ ನಿಟ್ಟಿನಲ್ಲಿ ರಾಜ್ಯದ ಸಂವಿಧಾನಪರ ಸರ್ವಜಾತಿಯ ಸರ್ವ ಧರ್ಮದ ಸರ್ವ ಸಂಘಟನೆಗಳು ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಿಸಲು ದಿನಾಂಕ 26 , ನವೆಂಬರ್ 2019ರಂದು ರಂದು ರಾಜಧಾನಿ ಬೆಂಗಳೂರಿನಲ್ಲಿ ಒಂದು ಬೃಹತ್ ಐಕ್ಯತಾ ಸಮ್ಮೇಳನ ವನ್ನು ಏರ್ಪಡಿಸಲಾಗಿದೆ . ಈ ಕಾರ್ಯಕ್ರಮಕ್ಕೆ ಸಂವಿಧಾನ ಪರವಿರುವ ಸರ್ವರೂ ಸ್ವ – ಇಚ್ಛೆಯಿಂದ ಭಾಗಹಿಸಿ ತಮ್ಮ ತಮ್ಮ ಜವಾಬ್ದಾರಿಯನ್ನು ಮೆರೆಯಬೇಕೆಂದು ಈ ಮೂಲಕ ತಮ್ಮೆಲ್ಲರನ್ನೂ ಆಹ್ವಾನಿಸಲಾಗುತ್ತಿದೆ . ದಯಮಾಡಿ ರಾಜ್ಯದ ಎಲ್ಲಾ ಜಿಲ್ಲೆ ತಾಲ್ಲೂಕುಗಳಿಂದಲೂ ಹಳ್ಳಿಹಳ್ಳಿಗಳಿಂದಲೂ ಹಾಗೂ ಸಂವಿಧಾನ ಪರವಿರುವ ಎಲ್ಲಾ ಸಂಘಟನೆಗಳ ನಾಯಕರು ಕಾರ್ಯಕರ್ತರು ಮತ್ತು ಎಲ್ಲಾ ನಾಗರೀಕ ಪ್ರಜ್ಞಾವಂತ ಬಂಧುಗಳು , ರಾಜಧಾನಿ ಬೆಂಗಳೂರಿಗೆ ಸಾಗರೋಪಾದಿಯಲ್ಲಿ ಹರಿದು ಬನ್ನಿ . . . . . ಸಂವಿಧಾನವನ್ನು ಉಳಿಸೋಣ ಬನ್ನಿ . ನಿಮ್ಮ ಭಾಗವಹಿಸುವಿಕೆಯ ನಿರೀಕ್ಷೆಯಲ್ಲಿ ಸಂವಿಧಾನ ಸಂರಕ್ಷಣ ಐಕ್ಯತಾ ಸಮಿತಿಯ ಪರವಾಗಿ ಕರ್ನಾಟಕ ರಾಜ್ಯದ ಸಂವಿಧಾನ ಪರ ಎಲ್ಲಾ ದಲಿತ ಸಂಘಟನೆಗಳು , ಸಂವಿಧಾನ ಪರ ಎಲ್ಲಾ ಧರ್ಮ ಗುರುಗಳು , ಸಂವಿಧಾನ ಪರ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತ ಸಂಘಟನೆಗಳು , ಸಂವಿಧಾನ ಪರ ಎಲ್ಲಾ ಪ್ರಗತಿಪರ ಹಿಂದುಳಿದ ವರ್ಗದ ಸಂಘಟನೆಗಳು , ಸಂವಿಧಾನ ಪರ ಎಲ್ಲಾ ಮಹಿಳಾ ಸಂಘಟನೆಗಳು ಮತ್ತು ರಾಜ್ಯದ ಎಲ್ಲಾ ಇಲಾಖೆಗಳ OBC / SC / ST / RM ನೌಕರರು , ವಕೀಲರು ಮತ್ತು ಗುತ್ತಿಗೆದಾರರು , ಎಲ್ಲಾ ಸಂವಿಧಾನ ಪರ ವಿಶ್ವವಿದ್ಯಾಲಯಗಳ ಕಾಲೇಜು – ಹಾಸ್ಟಲ್‌ಗಳ ವಿದ್ಯಾರ್ಥಿಗಳು ಮತ್ತು ನೀವೆಲ್ಲರೂ .

-ಸಂವಿಧಾನ ಸಂರಕ್ಷಣ ಐಕ್ಯತಾ ಸಮಿತಿಯ ಪರವಾಗಿ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.