ಕಟ್ಟುನಿಟ್ಟಿನ ಕಾನೂನು ಜಾರಿಗೆ ಸರಕಾರಕ್ಕೆ ಇಂದಿರಾನಗರ ನಿವಾಸಿಗಳ ಮನವಿ

ಬೆಂಗಳೂರು , ನವೆಂಬರ್ 27 , 2019: ರೆಸ್ಟೋರೆಂಟ್ ಮತ್ತು ಬಾರ್ ಮಾಲೀಕರ ಸಂಘ ಇತ್ತೀಚೆಗೆ ಸಾರ್ವಜನಿಕರ ಅನುಕಂಪ ಲಟ್ಟಿಸಲು ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂದಿರಾನಗರದ ನಿವಾಸಿಗರಾದ ನಾವು ಎಲ್ಲ ಇಲಾಖೆಗಳೂ ಪ್ರಸ್ತುತ ಇರುವ ಎಲ್ಲ ಕಾನೂನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾಲಗೊಳಿಸಲು ಸರಕಾರವನ್ನು ಕೋರುತ್ತಿದ್ದೇವೆ . ಕಾನೂನು ಜಾರಿಯಲ್ಲಿ ಅಸಡ್ಡೆ ತೋರಿದ್ದರಿಂದಲೇ ವಸತಿ ಪ್ರದೇಶವಾದ ಇಂದಿರಾನಗರದಲ್ಲಿ ಪಬ್ ಮತ್ತು ಬಾರ್‌ಗಳು ಬೇಕಾಬಿಟ್ಟಿಯಾಗಿ ಬೆಳೆದಿದ್ದವು . ಐ ಚೇಂಜ್ ಇಂದಿರಾನಗರ ( ಐಸಿಐಎನ್ ) ಸಂಘಟನೆ , ಕಾನೂನಿನ ಮೊರೆ ಹೋದಾಗ ನೂರಕ್ಕಿಂತಲೂ ಹೆಚ್ಚು ಬಾರ್ ಮತ್ತು ಪಬ್‌ಗಳಿದ್ದವು . ಇವುಗಳಲ್ಲಿ ಬಹುತೇಕ ಪಬ್ , ಬಾರ್‌ಗಳು ಸರಕಾರ ಮತ್ತು ನಗರಾಡಳಿತಗಳು ರೂಪಿಸಿದ ಒಂದಲ್ಲ ಒಂದು ನಿಯಮಗಳನ್ನು ಉಲ್ಲಂಘಿಸಿದ್ದವು . ಸತತ ದೂರುಗಳನ್ನು ಸಲ್ಲಿಸಿ , ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಳಂಬ ತಂತ್ರ ಅನುಸರಿಸಿದ್ದರು . ಕರ್ನಾಟಕದ ಗೌರವಾನ್ವಿತ ಹೈಕೋರ್ಟ್ ನಿರ್ದೇಶನ ನೀಡಿದ ಬಳಿಕವಷ್ಟೇ , ಪಬ್ ಮತ್ತು ಬಾರ್‌ಗಳು ನಾಯಿಕೊಡೆಗಳಂತೆ ಹರಡದಂತೆ ತಡೆಯಲು ಐದಾರು ವರ್ಷಗಳ ಹಿಂದೆಯೇ ಕೈಗೊಳ್ಳಬೇಕಾದ ಕ್ರಮಗಳನ್ನು ಅಧಿಕಾರಿಗಳು ಈಗ ತೆಗೆದುಕೊಳ್ಳುತ್ತಿದ್ದಾರೆ . ಕೊನೆಗೂ ತಡವಾಗಿ ಕಾನೂನುಗಳನ್ನು ಜಾರಿ ಮಾಡಿದ್ದರಿಂದ ಪಬ್‌ಗಳು ಮುಚ್ಚಬೇಕಾಗಿದೆ , ಸಂಗೀತಗಾರರು ಅವಕಾಶ ವಂಚಿತರಾಗಬೇಕಾಗಿದೆ . ಜನರು ಉದ್ಯೋಗ ಕಳೆದುಕೊಳ್ಳಬೇಕಾಗಿದೆ . ಈ ಪರಿಸ್ಥಿತಿಗೆ ಕಾನೂನು ಉಲ್ಲಂಘಿಸಿದ ಮಾಲೀಕರೇ ನೇರ ಜವಾಬ್ದಾರರಾಗುತ್ತಾರೆ . ಆದರೆ ಈ ವಿದ್ಯಮಾನಗಳಿಗೆ ಕಾನೂನು ಪ್ರಕಾರ ಹೋರಾಟ ನಡೆಸುತ್ತಿರುವ ನಿವಾಸಿಗಳನ್ನೇ ತಪ್ಪಿತಸ್ಥರೆಂಬಂತೆ ಬಿಂಬಿಸಲಾಗುತ್ತಿದೆ . ಇದು ದುರಾದೃಷ್ಟಕರ . ಪಬ್ ಮತ್ತು ಬಾರ್ ಮಾಲೀಕರು ಹಾಗೂ ಅಧಿಕಾರಿಗಳು ಆರಂಭದಿಂದಲೇ ಕಾನೂನುಗಳಿಗೆ ಬದ್ಧರಾಗಿ ಅವುಗಳನ್ನು ಜಾರಿಗೊಳಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ . ಪ್ರತಿಯೊಂದು ವ್ಯಾಪಾರ ಅಥವಾ ವಾಣಿಜ್ಯ ಮಳಿಗೆಗಳು ನೆಲದ ಕಾನೂನುಗಳನ್ನು ಗೌರವಿಸಬೇಕು . ಯಾವುದೇ ವಹಿವಾಟು ನಡೆಸಬೇಕಾದರೆ ಆ ಉದ್ಯಮಕ್ಕೆ ಅಗತ್ಯವಿರುವ ಪರವಾನೀಗಿಯನ್ನು ಕಡ್ಡಾಯವಾಗಿ ಪಡೆಯಬೇಕು ( ಆರೋಗ್ಯ , ನಿರ್ಮಾಣ ಬೈಲಾಗಳು , ಅಗ್ನಿ ಸುರಕ್ಷತೆ , ಮಾಲಿನ್ಯ ನಿಯಂತ್ರಣ , ಕಾನೂನು ಮತ್ತು ಸುವ್ಯವಸ್ಥೆ , ಸಂಚಾರ , ಅಬಕಾರಿ , ಕಾರ್ಮಿಕ , ಬೆಸ್ಕಾಂ ಮತ್ತು ಇಡಬ್ಲ್ಯುಎಸ್‌ಎಸ್‌ ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳ ನಿರಪೇಕ್ಷಣಾ ಪತ್ರ ಇದರಲ್ಲಿ ಸೇಲದೆ ) , ಉದ್ಯೋಗಿಗಳ , ಮಳಿಗೆಗಳ ನೆರೆಹೊರೆಯಲ್ಲಿರುವ ನಿವಾಸಿಗಳ , ಪೋಷಕರ , ಸಾರ್ವಜನಿಕರ ಮತ್ತು ಒಟ್ಟಾರೆ ನಗರದ ಹಿತಾಸಕ್ತಿ ಸುರಕ್ಷತೆಗಾಗಿ ಈ ಕಾನೂನುಗಳಿವೆ ಎಂಬುದನ್ನು ಮರೆಯಬಾರದು .

ಪ್ರತಿಭಟನೆಗಳ ಕುಲತು ಅಭಿಪ್ರಾಯ ವ್ಯಕ್ತಪಡಿಸಿದ ಐಸಿಐಎನ್ ಸಂಘಟನೆಯ ಸದಸ್ಯರಾದ ಸ್ನೇಹಾ ನಂದಿಹಾಳ್ ಅವರು “ ಕೆಲವೊಂದು ನಿಯಮಗಳು ಅವರದ್ದೇ ಉದ್ಯೋಗಿಗಳ ಒಳಿತಿಗಾಗಿಯೇ ಇವೆ . ಆದರೆ ರೆಸ್ಟೋರೆಂಟ್ ಮತ್ತು ಬಾರ್ ಅಸೋಸಿಯೇಷನ್‌ನ ವ್ಯಕ್ತಿಗಳಿಗೆ ಈ ಕುರಿತು ಏಕೆ ಅಲವಿರಲಿಲ್ಲ ಎಂಬುದು ನಮಗೆ ತಿಳಿಯುತ್ತಿಲ್ಲ . ಬದಲಾಗಿ ಅವರು ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ‘ ಎಂಬ ಭಾವನಾತ್ಮಕ ಹುಸಿ ನೆಪವನ್ನು ಈಗ ಕೊಡುತ್ತಿದ್ದಾರೆ . ಉದ್ಯೋಗಿಗಳನ್ನು ತಮ್ಮ ಬಂಡವಾಳಶಾಹಿ ಮತ್ತು ಲಾಭಕೋರತನದ ಕಾರ್ಯಸೂಚಿಯ ದಾಳಗಳನ್ನಾಗಿ ಬಳಸುತ್ತಿದ್ದಾರೆ . ಪ್ರತಿಭಟನೆಯ ಮೂಲಕ ಸರಕಾರವನ್ನು ಮಣಿಸುವ ಬೆದಲಕೆಯೋಡ್ಡಿ ಕೇವಲ ಅವಲಗಾಲ ಕಾನೂನುಗಳನ್ನು ಸಡಿಲಿಸುವಂತೆ ಒತ್ತಡ ಹೇರುತ್ತಿದ್ದಾರೆ . ಅವರ ಬೇಡಿಕೆ ನ್ಯಾಯಯುತವೇ ? ” ಎಂದು ಪ್ರಶ್ನಿಸಿದರು . “ ಈ ಪಬ್ ಮತ್ತು ಬಾರ್ ರೆಸ್ಟೋರೆಂಟ್‌ಗಳ ಸಮೀಪದಲ್ಲಿಯೇ ಬದುಕಿ ನಾವು ಬಹಳಷ್ಟು ವರ್ಷಗಳಿಂದ ಅವರ ‘ ಸಂತ ‘ ದಿಂದ ನೊಂದಿದ್ದೇವೆ . ಅವರ ಸದ್ದುಗದ್ದಲದಿಂದ ವೃದ್ದರು ಮತ್ತು ಮಕ್ಕಳು ನೆಮ್ಮದಿಯಿಂದ ಮನೆಯಲ್ಲಿ ಇರುವಂತಿರಅಲ್ಲ , ಸಂಚಾರ ದಟ್ಟಣೆ , ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮತ್ತು ನುಗ್ಗಿಬರುವ ಗ್ರಾಹಕರಿಂದಾಗಿ ನಾವು ಹೊರಗೂ ಹೋಗುವಂತಿರಲಿಲ್ಲ ” ಎಂದು ಇಂದಿರಾನಗರ ನಿವಾಸಿಗಳ ಸಂಘದ ಕಾರ್ಯದರ್ಶಿ ಮತ್ತು ಐಸಿಎನ್ ಸದಸ್ಯರಾದ ಇಂದಿರಾ ವಿಶ್ವನಾಥನ್ ದೂರಿದರು . “ ಆರ್‌ಟಿಐನ ನಾವು ಸಲ್ಲಿಸಿದ ಅರ್ಜಿಗಳಲ್ಲಿ ದೊರೆತ ಮಾಹಿತಿಯ ಪ್ರಕಾರ ಬಹಳಷ್ಟು ಪಬ್ ಮತ್ತು ಬಾರ್‌ಗಳು ಅಬಕಾರಿ ಪರವಾನಿಗಳನ್ನು ಹಂಚಿಕೊಳ್ಳುತ್ತಿದ್ದವು . ಕಟ್ಟಡಗಳಲ್ಲಿ ಪಾರ್ಕಿಂಗ್ ಉದ್ದೇಶಕ್ಕಾಗಿರುವ ನೆಲಅಂತಸ್ತುಗಳನ್ನು ವಾಣಿಜ್ಯ ಉದ್ದೇಶಗಳಿಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು . ವಾರದಿಂದ ವಾರಕ್ಕೆ ಜನರ ದಟ್ಟಣೆಯೂ ಹೆಚ್ಚುತ್ತಿದ್ದರಿಂದ ದಾಂಧಲೆ , ಕಳವು ಮತ್ತು ದರೋಡೆ ಪ್ರಕರಣಗಳೂ ಹೆಚ್ಚುತ್ತಿದ್ದವು . ಮದ್ಯ ಮತ್ತು ಮಾದಕ ವಸ್ತುಗಳು ಸುಲಭವಾಗಿ ದೊರೆಯುತ್ತಿರುವುದು ನಮ್ಮ ಸಮಾಜ , ಅದರಲ್ಲೂ ಮಕ್ಕಳು ಹಾಗೂ ಯುವ ಸಮೂಹದ ಮೇಲೆ ದುಷ್ಪರಿಣಾಮ ಬೀರುತ್ತಿದೆ . ನಮ್ಮ ಜೀವ ಮತ್ತು ಸಂಪತ್ತು ಅಪಾಯದಲ್ಲಿದೆ . ಸರಕಾರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎನ್ನುವುದು ನಮ್ಮ ಮನವಿ ” ಎಂದು ಐಸಿಐಎನ್‌ನ ಇನ್ನೊಬ್ಬ ಸದಸ್ಯರಾದ ಸ್ವರ್ಣ ಬಿ . ವಿನಂತಿಸಿಕೊಂಡರು .

City Today News

(citytoday.media)

9341997946

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.