“ ಉಪ್ಪಾರ ನೌಕರರ , ವೃತ್ತಿಪರರ ಮತ್ತು ಮಹಿಳೆಯರ ಬೃಹತ್ ಸಮಾವೇಶ ” ಹಾಗೂ “ ಬೆಂಗಳೂರು ನಗರ , ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ” ಹಾಗೂ “ ಸಾಧಕರಿಗೆ / ಹಿರಿಯರಿಗೆ ಗೌರವ ಸಮರ್ಪಣಾ ” ಕಾರ್ಯಕ್ರಮ

ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ನಮ್ಮ ಉಪ್ಪಾರ ಸಮಾಜವು ರಾಜ್ಯದಲ್ಲಿ 35 ರಿಂದ 40 ಲಕ್ಷ ಜನಸಂಖ್ಯೆಯನ್ನು ಹೊಂದಿರುತ್ತದೆ . ಈ ಸಮಾಜಕ್ಕೆ ಆರ್ಥಿಕವಾಗಿ , ಸಾಮಾಜಿಕವಾಗಿ , ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಸಮಾನ ಮತ್ತು ಸರಿಯಾದ ನ್ಯಾಯ ದೊರಕಿಸಲು ನಮ್ಮ ಸಮಾಜದ ಅನೇಕ ಹಿರಿಯರು , ಪೂಜ್ಯರು ಹಾಗೂ ಅನೇಕ ಸಂಘ – ಸಂಸ್ಥೆಗಳು , ಸಂಘಟನೆಗಳು ಸುಮಾರು ದಶಕಗಳಿಂದ ಹೋರಾಟ ನಡೆಸಿಕೊಂಡು ಬಂದಿರುತ್ತಾರೆ . ಆದರೆ ಫಲಿತಾಂಶ ಮಾತ್ರ ಬಹಳ ವಿರಳವೆಂದೇ ಹೇಳಬೇಕಾಗುತ್ತದೆ . ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಕೇವಲ ಮತದಾನದ ಸಮಯದಲ್ಲಿ ಮತಬ್ಯಾಂಕ್ ಆಗಿ ಬಳಸಿಕೊಂಡು , ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಈ ಸಮಾಜವನ್ನು ನಿರಂತರವಾಗಿ ತಿರಸ್ಕರಿಸುತ್ತಾ ಬಂದಿರುತ್ತವೆ . ಈ ಸಮಾಜದಲ್ಲಿ ಕೇವಲ ಇಬ್ಬರು ಶಾಸಕರು , ಅದರಲ್ಲಿ ಒಬ್ಬರಿಗೆ ಮಂತ್ರಿ ಪದವಿ , ಒಬ್ಬರು ಎಮ್ . ಎಲ್ . ಸಿ . , ಇಬ್ಬರು ನಿಗಮ ಮಂಡಳಿ , ಇನ್ನು ಜಿಲ್ಲಾ ಪಂಚಾಯತಿ , ಪಟ್ಟಣ ಪಂಚಾಯತಿ , ಪುರಸಭೆ , ನಗರ ಸಭೆ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಸಣ್ಣ ಪುಟ್ಟ ಹುದ್ದೆಗಳನ್ನು ಸ್ವೀಕರಿಸಿರುವುದನ್ನು ಬಿಟ್ಟರೆ , ಉನ್ನತ ಮಟ್ಟದ ಅಧಿಕಾರವನ್ನು ಯಾವುದೇ ರಾಜಕೀಯ ಪಕ್ಷಗಳು ನಮಗೆ ನೀಡಿರುವುದಿಲ್ಲ . ಹೀಗೆ ನಿರಂತರವಾಗಿ ನಾವು ಶೋಷಣೆಗೆ ಒಳಗಾಗುತ್ತಾ ಬಂದಿದ್ದೇವೆ . ಇನ್ನು ನೌಕರರ ಮತ್ತು ಮಹಿಳೆಯರ ವಿಚಾರಕ್ಕೆ ಬಂದರೆ , ನಮ್ಮ ರಾಜ್ಯದಲ್ಲಿ ಹಲವಾರು ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉನ್ನತ ಮಟ್ಟದ ಅಧಿಕಾರಿಗಳಿಂದ ಹಿಡಿದು ಸಿಪಾಯಿ / “ ಡಿ ” ದರ್ಜೆಯ ಹುದ್ದೆಯ ಮಟ್ಟದ ನೌಕರರಿಗೆ ಏನೇ ತೊಂದರೆ ಬಂದರೂ ಯಾರೂ ಕೇಳುವವರಿಲ್ಲದಂತಾಗಿದೆ . ನಮ್ಮ ಸಮಾಜದ ನೌಕರರ ಮೇಲೆ –

ಹಲವಾರು ಇಲಾಖೆಗಳಲ್ಲಿ ನಿರಂತರವಾಗಿ ಅನ್ಯಾಯ / ದೌರ್ಜನ್ಯ ನಡೆಯುತ್ತಾ ಬಂದಿದೆ . ಈಗಲೂ ಸಹ ನಡೆಯುತ್ತಿದೆ . ಆದರೆ ಪ್ರತಿಭಟಿಸಲು ಅವರಲ್ಲಿ ಸಂಘಟನಾ ಬಲ ಅಥವಾ ಸಂಘಟನೆಯ ಧ್ವನಿ ಇರುವುದಿಲ್ಲ . ಅದೇ ನಿಟ್ಟಿನಲ್ಲಿ ನಮ್ಮ ಸಮಾಜದ ಮಹಿಳೆಯರು ಸಹ ಆರ್ಥಿಕವಾಗಿ , ಸಾಮಾಜಿಕವಾಗಿ , ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ತುಂಬಾ ಹಿಂದುಳಿದಿರುತ್ತಾರೆ . ಯಾವ ರಂಗದಲ್ಲಿಯೂ ಸಹ ನಮ್ಮ ಮಹಿಳೆಯರಿಗೆ ಉನ್ನತ ಮಟ್ಟದ ಸ್ಥಾನಮಾನ ಸಿಕ್ಕಿರುವುದಿಲ್ಲ . ಇತ್ತೀಚೆಗೆ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ನಮ್ಮ ಸಮಾಜದ ಓರ್ವ ಮಹಿಳೆಗೆ ಮಾತ್ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ಹೆಮ್ಮೆಯ ವಿಷಯ . ಆದರೆ ಈ ಸಮಾಜದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಇನ್ನೂ ಅನೇಕ ಮಹಿಳೆಯರಿದ್ದಾರೆ . ಆದರೆ , ಅವರನ್ನು ಗುರುತಿಸಿ ಗೌರವಿಸುವ ಮಹತ್ ಕಾರ್ಯವನ್ನು ಯಾವ ಸಂಘಟನೆಗಳು ಮತ್ತು ಯಾವ ಪಕ್ಷಗಳು ಮಾಡಿರುವುದಿಲ್ಲ . ಆದ ಕಾರಣ , ನಮ್ಮ ಸಮಾಜದ ಮಹಿಳೆಯರಲ್ಲಿ ಸಂಘಟನೆಯ ಶಕ್ತಿ ಪ್ರದರ್ಶನವಾಗಿರುವುದಿಲ್ಲ .

ಹೀಗೆ ಹಲವಾರು ಸಮಸ್ಯೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಈ ಎಲ್ಲಾ ( ಸಮಸ್ಯೆಗಳ ಕುರಿತು ಹಾಗೂ ನಮ್ಮ ನೌಕರರಿಗೆ ಮತ್ತು ಮಹಿಳೆಯರಿಗೆ ಆಗುತ್ತಿರುವ ಅನ್ಯಾಯ ಮತ್ತು ದೌರ್ಜನ್ಯವನ್ನು ಹಾಗೂ | ಇನ್ನಿತರ ಸಮಸ್ಯೆಗಳನ್ನು ಸರ್ಕಾರದ ಮುಂದ ತೋರ್ಪಡಿಸಿ ಅವುಗಳಿಗೆ ಸೂಕ್ತವಾದ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಉಪಾರ ಮಹಾಸಭಾ ( ರಿ ) , ಬೆಂಗಳೂರು ಇವರ ನೇತೃತ್ವದಲ್ಲಿ ಒಂದು ಬೃಹತ್ ಸಮಾವೇಶವನ್ನು ಏರ್ಪಡಿಸಲು ತೀರ್ಮಾನಿಸಿದೆ . ಅಷ್ಟೇ ಅಲ್ಲದೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಎಸ್ . ಎಸ್ . ಎಲ್ . ಸಿ . , ಮತ್ತು ದ್ವಿತೀಯ ಪಿ . ಯೂ . ಸಿ . ಪರೀಕ್ಷೆಯಲ್ಲಿ 80 % ಮತ್ತು ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಮ್ಮ ರಾಜ್ಯದಲ್ಲಿ ಉಪ್ಪಾರ ಸಮಾಜದ ಸಂಘಟನೆಯ ಕುರಿತು ತಮ್ಮ ಜೀವಮಾನವನ್ನೇ ಸಮಾಜಕ್ಕೆ ಮುಡುಪಾಗಿಟ್ಟು , ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದಂತಹ ಮಹನೀಯರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಗಿದೆ . ಈ ನಿಟ್ಟಿನಲ್ಲಿ ದಿನಾಂಕ 15 . 12 . 2019ರ ಭಾನುವಾರದಂದು ಬೆಂಗಳೂರಿನ “ ಶಿಕ್ಷಕರ ಸದನದಲ್ಲಿ ಅಖಿಲ ಕರ್ನಾಟಕ ಉಪ್ಪಾರ ಮಹಾಸಭಾ ( ರಿ ) , ಬೆಂಗಳೂರು ಇವರ ನೇತೃತ್ವದಲ್ಲಿ ರಾಜ್ಯ ಮಟ್ಟದ “ ಉಪ್ಪಾರ ನೌಕರರ , ವೃತ್ತಿಪರರ ಮತ್ತು ಮಹಿಳೆಯರ ಬೃಹತ್ ಸಮಾವೇಶ ” ಹಾಗೂ “ ಬೆಂಗಳೂರು ನಗರ , ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ” ಹಾಗೂ “ ಸಾಧಕರಿಗೆ / ಹಿರಿಯರಿಗೆ ಗೌರವ ಸಮರ್ಪಣಾ ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ . ಕಾರಣ , ಉಪ್ಪಾರ ಸಮಾಜದ ಬಂಧುಗಳಲ್ಲಿ ವಿನಮ್ರತೆಯಿಂದ ವಿನಂತಿಸಿಕೊಳ್ಳುವುದೇನೆಂದರೆ , ದಯವಿಟ್ಟು ತಾವೆಲ್ಲರೂ ಕುಟುಂಬ ಸಮೇತ ಕಾರ್ಯಕ್ರಮಕ್ಕೆ ಆಗಮಿಸಿ , ಈ ಬೃಹತ್ ಸಮಾವೇಶವನ್ನು ಯಶಸ್ವಿಗೊಳಿಸಿ , ಸಮಾಜದ ಪ್ರಗತಿಗೆ ಮತ್ತು ಏಳಿಗೆಗೆ ಮುನ್ನುಡಿ ಬರೆಯಬೇಕೆಂದು ಹಾಗೂ ಮುನ್ನುಡಿ ಬರೆದವರಲ್ಲಿ ತಾವೂ ಒಬ್ಬರಾಗಬೇಕೆಂಬುದು ನಮ್ಮ ಆಶಯ . . . . . . ಜೈ ಭಗೀರಥ .

ಅಖಿಲ ಕರ್ನಾಟಕ ಉಪ್ಪಾರ ಮಹಾಸಭಾ ( ರಿ )

City Today News

(citytoday.media)

9341997946

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.