ಜನವರಿ 8 , 2020 ಕ್ಕೆ ರಾಷ್ಟ್ರವ್ಯಾಪಿ “ ಗ್ರಾಮೀಣಾ ಭಾರತ್ ಬಂದ್ ”

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ( AIKSCC ) ಕರ್ನಾಟಕ ನಂ , 12 , 18ನೇ ಕ್ರಾಸ್ , ಸಂಪಂಗಿರಾಮನಗರ , ಬೆಂಗಳೂರು – 560027 13 ಡಿಸೆಂಬರ್ 2019 ಬೆಂಗಳೂರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಹೇಳಿಕೆ : ಎಲ್ಲಾ ರೈತರು , ಕೃಷಿ ಕೂಲಿಕಾರರನ್ನು ಸಾಲದಿಂದ ಸಂಪೂರ್ಣ ಮುಕ್ತಿಗೊಳಿಸುವ ‘ ಋಣ ಮುಕ್ತ ಕಾಯ್ದೆ ” ಗಾಗಿ , ಡಾ | ಸ್ವಾಮಿನಾಥ್ ವರದಿ ಆಧಾರಿತ ‘ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ‘ ಯ ಜಾರಿಗಾಗಿ , ರಾಜ್ಯದ ಪ್ರವಾಹ ಪೀಡಿತರಿಗೆ ಕೂಡಲೇ ಸೂಕ್ತ ಪರಿಹಾರ ವಿತರಣೆಗಾಗಿ , ರೈತ ವಿರೋಧಿ ರಾಜ್ಯ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಯನ್ನು ಕೈ ಬಿಡಬೇಕೆಂದು ಒತ್ತಾಯಿಸಿ , ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಜಾರಿ ಇತ್ಯಾದಿ ಬೇಡಿಕೆಗಳಿಗಾಗಿ ಜನವರಿ 8 , 2020 ರ “ ಗ್ರಾಮೀಣಾ ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಎಐಕೆಎಸ್‌ಸಿಸಿಯ ಕರೆ . ಆಳುವ ಸರ್ಕಾರಗಳ ನಿರಂತರ ರೈತ ವಿರೋಧಿ ನೀತಿಗಳಿಂದ ಉಂಟಾಗಿರುವ ಕೃಷಿ ಬಿಕ್ಕಟ್ಟಿನ ಫಲವಾಗಿ ನಡೆಯುತ್ತಿರುವ ಅಸಂಖ್ಯಾತ ರೈತರು ಮತ್ತು ಕೃಷಿ ಕೂಲಿಕಾರರ ಆತ್ಮಹತ್ಯೆಗಳನ್ನು ತಡೆಯಲು ಕೂಡಲೇ ಡಾ | ಎಂ . ಎಸ್ . ಸ್ವಾಮಿನಾಥನ್ ವರದಿಯನ್ವಯ ಪಾರ್ಲಿಮೆಂಟ್‌ನಲ್ಲಿ ಮಂಡಿಸಲಾಗಿರುವ “ ಕನಿಷ್ಠ ಬೆಂಬಲ ಬೆಲೆ : ಖಾತರಿ ಕಾಯ್ದೆ ” , ಎಲ್ಲಾ ರೈತರು ಮತ್ತು ಕೃಷಿ ಕೂಲಿಕಾರರನ್ನು ಸಾಲದ ಭಾದೆಯಿಂದ ಸಂಪೂರ್ಣವಾಗಿ ಮುಕ್ತಿಗೊಳಿಸುವ ಉದ್ದೇಶದಿಂದ ಪಾರ್ಲಿಮೆಂಟ್‌ನ ಮುಂದಿರುವ “ ಋಣ ಮುಕ್ತ ಕಾಯ್ದೆ ” ಗಳನ್ನು ಜಾರಿ ಮಾಡಬೇಕೆಂದು , ಸುಮಾರು ತಿಂಗಳುಗಳಿಂದ ಪ್ರವಾಹದಿಂದ ಬೀದಿ ಪಾಲಾಗಿರುವ ಅಸಂಖ್ಯಾತ ರೈತರು , ಕೃಷಿ ಕೂಲಿಕಾರರು , ಇತರೆ ಕಸುಬುದಾರರಿಗೆ ಕೂಡಲೇ ನ್ಯಾಯಯುತ ಪರಿಹಾರ ನೀಡಬೇಕೆಂದು , ಕೇಂದ್ರದ ಭೂಸ್ವಾಧೀನ ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿ ಭೂಸ್ವಾಧೀನ ಕಾಯ್ದೆಗೆ ಹಿಂದಿನ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಕೈಬಿಡಬೇಕೆಂದು , ರಾಜ್ಯದ ರೈತರು ಮತ್ತು ಕೂಲಿಕಾರರ ಸಾಲಮನ್ನಾಕ್ಕೆ ಸಂಬಂಧಿಸಿ ಕೇರಳ ಮಾದರಿಯಲ್ಲಿ ಶಾಶ್ವತ “ ಋಣ ಮುಕ್ತ ಆಯೋಗ ” ವನ್ನು ರಚಿಸಬೇಕೆಂದು , ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಇತ್ಯಾದಿ ಮುಖ್ಯ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿ ಜನವರಿ 8 , 2020 ಕ್ಕೆ ‘ ಗ್ರಾಮೀಣಾ ಕರ್ನಾಟಕ ಬಂದ್ ‘ ನ್ನು ಯಶಸ್ವಿಗೊಳಿಸಬೇಕೆಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ( AIKSCC ) – ಕರ್ನಾಟಕ ರಾಜ್ಯ ಸಮಿತಿ , ರೈತರು , ಕೃಷಿಕೂಲಿಕಾರರಲ್ಲಿ ವಿನಂತಿಸುತ್ತದೆ . ಸುಮಾರು 200 ಕ್ಕಿಂತ ಹೆಚ್ಚಿನ ರೈತ ಸಂಘಟನೆಗಳನ್ನು ಒಳಗೊಂಡು ರಚನೆಯಾಗಿರುವ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ( AIKSCC ) ಜನವರಿ 8 , 2020 ರಂದು ಸುಮಾರು 21 ಬೇಡಿಕೆಗಳನ್ನು ಒತ್ತಾಯಿಸಿ “ ಗ್ರಾಮೀಣಾ ಭಾರತ್ ಬಂದ್ ಗೆ ಕರೆ ನೀಡಿದೆ . ಇತ್ಯಾದಿ ಮುಪ್ಪಿ ಯೋಗ ” ವನ್ನು ಮತ್ತು ಕೂಲಿ ಕಾಯ್ದೆಗೆ ಹಿಂದಿನ ಜನ ಇದರ ಭಾಗವಾಗಿ ರಾಜ್ಯದಲ್ಲಿ , ಕರ್ನಾಟಕ ರಾಜ್ಯ ರೈತ ಸಂಘ ( KRRS ) ಎರಡು ಸಂಘಟನೆಗಳು , ಕರ್ನಾಟಕ ಪ್ರಾಂತ ರೈತ ಸಂಘ ( KPRS ) , ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ( AIAWU ) , ರೈತ , ಕೃಷಿ ಕಾರ್ಮಿಕರ ಸಂಘಟನೆ ( RKS ) , ಅಶಾ – ಕಿಸಾನ್ ಸ್ವರಾಜ್ , ಅಖಿಲ ಭಾರತ ಕಿಸಾನ್ ಸಭಾ ( AIKS ) , ಕರ್ನಾಟಕ ರಾಜ್ಯ ಕೃಷಿ ಕಾರ್ಮಿಕರ ಸಂಘ ( BKMU ) ಗಳನ್ನು ಒಳಗೊಂಡು ರಚನೆಯಾಗಿರುವ ಎಐಕೆಎಸ್‌ಸಿಸಿ – ಕರ್ನಾಟಕ ರಾಜ್ಯ ಸಮಿತಿಯು “ ಗ್ರಾಮೀಣಾ ಕರ್ನಾಟಕ ಬಂದ್ ಗೆ ಕರೆ ನೀಡಿವೆ . ಈ ಹಿನ್ನಲೆಯಲ್ಲಿ ರಾಜ್ಯದ ರೈತರು , ತಾವು ಬೆಳೆಯುವ ತರಕಾರಿಗಳು , ಹಾಲು ಇನ್ನಿತರೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಾರದು , ಅದೇ ರೀತಿಯಲ್ಲಿ ನಗರ / ಪಟಣ್ಣಗಳಿಂದ ಯಾವುದೇ ವಸ್ತುಗಳನ್ನು ಖರೀದಿ ಮಾಡಬಾರದೆಂದು ಎಐಕೆಎಸ್‌ಸಿಸಿ ವಿನಂತಿಸುತ್ತದೆ . ಅದೇ ಸಂದರ್ಭದಲ್ಲಿ ಈ ಹೋರಾಟಕ್ಕೆ ನಗರ ವಾಸಿಗಳ ಸೌರ್ಹಾದ ಬೆಂಬಲವನ್ನು ಕೋರಿ , ಅಂದು ನಗರಗಳ ಶ್ರಮಜೀವಿಗಳಿಗೆ ಉಚಿತವಾಗಿ ಹಾಲು , ತರಕಾರಿ ಇನ್ನಿತರೆ ಕೃಷಿ ಉತ್ಪನ್ನಗಳನ್ನು ನೀಡುವ ಸಂಕೇತಿಕ ಕಾರ್ಯಕ್ರಮಗಳನ್ನು ಕೋಲಾರ , ಚಿಕ್ಕಬಳ್ಳಾಪುರ , ಮಂಡ್ಯ , ಮೈಸೂರು , ತುಮಕೂರು , ಗುಲ್ಬರ್ಗಾ ಇತ್ಯಾದಿ ನಗರಗಳಲ್ಲಿ ಸಂಘಟಿಸಲು ಸಹ ಎಐಕೆಎಸ್‌ಸಿಸಿ ನಿರ್ಧರಿಸಿದೆ . ಡಿಸೆಂಬರ್ 23 , 2019 ರಿಂದ ಜನವರಿ 3 , 2020 ರವರೆಗೆ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ರೈತರ ಸಮಾವೇಶ್ , ಮೆರವಣಿಗೆಗಳ ಮೂಲಕ ಮಾನ್ಯ ‘ ರಾಷ್ಟ್ರಪತಿ ‘ ಗಳಿಗೆ ಮುಷ್ಕರದ ನೋಟೀಸ್ ಜಾರಿಯ ಹೋರಾಟಕ್ಕೆ ನಿರ್ಧಾರ , ಕಳೆದ ಲೋಕಸಭಾ ಚುನಾವಣೆಗಳ ಮುಂಚೆ ಕೃಷಿ ಉತ್ಪನ್ನಗಳಿಗೆ “ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ” ಹಾಗು “ ಋಣ ಮುಕ್ತ ಕಾಯ್ದೆ ” ಗಳನ್ನು ಪಾರ್ಲಿಮೆಂಟ್‌ನಲ್ಲಿ ಚರ್ಚಿಸಿ , ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವುದಾಗಿ ಎಐಕೆಎಸ್‌ಸಿಸಿ ಯ ಅಖಿಲ ಭಾರತ ನಾಯಕತ್ವಕ್ಕೆ ‘ ಮಾನ್ಯ ರಾಷ್ಟ್ರಪತಿ ‘ ಗಳು ನೀಡಿದ್ದ ಭರವಸೆಯನ್ನು ನೆನಪಿಸುತ್ತಾ ಮೇಲಿನ ಎರಡು ಅಂಶಗಳ ಜೊತೆಗೆ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರಕ್ಕೆ ಮಾನ್ಯ ರಾಷ್ಟ್ರಪತಿಗಳು , ಸೂಚನೆ ನೀಡಬೇಕೆಂದು , ಇಲ್ಲವಾದರೆ ಜನವರಿ 8 , 2020 ಕ್ಕೆ ರಾಷ್ಟ್ರವ್ಯಾಪಿ “ ಗ್ರಾಮೀಣಾ ಭಾರತ್ ಬಂದ್ ” ನ್ನು ಸಂಘಟಿಸುವುದಾಗಿ ಜಿಲ್ಲಾಧಿಕಾರಿಗಳ ಮೂಲಕ ಡಿಸೆಂಬರ್ 23 , 2019 ರಿಂದ ಜನವರಿ 3 , 2020 ರವರೆಗೆ ದೇಶಾದ್ಯಂತ ಮುಷ್ಕರದ ನೋಟೀಸ್‌ನ್ನು ಜಾರಿ ಮಾಡಲು ಎಐಕೆಎಸ್‌ಸಿಸಿ ನಿರ್ಧಾರ ಮಾಡಿದೆ . ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯು ಆ ದಿನಗಳಲ್ಲಿ ಸಾವಿರಾರು ರೈತರು , ಕೃಷಿ ಕೂಲಿಕಾರರು , ಇತರೆ ಗ್ರಾಮೀಣಾ ಕಸುಬುದಾರರು ಸಮಾವೇಶ , ಮೆರವಣಿಗೆಗಳನ್ನು ಸಂಘಟಿಸಿ , ಮುಷ್ಕರದ ನೋಟೀಸ್‌ನ್ನು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಷ್ಟ್ರಪತಿಗೆ ಕಳುಹಿಸಲಾಗುವುದು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.