ಸಂವಿಧಾನ ವಿರೋಧಿ ಕ್ರಮಗಳ ವಿರುದ್ದ ಎಸ್‌ಡಿಪಿಐ ನಿರಂತರ ಹೋರಾಟ

ಬೆಂಗಳೂರು, ಡಿ 19 : ಸಂವಿಧಾನ ವಿರೋಧಿ ‘ ಪೌರತ್ವ ತಿದ್ದುಪಡಿ ಕಾಯ್ದೆ ‘ ಯ ವಿರುದ್ಧ ಪ್ರತಿಭಟನೆಯನ್ನು ಹತ್ತಿಕ್ಕುವ ಕ್ರಮವಾಗಿ ರಾಜ್ಯದಾದ್ಯಂತ ಸೆ 144 ನಿಷೇದಾಜ್ಞೆ ಹೇರಿರುವುದು ಕೂಡಾ ಸಂವಿಧಾನ ವಿರೋಧಿಯಾಗಿದ್ದು ಜನರ ಧ್ವನಿಯನ್ನು ಅಡಗಿಸಲು ಬಿಜೆಪಿ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುವ ಕರ್ನಾಟಕ ಪೊಲೀಸ್ ಅಧಿಕಾರಿಗಳ ಪ್ರಯತ್ನ ಎಂದೂ ಸಫಲವಾಗದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್‌ಡಿಪಿಐ ) ಪ್ರತಿಕ್ರಿಯಿಸಿದೆ . ದೇಶವನ್ನು ಧರ್ಮ – ಜಾತಿಯ ಆಧಾರದಲ್ಲಿ ಒಡೆದು ಆಳುವ ನೀತಿಯನ್ನು ತಮ್ಮದಾಗಿಸಿಕೊಂಡು ರಾಜಕೀಯದ ಮೂಲಕ ಆಧಿಕಾರದಲ್ಲಿರುವ ಬಿಜೆಪಿ ತಮ್ಮ ದಯನೀಯ ವೈಫಲ್ಯ , ಪಾತಾಳಕ್ಕೆ ಕುಸಿದ ಆರ್ಥಿಕತೆ , ಅವ್ಯಾಹತವಾಗಿ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಇತ್ಯಾದಿಗಳನ್ನು ಜನರ ಮನಸ್ಸಿನಿಂದ ಬೇರೆಡೆಗೆ ಸೆಳೆಯಲು ಅನೇಕ ಭಾವನಾತ್ಮಕ ವಿಷಯಗಳನ್ನು ಬಳಕೆ ಮಾಡುತ್ತಿದೆ . ಅದರ ಭಾಗವಾಗಿ ದೇಶದ ಹಿತಾಸಕ್ತಿಗೆ ಕೊಟ್ಟೆ ಇಟ್ಟು ಇಂತಹ ಘೋರ ಪೌರತ್ವ ಕಾಯ್ದೆಯನ್ನು ಜಾರಿಗೆ ತರುತ್ತಿದೆ . ಇಂತಹ ದೇಶ ವಿರೋಧಿ ಹೆಜ್ಜೆಗಳನ್ನು ಖಂಡಿಸುವುದು , ಪ್ರತಿಭಟಿಸುವುದು ಭಾರತದ ಪ್ರಜೆಗಳ ಕರ್ತವ್ಯ ಹಾಗೂ ಮಾಧ್ಯತೆ ಹಕ್ಕಾಗಿರುತ್ತದೆ . ಆದರ , ಪಣಿಗಳ ಸಾಂವಿಧಾನಿಕ ಹಕುಗಳನು ಕಿತ್ತುಕೊಳ್ಳುವ ಅಧಿಕಾರವನ್ನು ದೇಶದ ಸಂವಿದಾನವಾಗಲೀ ಕಾನೂನಾಗಲೀ ಮೊಲೀಸರಿಗೆ ನೀಡಿಲ್ಲ . ಪ್ರತಿಭಟನೆಗೆ ನಿಷೇಧಾಜ್ಞೆ ಹೇರುವುದರಿಂದ ಪ್ರಜೆಗಳ ಮನಸ್ಸಿನಲ್ಲಿರುವ ಪ್ರತಿಭಟನಾ ಅಭಿಪ್ರಾಯಗಳನ್ನು ಹತ್ತಿಕ್ಕಲಾಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಯದೇ ಹೋದರೆ ? ‘ ಪ್ರತಿಭಟಿಸುವವರು ಉತ್ತರ ಭಾರತಕ್ಕೆ ಹೋಗಲಿ ‘ ಎಂದು ಹೇಳಿದೆ ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್‌ರ ಧೋರಣೆಯನ್ನು ಎಸ್‌ಡಿಪಿಐ ಬಲವಾಗಿ ಖಂಡಿಸುತ್ತದೆ . ಇಂತಹ ದಾರ್ಷ್ಟದ ಮಾತುಗಳು ಹಿರಿಯ ಅಧಿಕಾರಿಗಳಿಗೆ ಎಂದೆಂದೂ ಶೋಭಿಸುವುದಿಲ್ಲ . ಅವರ ವರ್ತನೆಗಳು , ಮಾತುಗಳು ಇನ್ನಷ್ಟು ಆತಂಕವನ್ನು ಹುಟ್ಟು ಹಾಕುತ್ತಿದೆ . ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್‌ನ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಬಾಬರಿ ಮಸ್ಸಿದ್ ಧ್ವಂಸ ಅಣುಕು ಪ್ರದರ್ಶನದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದರು . ಮದುಚೇರಿಯ ೮ . ಗ , ಕಿರಣ ಬೇಡಿ ಕೂಡಾ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಶ್ಲಾಘಿಸಿದ್ದಾರೆ . ಕೋಮುದ್ವೇಷ , ಹಿಂಸೆ , ಹಗೆತನವನ್ನು ಉದ್ದೀಪಿಸುವ ಇಂತಹ ಕೃತ್ಯಗಳು ಎಳೆಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮು ವಿಷವನ್ನು ತುಂಬಿಸುತ್ತದೆ . ಇಂತಹ ಕಾರ್ಯಕ್ರಮಗಳಿಗೆ ಪೊಲೀಸರು ಅನುಮತಿ ನೀಡಿರುವುದು ಅತ್ಯಂತ ಆಶ್ಚರ್ಯಕರ ಹಾಗೂ ಪೊಲೀಸರು ಶಾಮೀಲಾಗಿರುವುದು ಬೇಲಿಯೇ ಹೊಲ ಮೇಯ್ದಂತಾಗಿದೆ . ಡಿ . 06ರಂದು ಅದೇ ಕಲ್ಲಡ್ಕದಲ್ಲಿ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಿರುವುದು ಕೂಡಾ ಪೊಲೀಸರ ಸುಪರ್ದಿಯಲ್ಲಿ ಅದೇ ದಿನ ಮಂಗಳೂರು ನಗರದಲ್ಲಿ ಎಸ್‌ಡಿಪಿಐ ಪಕ್ಷಕ್ಕೆ ಪತ್ರಿಕಾಗೋಷ್ಠಿ ನಡೆಸಲು ಬಿಡದಿರುವುದು ಕೂಡಾ ಹೇಗೆ ಪೊಲೀಸ್ ಇಲಾಖೆಯಲ್ಲಿ ಧರ್ಮಾಧಾರಿತ ತಾರತಮ್ಯ ನಡೆಯುತ್ತಿದೆ ಎಂದು ಸ್ಪಷ್ಟವಾಗುತ್ತಿದೆ . ಸಂವಿಧಾನ ವಿರೋಧಿ , ಜನವಿರೋಧಿ ಹಾಗೂ ಜಾತ್ಯಾತೀತ ವಿರೋಧಿ ಧೋರಣೆ – ಕ್ರಮಗಳನ್ನು ಕೈಗೊಳ್ಳುವ ಬಿಜೆಪಿ ಸರಕಾರಗಳು ಹಾಗೂ ಜನರ ಧ್ವನಿಯನ್ನು ಮತ್ತು ಹಕ್ಕನ್ನು ಹತ್ತಿಕ್ಕುವ ಪೊಲೀಸ್ ಅಧಿಕಾರಗಳ ವಿರುದ್ಧ ಎಸ್‌ಡಿಪಿಐ ತನ್ನ ಹೋರಾಟವನ್ನು ಮುಂದುವರಿಸುತ್ತದೆ . ಪತ್ರಿಕಾಗೋಷ್ಠಿ ಉಪಸ್ಥಿತಿ : 1 , ಇಲ್ಯಾಸ್ ಮುಹಮ್ಮದ್ ತುಂಬೆ ( ರಾಜ್ಯಾಧ್ಯಕ್ಷರು , ಎಸ್‌ಡಿಪಿಐ ಕರ್ನಾಟಕ ) 2 , ಅಬ್ದುಲ್ ಹನ್ನಾನ್ ( ರಾಜ್ಯ ಪ್ರಧಾನ ಕಾರ್ಯದರ್ಶಿ , ಎಸ್‌ಡಿಪಿಐ ಕರ್ನಾಟಕ ) 3 , ಅಪ್ಪರ್ ಕೊಡ್ಲಿಪೇಟೆ ( ರಾಜ್ಯ ಕಾರ್ಯದರ್ಶಿ , ಎಸ್‌ಡಿಪಿಐ ಕರ್ನಾಟಕ ) 4 . ಹೆಚ್ . ಗಂಗಪ್ಪ ( ಉಪಾಧ್ಯಕ್ಷರು , ಎಸ್‌ಡಿಪಿಐ ಬೆಂಗಳೂರು ) 5 . ಶರೀಫ್ ( ಜಿಲ್ಲಾಧ್ಯಕ್ಷರು , ಎಸ್‌ಡಿಪಿಐ ಬೆಂಗಳೂರು )

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.